- Kannada News Photo gallery Highest tax paying celebrities in India, Virat Kohli top among sportspersons, details in Kannada
Highest Tax Paying Sportsperson: ಅತಿಹೆಚ್ಚು ತೆರಿಗೆ ಕಟ್ಟುವ ಭಾರತೀಯ ಕ್ರಿಕೆಟಿಗರು; ವಿರಾಟ್ ಕೊಹ್ಲಿ ನಂ. 1
ಬೆಂಗಳೂರು, ಸೆಪ್ಟೆಂಬರ್ 5: ಹೆಚ್ಚು ಆದಾಯ ಪಡೆಯುವ ಪ್ರತಿಯೊಬ್ಬ ವ್ಯಕ್ತಿ ಕೂಡ ಇನ್ಕಮ್ ಟ್ಯಾಕ್ಸ್ ಕಟ್ಟುವ ಹೊಣೆಗಾರಿಕೆ ಹೊಂದಿರುತ್ತಾರೆ. ಸೆಲಬ್ರಿಟಿಗಳಾದರೂ ಸರಿ ತೆರಿಗೆ ಕಟ್ಟಬೇಕು. ಭಾರತದಲ್ಲಿ 2023-24ರಲ್ಲಿ ಅತಿಹೆಚ್ಚು ತೆರಿಗೆ ಪಾವತಿಸಿರುವ ಟಾಪ್10 ಸೆಲಬ್ರಿಟಿಗಳ ಪಟ್ಟಿಯನ್ನು ಫಾರ್ಚೂನ್ ಇಂಡಿಯಾ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಪೈಕಿ ಆರು ಕ್ರಿಕೆಟಿಗರಿದ್ದಾರೆ. ಅವರಾರು ಎಂಬ ವಿವರ ಇಲ್ಲಿದೆ.
Updated on:Sep 05, 2024 | 3:10 PM

1. ವಿರಾಟ್ ಕೊಹ್ಲಿ 66 ಕೋಟಿ ರೂ ತೆರಿಗೆ ಪಾವತಿಸುತ್ತಾರೆ. 2023-24ರ ಹಣಕಾಸು ವರ್ಷದಲ್ಲಿ ಭಾರತದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಆದ ಅವರು ಪಾವತಿಸಿದ ತೆರಿಗೆ ಮೊತ್ತ ಅದು. ಶಾರುಖ್ ಖಾನ್, ದಳಪತಿ ವಿಜಯ್, ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್ ಬಳಿಕ ಅತಿಹೆಚ್ಚು ಟ್ಯಾಕ್ಸ್ ಕಟ್ಟಿದ ಸೆಲಬ್ರಿಟಿ ಅವರು. ಕ್ರೀಡಾಪಟುಗಳ ಪೈಕಿ ಅವರದ್ದೇ ಗರಿಷ್ಠ ತೆರಿಗೆ ಪಾವತಿ.

2. ಎಂಎಸ್ ಧೋನಿ 38 ಕೋಟಿ ರೂ: ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ಯಾಪ್ಟನ್ ಮತ್ತು ವಿಕೆಟ್ಕೀಪರ್ ಬ್ಯಾಟ್ಸ್ಮ್ಯಾನ್ ಎಂದು ಪರಿಗಣಿಸಲಾದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ 2023-24ರಲ್ಲಿ 38 ಕೋಟಿ ರೂ ಟ್ಯಾಕ್ಸ್ ಕಟ್ಟಿದ್ದಾರೆ. ಕ್ರೀಡಾಪಟುಗಳ ಪೈಕಿ ಅತಿ ಹೆಚ್ಚು ತೆರಿಗೆ ಕಟ್ಟಿದವರ ಪಟ್ಟಿಯಲ್ಲಿ ಧೋನಿ ಎರಡನೇ ಸ್ಥಾನದಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದರೂ ಜಾಹೀರಾತು, ವಿವಿಧ ಉದ್ದಿಮೆಗಳನ್ನು ಅವರು ನಿರ್ವಹಿಸುತ್ತಾ ಆದಾಯ ಗಳಿಸುತ್ತಿದ್ದಾರೆ.

