ಮಧುಮೇಹ ಇದ್ಯಾ? ಹಾಗಿದ್ರೆ ಈ ಹಣ್ಣಿನ ಎಲೆ ಸೇವಿಸಿ ನೋಡಿ, ಶುಗರ್ ಲೆವೆಲ್ ಹೆಚ್ಚಾಗುವುದೇ ಇಲ್ಲ

ಅಂಜೂರ ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದರ ಬಗ್ಗೆ ನೀವು ತಿಳಿದಿರಬಹುದು. ಆದರೆ ಅಂಜೂರ ಮರದ ಎಲೆಗಳು ಕೂಡ ಅನೇಕ ರೀತಿಯ ಔಷಧೀಯ ಗುಣಗಳಿಗೆ ಹೆಸರುವಾಸಿ ಎಂಬುದು ಹಲವರಿಗೆ ತಿಳಿದಿಲ್ಲ. ನಮ್ಮ ಸುತ್ತಮುತ್ತಲಿರುವ ಅದೆಷ್ಟೋ ಗಿಡ, ಮರ, ಎಲೆ, ಹೂ ಹೀಗೆ ಪ್ರಕೃತಿಯಲ್ಲಿ ಸಿಗುವ ಎಲ್ಲವೂ ನಮ್ಮ ಆರೋಗ್ಯಕರ ಜೀವನಕ್ಕೆ ಪೂರಕವಾಗಿರುತ್ತದೆ. ಆದರೆ ಅವುಗಳನ್ನು ಹೇಗೆ ಯಾವ ರೀತಿಯ ಸಮಸ್ಯೆಗೆ ಬಳಸಲಾಗುತ್ತದೆ ಎಂಬುದರ ಬಗ್ಗೆ ತಿಳಿದಿರಬೇಕಾಗುತ್ತದೆ. ಮತ್ತೇಕೆ ತಡ ಅಂಜೂರದ ಎಲೆ ಹೇಗೆಲ್ಲಾ ಬಳಕೆಯಾಗುತ್ತೆ? ಆರೋಗ್ಯ ಕಾಪಾಡಿಕೊಳ್ಳಲು ಹೇಗೆ ಸಹಕಾರಿ ಎಂಬುದನ್ನು ತಿಳಿದುಕೊಳ್ಳಿ.

ಮಧುಮೇಹ ಇದ್ಯಾ? ಹಾಗಿದ್ರೆ ಈ ಹಣ್ಣಿನ ಎಲೆ ಸೇವಿಸಿ ನೋಡಿ, ಶುಗರ್ ಲೆವೆಲ್ ಹೆಚ್ಚಾಗುವುದೇ ಇಲ್ಲ
ಅಂಜೂರದ ಎಲೆಯ ಪ್ರಯೋಜನ
Image Credit source: Getty Images

