ಸಾವಿರಾರು ವರ್ಷಗಳ ಹಿಂದೆಯೇ ಮಳೆ ಕೊಯ್ಲು ಅಳವಡಿಸಿಕೊಂಡು ನಿರ್ಮಿಸಿರುವ ಈ ದೇವಾಲಯಕ್ಕೆ ಹೋಗೋಣಾ ಬನ್ನೀ!
Ellora Kailasa Temple: ತಂತ್ರಜ್ಞಾನಕ್ಕೆ ಸವಾಲಾಗಿರುವ ಸುಮಾರು 1200 ವರ್ಷಗಳಷ್ಟು ಹಳೆಯ ಎಲ್ಲೋರದ ಕೈಲಾಸ ದೇವಾಲಯ ವಸ್ತುಶಿಲ್ಪದ ಚಕಿತ ಎನ್ನಬಹುದು. ಈ ದೇವಾಲಯವನ್ನು ಒಂದೇ ಕಲ್ಲಿನಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಇನ್ನೊಂದು ವಿಶೇಷವೆಂದರೆ ಎಲ್ಲೋರದ ದೇವಸ್ಥಾನಗಳಲ್ಲಿ ಮಳೆ ಕೊಯ್ಲು ಅಳವಡಿಸಲಾಗಿದೆ. ಈ ದೇವಾಲಯ ನಿರ್ಮಾಣದ ಹಿಂದೆ ಅದ್ಭುತ ಕಥೆಯೂ ಇದೆ. ಬನ್ನಿ ಈ ಬಗ್ಗೆ ಈ ಲೇಖನದಲ್ಲಿ ವಿಸ್ತಾರವಾಗಿ ತಿಳಿಯಿರಿ.

ಮಳೆ ತುಸು ಹೆಚ್ಚೇ ಸುರಿದರೂ ಮನೆಗಳಿಗೆ ನೀರು ನುಗ್ಗುವುದು, ಜಲಾಶಯಗಳ ಗೇಟು ಕಿತ್ತುಹೋಗುವುದು ಈಗೀಗ ಸಾಮಾನ್ಯವಾಗಿದೆ. ಇನ್ನು ಬಿಹಾರದಲ್ಲಿ ಇತ್ತೀಚೆಗೆ ವಾರ ಹದಿನೈದು ದಿನದಲ್ಲಿ ಹತ್ತಾರು ಬ್ರಿಡ್ಜ್ಗಳೇ ಉದುರಿಬಿದ್ದವು. ಅತ್ಯಾಧುನಿಕ ನಿರ್ಮಾಣ ತಂತ್ರಜ್ಞಾನದ ಮಧ್ಯೆಯೂ ಇಂದಿನ ಮಾನವ ನಿರ್ಮಿತ ಕಟ್ಟಡಗಳು ಶಿಥಿಲಗೊಳ್ಳುತ್ತಿರುವುದನ್ನು ನೋಡಿದಾಗ ಮನುಷ್ಯನ ಮೇಲಿನ ನಂಬಿಕೆಯೇ ಕುಸಿಯುತ್ತದೆ. ಇದಕ್ಕಿಂತಾ ಕೆಟ್ಟ ಪ್ರಸಂಗವೆಂದರೆ ಇತ್ತೀಚೆಗೆ ರಾಜಧಾನಿ ದೆಹಲಿಯಲ್ಲಿ ಮಳೆ ಸ್ವಲ್ಪ ಜೋರಾಗಿ ಬಿದ್ದಾಗ ನೀರು ಬೇಸ್ಮೆಂಟ್ಗೆ ನುಗ್ಗಿ ಭವಿಷ್ಯದ ಆಶಾಕಿರಣವಾಗಿದ್ದ ಮೂವರು ಐಎಎಸ್ ಆಕಾಂಕ್ಷಿಗಳು ಕೆಲವೇ ಕ್ಷಣಗಳಲ್ಲಿ ಜಲಸಮಾಧಿಯಾದರು. ಇದೆಲ್ಲಾ ದುರದೃಷ್ಟಕರ ತಾಜಾ ಬೆಳವಣಿಗೆಗಳಿಗೆ ಹಿಡಿದ ಕನ್ನಡಿಯಾಗಿದೆ. ಅಷ್ಟಕ್ಕೂ ಇದೆಲ್ಲಾ ಯಾಕೆ ಹೇಳಬೇಕಾಯಿತು ಅಂದರೆ ಸರಿಸುಮಾರು 1200 ವರ್ಷಗಳ ಹಿಂದೆ ಸಮತಟ್ಟಾದ ಬೆಟ್ಟದಲ್ಲಿ ಏಕಶಿಲೆಯಲ್ಲಿ ಬೃಹದಾಕಾರದ ದೇವಸ್ಥಾನವನ್ನು ನಿರ್ಮಿಸಲಾಯಿತು. ಮಹಾರಾಷ್ಟ್ರದ ಎಲ್ಲೋರಾ ಗುಹೆಗಳಲ್ಲಿ ಕೆತ್ತಿದ ಆ ದೇಗುಲವೇ ಕೈಲಾಸ ಮಂದಿರ. ಸಾವಿರಾರು ವರ್ಷಗಳೇ ಉರುಳಿದರೂ ಆ ಬೆಟ್ಟದಿಂದ ಒಂದು ಚಿಕ್ಕ ಬಂಡೆಯೂ ಉರುಳಿಲ್ಲ! ಅಷ್ಟು ಸದೃಢವಾಗಿ ಬಂಡೆಯಂತೆ ನಿಂತಿದೆ ಆ ದೇವಸ್ಥಾನ. ಅದೇ ಇಂದಿನ ‘ಆಧುನಿಕ ಕರಕುಶಲ ಕರ್ಮಿಗಳು’ ಅಂದರೆ ದುಷ್ಕರ್ಮಿಗಳು ತಾವು ಕಟ್ಟಲಾಗದಿದ್ದರೂ ಅದನ್ನು ಬೀಳಿಸುವಲ್ಲಿ ಎತ್ತಿದ ಕೈ ಆಗಿದ್ದಾರೆ. ಯಾಕೆಂದರೆ ಆ ಕೈಲಾಸ ಮಂದಿರದಲ್ಲಿದ್ದ ಹಲವಾರು ಅದ್ಭುತ ಕುಶಲ ಕೆತ್ತನೆಗಳು, ವಿಗ್ರಹಗಳನ್ನು ಈ ದುಷ್ಕರ್ಮಿಗಳು ಮನಸೋಇಚ್ಛೆ ಕಡಿದುಹಾಕಿದ್ದಾರೆ. ಇದು ಮಾನವ ದುರಂತವೇ ಸರಿ. ಇನ್ನು, ಲೇಖನದ ಆರಂಭದಲ್ಲಿ ಮಳೆ ಕುರಿತಾದ ಅವಘಡಗಳನ್ನು ಪ್ರಸ್ತಾಪಿಸಿದ್ದೇಕೆ ಎಂದರೆ ಸಾವಿರಾರು ವರ್ಷಗಳ ಹಿಂದಿನ ಕೈಲಾಸ ಮಂದಿರದಲ್ಲಿ ಮಳೆಕೊಯ್ಲು ವ್ಯವಸ್ಥೆಯನ್ನು ಕಟ್ಟಲಾಗಿತ್ತು. ಬೆಟ್ಟದ ಮೇಲಿಂದ ನೀರು ಹರಿದುಬರುತ್ತಿದ್ದರೂ ಕೆಳಮಟ್ಟದಲ್ಲಿರುವ...
Published On - 2:32 pm, Tue, 10 September 24