Tirumala Venkateswara Swamy Idol: ಗರ್ಭಗುಡಿಯಲ್ಲಿ ವಿರಾಜಮಾನವಾಗಿರುವ ತಿರುಪತಿ ತಿಮ್ಮಪ್ಪನ ವಿಗ್ರಹ ಕುರಿತಾದ ಈ ಮಾಹಿತಿ ನಿಮಗೆ ಗೊತ್ತಾ?

ಆಂಧ್ರ ಪ್ರದೇಶದ ತಿರುಪತಿ ಪಟ್ಟಣದ ಬಳಿಯಿರುವ ತಿರುಮಲ ಬೆಟ್ಟದಲ್ಲಿ ತಿಮ್ಮಪ್ಪ, ಅಂದರೆ ಶ್ರೀ ವೇಂಕಟೇಶ್ವರ ಸ್ವಾಮಿ ನೆಲೆಸಿದ್ದಾನೆ. ಈ ತಿಮ್ಮಪ್ಪನ ದೇವಸ್ಥಾನ ಜಗತ್ತಿನಲ್ಲಿಯೇ ಅತ್ಯಂತ ಅದ್ಭುತ, ಶ್ರೀಮಂತ ಮತ್ತು ನಿಗೂಢ ದೇವಾಲಯಗಳಲ್ಲಿ ಒಂದಾಗಿದೆ. ತಿರುಪತಿ ತಿಮ್ಮಪ್ಪನ ಕುರಿತಾದ ಮಾಹಿತಿ ಅನಂತವಾದದ್ದು. ಚಿಕ್ಕ ಪ್ರಯತ್ನವಾಗಿ ಇಲ್ಲಿ ಒಂದಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

|

Updated on:Sep 10, 2024 | 9:44 AM

Tirumala Sri Venkateswara Swamy Idol: ಆಂಧ್ರ ಪ್ರದೇಶದ ತಿರುಪತಿ ಪಟ್ಟಣದ ಬಳಿಯಿರುವ ತಿರುಮಲ ಬೆಟ್ಟದಲ್ಲಿ ತಿಮ್ಮಪ್ಪ, ಅಂದರೆ ಶ್ರೀ ವೇಂಕಟೇಶ್ವರ ಸ್ವಾಮಿ ನೆಲೆಸಿದ್ದಾನೆ. ಈ ತಿಮ್ಮಪ್ಪನ ದೇವಸ್ಥಾನ ಜಗತ್ತಿನಲ್ಲಿಯೇ ಅತ್ಯಂತ ಅದ್ಭುತ,  ಶ್ರೀಮಂತ ಮತ್ತು ನಿಗೂಢ ದೇವಾಲಯಗಳಲ್ಲಿ ಒಂದಾಗಿದೆ. ತಿರುಪತಿ ತಿಮ್ಮಪ್ಪನ ಕುರಿತಾದ ಮಾಹಿತಿ ಅನಂತವಾದದ್ದು. ಚಿಕ್ಕ ಪ್ರಯತ್ನವಾಗಿ ಇಲ್ಲಿ ಒಂದಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

Tirumala Sri Venkateswara Swamy Idol: ಆಂಧ್ರ ಪ್ರದೇಶದ ತಿರುಪತಿ ಪಟ್ಟಣದ ಬಳಿಯಿರುವ ತಿರುಮಲ ಬೆಟ್ಟದಲ್ಲಿ ತಿಮ್ಮಪ್ಪ, ಅಂದರೆ ಶ್ರೀ ವೇಂಕಟೇಶ್ವರ ಸ್ವಾಮಿ ನೆಲೆಸಿದ್ದಾನೆ. ಈ ತಿಮ್ಮಪ್ಪನ ದೇವಸ್ಥಾನ ಜಗತ್ತಿನಲ್ಲಿಯೇ ಅತ್ಯಂತ ಅದ್ಭುತ, ಶ್ರೀಮಂತ ಮತ್ತು ನಿಗೂಢ ದೇವಾಲಯಗಳಲ್ಲಿ ಒಂದಾಗಿದೆ. ತಿರುಪತಿ ತಿಮ್ಮಪ್ಪನ ಕುರಿತಾದ ಮಾಹಿತಿ ಅನಂತವಾದದ್ದು. ಚಿಕ್ಕ ಪ್ರಯತ್ನವಾಗಿ ಇಲ್ಲಿ ಒಂದಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

