ಕೂದಲು ಮತ್ತು ಚರ್ಮದ ಆರೈಕೆಗೆ ತೆಂಗಿನ ಎಣ್ಣೆಗೆ ತುಂಬಾ ಮುಖ್ಯವಾಗಿದೆ. ಉದ್ದವಾದ, ದಪ್ಪ ಕೂದಲನ್ನು ಪಡೆಯಲು ತೆಂಗಿನ ಎಣ್ಣೆ ತುಂಬಾ ಪರಿಣಾಮಕಾರಿಯಾಗಿದೆ. ಆದರೆ ಇದು ಕೂದಲಿನ ಆರೈಕೆಗೆ ಮಾತ್ರವಲ್ಲದೆ ಚರ್ಮದ ಆರೈಕೆ ಮಾಡಿ ಸೌಂದರ್ಯ ಹೆಚ್ಚಿಸಲು ಪರಿಣಾಮಕಾರಿಯಾದ ಮನೆಮದ್ದಾಗಿದೆ. ಮೇಕಪ್ ತೆಗೆಯಲು ಇದು ತುಂಬಾ ಉಪಯುಕ್ತವಾಗಿದೆ. ಇದಲ್ಲದೆ, ತೆಂಗಿನ ಎಣ್ಣೆಯನ್ನು ನಿಯಮಿತವಾಗಿ ಕಣ್ಣುಗಳ ಕೆಳಗೆ ಮಸಾಜ್ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕೆಲವರಿಗೆ ಕಣ್ಣಿನ ಕೆಳಭಾಗವು ವಿವಿಧ ಕಾರಣಗಳಿಂದ ಉಬ್ಬುತ್ತದೆ. ಕೆಲವರಿಗೆ ದದ್ದುಗಳು, ತುರಿಕೆ ಉಂಟಾಗುತ್ತದೆ. ಇದಕ್ಕೆ ಹಲವು ಕಾರಣಗಳು ಇರಬಹುದು. ದಿನವಿಡೀ ಫೋನ್ ನೋಡುವುದು, ಸಾಕಷ್ಟು ನಿದ್ರೆ ಮಾಡಲು ಸಾಧ್ಯವಾಗದಿದ್ದಾಗ, ಜೊತೆಗೆ ವಯಸ್ಸಾಗುವುದರಿಂದ ಈ ಸಮಸ್ಯೆಗಳು ಕಂಡು ಬರುತ್ತದೆ. ತೆಂಗಿನ ಎಣ್ಣೆಯನ್ನು ಕಣ್ಣುಗಳ ಕೆಳಗೆ ಹಚ್ಚಿ ಮತ್ತು ಕೈಗಳಿಂದ ಮಸಾಜ್ ಮಾಡುವುದರಿಂದ ಸಮಸ್ಯೆಯನ್ನು ನಿವಾರಣೆ ಮಾಡಬಹುದು.
ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಚರ್ಮದ ಮೇಲೆ ಸುಕ್ಕುಗಳು ಕಂಡುಬರುತ್ತದೆ. ವಿವಿಧ ಕಂಪನಿಗಳ ಸೌಂದರ್ಯವರ್ಧಕಗಳನ್ನು ಬಳಸುವುದರಿಂದ ಚರ್ಮ ಹಾಳಾಗುತ್ತದೆ. ತೆಂಗಿನ ಎಣ್ಣೆಯು ಈ ಸಮಸ್ಯೆಗಳಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ. ಈ ಎಣ್ಣೆಯಲ್ಲಿರುವ ಕೊಬ್ಬಿನಾಮ್ಲಗಳು ಚರ್ಮವನ್ನು ಬಿಗಿಗೊಳಿಸುತ್ತವೆ ಮತ್ತು ಒರಟುತನವನ್ನು ಕಡಿಮೆ ಮಾಡುತ್ತವೆ.
ಇದನ್ನೂ ಓದಿ: ದೀಪಾವಳಿ ಪಟಾಕಿಗಳಿಂದ ಬರುವ ಹೊಗೆಯಿಂದ ಪಾರಾಗಲು ಈ ರೀತಿ ಮಾಡಿ
ದದ್ದುಗಳು, ತುರಿಕೆ, ಕೆಂಪಾಗುವಿಕೆ ಮುಂತಾದ ಚರ್ಮದ ಸಮಸ್ಯೆಗಳನ್ನು ನಿವಾರಣೆ ಮಾಡಲು ತೆಂಗಿನ ಎಣ್ಣೆ ಸಹಕಾರಿಯಾಗಿದೆ. ಇದು ಚರ್ಮದ ಅಂದವನ್ನು ಹೆಚ್ಚಿಸುವುದಲ್ಲದೆ ಅದನ್ನು ಮೃದುಗೊಳಿಸುವ ಮೂಲಕ ಒಳಗಿನಿಂದ ನಿಮ್ಮ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ. ಇದರಲ್ಲಿರುವ ಕಾಲಜನ್ ಚರ್ಮಕ್ಕೆ ಪೋಷಣೆಯನ್ನು ನೀಡುತ್ತದೆ. ತೆಂಗಿನ ಎಣ್ಣೆ ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಅಲ್ಲದೆ ಇದು ಚರ್ಮವನ್ನು ಬಿಗಿಯಾಗಿರಿಸುತ್ತದೆ. ಹಾಗಾಗಿ ಕಣ್ಣಿನ ಕೆಳಗೆ ಊದಿಕೊಂಡಂತೆ ಆಗುತ್ತಿದ್ದರೆ ಅಥವಾ ತುರಿಕೆ ಕಂಡುಬರುತ್ತಿದ್ದರೆ ತೆಂಗಿನ ಎಣ್ಣೆಯನ್ನು ಬಳಸಿ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