
ಕಣ್ಣುಗಳು ನಮ್ಮ ದೇಹದ ಅತ್ಯಂತ ಸೂಕ್ಷ್ಮ ಮತ್ತು ಅಮೂಲ್ಯ ಅಂಗಗಳಲ್ಲಿ ಒಂದಾಗಿವೆ. ಆದ್ದರಿಂದ ಅವುಗಳ ಆರೈಕೆಯಲ್ಲಿ ಸ್ವಲ್ಪ ನಿರ್ಲಕ್ಷ್ಯವೂ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಕಾಂಟ್ಯಾಕ್ಟ್ ಲೆನ್ಸ್ (Contact Lens) ಬಳಸುವವರು ಸ್ವಚ್ಛತೆ ಮತ್ತು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಬ್ಯಾಕ್ಟೀರಿಯಾ, ವೈರಸ್ ಹಾಗೂ ಅಪಾಯಕಾರಿ ಪರಾವಲಂಬಿಗಳು (Parasites) ಕಣ್ಣಿಗೆ ಪ್ರವೇಶಿಸಿ ದೃಷ್ಟಿಗೆ ಶಾಶ್ವತ ಹಾನಿ ಉಂಟುಮಾಡುವ ಸಾಧ್ಯತೆ ಇದೆ.
ಇತ್ತೀಚೆಗೆ ಬ್ರಿಟನ್‌ನಲ್ಲಿ ಮಹಿಳೆಯೊಬ್ಬರು ಕುದುರೆ ಲಾಯವನ್ನು ಸ್ವಚ್ಛಗೊಳಿಸುವ ವೇಳೆ ಮಣ್ಣು ಮತ್ತು ಕೊಳಕು ನೀರು ಕಣ್ಣಿಗೆ ಬಿದ್ದಿದ್ದರಿಂದ ಅವರು ಮುಖವನ್ನು ಚೆನ್ನಾಗಿ ತೊಳೆದರು. ಆದರೆ ಕಾಂಟ್ಯಾಕ್ಟ್ ಲೆನ್ಸ್ ತೆಗೆದಿರಲಿಲ್ಲ. ಕೆಲವು ದಿನಗಳ ಬಳಿಕ ಕಣ್ಣಿನಲ್ಲಿ ತೀವ್ರ ನೋವು, ಕೆಂಪಾಗುವುದು ಹಾಗೂ ಮಸುಕಾದ ದೃಷ್ಟಿ ಕಾಣಿಸಿಕೊಂಡಿತು. ವೈದ್ಯಕೀಯ ಪರೀಕ್ಷೆಯಲ್ಲಿ ಅಕಂಥಾಮೋಬಾ ಅಥವಾ ಅಕಾಂತಮೀಬಾ (Acanthamoeba) ಎಂಬ ಅಪಾಯಕಾರಿ ಪರಾವಲಂಬಿಯಿಂದ ಅಕಾಂತಮೀಬಾ ಕೆರಟೈಟಿಸ್ (Acanthamoeba Keratitis) ಸೋಂಕು ತಗುಲಿರುವುದು ಪತ್ತೆಯಾಯಿತು. ಸೋಂಕಿನಿಂದ ಕಣ್ಣಿನ ಕಾರ್ನಿಯಾ ಹಾನಿಗೊಳಗಾಗಿದ್ದು, ಭವಿಷ್ಯದಲ್ಲಿ ಕಾರ್ನಿಯಾ ಟ್ರಾನ್ಸ್‌ಪ್ಲಾಂಟ್ ಅಗತ್ಯವಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಸೂಕ್ಷ್ಮ ಪರಾವಲಂಬಿಯಾಗಿದ್ದು, ಇದು ಮಣ್ಣು, ಧೂಳು, ಕೆರೆ ಮತ್ತು ನದಿ ನೀರು, ಕೊಳಕು ನೀರು, ಟ್ಯಾಪ್ ನೀರು, ಈಜುಕೊಳದ ನೀರಿನಲ್ಲಿ ಕಂಡುಬರುತ್ತದೆ. ಇದು ಕಣ್ಣಿನ ಕಾರ್ನಿಯಾಗೆ ತಗುಲಿದರೆ Acanthamoeba Keratitis ಎಂಬ ಗಂಭೀರ ಸೋಂಕು ಉಂಟಾಗಬಹುದು. ಈ ಸೋಂಕು ಹೆಚ್ಚಾಗಿ ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರಲ್ಲಿ ಕಂಡುಬರುತ್ತದೆ.
ಈ ಲಕ್ಷಣಗಳು ಕಂಡುಬಂದರೆ ತಕ್ಷಣ ಕಣ್ಣಿನ ತಜ್ಞರನ್ನು ಸಂಪರ್ಕಿಸಬೇಕು.
ಇದನ್ನೂ ಓದಿ: ಡಯಾಬಿಟಿಸ್ ಇದ್ದರೆ ಪಾದಗಳ ಬಗ್ಗೆ ಇರಲಿ ಎಚ್ಚರ! ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ
ಗಮನಿಸಿ: ಕಾಂಟ್ಯಾಕ್ಟ್ ಲೆನ್ಸ್ ಸರಿಯಾದ ರೀತಿಯಲ್ಲಿ ಬಳಸಿದರೆ ಸಾಮಾನ್ಯವಾಗಿ ಸುರಕ್ಷಿತವಾಗಿರುತ್ತವೆ. ಆದರೆ ಸ್ವಚ್ಛತೆಯ ನಿಯಮಗಳನ್ನು ಪಾಲಿಸದಿದ್ದರೆ ಗಂಭೀರ ಕಣ್ಣಿನ ಸೋಂಕು ಹಾಗೂ ದೃಷ್ಟಿ ಕಳೆದುಕೊಳ್ಳುವ ಅಪಾಯ ಉಂಟಾಗಬಹುದು. ಕಣ್ಣಿನ ಯಾವುದೇ ಅಸಾಮಾನ್ಯ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ನೇತ್ರ ತಜ್ಞರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:01 pm, Thu, 30 July 26