
Expiry Date ಮೀರಿದ ಆಹಾರ ಪದಾರ್ಥ ತಿನ್ನಬಹುದಾ? ಅದು ಸುರಕ್ಷಿತವಾ? ತಜ್ಞರು ಹೇಳುವುದೇನು? ಎಂದು ಪರಿಮಿತಿಗಳನ್ನು ಕೆದಕಿ ನೋಡಿದಾಗ… ಬಳಕೆ ಯೋಗ್ಯ ಅವಧಿ ಮುಕ್ತಾಯವಾದ ಆಹಾರ ಉತ್ಪನ್ನವನ್ನು ನೋಡಿದಾಗ ನೀವು ಒಮ್ಮೆಗೆ ಎಚ್ಚರಗೊಳ್ಳುತ್ತೀರಿ. ಅಯ್ಯೋ ಅದನ್ನು ತಿನ್ನಬಹುದಾ ಬೇಡಾವಾ? ಎಂದು ಅಂದತಹ ಸಂದರ್ಭದಲ್ಲಿ ತಜ್ಞರು ಸೂಚಿಸುವ ಈ ಪರಿಮಿತಿಗಳು ಮತ್ತು ವಿನಾಯಿತಿಗಳನ್ನು ಗಮನಿಸಿ. ನೀವು ಡಿಪಾರ್ಟಮೆಂಟಲ್ ಸ್ಟೋರ್ನಲ್ಲಿರುವಾಗ, ಆಹಾರ ಪದಾರ್ಥಗಳಿಗಾಗಿ ಕಣ್ಣು ಹಾಯಿಸುವಾಗ ಖರೀದಿ ಕುರಿತಾದ ಕೆಲವು ವಿಷಯಗಳು ನಿಮ್ಮ ಆದ್ಯತೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುತ್ತವೆ. ನೀವು ಪೌಷ್ಠಿಕಾಂಶದ ಬಗ್ಗೆ ಜಾಗರೂಕರಾಗಿದ್ದರೆ, ಪದಾರ್ಥಗಳು, ಪ್ರೋಟೀನ್ ಅಂಶ ಮತ್ತು ಇತರ ಪೌಷ್ಟಿಕಾಂಶದ ವಿವರಗಳನ್ನು ಪರಿಶೀಲಿಸಲು ಉತ್ಪನ್ನವನ್ನು ಕಣ್ಣಂಚಿನಲ್ಲಿ ತಿರುಗಿಸಿ, ಅಳೆಯಬಹುದು. ಆದರೆ ನೀವು ನಿರ್ಲರ್ಕ್ಷಿಸಲು ಆಗದ ಒಂದು ಅಂಶವಿದೆ. ಅದನ್ನು ಆಹಾರ ಉತ್ಪನ್ನ ಖರೀದಿಸುವ ಮೊದಲು ಎಲ್ಲರೂ ಕಡ್ಡಾಯವಾಗಿ ಪರಿಶೀಲಿಸುತ್ತಾರೆ – ಅದೇ ಅವಧಿ ಮುಕ್ತಾಯ ದಿನಾಂಕ. ಅಂದರೆ ಉತ್ಪನ್ನದ Expiry Date! Loading... ...
Published On - 2:06 pm, Wed, 11 September 24