AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eye Care: ಕಣ್ಣಿನ ಕೆಳಭಾಗದಲ್ಲಿ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿದರೆ ಏನಾಗುತ್ತೆ ನೋಡಿ

ತೆಂಗಿನ ಎಣ್ಣೆ ಕೂದಲಿನ ಆರೈಕೆಗೆ ಮಾತ್ರವಲ್ಲದೆ ಚರ್ಮದ ಆರೈಕೆ ಮಾಡಿ ಸೌಂದರ್ಯ ಹೆಚ್ಚಿಸಲು ಪರಿಣಾಮಕಾರಿಯಾದ ಮನೆಮದ್ದಾಗಿದೆ. ಮೇಕಪ್ ತೆಗೆಯಲು ಇದು ತುಂಬಾ ಉಪಯುಕ್ತವಾಗಿದೆ. ಇದಲ್ಲದೆ, ತೆಂಗಿನ ಎಣ್ಣೆಯನ್ನು ನಿಯಮಿತವಾಗಿ ಕಣ್ಣುಗಳ ಕೆಳಗೆ ಮಸಾಜ್ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕೆಲವರಿಗೆ ಕಣ್ಣಿನ ಕೆಳಭಾಗವು ವಿವಿಧ ಕಾರಣಗಳಿಂದ ಉಬ್ಬುತ್ತದೆ. ಕೆಲವರಿಗೆ ದದ್ದುಗಳು, ತುರಿಕೆ ಉಂಟಾಗುತ್ತದೆ. ಇದಕ್ಕೆ ಹಲವು ಕಾರಣಗಳು ಇರಬಹುದು. ದಿನವಿಡೀ ಫೋನ್ ನೋಡುವುದು, ಸಾಕಷ್ಟು ನಿದ್ರೆ ಮಾಡಲು ಸಾಧ್ಯವಾಗದಿದ್ದಾಗ, ಜೊತೆಗೆ ವಯಸ್ಸಾಗುವುದರಿಂದ ಈ ಸಮಸ್ಯೆಗಳು ಕಂಡು ಬರುತ್ತದೆ. ತೆಂಗಿನ ಎಣ್ಣೆಯನ್ನು ಕಣ್ಣುಗಳ ಕೆಳಗೆ ಹಚ್ಚಿ ಮತ್ತು ಕೈಗಳಿಂದ ಮಸಾಜ್ ಮಾಡುವುದರಿಂದ ಸಮಸ್ಯೆಯನ್ನು ನಿವಾರಣೆ ಮಾಡಬಹುದು.

Eye Care: ಕಣ್ಣಿನ ಕೆಳಭಾಗದಲ್ಲಿ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿದರೆ ಏನಾಗುತ್ತೆ ನೋಡಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Oct 31, 2024 | 11:31 AM

Share

ಕೂದಲು ಮತ್ತು ಚರ್ಮದ ಆರೈಕೆಗೆ ತೆಂಗಿನ ಎಣ್ಣೆಗೆ ತುಂಬಾ ಮುಖ್ಯವಾಗಿದೆ. ಉದ್ದವಾದ, ದಪ್ಪ ಕೂದಲನ್ನು ಪಡೆಯಲು ತೆಂಗಿನ ಎಣ್ಣೆ ತುಂಬಾ ಪರಿಣಾಮಕಾರಿಯಾಗಿದೆ. ಆದರೆ ಇದು ಕೂದಲಿನ ಆರೈಕೆಗೆ ಮಾತ್ರವಲ್ಲದೆ ಚರ್ಮದ ಆರೈಕೆ ಮಾಡಿ ಸೌಂದರ್ಯ ಹೆಚ್ಚಿಸಲು ಪರಿಣಾಮಕಾರಿಯಾದ ಮನೆಮದ್ದಾಗಿದೆ. ಮೇಕಪ್ ತೆಗೆಯಲು ಇದು ತುಂಬಾ ಉಪಯುಕ್ತವಾಗಿದೆ. ಇದಲ್ಲದೆ, ತೆಂಗಿನ ಎಣ್ಣೆಯನ್ನು ನಿಯಮಿತವಾಗಿ ಕಣ್ಣುಗಳ ಕೆಳಗೆ ಮಸಾಜ್ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕೆಲವರಿಗೆ ಕಣ್ಣಿನ ಕೆಳಭಾಗವು ವಿವಿಧ ಕಾರಣಗಳಿಂದ ಉಬ್ಬುತ್ತದೆ. ಕೆಲವರಿಗೆ ದದ್ದುಗಳು, ತುರಿಕೆ ಉಂಟಾಗುತ್ತದೆ. ಇದಕ್ಕೆ ಹಲವು ಕಾರಣಗಳು ಇರಬಹುದು. ದಿನವಿಡೀ ಫೋನ್ ನೋಡುವುದು, ಸಾಕಷ್ಟು ನಿದ್ರೆ ಮಾಡಲು ಸಾಧ್ಯವಾಗದಿದ್ದಾಗ, ಜೊತೆಗೆ ವಯಸ್ಸಾಗುವುದರಿಂದ ಈ ಸಮಸ್ಯೆಗಳು ಕಂಡು ಬರುತ್ತದೆ. ತೆಂಗಿನ ಎಣ್ಣೆಯನ್ನು ಕಣ್ಣುಗಳ ಕೆಳಗೆ ಹಚ್ಚಿ ಮತ್ತು ಕೈಗಳಿಂದ ಮಸಾಜ್ ಮಾಡುವುದರಿಂದ ಸಮಸ್ಯೆಯನ್ನು ನಿವಾರಣೆ ಮಾಡಬಹುದು.

