Health tips: ಚಳಿಗಾಲದಲ್ಲಿ ಶೀತದ ಸಮಸ್ಯೆಯಿಂದ ದೂರ ಇರಲು ಈ 5 ವಿಧಾನಗಳನ್ನು ಅನುಸರಿಸಿ

ತೀವ್ರವಾದ ಚಳಿಯ ಕಾರಣದಿಂದಾಗಿ ಅನೇಕ ಸಮಸ್ಯೆಗಳು ಕಂಡುಬರುತ್ತವೆ. ಹೀಗಾಗಿ ಚಳಿಗಾಲದಲ್ಲಿ ಆರೋಗ್ಯವಾಗಿರಲು ಏನು ಮಾಡಬೇಕು ಎಂಬುವುದನ್ನು ತಿಳಿದುಕೊಳ್ಳುವುದು ಸೂಕ್ತ.

Health tips: ಚಳಿಗಾಲದಲ್ಲಿ ಶೀತದ ಸಮಸ್ಯೆಯಿಂದ ದೂರ ಇರಲು ಈ 5 ವಿಧಾನಗಳನ್ನು ಅನುಸರಿಸಿ
Cold
Edited By:

Updated on: Nov 15, 2021 | 8:20 AM

ಚಳಿಗಾಲದಲ್ಲಿ ಶೀತದ( cold) ಸಮಸ್ಯೆ ಅನೇಕರನ್ನು ಕಾಡುತ್ತದೆ. ಮೂಗು ಕಟ್ಟುವುದು, ತಲೆನೋವು, ದೇಹ ನೋವು ಮತ್ತು ಗಂಟಲು ನೋವಿನಂತಹ ಸಮಸ್ಯೆಗಳು ಜನರನ್ನು ಭಾದಿಸುತ್ತದೆ. ಕೆಲಸದ ನಡುವೆ ಕಿರಿಕಿರಿಯನ್ನು ಸಹ ಉಂಟುಮಾಡುತ್ತದೆ. ತೀವ್ರವಾದ ಚಳಿಯ ಕಾರಣದಿಂದಾಗಿ ಇನ್ನಿತರ ಸಮಸ್ಯೆಗಳು ಕಂಡುಬರುತ್ತವೆ. ಹೀಗಾಗಿ ಚಳಿಗಾಲದಲ್ಲಿ ಆರೋಗ್ಯವಾಗಿರಲು ಏನು ಮಾಡಬೇಕು ಎಂಬುವುದನ್ನು ತಿಳಿದುಕೊಳ್ಳುವುದು ಸೂಕ್ತ.

1. ನಿಯಮಿತವಾಗಿ ನಿಮ್ಮ ಕೈಗಳನ್ನು ತೊಳೆಯಿರಿ
ಕೊರೊನಾ ಕಾಲಾವಧಿಯಾಗಿರುವುದರಿಂದ ಕೈಗಳನ್ನು ನಿಯಮಿತವಾಗಿ ತೊಳೆದು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆ ಮೂಲಕ ಶೀತ ನೆಗಡಿಯಂತಹ ಸಮಸ್ಯೆಗಳಿಂದಲೂ ಮುಕ್ತಿ ಪಡೆಯಬಹುದು.

2. ಹೈಡ್ರೀಕರಿಸಬೇಕು
ಚಳಿಗಾಲದಲ್ಲಿ ಸಾಮಾನ್ಯವಾಗಿ ಬಾಯಾರಿಕೆಯಾಗುವುದಿಲ್ಲ. ಆದರೆ, ದಿನನಿತ್ಯ ಸಾಕಷ್ಟು ನೀರು ಕುಡಿಯಬೇಕು ಎಂದು ತಜ್ಞರು ತಿಳಿಸಿದ್ದಾರೆ. ಇಲ್ಲದಿದ್ದರೆ ದೇಹವು ನಿರ್ಜಲೀಕರಣಗೊಳ್ಳುತ್ತದೆ ಮತ್ತು ಆರೋಗ್ಯ ಸಮಸ್ಯೆಗಳ ಅಪಾಯವಿದೆ. ಸಾಕಷ್ಟು ನೀರು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶ ಹೊರಹೋಗುತ್ತದೆ. ಆದ್ದರಿಂದ ಆರೋಗ್ಯವಾಗಿರಲು ನೀರು ಕುಡಿಯಬೇಕು.

3. ಆರೋಗ್ಯಕರ ಆಹಾರವನ್ನು ಮಾತ್ರ ಸೇವಿಸಿ
ಈ ಋತುವಿನಲ್ಲಿ ಆರೋಗ್ಯಕರ, ಸಮತೋಲಿತ ಆಹಾರವನ್ನು ಸೇವಿಸಿ. ಆ ಮೂಲಕ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಬಹುದು. ಫಿಟ್ ಆಗಿರಲು ಇದು ಸಹಾಯ ಮಾಡುತ್ತದೆ. ಸತು ಮತ್ತು ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಗಳ ಹೆಚ್ಚಿನ ಸೇವನೆಯತ್ತ ಗಮನಹರಿಸುವುದು ಸೂಕ್ತ.

4. ಸಾಕಷ್ಟು ನಿದ್ರೆ ಪಡೆಯಿರಿ.
ಶೀತಗಳನ್ನು ತ್ವರಿತವಾಗಿ ತೊಡೆದುಹಾಕಲು ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಸಾಕಷ್ಟು ನಿದ್ರೆಮಾಡುವುದು ಉತ್ತಮ. ನಿದ್ರೆಯ ಕೊರತೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ನೀವು ಸಾಕಷ್ಟು ನಿದ್ದೆ ಮಾಡಿದರೆ, ದೇಹದ ರೋಗನಿರೋಧಕ ಶಕ್ತಿ ಬಲವಾಗಿರುತ್ತದೆ. ಪ್ರತಿ ರಾತ್ರಿ 7 ರಿಂದ 8 ಗಂಟೆಗಳ ಕಾಲ ನಿದ್ದೆ ಪಡೆಯಿರಿ.

5. ವ್ಯಾಯಾಮ
ಪ್ರತಿದಿನ ವ್ಯಾಯಾಮ ಮಾಡಿ. ತೂಕ ಇಳಿಕೆಯ ಜೊತೆಗೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಜೊತೆಗೆ ಯೋಗ ಕೂಡ ಅತ್ಯುತ್ತಮ ಫಲಿತಾಂಶವನ್ನು ನೀಡುತ್ತದೆ.

ಇದನ್ನೂ ಓದಿ:
ನವಿಲುಕೋಸು ಸೇವಿಸುವ ಅಭ್ಯಾಸ ಇದೆಯೇ? ಆರೋಗ್ಯದಲ್ಲಿನ ಬದಲಾವಣೆಯ ಬಗ್ಗೆ ತಿಳಿಯಿರಿ

ಆಲೂಗಡ್ಡೆ ಜ್ಯೂಸ್ ಸೇವಿಸುವ ಅಭ್ಯಾಸ ಇದೆಯೇ? ಆರೋಗ್ಯದಲ್ಲಿನ ಬದಲಾವಣೆ ಬಗ್ಗೆ ತಿಳಿಯಿರಿ