ನಿಮ್ಮ ಲವರ್‌ಗೆ ಯಾವ ಕಾರಣಕ್ಕೂ ಈ ಗಿಫ್ಟ್‌ಗಳನ್ನು ನೀಡಬೇಡಿ, ಬ್ರೇಕಪ್ ಆಗಬಹುದು ಜೋಕೆ
ಲವರ್ಸ್ ಒಬ್ಬರಿಗೊಬ್ಬರು ಉಡುಗೊರೆ ಕೊಟ್ಟುಕೊಳ್ಳುವುದು ಕಾಮನ್. ಬರ್ತ್‌ಡೇ, ಪ್ರೇಮಿಗಳ ದಿನದಂದು ಅಥವಾ ಸಂಗಾತಿಯನ್ನು ಸಂತೋಷ ಪಡಿಸಲು, ಸಂಗಾತಿಯ ಮುನಿಸನ್ನು ಕಮ್ಮಿ ಮಾಡಲು ಈ ಪ್ರೇಮಿಗಳು ಉಡುಗೊರೆಗಳನ್ನು ನೀಡುತ್ತಾರೆ. ಆದ್ರೆ ಈ ಕೆಲವು ಗಿಫ್ಟ್‌ಗಳನ್ನು ಲವರ್‌ಗೆ ಕೊಡ್ಬಾರ್ದಂತೆ. ಹೌದು ಶಾಸ್ತ್ರಗಳ ಪ್ರಕಾರ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡಿದರೆ ಗಿಫ್ಟ್ ಕೊಡುವವರಿಗೆ ಹಾಗೂ ತೆಗೆದುಕೊಳ್ಳುವವರಿಗೆ ಸಮಸ್ಯೆ ಬರುವಂತೆ, ನೀವು ಈ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನಿಮ್ಮ ಪ್ರಿಯತಮೆಗೋ ಅಥವಾ ಪ್ರಿಯತಮನಿಗೋ ನೀಡಿದರೆ ಅದರಿಂದ ಸಂಬಂಧದಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹು, ಜೊತೆಗೆ ಬ್ರೇಕಪ್ ಕೂಡ ಆಗಬಹುದು. ಹಾಗಾದ್ರೆ ಯಾವೆಲ್ಲಾ ವಸ್ತುಗಳನ್ನು ಉಡುಗೊರೆಯಾಗಿ ಕೊಡಬಾರದು ಎಂಬುದನ್ನು ನೋಡೋಣ ಬನ್ನಿ.
Updated on: May 28, 2025 | 6:58 PM

ಕಳ್ಳಿ ಗಿಡ ಅಥವಾ ಮುಳ್ಳಿನ ಸಸ್ಯಗಳು: ಸಂಗಾತಿಗೆ ಗಿಡಗಳು ಇಷ್ಟ ಅಂತ ಕೆಲವರು ಬೇರೆಬೇರೆ ಗಿಡಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಹೀಗೆ ನೀವು ಗಿಡ ಗಿಫ್ಟ್ ಕೊಡ್ತೀರಿ ಎಂದಾದ್ರೆ ಯಾವುದೇ ಕಾರಣಕ್ಕೂ ಕಳ್ಳಿ ಗಿಡ ಅಥವಾ ಮುಳ್ಳಿನ ಸಸ್ಯವನ್ನು ಗಿಫ್ಟ್ ಮಾಡ್ಬೇಡಿ. ಶಾಸ್ತ್ರಗಳ ಪ್ರಕಾರ ಈ ಉಡುಗೊರೆಗಳು ನಿಮ್ಮ ಸಂಬಂಧಕ್ಕೆ ಹಾನಿ ಮಾಡಬಹುದು. ಈ ಸಸ್ಯಗಳು ನಕಾರಾತ್ಮಕ ಶಕ್ತಿಯನ್ನು ಹೊರಸೂಸುತ್ತವೆ, ಸಂಗಾತಿಗಳ ನಡುವೆ ಉದ್ವಿಗ್ನತೆ ಮತ್ತು ಸಂಘರ್ಷಕ್ಕೆ ಕಾರಣವಾಗುತ್ತವೆ. ಹಾಗಾಗಿ ನಿಮ್ಮ ಪ್ರೀತಿಗೆ ಯಾವುದೇ ತೊಂದರೆ ಬಾರದಿರಲು ಗುಲಾಬಿ ಅಥವಾ ಆರ್ಕಿಡ್‌ಗಳಂತಹ ಸಕಾರಾತ್ಮಕತೆ ಹೊರಸೂಸುವ ಸಸ್ಯಗಳನ್ನು ಉಡುಗೊರೆಯಾಗಿ ನೀಡಿ.

ಗಾಜಿನ ವಸ್ತುಗಳು: ಸ್ವಲ್ಪ ಅಜಾಗರೂಕತೆ ವಹಿಸಿದರೂ ಗಾಜಿನ ವಸ್ತುಗಳು ಒಡೆದು ಹೋಗುತ್ತದೆ. ಅದೇ ರೀತಿ ಗಾಜಿನ ವಸ್ತುಗಳನ್ನು ಉಡುಗೊರೆ ನೀಡಿದರೆ ಸಂಬಂಧವೂ ಒಡೆದು ಹೋಗುತ್ತದೆ ಎಂದು ನಂಬಲಾಗಿದೆ. ಶಾಸ್ತ್ರಗಳ ಪ್ರಕಾರ ಗಾಜಿನ ವಸ್ತುಗಳನ್ನು ಗಿಫ್ಟ್ ನೀಡುವುದರಿಂದ ಸಂಬಂಧದಲ್ಲಿ ಜಗಳ ಮತ್ತು ಉದ್ವಿಗ್ನತೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅಲ್ಲದೆ ಇದು ಸಂಬಂಧದಲ್ಲಿ ಅಶಾಂತಿ ಮತ್ತು ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ. ಆದ್ದರಿಂದ ಗಾಜಿನ ವಸ್ತುಗಳನ್ನು ಉಡುಗೊರೆ ನೀಡಬೇಡಿ.

