Deepavali health tips: ಹಬ್ಬಗಳ ಸಮಯದಲ್ಲಿ ಮನೆಯ ಹಿರಿಯರ ಆರೋಗ್ಯವನ್ನು ಈ ರೀತಿ ಕಾಪಾಡಿ

ಹಬ್ಬಗಳ ಸಮಯದಲ್ಲಿ ಹೆಚ್ಚು ಹೆಚ್ಚು ಸಿಹಿ ತಿನಿಸುಗಳನ್ನು ಸೇವನೆ ಮಾಡುತ್ತಾರೆ. ಈ ರೀತಿಯ ಆಹಾರದ ಪ್ರಕ್ರಿಯೆಯಿಂದ ಜನರ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ, ಬಳಿಕ ಇದು ನಿಮ್ಮ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಹಬ್ಬಗಳ ಸಮಯದಲ್ಲಿ ನಿಮ್ಮ ಹೃದಯವನ್ನು ಆರೋಗ್ಯಕರವಾಗಿ ನೋಡಿಕೊಳ್ಳುವುದು ಮುಖ್ಯವಾಗಿದೆ. ಅದಲ್ಲದೆ ಈ ಹಬ್ಬಗಳ ದಿನದಲ್ಲಿ ಮನೆಯ ಹಿರಿಯರ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಬೇಕಾಗುತ್ತದೆ. ಹಾಗಾದರೆ ಸಿಹಿ ತಿನಿಸುಗಳ ಸೇವನೆಯನ್ನು ನಿಯಂತ್ರಣದಲ್ಲಿಡಲು ವೈದ್ಯರು ನೀಡಿರುವ ಈ ಸಲಹೆಯನ್ನು ಪಾಲನೆ ಮಾಡಿ.

Deepavali health tips: ಹಬ್ಬಗಳ ಸಮಯದಲ್ಲಿ ಮನೆಯ ಹಿರಿಯರ ಆರೋಗ್ಯವನ್ನು ಈ ರೀತಿ ಕಾಪಾಡಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 30, 2024 | 3:55 PM

ದೀಪಗಳ ಹಬ್ಬ ದೀಪಾವಳಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಆ ಮೂರು ದಿನಗಳಲ್ಲಿ ವಿಧ ವಿಧವಾದ ಸಿಹಿತಿಂಡಿಗಳನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡುವ ಮೂಲಕ ಸೇವನೆ ಮಾಡಲಾಗುತ್ತದೆ. ಆದರೆ ಇದರ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿದೆ. ಕೆಲವರು ಹಬ್ಬಗಳ ಸಮಯದಲ್ಲಿ ಹೆಚ್ಚು ಹೆಚ್ಚು ಸಿಹಿ ತಿನಿಸುಗಳನ್ನು ಸೇವನೆ ಮಾಡುತ್ತಾರೆ. ಈ ರೀತಿಯ ಆಹಾರದ ಪ್ರಕ್ರಿಯೆಯಿಂದ ಜನರ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ, ಬಳಿಕ ಇದು ನಿಮ್ಮ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಹಬ್ಬಗಳ ಸಮಯದಲ್ಲಿ ನಿಮ್ಮ ಹೃದಯವನ್ನು ಆರೋಗ್ಯಕರವಾಗಿ ನೋಡಿಕೊಳ್ಳುವುದು ಮುಖ್ಯವಾಗಿದೆ. ಅದಲ್ಲದೆ ಈ ಹಬ್ಬಗಳ ದಿನದಲ್ಲಿ ಮನೆಯ ಹಿರಿಯರ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಬೇಕಾಗುತ್ತದೆ. ಹಾಗಾದರೆ ಸಿಹಿ ತಿನಿಸುಗಳ ಸೇವನೆಯನ್ನು ನಿಯಂತ್ರಣದಲ್ಲಿಡಲು ವೈದ್ಯರು ನೀಡಿರುವ ಈ ಸಲಹೆಯನ್ನು ಪಾಲನೆ ಮಾಡಿ.

ಹಿರಿಯ ಹೃದ್ರೋಗ ತಜ್ಞ ಡಾ. ವರುಣ್ ಬನ್ಸಾಲ್ ಅವರು ಹೇಳುವ ಪ್ರಕಾರ, ಮನೆಯ ಹಿರಿಯರು ಹಬ್ಬಗಳಲ್ಲಿ ಸಿಹಿತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಾರೆ, ಆದರೆ ಈ ಸಮಯದಲ್ಲಿ ಎಲ್ಲಾ ಪದಾರ್ಥಗಳನ್ನು, ಮಿತಿಗಿಂತ ಹೆಚ್ಚು ಸೇವಿಸಿದರೆ, ಎಲ್ಡಿಎಲ್ ಅಂದರೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ, ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ, ಅದಕ್ಕಾಗಿಯೇ ಈ ಸಮಯದಲ್ಲಿ ಜನರು, ಅದರಲ್ಲಿಯೂ ವಿಶೇಷವಾಗಿ ವಯಸ್ಸಾದವರು ತಮ್ಮ ಆಹಾರ ಮತ್ತು ಪಾನೀಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸಿಹಿ ತಿನ್ನಿ ಆದರೆ ಅತಿಯಾಗಿ ತಿನ್ನಬೇಡಿ. ಜೊತೆಗೆ ಈ ಸಂದರ್ಭದಲ್ಲಿ ಸಿಹಿ ತಿನಿಸುಗಳ ಸೇವನೆಯನ್ನು ನಿಯಂತ್ರಣದಲ್ಲಿಡಲು ಕೆಲವು ವಿಷಯಗಳನ್ನು ಅನುಸರಿಸುವುದು ಬಹಳ ಅವಶ್ಯಕ ಎಂದು ಅವರು ಹೇಳಿದ್ದಾರೆ.

