ಆರೋಗ್ಯ ಕಾಪಡಿಕೊಳ್ಳುವುದು ಹೇಗೆ, ಸುಸೂತ್ರವಾದ ಜೀವನ ಶೈಲಿ ಕಂಡುಕೊಳ್ಳುವುದು ಹೇಗೆ ಎಂಬ ಬಗ್ಗೆ ನಾವು ತರಹೇವಾರಿ ರೀತಿಯಲ್ಲಿ ತಲೆಕೆಡಿಸಿಕೊಳ್ಳುತ್ತೇವೆ. ಯಾವ ಆಹಾರ ದೇಹಕ್ಕೆ ಹಿತ, ಏನು ತಿಂದರೆ ಸಮಸ್ಯೆ ಎಂದು ಆಗಾಗ ಯೋಚನೆಗೆ ಜಾರುತ್ತೇವೆ. ಅಂಥಾ ಪ್ರಶ್ನೆಗಳಿಗೆಲ್ಲಾ ಇಲ್ಲಿ ಸುಲಭ ಮತ್ತು ಸರಳ ಉತ್ತರ ಲಭ್ಯವಿದೆ. ಯುವಸಮುದಾಯದ ಸುಮಾರು 2 ಮಿಲಿಯನ್ ಜನರನ್ನು ಒಳಗೊಂಡ ಅಧ್ಯಯನವೊಂದು ಈ ಬಗ್ಗೆ ಮಾಹಿತಿ ನೀಡಿದೆ. ಅಧ್ಯಯನ ವರದಿ ಪ್ರಕಾರ ಈ 5 ಹೆಜ್ಜೆಗಳನ್ನು ನಾವು ಮುಂದಿಟ್ಟರೆ ಆರೋಗ್ಯ ಕಾಪಾಡಿಕೊಳ್ಳಲು ಸಹಾಯವಾಗಲಿದೆ.
ಆರೋಗ್ಯ ಕಾಪಾಡಿಕೊಳ್ಳಲು 5 ಬಾರಿ ತರಕಾರಿ ಮತ್ತು ಹಣ್ಣುಗಳನ್ನು ಸ್ವೀಕರಿಸಬೇಕು. ಅದರಲ್ಲಿ, 2 ಹಣ್ಣು ಮತ್ತು 3 ತರಕಾರಿಗಳು ಒಳಗೊಂಡಿದೆ. ಅಮೆರಿಕಾದ ಹಾರ್ಟ್ ಅಸೋಸಿಯೇಷನ್ ಫ್ಲಾಗ್ಶಿಪ್ ಜರ್ನಲ್ ಸರ್ಕ್ಯುಲೇಷನ್ ಈ ಅಧ್ಯಯನ ವರದಿಯನ್ನು ಪ್ರಕಟಿಸಿದೆ.
5 ಬಾರಿ ಹಣ್ಣು ಮತ್ತು ತರಕಾರಿ ಸೇವಿಸುವ ಬಗ್ಗೆ ವಿವರಗಳು ಹೀಗಿದೆ:
ಈ ಅಧ್ಯಯನದಂತೆ 5-a-day, ಅಂದರೆ 5 ಬಾರಿ ಹಣ್ಣು ಅಥವಾ ತರಕಾರಿಗಳನ್ನು ಸ್ವೀಕರಿಸುವುದರಿಂದ ಆರೋಗ್ಯ ವೃದ್ಧಿಯಾಗಲಿದೆ ಎಂದು ತಿಳಿದುಬಂದಿದೆ. 4ರಿಂದ 5 ಸಲ ಇಂತಹಾ ಆಹಾರ ಸ್ವೀಕರಿಸುವುದು ಉತ್ತಮ ಅಭ್ಯಾಸ ಆಗಿದೆ. ಇದರಿಂದ ಹಲವಾರು ದೀರ್ಘಕಾಲದ ಖಾಯಿಲೆಗಳು ಕಡಿಮೆಯಾಗಲಿದೆ. ಕ್ಯಾನ್ಸರ್, ಶ್ವಾಸಕೋಶ ತೊಂದರೆಗಳು ಕೂಡ ಕಡಿಮೆ ಆಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎಲ್ಲಾ ರೀತಿಯ ಹಣ್ಣು ತರಕಾರಿಗಳು ಒಂದೇ ರೀತಿಯ ಪರಿಣಾಮ ಬೀರುವುದಿಲ್ಲ. ಆದರೆ, ನಾವೇ ಅರಿತು ಸೂಕ್ತ ಹಸಿರು ತರಕಾರಿ, ಹಣ್ಣು ಸೇವಿಸುವುದು ಉತ್ತಮ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದಾಸವಾಳ ಹೂವಿಗಿದೆ ಅನೇಕ ಔಷಧೀಯ ಗುಣಗಳು; ಮನೆಯಂಗಳದ ಹೂವಿನ ಆರೋಗ್ಯ ಲಾಭಗಳನ್ನು ತಿಳಿದುಕೊಳ್ಳಿ
Benefits of Mint Leaves: ಸುವಾಸನೆಯುಕ್ತ ಮೂಲಿಕೆ ಪುದೀನಾದಿಂದ ಇರುವ ವೈದ್ಯಕೀಯ ಉಪಯೋಗಗಳು ಒಂದೆರಡಲ್ಲ..!
Published On - 2:32 pm, Mon, 8 March 21