ಸುಗಂಧ ದ್ರವ್ಯಗಳು: ಸುಗಂಧದ್ರವ್ಯವನ್ನು ಯಾರಿಗೂ ಉಡುಗೊರೆಯಾಗಿ ನೀಡಬಾರದು ಅಂತ ಹೇಳುತ್ತಾರೆ. ಇದರಿಂದ ಜೀವನದಲ್ಲಿ ಹಣದ ಕೊರತೆ ಮತ್ತು ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸುಗಂಧ ದ್ರವ್ಯದ ವಾಸನೆ ಸ್ಪಲ್ಪ ಸಮಯದ ಬಳಿಕ ಮಾಯವಾಗುವಂತೆ, ಇದನ್ನು ಲವರ್‌ಗೆ ಉಡುಗೊರೆಯಾಗಿ ನೀಡಿದರೆ ನಿಮ್ಮ ಸಂಬಂಧ ಕೂಡಾ ಹಾಳಾಗಬಹುದು. ಅದಕ್ಕಾಗಿ ಇದನ್ನು ಉಡುಗೊರೆಯಾಗಿ ನೀಡಬೇಡಿ.

ಕಪ್ಪು ಬಣ್ಣದ ವಸ್ತುಗಳು: ಬಟ್ಟೆ, ಮನೆ ಅಲಂಕಾರಿಕ ವಸ್ತುಗಳಂತಹ ಸೇರಿದಂತೆ ಯಾವುದೇ ಕಪ್ಪು ಬಣ್ಣದ ವಸ್ತುಗಳನ್ನು ಗಿಫ್ಟ್ ಆಗಿ ನೀಡಬೇಡಿ. ನಿಮ್ಮ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ನಂಬಿಕೆಗಳ ಪ್ರಕಾರ ಕಪ್ಪು ಬಣ್ಣವನ್ನು ನಕಾರಾತ್ಮಕತೆ, ದುಃಖ ಮತ್ತು ಪ್ರತ್ಯೇಕತೆಯ ಸಂಕೇತವೆಂದು ಪರಿಗಣಿಸುತ್ತದೆ. ಕಪ್ಪು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದರಿಂದ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು, ಇದು ಸಂಗಾತಿಗಳ ನಡುವೆ ತಪ್ಪು ತಿಳುವಳಿಕೆ ಮತ್ತು ಜಗಳಗಳಿಗೆ ಕಾರಣವಾಗಬಹುದು.

ಚೂಪಾದ ವಸ್ತುಗಳು: ರೇಜರ್‌ಗಳು, ಚಾಕುಗಳು ಮುಂತಾದ ಚೂಪಾದ ವಸ್ತುಗಳನ್ನು ಉಡುಗೊರೆಯಾಗಿ ನೀಡಬೇಡಿ. ಇದು ಸಂಗಾತಿಗಳ ನಡುವಿನ ಬಂಧವನ್ನೇ ಒಡೆದು ಬ್ರೇಕಪ್‌ಗೆ ಕಾರಣವಾಗಬಹುದು. ಅಲ್ಲದೆ ಇಂತಹ ವಸ್ತುಗಳು ನಕಾರಾತ್ಮಕ ಶಕ್ತಿಗಳನ್ನು ಹೊರ ಸೂಸುವುದರಿಂದ ಇದರಿಂದ ಜಗಳಗಳು, ಮನಸ್ತಾಪಗಳು ಕೂಡಾ ಉಂಟಾಗಬಹುದು.

ಗಡಿಯಾರ: ಸಮಯವು ಎಲ್ಲರಿಗೂ ಅಮೂಲ್ಯವಾದುದು. ಆದರೆ ಸಮಯವನ್ನು ಸೂಚಿಸುವ ಗಡಿಯಾರವನ್ನು ಉಡುಗೊರೆಯಾಗಿ ನೀಡಬಾರದು ಎಂದು ಹೇಳುತ್ತಾರೆ. ಏಕೆಂದರೆ ಇದು ಜೀವನದಲ್ಲಿ ಅಡೆತಡೆಗಳು, ವಿಳಂಬಗಳು ಮತ್ತು ತೊಂದರೆಗಳಿಗೆ ಕಾರಣವಾಗಬಹುದು. ನಿಮ್ಮ ಸಂಗಾತಿಗೆ ಗಡಿಯಾರ ಅಥವಾ ವಾಚ್ ಉಡುಗೊರೆಯಾಗಿ ನೀಡುವುದರಿಂದ ಕೆಲವೊಂದು ಬಾರಿ ಸಮಯವೇ ನಿಂತಂತೆ ಸಂಬಂಧವೂ ಅಂತ್ಯ ಕಾಣಬಹುದು.