1 / 12
1) ತಿರುಪತಿ ವೇಂಕಟೇಶ್ವರ ಸ್ವಾಮಿಯ ಕಣ್ಣಿನ ರಹಸ್ಯ:
ಧಾರ್ಮಿಕ ನಂಬಿಕೆಯ ಪ್ರಕಾರ ತಿರುಪತಿ ತಿಮ್ಮಪ್ಪ ತಿರುಮಲ ಬೆಟ್ಟದಲ್ಲಿ ನೆಲೆಸಿದ್ದಾನೆ. ವೇಂಕಟೇಶ್ವರ ಸ್ವಾಮಿ ತನ್ನ ಪ್ರಕಾಶಮಾನವಾದ ಮತ್ತು ಶಕ್ತಿಯುತ ಕಣ್ಣುಗಳಿಗೆ ಹೆಸರುವಾಸಿಯಾಗಿದ್ದಾನೆ. ಭಗವಂತ ವೇಂಕಟೇಶ್ವರನ ದೃಷ್ಟಿಯಲ್ಲಿ ವಿಶ್ವ ಶಕ್ತಿ ತುಂಬಿದೆ. ಭಕ್ತರು ನೇರವಾಗಿ ಅವರ ಕಣ್ಣುಗಳನ್ನು ನೋಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಆದ್ದರಿಂದ ವೆಂಕಟೇಶ್ವರನ ಕಣ್ಣುಗಳು ಬಿಳಿ ಮುಖವಾಡದಿಂದ ಮುಚ್ಚಲ್ಪಟ್ಟಿವೆ. ವೆಂಕಟೇಶ್ವರನ ಕಣ್ಣುಗಳ ಮುಖವಾಡವನ್ನು ಗುರುವಾರ ಮಾತ್ರ ಬದಲಾಯಿಸಲಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಭಕ್ತರು ಒಂದು ಕ್ಷಣ ಅವರ ಕಣ್ಣುಗಳ ದರ್ಶನವನ್ನು ಪಡೆಯುವುದಕ್ಕೆ ಅವಕಾಶ ನೀಡುತ್ತಾರೆ.

1) ತಿರುಪತಿ ವೇಂಕಟೇಶ್ವರ ಸ್ವಾಮಿಯ ಕಣ್ಣಿನ ರಹಸ್ಯ: ಧಾರ್ಮಿಕ ನಂಬಿಕೆಯ ಪ್ರಕಾರ ತಿರುಪತಿ ತಿಮ್ಮಪ್ಪ ತಿರುಮಲ ಬೆಟ್ಟದಲ್ಲಿ ನೆಲೆಸಿದ್ದಾನೆ. ವೇಂಕಟೇಶ್ವರ ಸ್ವಾಮಿ ತನ್ನ ಪ್ರಕಾಶಮಾನವಾದ ಮತ್ತು ಶಕ್ತಿಯುತ ಕಣ್ಣುಗಳಿಗೆ ಹೆಸರುವಾಸಿಯಾಗಿದ್ದಾನೆ. ಭಗವಂತ ವೇಂಕಟೇಶ್ವರನ ದೃಷ್ಟಿಯಲ್ಲಿ ವಿಶ್ವ ಶಕ್ತಿ ತುಂಬಿದೆ. ಭಕ್ತರು ನೇರವಾಗಿ ಅವರ ಕಣ್ಣುಗಳನ್ನು ನೋಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಆದ್ದರಿಂದ ವೆಂಕಟೇಶ್ವರನ ಕಣ್ಣುಗಳು ಬಿಳಿ ಮುಖವಾಡದಿಂದ ಮುಚ್ಚಲ್ಪಟ್ಟಿವೆ. ವೆಂಕಟೇಶ್ವರನ ಕಣ್ಣುಗಳ ಮುಖವಾಡವನ್ನು ಗುರುವಾರ ಮಾತ್ರ ಬದಲಾಯಿಸಲಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಭಕ್ತರು ಒಂದು ಕ್ಷಣ ಅವರ ಕಣ್ಣುಗಳ ದರ್ಶನವನ್ನು ಪಡೆಯುವುದಕ್ಕೆ ಅವಕಾಶ ನೀಡುತ್ತಾರೆ.