3. ಸಚಿನ್ ತೆಂಡೂಲ್ಕರ್ 28 ಕೋಟಿ ರೂ: ಕ್ರಿಕೆಟ್ ಮಾಸ್ಟರ್ ಬ್ಲಾಸ್ಟರ್ ಆದ ಅವರು ಹಲವು ವರ್ಷಗಳ ಹಿಂದೆಯೇ ನಿವೃತ್ತರಾದರೂ ವಿವಿಧ ಮೂಲಗಳಿಂದ ಆದಾಯ ಪಡೆಯುತ್ತಾರೆ. ಇದಕ್ಕೆ ಸಾಕ್ಷಿ ಅವರು 2023-24ರಲ್ಲಿ ಕಟ್ಟಿದ 28 ಕೋಟಿ ರೂ ತೆರಿಗೆಯೇ ಸಾಕ್ಷಿ. ಟ್ಯಾಕ್ಸ್ ಪಾವತಿಯಲ್ಲಿ ಅವರು ಪ್ರಾಮಾಣಿಕರಾಗಿದ್ದಾರೆ.

4. ಸೌರವ್ ಗಂಗೂಲಿ 23 ಕೋಟಿ ರೂ: ಮಾಜಿ ಕ್ರಿಕೆಟಿಗ, ಮಾಜಿ ಕ್ಯಾಪ್ಟನ್ ಮತ್ತು ಮಾಜಿ ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ 2023-24ರ ಹಣಕಾಸು ವರ್ಷದಲ್ಲಿ 23 ಕೋಟಿ ರೂ ಆದಾಯ ತೆರಿಗೆ ಪಾವತಿಸಿದ್ದಾರೆ. ಸ್ವಂತ ಉದ್ದಿಮೆಗಳನ್ನು ಹೊಂದಿದ್ದು ಬಹಳಷ್ಟು ಆದಾಯ ಗಳಿಸುತ್ತಿದ್ದಾರೆ.

5. ಹಾರ್ದಿಕ್ ಪಾಂಡ್ಯ 13 ಕೋಟಿ ರೂ: ಹಾಲಿ ಸಕ್ರಿಯ ಕ್ರಿಕೆಟಿಗರ ಪೈಕಿ ವಿರಾಟ್ ಕೊಹ್ಲಿ ಬಿಟ್ಟರೆ ಅತಿಹೆಚ್ಚು ತೆರಿಗೆ ಕಟ್ಟಿರುವುದು ಹಾರ್ದಿಕ್ ಪಾಂಡ್ಯ ಅವರೆಯೇ. ಜಾಹೀರಾತು ಮತ್ತು ಕ್ರಿಕೆಟ್ ಅವರ ಪ್ರಮುಖ ಆದಾಯ ಮೂಲಗಳು.

6. ರಿಷಭ್ ಪಂತ್ 10 ಕೋಟಿ ರೂ: ವಿಕೆಟ್ ಕೀಪರ್ ಬ್ಯಾಟ್ಸ್ಮ್ಯಾನ್ ಆಗಿರುವ ರಿಷಭ್ ಪಂತ್ 2023-24ರಲ್ಲಿ 10 ಕೋಟಿ ರೂ ತೆರಿಗೆ ಕಟ್ಟಿದ್ದಾರೆ. ಗಾಯದ ಕಾರಣದಿಂದ ಸಾಕಷ್ಟು ಕಾಲ ಅವರು ಸಕ್ರಿಯ ಆಟದಿಂದ ದೂರ ಇದ್ದರು. ಆದರೂ ಅವರು ಭಾರತದ ಟಾಪ್ ಕ್ರಿಕೆಟಿಗರಾಗಿ ಉಳಿದಿದ್ದಾರೆ. ಜಾಹೀರಾತುಗಳಿಂದಲೂ ಇವರು ಸಾಕಷ್ಟು ಆದಾಯ ಗಳಿಸುತ್ತಾರೆ. ಅತಿಹೆಚ್ಚು ಟ್ಯಾಕ್ಸ್ ಪಾವತಿಸುವ 20 ಸೆಲಬ್ರಿಟಿಗಳ ಪಟ್ಟಿಯಲ್ಲಿ ಪಂತ್ 20ನೆಯವರಾಗಿದ್ದಾರೆ.

ತೆರಿಗೆ ಪಾವತಿಸುವ ಅಗ್ರಮಾನ್ಯ 20 ಸೆಲಬ್ರಿಟಿಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹೆಸರು ಇಲ್ಲ. ಅಲ್ಲು ಅರ್ಜುನ್, ಮೋಹನ್ ಲಾಲ್, ದಳಪತಿ ವಿಜಯ್ ಮೊದಲಾದ ಸದರ್ನ್ ಫಿಲಂ ಸ್ಟಾರ್ಗಳ ಹೆಸರು ಈ ಪಟ್ಟಿಯಲ್ಲಿವೆ. ಪಟ್ಟಿಯಲ್ಲಿ ಮೇಲಿನ ಆರು ಕ್ರಿಕೆಟಿಗರು ಇದ್ದಾರೆ.
Published On - 12:36 pm, Thu, 5 September 24




