Shreyas Iyer: ದುಲೀಪ್ ಟ್ರೋಫಿಯಲ್ಲೂ ಮುಂದುವರೆದ ಶ್ರೇಯಸ್ ಅಯ್ಯರ್ ಪೆವಿಲಿಯನ್‌ ಪರೇಡ್

Duleep Trophy 2024: ದುಲೀಪ್ ಟ್ರೋಫಿಯ ಮೊದಲ ಪಂದ್ಯದಲ್ಲೇ ಭಾರತ ಡಿ ತಂಡದ ನಾಯಕರಾಗಿರುವ ಶ್ರೇಯಸ್ ಅಯ್ಯರ್ ಒಂದಂಕಿಗೆ ಸುಸ್ತಾಗಿದ್ದಾರೆ. ಅಯ್ಯರ್ ನಾಯಕತ್ವದ ಭಾರತ ಡಿ ತಂಡವು, ರುತುರಾಜ್ ಗಾಯಕ್ವಾಡ್ ನೇತೃತ್ವದ ಭಾರತ ಸಿ ತಂಡವನ್ನು ಎದುರಿಸುತ್ತಿದೆ. ಆದರೆ ತಮ್ಮ ಮೊದಲ ಪಂದ್ಯದಲ್ಲೇ ಶ್ರೇಯಸ್ ಅಯ್ಯರ್ ರನ್ ಗಳಿಸಲು ವಿಫಲರಾಗಿದ್ದಾರೆ.

|

Updated on:Sep 05, 2024 | 3:05 PM

2024 ರ ದೇಶೀ ಟೂರ್ನಿ ದುಲೀಪ್ ಟ್ರೋಫಿಗೆ ಇಂದಿನಿಂದ ಅಂದರೆ ಸೆಪ್ಟೆಂಬರ್ 5 ರಿಂದ ಚಾಲನೆ ಸಿಕ್ಕಿದೆ. ಟೂರ್ನಿಯ ಮೊದಲ ದಿನ ಭಾರತ ಎ ತಂಡ ಮತ್ತು ಭಾರತ ಬಿ ಹಾಗೂ ಭಾರತ ಸಿ ತಂಡ ಮತ್ತು ಭಾರತ ಡಿ ತಂಡಗಳ ನಡುವೆ ಪಂದ್ಯ ನಡೆಯುತ್ತಿದೆ.

1 / 6
ಮುಂಬರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭಾರತೀಯ ಆಟಗಾರರಿಗೆ ದುಲೀಪ್ ಟ್ರೋಫಿ ಅತ್ಯಂತ ಮಹತ್ವದ್ದಾಗಿದ್ದು, ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಮಾತ್ರ ಟೆಸ್ಟ್ ಟೀಂ ಇಂಡಿಯಾದಲ್ಲಿ ಅವಕಾಶ ನೀಡುವ ಸಾಧ್ಯತೆಗಳಿವೆ. ಹೀಗಾಗಿ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಸಲುವಾಗಿ ಹಲವು ಸ್ಟಾರ್ ಆಟಗಾರರು ಈ ಟೂರ್ನಿಯಲ್ಲಿ ಆಡುತ್ತಿದ್ದಾರೆ.

2 / 6
ಆದರೆ ದುಲೀಪ್ ಟ್ರೋಫಿಯ ಮೊದಲ ಪಂದ್ಯದಲ್ಲೇ ಭಾರತ ಡಿ ತಂಡದ ನಾಯಕರಾಗಿರುವ ಶ್ರೇಯಸ್ ಅಯ್ಯರ್ ಒಂದಂಕಿಗೆ ಸುಸ್ತಾಗಿದ್ದಾರೆ. ಅಯ್ಯರ್ ನಾಯಕತ್ವದ ಭಾರತ ಡಿ ತಂಡವು, ರುತುರಾಜ್ ಗಾಯಕ್ವಾಡ್ ನೇತೃತ್ವದ ಭಾರತ ಸಿ ತಂಡವನ್ನು ಎದುರಿಸುತ್ತಿದೆ. ಆದರೆ ತಮ್ಮ ಮೊದಲ ಪಂದ್ಯದಲ್ಲೇ ಶ್ರೇಯಸ್ ಅಯ್ಯರ್ ರನ್ ಗಳಿಸಲು ವಿಫಲರಾಗಿದ್ದಾರೆ.