2 / 12
2)  ಶ್ರೀ ಲಕ್ಷ್ಮಿ ದೇವಿಯ ದರ್ಶನ:
ಶ್ರೀ ವೇಂಕಟೇಶ್ವರನಿಗೆ ಶ್ರೀಗಂಧದ ಸ್ನಾನ ಮಾಡಿಸಿ ನಂತರ ಆತನ ವಿಗ್ರಹದ ಮೇಲೆ ಶ್ರೀಗಂಧವನ್ನು ಲೇಪಿಸಲಾಗುತ್ತದೆ. ಶ್ರೀ ವೇಂಕಟೇಶ್ವರನ ಹೃದಯದ ಮೇಲೆ ಶ್ರೀಗಂಧವನ್ನು ಲೇಪಿಸುವುದರಿಂದ ಆ ಗಂಧವನ್ನು ತೆಗೆದ ನಂತರ ಅದರಲ್ಲಿ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯ ಚಿತ್ರಣವು ಮೂಡಿ ಬರುತ್ತದೆ.

2) ಶ್ರೀ ಲಕ್ಷ್ಮಿ ದೇವಿಯ ದರ್ಶನ: ಶ್ರೀ ವೇಂಕಟೇಶ್ವರನಿಗೆ ಶ್ರೀಗಂಧದ ಸ್ನಾನ ಮಾಡಿಸಿ ನಂತರ ಆತನ ವಿಗ್ರಹದ ಮೇಲೆ ಶ್ರೀಗಂಧವನ್ನು ಲೇಪಿಸಲಾಗುತ್ತದೆ. ಶ್ರೀ ವೇಂಕಟೇಶ್ವರನ ಹೃದಯದ ಮೇಲೆ ಶ್ರೀಗಂಧವನ್ನು ಲೇಪಿಸುವುದರಿಂದ ಆ ಗಂಧವನ್ನು ತೆಗೆದ ನಂತರ ಅದರಲ್ಲಿ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯ ಚಿತ್ರಣವು ಮೂಡಿ ಬರುತ್ತದೆ.

3 / 12
3) ವೇಂಕಟೇಶ್ವರ ಸ್ವಾಮಿ ವಿಗ್ರಹದ ತಲೆ ಕೂದಲು:
ವೇಂಕಟೇಶ್ವರ ಸ್ವಾಮಿಯ ವಿಗ್ರಹದ ಮೇಲಿನ ಕೂದಲು ನಿಜ ಎಂದು ಹೇಳಲಾಗುತ್ತದೆ. ಅವು ಎಂದಿಗೂ ಜಡೆ ಜಟಿಲವಾಗುವುದಿಲ್ಲ ಮತ್ತು ಯಾವಾಗಲೂ ಮೃದುವಾಗಿರುತ್ತವೆ.

3) ವೇಂಕಟೇಶ್ವರ ಸ್ವಾಮಿ ವಿಗ್ರಹದ ತಲೆ ಕೂದಲು: ವೇಂಕಟೇಶ್ವರ ಸ್ವಾಮಿಯ ವಿಗ್ರಹದ ಮೇಲಿನ ಕೂದಲು ನಿಜ ಎಂದು ಹೇಳಲಾಗುತ್ತದೆ. ಅವು ಎಂದಿಗೂ ಜಡೆ ಜಟಿಲವಾಗುವುದಿಲ್ಲ ಮತ್ತು ಯಾವಾಗಲೂ ಮೃದುವಾಗಿರುತ್ತವೆ.

4 / 12
4)ಸಾಗರದ ಅಲೆಗಳ ಸದ್ದು:
ವೇಂಕಟೇಶ ದೇವರ ವಿಗ್ರಹದ ಬೆನ್ನಿನ ಭಾಗಕ್ಕೆ ಕಿವಿಕೊಟ್ಟು ಕೇಳಿದಾಗ ಸಮುದ್ರದ ಅಲೆಗಳ ಸದ್ದು ಕೇಳಿಸುತ್ತದೆ ಎಂದು ಅಲ್ಲಿನ ಅರ್ಚಕರು ಹೇಳುತ್ತಾರೆ. ಈ ಕಾರಣದಿಂದಲೇ ದೇವಾಲಯದಲ್ಲಿ ವಿಗ್ರಹ ಯಾವಾಗಲೂ ಒದ್ದೆ ಆಗಿರುತ್ತದೆ.