ಒರಟುತನವನ್ನು ಕಡಿಮೆ ಮಾಡುತ್ತವೆ

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಚರ್ಮದ ಮೇಲೆ ಸುಕ್ಕುಗಳು ಕಂಡುಬರುತ್ತದೆ. ವಿವಿಧ ಕಂಪನಿಗಳ ಸೌಂದರ್ಯವರ್ಧಕಗಳನ್ನು ಬಳಸುವುದರಿಂದ ಚರ್ಮ ಹಾಳಾಗುತ್ತದೆ. ತೆಂಗಿನ ಎಣ್ಣೆಯು ಈ ಸಮಸ್ಯೆಗಳಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ. ಈ ಎಣ್ಣೆಯಲ್ಲಿರುವ ಕೊಬ್ಬಿನಾಮ್ಲಗಳು ಚರ್ಮವನ್ನು ಬಿಗಿಗೊಳಿಸುತ್ತವೆ ಮತ್ತು ಒರಟುತನವನ್ನು ಕಡಿಮೆ ಮಾಡುತ್ತವೆ.

ಇದನ್ನೂ ಓದಿ: ದೀಪಾವಳಿ ಪಟಾಕಿಗಳಿಂದ ಬರುವ ಹೊಗೆಯಿಂದ ಪಾರಾಗಲು ಈ ರೀತಿ ಮಾಡಿ

ಚರ್ಮವನ್ನು ಆರೋಗ್ಯವಾಗಿರಿಸುತ್ತದೆ

ದದ್ದುಗಳು, ತುರಿಕೆ, ಕೆಂಪಾಗುವಿಕೆ ಮುಂತಾದ ಚರ್ಮದ ಸಮಸ್ಯೆಗಳನ್ನು ನಿವಾರಣೆ ಮಾಡಲು ತೆಂಗಿನ ಎಣ್ಣೆ ಸಹಕಾರಿಯಾಗಿದೆ. ಇದು ಚರ್ಮದ ಅಂದವನ್ನು ಹೆಚ್ಚಿಸುವುದಲ್ಲದೆ ಅದನ್ನು ಮೃದುಗೊಳಿಸುವ ಮೂಲಕ ಒಳಗಿನಿಂದ ನಿಮ್ಮ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ. ಇದರಲ್ಲಿರುವ ಕಾಲಜನ್ ಚರ್ಮಕ್ಕೆ ಪೋಷಣೆಯನ್ನು ನೀಡುತ್ತದೆ. ತೆಂಗಿನ ಎಣ್ಣೆ ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಅಲ್ಲದೆ ಇದು ಚರ್ಮವನ್ನು ಬಿಗಿಯಾಗಿರಿಸುತ್ತದೆ. ಹಾಗಾಗಿ ಕಣ್ಣಿನ ಕೆಳಗೆ ಊದಿಕೊಂಡಂತೆ ಆಗುತ್ತಿದ್ದರೆ ಅಥವಾ ತುರಿಕೆ ಕಂಡುಬರುತ್ತಿದ್ದರೆ ತೆಂಗಿನ ಎಣ್ಣೆಯನ್ನು ಬಳಸಿ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!