3 / 6
ಮೊದಲ ಇನ್ನಿಂಗ್ಸ್‌ನಲ್ಲಿ 16 ಎಸೆತಗಳನ್ನು ಎದುರಿಸಿದ ಶ್ರೇಯಸ್ ಅಯ್ಯರ್ ಕೇವಲ 9 ರನ್ ಗಳಿಸಿ ವಿಜಯಕುಮಾರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್‌ ಸೇರಿಕೊಂಡರು. ಈ ದೇಶೀ ಟೂರ್ನಿಯಲ್ಲಿ ಅಬ್ಬರಿಸಿ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಬೇಕೆಂದುಕೊಂಡಿದ್ದ ಅಯ್ಯರ್‌ಗೆ ಆರಂಭದಲ್ಲೇ ಹಿನ್ನಡೆಯುಂಟಾಗಿದೆ. ಮುಂದೆಯೂ ಅಯ್ಯರ್ ಅವರ ಪ್ರದರ್ಶನ ಹೀಗೆಯೇ ಮುಂದುವರಿದರೆ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗುವುದು ತುಂಬಾ ಕಷ್ಟ.

4 / 6
ಈ ಹಿಂದೆ ಬುಚ್ಚಿಬಾಬು ಟೂರ್ನಿಯಲ್ಲೂ ಅಯ್ಯರ್ ಬ್ಯಾಟ್ ಮೌನಕ್ಕೆ ಶರಣಾಗಿತ್ತು. ಈ ಟೂರ್ನಿಯಲ್ಲೂ ಶ್ರೇಯಸ್ ಕಳಪೆ ಪ್ರದರ್ಶನ ನೀಡಿದ್ದರು. ಇದಲ್ಲದೆ, ಈ ಹಿಂದೆ ನಡೆದಿದ್ದ ಶ್ರೀಲಂಕಾ ಪ್ರವಾಸದ ಏಕದಿನ ಸರಣಿಯಲ್ಲೂ ಅಯ್ಯರ್ ಸಾಕಷ್ಟು ನಿರಾಸೆ ಮೂಡಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಸತತ ಕಳಪೆ ಪ್ರದರ್ಶನ ನೀಡುತ್ತಿರುವ ಅಯ್ಯರ್​ಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗುವುದು ಕಷ್ಟಕರವಾಗಿದೆ.

5 / 6
ಇದು ಮಾತ್ರವಲ್ಲ. ಶ್ರೇಯಸ್ ಅಯ್ಯರ್ ಕಳೆದ ಹಲವಾರು ಸರಣಿಗಳಲ್ಲಿ ನಿರಂತರವಾಗಿ ರನ್ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಇದನೇಲ್ಲ ಪರಿಗಣಿಸುತ್ತಿರುವ ಆಯ್ಕೆಗಾರರು ಅಯ್ಯರ್ ಅವರನ್ನು ಕಡೆಗಣಿಸಿ ಮತ್ತೊಬ್ಬ ಆಟಗಾರನಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ನೀಡಬಹುದು. ಆದಾಗ್ಯೂ, ಮುಂದಿನ ಪಂದ್ಯಗಳಲ್ಲಿ ಅವರ ಪ್ರದರ್ಶನದ ಮೇಲೆ ಆಯ್ಕೆದಾರರು ಖಂಡಿತವಾಗಿಯೂ ಕಣ್ಣಿಟ್ಟಿರುತ್ತಾರೆ.

6 / 6

Published On - 3:02 pm, Thu, 5 September 24

Follow us