4)ಸಾಗರದ ಅಲೆಗಳ ಸದ್ದು: ವೇಂಕಟೇಶ ದೇವರ ವಿಗ್ರಹದ ಬೆನ್ನಿನ ಭಾಗಕ್ಕೆ ಕಿವಿಕೊಟ್ಟು ಕೇಳಿದಾಗ ಸಮುದ್ರದ ಅಲೆಗಳ ಸದ್ದು ಕೇಳಿಸುತ್ತದೆ ಎಂದು ಅಲ್ಲಿನ ಅರ್ಚಕರು ಹೇಳುತ್ತಾರೆ. ಈ ಕಾರಣದಿಂದಲೇ ದೇವಾಲಯದಲ್ಲಿ ವಿಗ್ರಹ ಯಾವಾಗಲೂ ಒದ್ದೆ ಆಗಿರುತ್ತದೆ.

5 / 12
5)ವೆಂಕಟೇಶ್ವರ ಸ್ವಾಮಿ ಬೆವರುವ ವಿಗ್ರಹ:
ವೇಂಕಟೇಶ್ವರ ಸ್ವಾಮಿ ವಿಗ್ರಹವು ಯಾವಾಗಲು ಒದ್ದೆಯಾಗಿ ಇರುತ್ತದೆ. ಮನುಷ್ಯರಿಗೆ ಹೇಗೆ ಬೆವರು ಬರುತ್ತದೋ ಅದೇ ರೀತಿ ವೇಂಕಟೇಶ್ವರ ಸ್ವಾಮಿಗೂ ಬೆವರು ಬರುತ್ತಲೇ ಇರುತ್ತದೆ. ಈ ಬೆವರು ನೈಜವಾದದ್ದು ಎಂದು ಹೇಳುತ್ತಾರೆ. ಹಾಗಾಗಿ ದೇವರಿಗೆ ಉಷ್ಣ ಸೆಕೆ ಆಗುತ್ತದೆ ಎಂದು ಅಲ್ಲಿ ಗರ್ಭಗುಡಿ ಒಳಗೆ ಹವಾನಿಯಂತ್ರಿತ ವ್ಯವಸ್ಥೆ ಅಥವಾ ಫ್ಯಾನ್ ಇರುತ್ತದೆ ಎಂದು ಕೂಡ ಹೇಳುತ್ತಾರೆ.

5)ವೆಂಕಟೇಶ್ವರ ಸ್ವಾಮಿ ಬೆವರುವ ವಿಗ್ರಹ: ವೇಂಕಟೇಶ್ವರ ಸ್ವಾಮಿ ವಿಗ್ರಹವು ಯಾವಾಗಲು ಒದ್ದೆಯಾಗಿ ಇರುತ್ತದೆ. ಮನುಷ್ಯರಿಗೆ ಹೇಗೆ ಬೆವರು ಬರುತ್ತದೋ ಅದೇ ರೀತಿ ವೇಂಕಟೇಶ್ವರ ಸ್ವಾಮಿಗೂ ಬೆವರು ಬರುತ್ತಲೇ ಇರುತ್ತದೆ. ಈ ಬೆವರು ನೈಜವಾದದ್ದು ಎಂದು ಹೇಳುತ್ತಾರೆ. ಹಾಗಾಗಿ ದೇವರಿಗೆ ಉಷ್ಣ ಸೆಕೆ ಆಗುತ್ತದೆ ಎಂದು ಅಲ್ಲಿ ಗರ್ಭಗುಡಿ ಒಳಗೆ ಹವಾನಿಯಂತ್ರಿತ ವ್ಯವಸ್ಥೆ ಅಥವಾ ಫ್ಯಾನ್ ಇರುತ್ತದೆ ಎಂದು ಕೂಡ ಹೇಳುತ್ತಾರೆ.

6 / 12
6) ವೇಂಕಟೇಶ್ವರ ಸ್ವಾಮಿ ವಿಗ್ರಹದ ಪಾದ:
ವೇಂಕಟೇಶ್ವರ ಸ್ವಾಮಿಯ ಪಾದಗಳನ್ನು ಮುಟ್ಟಿದಾಗ ಮೃದುವಾಗಿ ಇರುತ್ತದೆ ಎಂದು ಅಲ್ಲಿನ ಅರ್ಚಕರು ಹೇಳುತ್ತಾರೆ.