Updated on: Jul 01, 2025 | 4:00 PM

ನಮ್ಮ ಸುತ್ತಮುತ್ತಲಿರುವ ಅದೆಷ್ಟೋ ಮರ- ಗಿಡಗಳು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಮದ್ದಾಗಿರುತ್ತವೆ. ಆದರೆ ನಾವು ನೈಸರ್ಗಿಕವಾಗಿ ಸಿಗುವ ಆರೋಗ್ಯ ಪರಿಹಾರಗಳನ್ನು ಸಾಮಾನ್ಯವಾಗಿ ಕಡೆಗಣಿಸುತ್ತೇವೆ. ಈ ಸಾಲಿಗೆ ಅಂಜೂರದ ಎಲೆಯೂ ಸೇರಿಕೊಳ್ಳುತ್ತದೆ. ಅಂಜೂರದ ಹಣ್ಣು ಅದರ ರುಚಿಕರವಾದ ರುಚಿ ಮತ್ತು ಪೌಷ್ಟಿಕಾಂಶದ ಪ್ರಯೋಜನಗಳಿಗಾಗಿ ವ್ಯಾಪಕವಾಗಿ ಪ್ರಸಿದ್ಧವಾಗಿದೆ. ಆದರೆ ಅಂಜೂರ ಮರದ ಎಲೆಗಳು ಕೂಡ ಅನೇಕ ರೀತಿಯ ಔಷಧೀಯ ಗುಣಗಳಿಗೆ ಹೆಸರುವಾಸಿ ಎಂಬುದು ಹಲವರಿಗೆ ತಿಳಿದಿಲ್ಲ. ಅದರಲ್ಲಿಯೂ ಈ ಎಲೆಗಳು ಮಧುಮೇಹ (Diabetes) ಇರುವವರಿಗೆ ಬಹಳ ಪ್ರಯೋಜನಕಾರಿಯಾಗಿದೆ. ಇದಕ್ಕೆ ಪೂರಕವಾಗಿ ಗಿರೀಶ್ (Gireesh Mutthu) ಎಂಬವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ವಿಚಾರವಾಗಿ ಕೆಲವು ಮಾಹಿತಿ ಹಂಚಿಕೊಂಡಿದ್ದು ನಿಮಗೂ ಉಪಯೋಗಕಾರಿಯಾಗಬಹುದು. ಮತ್ತೇಕೆ ತಡ ಅಂಜೂರದ ಎಲೆ ಹೇಗೆಲ್ಲಾ ಬಳಕೆಯಾಗುತ್ತೆ? ಆರೋಗ್ಯ (Health) ಕಾಪಾಡಿಕೊಳ್ಳಲು ಹೇಗೆ ಸಹಕಾರಿ ಎಂಬುದನ್ನು ತಿಳಿದುಕೊಳ್ಳಿ.

ನೈಸರ್ಗಿಕ ಮಧುಮೇಹ ವಿರೋಧಿ ಈ ಅಂಜೂರದ ಎಲೆ

ಅಂಜೂರದ ಮರದ ಎಲೆಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುವ ಸಂಯುಕ್ತಗಳನ್ನು ಹೊಂದಿದೆ. ಇದು ಮಧುಮೇಹ ಇರುವವರಿಗೆ ನೈಸರ್ಗಿಕ ಪರಿಹಾರವಾಗಿದೆ. ಅಧಿಕ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಅಂಜೂರದ ಎಲೆಗಳು ಬಹಳ ಪರಿಣಾಮಕಾರಿಯಾಗಿದೆ. ಮಧುಮೇಹ ಇರುವವರು ನಿಯಮಿತವಾಗಿ ಅಂಜೂರದ ಎಲೆಗಳನ್ನು ಸೇವನೆ ಮಾಡುವುದರಿಂದ ಇನ್ಸುಲಿನ್ ಅಗತ್ಯವು ಕಡಿಮೆಯಾಗುತ್ತದೆ. ಮಾತ್ರವಲ್ಲ, ಅಂಜೂರದ ಎಲೆ ಉತ್ಕರ್ಷಣ ನಿರೋಧಕ ಗುಣಗಳನ್ನು ಸಹ ಹೊಂದಿವೆ, ಪ್ರತಿರಕ್ಷಣಾ ವ್ಯವಸ್ಥೆಗೆ ಉತ್ತೇಜನವನ್ನು ಒದಗಿಸುತ್ತವೆ ಮತ್ತು ವಿವಿಧ ರೀತಿಯ ದೀರ್ಘಕಾಲದ ಕಾಯಿಲೆಗಳಿಗೆ ಸಂಬಂಧಿಸಿದ ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತವೆ.

