ಆಲೂಗಡ್ಡೆ ಜ್ಯೂಸ್ ಸೇವಿಸುವ ಅಭ್ಯಾಸ ಇದೆಯೇ? ಆರೋಗ್ಯದಲ್ಲಿನ ಬದಲಾವಣೆ ಬಗ್ಗೆ ತಿಳಿಯಿರಿ
Health Tips: ಆಲೂಗೆಡ್ಡೆ ಜ್ಯೂಸ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇದರ ಆರೋಗ್ಯ ಪ್ರಯೋಜನಗಳು ಮತ್ತು ನೀವು ಮನೆಯಲ್ಲಿ ಆಲೂಗಡ್ಡೆ ಜ್ಯೂಸ್ ಅನ್ನು ಹೇಗೆ ತಯಾರಿಸಬಹುದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಆಲೂಗಡ್ಡೆ ಜ್ಯೂಸ್ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ವಿಟಮಿನ್ ಬಿ ಮತ್ತು ಸಿ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ರಂಜಕ ಮತ್ತು ತಾಮ್ರದಿಂದ ಸಮೃದ್ಧವಾಗಿದೆ. ಇದು ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುವುದಲ್ಲದೆ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದಲ್ಲದೇ ಆಲೂಗೆಡ್ಡೆ ಜ್ಯೂಸ್ (Potato juice) ಅನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇದರ ಆರೋಗ್ಯ ಪ್ರಯೋಜನಗಳು ಮತ್ತು ನೀವು ಮನೆಯಲ್ಲಿ ಆಲೂಗಡ್ಡೆ ಜ್ಯೂಸ್ ಅನ್ನು ಹೇಗೆ ತಯಾರಿಸಬಹುದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಆಲೂಗಡ್ಡೆ ಜ್ಯೂಸ್ ಮಾಡುವುದು ಹೇಗೆ? 4 ಮಧ್ಯಮ ಗಾತ್ರದ ಆಲೂಗಡ್ಡೆಯನ್ನು ಸಿಪ್ಪೆ ತೆಗೆದು, ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಅವುಗಳನ್ನು ಮಿಕ್ಸಿಯಲ್ಲಿ ಹಾಕಿ ತಾಜಾ ರಸವನ್ನು ತೆಗೆಯಿರಿ. ಹೆಚ್ಚು ಪ್ರಯೋಜನಗಳನ್ನು ಪಡೆಯಲು ಆಲೂಗಡ್ಡೆಗೆ ಯಾವುದೇ ಪದಾರ್ಥಗಳನ್ನು ಸೇರಿಸದೆ ಹಾಗೇ ಕುಡಿಯಿರಿ.
ಆಲೂಗಡ್ಡೆ ಜ್ಯೂಸ್ನ ಪ್ರಯೋಜನಗಳು
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಇದು ಶೀತಗಳು ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆಲೂಗಡ್ಡೆ ಜ್ಯೂಸ್ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹ ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಆಲೂಗೆಡ್ಡೆ ಜ್ಯೂಸ್ ಕುಡಿಯಲು ಸಲಹೆ ನೀಡಲಾಗುತ್ತದೆ.
ನೋವು ನಿವಾರಕ ಆಲೂಗಡ್ಡೆ ಜ್ಯೂಸ್ ಉರಿಯೂತದ ವಿರುದ್ಧ ಹೋರಾಡುವ ಗುಣಲಕ್ಷಣಗಳನ್ನು ಹೊಂದಿದೆ. ಇದು ಸಂಧಿವಾತ ಮತ್ತು ಇತರ ಮೂಳೆಗೆ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ ಆಲೂಗೆಡ್ಡೆಯ ಚೂರುಗಳನ್ನು ನೋವಿನ ಜಾಗಕ್ಕೆ ಹಚ್ಚುವುದು ಕೂಡ ಪ್ರಯೋಜನಕಾರಿ.
ಹುಣ್ಣುಗಳಿಗೆ ಪರಿಹಾರ ನೀಡುತ್ತದೆ ಆಲೂಗಡ್ಡೆ ಜ್ಯೂಸ್ ಜಠರಗರುಳಿನ ಆರೋಗ್ಯಕ್ಕೆ ಸಹ ಪ್ರಯೋಜನಕಾರಿಯಾಗಿದೆ. ತಜ್ಞರ ಪ್ರಕಾರ, ಆಲೂಗಡ್ಡೆ ಜ್ಯೂಸ್ ಅನ್ನು ಬೆಳಿಗ್ಗೆ ನಿಯಮಿತವಾಗಿ ಸೇವಿಸುವುದರಿಂದ ಹುಣ್ಣುಗಳ ಸಮಸ್ಯೆ ದೂರವಾಗುತ್ತದೆ.
ಯಕೃತ್ತಿಗೆ ಒಳ್ಳೆಯದು ಇದು ಯಕೃತ್ತು ಮತ್ತು ಪಿತ್ತಕೋಶವನ್ನು ಶುದ್ಧೀಕರಿಸುವ ಡಿಟಾಕ್ಸ್ ಪಾನೀಯವಾಗಿಯೂ ಕಾರ್ಯನಿರ್ವಹಿಸುತ್ತದೆ. ಅಧ್ಯಯನದ ಪ್ರಕಾರ, ಆಲೂಗಡ್ಡೆ ರಸವನ್ನು ಜಪಾನ್‌ನಲ್ಲಿ ಹೆಪಟೈಟಿಸ್ ಚಿಕಿತ್ಸೆಗಾಗಿ ಬಳಸಲಾಗುತ್ತದೆ.
ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಆಲೂಗಡ್ಡೆ ರಸದಲ್ಲಿ ಫೈಬರ್ ಮತ್ತು ವಿಟಮಿನ್ ಎ, ಬಿ-ಕಾಂಪ್ಲೆಕ್ಸ್ ಮತ್ತು ಸಿ ಸಮೃದ್ಧವಾಗಿದೆ. ತಜ್ಞರ ಪ್ರಕಾರ, ಈ ಪೋಷಕಾಂಶಗಳು ಒಟ್ಟಾಗಿ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ದೇಹವನ್ನು ಶಕ್ತಿಯುತವಾಗಿರಿಸಲು ಸಹಾಯ ಮಾಡುತ್ತದೆ.
ಮಲಬದ್ಧತೆಯನ್ನು ಗುಣಪಡಿಸುತ್ತದೆ ಇದರಲ್ಲಿ ಫೈಬರ್ ಅಂಶ ಸಮೃದ್ಧವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಒಂದು ಅಧ್ಯಯನದ ಪ್ರಕಾರ ಆಲೂಗಡ್ಡೆಯ ನಿಯಮಿತ ಸೇವನೆಯು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಅವು ಗ್ಲೈಕೋಲ್ಕಲಾಯ್ಡ್ ಎಂಬ ರಾಸಾಯನಿಕ ಅಂಶವನ್ನು ಹೊಂದಿರುತ್ತವೆ. ಇದು ಆ್ಯಂಟಿ ಟ್ಯೂಮರ್ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಹೃದಯದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲದು, ಆಗಾಗ ಚೆಕಪ್ ಮಾಡಿಸಿಕೊಳ್ಳುತ್ತಿರಬೇಕು: ಡಾ ರಮಣ ರಾವ್
Ginger Tea: ಪ್ರತಿದಿನ ಶುಂಠಿ ಚಹಾ ಕುಡಿಯುವುದು ಆರೋಗ್ಯಕ್ಕೆ ಉತ್ತಮವೇ?