6) ವೇಂಕಟೇಶ್ವರ ಸ್ವಾಮಿ ವಿಗ್ರಹದ ಪಾದ: ವೇಂಕಟೇಶ್ವರ ಸ್ವಾಮಿಯ ಪಾದಗಳನ್ನು ಮುಟ್ಟಿದಾಗ ಮೃದುವಾಗಿ ಇರುತ್ತದೆ ಎಂದು ಅಲ್ಲಿನ ಅರ್ಚಕರು ಹೇಳುತ್ತಾರೆ.

7 / 12
7) ಪಚ್ಚೆ ಕರ್ಪೂರ:
ಪಚ್ಚೆ ಕರ್ಪೂರವನ್ನು ಯಾವುದೇ ಕಲ್ಲಿನ ಮೇಲೆ ಉಜ್ಜಿದರು ಆ ಕಲ್ಲು ಬಿರುಕು ಬಿಡುತ್ತದೆ. ಆದರೆ ವೇಂಕಟೇಶ್ವರನ ವಿಗ್ರಹಕ್ಕೆ ಪಚ್ಚೆ ಕರ್ಪೂರವನ್ನು ಹಚ್ಚಲಾಗುತ್ತದೆ. ಇದು ವೇಂಕಟೇಶನ ವಿಗ್ರಹದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಇದು ತುಂಬಾ ವಿಶೇಷವೆ ಸರಿ.

7) ಪಚ್ಚೆ ಕರ್ಪೂರ: ಪಚ್ಚೆ ಕರ್ಪೂರವನ್ನು ಯಾವುದೇ ಕಲ್ಲಿನ ಮೇಲೆ ಉಜ್ಜಿದರು ಆ ಕಲ್ಲು ಬಿರುಕು ಬಿಡುತ್ತದೆ. ಆದರೆ ವೇಂಕಟೇಶ್ವರನ ವಿಗ್ರಹಕ್ಕೆ ಪಚ್ಚೆ ಕರ್ಪೂರವನ್ನು ಹಚ್ಚಲಾಗುತ್ತದೆ. ಇದು ವೇಂಕಟೇಶನ ವಿಗ್ರಹದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಇದು ತುಂಬಾ ವಿಶೇಷವೆ ಸರಿ.

8 / 12
8) ಅದ್ಭುತ ಕೋಲು:
ದೇವಾಲಯದ ಮುಖ್ಯದ್ವಾರದ ಬಾಗಿಲಿನ ಬಲಭಾಗದಲ್ಲಿ ಒಂದು ಕೋಲು ಇದೆ. ಭಗವಾನ್ ವೇಂಕಟೇಶನು ಬಾಲ್ಯದಲ್ಲಿ ತುಂಟತನ ಮಾಡಿದಾಗ ಅವರ ತಾಯಿ ಕೋಲಿನಿಂದ ಹೊಡೆದರು. ಆಗ ವೇಂಕಟೇಶ್ವರನ ಮುಖದ ಗಲ್ಲದ ಭಾಗಕ್ಕೆ ಗಾಯ ಆಗುತ್ತದೆ. ಕೂಡಲೇ ಅವರ ತಾಯಿ ಶ್ರೀ ಗಂಧವನ್ನು ಗಲ್ಲಕ್ಕೆ ಹಚ್ಚುತ್ತಾರೆ. ಸಇದರಿಂದಾಗಿ ಅವರ ಗಾಯ ಗುಣ ಆಯಿತು. ಅಂದಿನಿಂದ ಇಂದಿನವರೆಗೆ, ಶುಕ್ರವಾರದಂದು ವೇಂಕಟೇಶನ ವಿಗ್ರಹಕ್ಕೆ ಗಲ್ಲದ ಮೇಲೆ ಶ್ರೀಗಂಧದ ಪೇಸ್ಟ್ ಅನ್ನು ಅನ್ವಯಿಸಲಾಗುತ್ತದೆ. ಇದರಿಂದ ಅವರ ಗಾಯ ವಾಸಿಯಾಗುತ್ತದೆ.