ಇತರ ಆರೋಗ್ಯ ಪ್ರಯೋಜನ

ಮಧುಮೇಹ ವಿರೋಧಿ ಗುಣಗಳನ್ನು ಹೊರತುಪಡಿಸಿ, ಅಂಜೂರದ ಎಲೆಗಳು ಹಲವಾರು ಇತರ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಅವು ನೈಸರ್ಗಿಕ ಮೂತ್ರವರ್ಧಕ ಮತ್ತು ವಿರೇಚಕವಾಗಿ ಕಾರ್ಯನಿರ್ವಹಿಸುತ್ತವೆ, ಮೂತ್ರನಾಳ ಮತ್ತು ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿರಲು ಸಹಾಯಕವಾಗುತ್ತವೆ. ಜೊತೆಗೆ ಹುಣ್ಣುಗಳ ಲಕ್ಷಣಗಳನ್ನು ನಿವಾರಿಸಲು ಮತ್ತು ರಕ್ತದಲ್ಲಿನ ಟ್ರೈಗ್ಲಿಸರೈಡ್‌ಗಳು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಅಂಜೂರದ ಎಲೆಯ ರಸವು ಅದರ ಪ್ರೋಟಿಯೋಲೈಟಿಕ್ ಕಿಣ್ವಗಳಿಂದಾಗಿ ನರಹುಲಿಗಳನ್ನು ತೆಗೆದುಹಾಕುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಹಾಗಾಗಿ ಇದನ್ನು ಸ್ಥಳೀಯವಾಗಿ ಹೆಚ್ಚು ಹೆಚ್ಚು ಬಳಸಲಾಗುತ್ತದೆ. ಒಂದು ರೀತಿ ನೈಸರ್ಗಿಕ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ
ಕಣ್ಣಿನ ಆರೋಗ್ಯದಿಂದ ಕ್ಯಾನ್ಸರ್ ತಡೆಗಟ್ಟುವ ವರೆಗೆ; ಚೀನಿಕಾಯಿಯ ಉಪಯೋಗಗಳಿವು
ರಾತ್ರಿಯಲ್ಲಿ ಕಂಡು ಬರುವ ಕಾಲು ಸೆಳೆತವನ್ನು ತಡೆಯಲು ಇಲ್ಲಿದೆ ಸಲಹೆಗಳು
ನೀವು ಏನಾದರೂ ತಿಂದ ತಕ್ಷಣ ಟಾಯ್ಲೆಟ್ ಗೆ ಹೋಗುತ್ತೀರಾ? ನಿಮಗೆ ಇಲ್ಲಿದೆ ಸಲಹೆ
ಹಾಗಲಕಾಯಿ ಕಹಿ ಎಂದು ಮನೆಗೆ ತರದೇ ಇರುವವರು ಈ ಸುದ್ದಿಯನ್ನು ತಪ್ಪದೆ ಓದಿ

ಇದನ್ನೂ ಓದಿ: ಈ ಒಣಹಣ್ಣನ್ನು ನೆನೆಸಿಟ್ಟು ತಿಂದರೆ ತೂಕ ಇಳಿಯೋದು ಗ್ಯಾರಂಟಿ

ಮುನ್ನೆಚ್ಚರಿಕೆ ಅಗತ್ಯ

ಅಂಜೂರದ ಎಲೆಗಳು ಸಾಮಾನ್ಯವಾಗಿ ಸೇವನೆಗೆ ಸುರಕ್ಷಿತವಾಗಿದ್ದರೂ, ಮಧುಮೇಹಕ್ಕೆ ಈಗಾಗಲೇ ಔಷಧಿಗಳು ಅಥವಾ ಇನ್ಸುಲಿನ್ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳು ಈ ಎಲೆ ಅಥವಾ ಅದರಿಂದ ಮಾಡಿದ ಚಹಾ ಸೇವನೆ ಮಾಡುವ ಮೊದಲು ವೈದ್ಯರ ಸಲಹೆ ತೆಗೆದುಕೊಳ್ಳುವುದು ಸೂಕ್ತ. ಈ ಎಲೆಯ ಚಹಾ ಆರೋಗ್ಯಕ್ಕೆ ಬಹಳ ಒಳ್ಳೆಯದಾದರೂ ಕೂಡ ಎಲ್ಲರ ದೇಹಕ್ಕೂ ಒಂದೇ ರೀತಿಯ ಪರಿಣಾಮಗಳನ್ನು ಬೀರುವುದಿಲ್ಲ. ಹಾಗೆಂದ ಮಾತ್ರಕ್ಕೆ ಇದನ್ನು ಸೇವನೆ ಮಾಡುವುದು ತಪ್ಪು ಎಂದಲ್ಲ. ಎಲ್ಲವೂ ಇತಿಮಿತಿಯಲ್ಲಿರಬೇಕು. ಈ ರೀತಿಯ ಅಭ್ಯಾಸ ನಮ್ಮ ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಹೆಚ್ಚು ನೈಸರ್ಗಿಕ ವಿಧಾನದತ್ತ ಹೆಜ್ಜೆ ಇಡಲು ಸಹಾಯ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