ದ್ರವ ರೂಪದ ಆಹಾರವನ್ನು ಸೇವನೆ ಮಾಡಿ

ಈ ಸಮಯದಲ್ಲಿ ಸಾಕಷ್ಟು ದ್ರವ ರೂಪದ ಆಹಾರವನ್ನು ತೆಗೆದುಕೊಳ್ಳಿ ಎಂದು ಡಾ. ವರುಣ್ ಹೇಳುತ್ತಾರೆ. ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸಂಸ್ಕರಿಸಿದ ರಸಗಳು ಮತ್ತು ಸಕ್ಕರೆ ಪಾನೀಯಗಳಿಗಿಂತ ಎಳನೀರು, ನಿಂಬೆರಸ, ಮಜ್ಜಿಗೆ ಮತ್ತು ಲಸ್ಸಿ ಉತ್ತಮ ಆಯ್ಕೆಗಳಾಗಿವೆ.

ಹೆಚ್ಚು ಕೊಬ್ಬಿರುವ ಆಹಾರವನ್ನು ಸೇವಿಸಬೇಡಿ

ಹುರಿದ ಆಹಾರ ಹೆಚ್ಚು ರುಚಿ ನೀಡುತ್ತದೆ ಎಂಬುದು ನಿಜ ಆದರೆ ಅದು ಆರೋಗ್ಯಕ್ಕೂ ಹೆಚ್ಚು ಹಾನಿಯನ್ನು ಉಂಟು ಮಾಡುತ್ತದೆ. ಆದ್ದರಿಂದ ಈ ಸಮಯದಲ್ಲಿ ಹೆಚ್ಚು ಕೊಬ್ಬು, ಸಿಹಿ ಮತ್ತು ಹೆಚ್ಚಿನ ಕ್ಯಾಲೊರಿ ಇರುವ ಆಹಾರವನ್ನು ಸೇವಿಸಬೇಡಿ. ಬದಲಿಗೆ, ಹಸಿರು ತರಕಾರಿಗಳು, ತಾಜಾ ಹಣ್ಣುಗಳು, ಧಾನ್ಯಗಳನ್ನು ಆಹಾರದಲ್ಲಿ ಸೇರಿಸಿ, ಇದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುವುದಿಲ್ಲ.

ಹೆಚ್ಚು ಆಹಾರ ಸೇವಿಸುವುದನ್ನು ತಪ್ಪಿಸಿ

ಜನರು ಹಬ್ಬಗಳಲ್ಲಿ ಅತಿಯಾಗಿ ತಿನ್ನುತ್ತಾರೆ, ಇದು ನಿಮಗೆ ಆಮ್ಲೀಯತೆ, ಹೊಟ್ಟೆ ನೋವು, ಅಜೀರ್ಣ ಸಮಸ್ಯೆಗಳನ್ನು ಉಂಟುಮಾಡಬಹುದು, ಆದ್ದರಿಂದ ಹಬ್ಬಗಳಲ್ಲಿ ಅತಿಯಾಗಿ ತಿನ್ನುವುದನ್ನು ತಪ್ಪಿಸಿ. ಗಂಟೆಗಳಿಗೊಮ್ಮೆ ವಿರಾಮ ತೆಗೆದುಕೊಂಡು ಬಳಿಕ ಸ್ವಲ್ಪ ಸ್ವಲ್ಪವಾಗಿ ತಿನ್ನಲು ಪ್ರಯತ್ನಿಸಿ.

ಇದನ್ನೂ ಓದಿ: ನರಕ ಚತುರ್ದಶಿಯ ಶುಭ ಮುಹೂರ್ತ, ಪೂಜಾ ವಿಧಾನ ಇಲ್ಲಿದೆ

ಆಲಸ್ಯ ಮಾಡಬೇಡಿ

ಹಬ್ಬಗಳ ಸಮಯದಲ್ಲಿ ಊಟ ಮಾಡಿದ ನಂತರ ಆಲಸ್ಯ ಮಾಡಬೇಡಿ, ದೈಹಿಕವಾಗಿ ಸಕ್ರಿಯವಾಗಿರಲು ಪ್ರಯತ್ನಿಸಿ. ಪ್ರತಿದಿನ 30 ನಿಮಿಷಗಳ ನಡಿಗೆ ಮಾಡಿ.

ಹಬ್ಬಗಳಂದು ಆರೋಗ್ಯವನ್ನು ಹಾಳು ಮಾಡಬಹುದಾದ ಆಹಾರಗಳನ್ನು ಅತಿಯಾಗಿ ಸೇವನೆ ಮಾಡಬೇಡಿ. ಮೇಲೆ ಹೇಳಿರುವ ಸಲಹೆಗಳನ್ನು ನೆನಪಿನಲ್ಲಿಡಿ. ನಿಮ್ಮ ಬಗ್ಗೆ ಕಾಳಜಿ ವಹಿಸಿ ಹಬ್ಬವನ್ನು ಸಂತೋಷವಾಗಿ ಆಚರಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