8) ಅದ್ಭುತ ಕೋಲು: ದೇವಾಲಯದ ಮುಖ್ಯದ್ವಾರದ ಬಾಗಿಲಿನ ಬಲಭಾಗದಲ್ಲಿ ಒಂದು ಕೋಲು ಇದೆ. ಭಗವಾನ್ ವೇಂಕಟೇಶನು ಬಾಲ್ಯದಲ್ಲಿ ತುಂಟತನ ಮಾಡಿದಾಗ ಅವರ ತಾಯಿ ಕೋಲಿನಿಂದ ಹೊಡೆದರು. ಆಗ ವೇಂಕಟೇಶ್ವರನ ಮುಖದ ಗಲ್ಲದ ಭಾಗಕ್ಕೆ ಗಾಯ ಆಗುತ್ತದೆ. ಕೂಡಲೇ ಅವರ ತಾಯಿ ಶ್ರೀ ಗಂಧವನ್ನು ಗಲ್ಲಕ್ಕೆ ಹಚ್ಚುತ್ತಾರೆ. ಸಇದರಿಂದಾಗಿ ಅವರ ಗಾಯ ಗುಣ ಆಯಿತು. ಅಂದಿನಿಂದ ಇಂದಿನವರೆಗೆ, ಶುಕ್ರವಾರದಂದು ವೇಂಕಟೇಶನ ವಿಗ್ರಹಕ್ಕೆ ಗಲ್ಲದ ಮೇಲೆ ಶ್ರೀಗಂಧದ ಪೇಸ್ಟ್ ಅನ್ನು ಅನ್ವಯಿಸಲಾಗುತ್ತದೆ. ಇದರಿಂದ ಅವರ ಗಾಯ ವಾಸಿಯಾಗುತ್ತದೆ.

9 / 12
9) ಅಖಂಡ ದೀಪ
ವೆಂಕಟೇಶನ ದೇವಸ್ಥಾನದಲ್ಲಿ ದೀಪ ಸದಾ ಉರಿಯುತ್ತಿರುತ್ತದೆ. ಈ ದೀಪದಲ್ಲಿ ಎಣ್ಣೆ ಅಥವಾ ತುಪ್ಪವನ್ನು ಎಂದಿಗೂ ಹಾಕುವುದಿಲ್ಲ. ವರ್ಷಗಟ್ಟಲೆ ಉರಿಯುತ್ತಿರುವ ಈ ದೀಪವನ್ನು ಯಾವಾಗ, ಯಾರು ಹೊತ್ತಿಸಿದರೋ ಗೊತ್ತಿಲ್ಲ

9) ಅಖಂಡ ದೀಪ ವೆಂಕಟೇಶನ ದೇವಸ್ಥಾನದಲ್ಲಿ ದೀಪ ಸದಾ ಉರಿಯುತ್ತಿರುತ್ತದೆ. ಈ ದೀಪದಲ್ಲಿ ಎಣ್ಣೆ ಅಥವಾ ತುಪ್ಪವನ್ನು ಎಂದಿಗೂ ಹಾಕುವುದಿಲ್ಲ. ವರ್ಷಗಟ್ಟಲೆ ಉರಿಯುತ್ತಿರುವ ಈ ದೀಪವನ್ನು ಯಾವಾಗ, ಯಾರು ಹೊತ್ತಿಸಿದರೋ ಗೊತ್ತಿಲ್ಲ

10 / 12
10) ವಿಗ್ರಹದ ವಿಶೇಷತೆ:
ತಿರುಪತಿಗೆ ಹೋದಾಗ ವೇಂಕಟೇಶ್ವರನ ದರ್ಶನ ಮಾಡಲು ಗರ್ಭಗುಡಿ ಸಮೀಪ ಹೋದಾಗ ಗರ್ಭಗುಡಿಯ ಮಧ್ಯದಲ್ಲಿ ವಿಗ್ರಹವು ನೆಲೆಗೊಂಡಿರುವುದನ್ನು ಕಾಣಬಹುದು. ನೀವು ಗರ್ಭಗುಡಿಯಿಂದ ಸ್ವಲ್ಪ ಈ ಕಡೆ ಹೊರಗೆ ಬಂದಾಗ, ವಿಗ್ರಹವು ಬಲಭಾಗದಲ್ಲಿ ನೆಲೆಗೊಂಡಿದೆ ಎಂದು ನೀವು ಭಾವಿಸುತ್ತೀರಿ. ಹಾಗಾಗಿ ವಿಗ್ರಹ ಮಧ್ಯ ಭಾಗದಲ್ಲಿ ಇದೆಯೋ ಅಥವಾ ಬಲ ಭಾಗದಲ್ಲಿ ಇದೆಯೋ... ಗೊತ್ತೇ ಆಗುವುದಿಲ್ಲ. ಇದು ತುಂಬಾ ವಿಶೇಷ.

10) ವಿಗ್ರಹದ ವಿಶೇಷತೆ: ತಿರುಪತಿಗೆ ಹೋದಾಗ ವೇಂಕಟೇಶ್ವರನ ದರ್ಶನ ಮಾಡಲು ಗರ್ಭಗುಡಿ ಸಮೀಪ ಹೋದಾಗ ಗರ್ಭಗುಡಿಯ ಮಧ್ಯದಲ್ಲಿ ವಿಗ್ರಹವು ನೆಲೆಗೊಂಡಿರುವುದನ್ನು ಕಾಣಬಹುದು. ನೀವು ಗರ್ಭಗುಡಿಯಿಂದ ಸ್ವಲ್ಪ ಈ ಕಡೆ ಹೊರಗೆ ಬಂದಾಗ, ವಿಗ್ರಹವು ಬಲಭಾಗದಲ್ಲಿ ನೆಲೆಗೊಂಡಿದೆ ಎಂದು ನೀವು ಭಾವಿಸುತ್ತೀರಿ. ಹಾಗಾಗಿ ವಿಗ್ರಹ ಮಧ್ಯ ಭಾಗದಲ್ಲಿ ಇದೆಯೋ ಅಥವಾ ಬಲ ಭಾಗದಲ್ಲಿ ಇದೆಯೋ... ಗೊತ್ತೇ ಆಗುವುದಿಲ್ಲ. ಇದು ತುಂಬಾ ವಿಶೇಷ.

11 / 12
11) ತಿರುಪತಿ ವೇಂಕಟೇಶ್ವರನಿಗೆ  ಒಟ್ಟಿಗೆ ಹೆಣ್ಣು ಹಾಗೂ ಗಂಡಿನ ಅಲಂಕಾರ ಮಾಡಲಾಗುತ್ತದೆ. ಉದಾಹರಣೆಗೆ ಶ್ರೀ ಕೃಷ್ಣನಿಗೆ ಹೆಣ್ಣಿನ ಹಾಗೆ ಅಲಂಕಾರ ಮಾಡಲಾಗುತ್ತದೆ. ಶ್ರೀ ಕೃಷ್ಣನಿಗೆ ಹೆಣ್ಣಿನ ಹಾಗೆ ಬಟ್ಟೆ ಹಾಕಿಕೊಳ್ಳುವುದು ಎಂದರೆ ತುಂಬಾ ಇಷ್ಟ. ಹಾಗಾಗಿ ಉಡುಪಿ ಕ್ಷೇತ್ರ ಹಾಗೂ ಬೇರೆ ಬೇರೆ ಕೃಷ್ಣ ದೇವಾಲಯದಲ್ಲಿ ಶ್ರೀ ಕೃಷ್ಣನಿಗೆ ಹೆಣ್ಣಿನ ಹಾಗೆ ಅಲಂಕಾರ ಮಾಡುತ್ತಾರೆ. 

ಅದೇ ರೀತಿ ತಿರುಪತಿ ವೇಂಕಟೇಶ್ವರನಿಗೂ ಹೆಣ್ಣಿನ ಹಾಗೆ ಅಲಂಕಾರ ಮಾಡುತ್ತಾರೆ. ವೆಂಕಟೇಶನ ವಿಗ್ರಹಕ್ಕೆ  ಕೆಳಗೆ ಧೋತಿ ಹಾಕುತ್ತಾರೆ. ಮೇಲೆ ಸೀರೆ ಉಡಿಸುತ್ತಾರೆ.  ಲಕ್ಷ್ಮಿ ದೇವಿ ವಿಷ್ಣುವಿನ ಎದೆಯಲ್ಲಿ ಇರುವುದರಿಂದ ಹಾಗೆ ಮಾಡಲಾಗುತ್ತದೆ. ಮತ್ತೊಂದು ಸಕಾರಣವೆಂದರೆ ಗಂಡು ಹೆಣ್ಣು ಮದುವೆ ಆದ ಮೇಲೆ ಪತಿ-ಪತ್ನಿ ಇಬ್ಬರೂ ಬೇರೆ ಬೇರೆ ಅಲ್ಲ. ದಂಪತಿಯಾಗಿ ಒಬ್ಬರೇ ಆಗುತ್ತಾರೆ. ಅದೇ ಕಾರಣಕ್ಕಾಗಿ ಶಿವ ಪಾರ್ವತಿಯ ಅರ್ಧನಾರೀಶ್ವರ ಪ್ರತೀಕವಾಗಿ.. ವೇಂಕಟೇಶನಿಗೆ ಈ ರೀತಿ ಅಲಂಕಾರ ಮಾಡಲಾಗುತ್ತದೆ ಎಂಬ ಮಾತೂ ಚಾಲ್ತಿಯಲ್ಲಿದೆ.

11) ತಿರುಪತಿ ವೇಂಕಟೇಶ್ವರನಿಗೆ ಒಟ್ಟಿಗೆ ಹೆಣ್ಣು ಹಾಗೂ ಗಂಡಿನ ಅಲಂಕಾರ ಮಾಡಲಾಗುತ್ತದೆ. ಉದಾಹರಣೆಗೆ ಶ್ರೀ ಕೃಷ್ಣನಿಗೆ ಹೆಣ್ಣಿನ ಹಾಗೆ ಅಲಂಕಾರ ಮಾಡಲಾಗುತ್ತದೆ. ಶ್ರೀ ಕೃಷ್ಣನಿಗೆ ಹೆಣ್ಣಿನ ಹಾಗೆ ಬಟ್ಟೆ ಹಾಕಿಕೊಳ್ಳುವುದು ಎಂದರೆ ತುಂಬಾ ಇಷ್ಟ. ಹಾಗಾಗಿ ಉಡುಪಿ ಕ್ಷೇತ್ರ ಹಾಗೂ ಬೇರೆ ಬೇರೆ ಕೃಷ್ಣ ದೇವಾಲಯದಲ್ಲಿ ಶ್ರೀ ಕೃಷ್ಣನಿಗೆ ಹೆಣ್ಣಿನ ಹಾಗೆ ಅಲಂಕಾರ ಮಾಡುತ್ತಾರೆ. ಅದೇ ರೀತಿ ತಿರುಪತಿ ವೇಂಕಟೇಶ್ವರನಿಗೂ ಹೆಣ್ಣಿನ ಹಾಗೆ ಅಲಂಕಾರ ಮಾಡುತ್ತಾರೆ. ವೆಂಕಟೇಶನ ವಿಗ್ರಹಕ್ಕೆ ಕೆಳಗೆ ಧೋತಿ ಹಾಕುತ್ತಾರೆ. ಮೇಲೆ ಸೀರೆ ಉಡಿಸುತ್ತಾರೆ. ಲಕ್ಷ್ಮಿ ದೇವಿ ವಿಷ್ಣುವಿನ ಎದೆಯಲ್ಲಿ ಇರುವುದರಿಂದ ಹಾಗೆ ಮಾಡಲಾಗುತ್ತದೆ. ಮತ್ತೊಂದು ಸಕಾರಣವೆಂದರೆ ಗಂಡು ಹೆಣ್ಣು ಮದುವೆ ಆದ ಮೇಲೆ ಪತಿ-ಪತ್ನಿ ಇಬ್ಬರೂ ಬೇರೆ ಬೇರೆ ಅಲ್ಲ. ದಂಪತಿಯಾಗಿ ಒಬ್ಬರೇ ಆಗುತ್ತಾರೆ. ಅದೇ ಕಾರಣಕ್ಕಾಗಿ ಶಿವ ಪಾರ್ವತಿಯ ಅರ್ಧನಾರೀಶ್ವರ ಪ್ರತೀಕವಾಗಿ.. ವೇಂಕಟೇಶನಿಗೆ ಈ ರೀತಿ ಅಲಂಕಾರ ಮಾಡಲಾಗುತ್ತದೆ ಎಂಬ ಮಾತೂ ಚಾಲ್ತಿಯಲ್ಲಿದೆ.

12 / 12

Published On - 5:06 am, Fri, 6 September 24

Follow us