Health Tips: ಆಯುರ್ವೇದದ ಪ್ರಕಾರ ಊಟದ ನಂತರ ಈ ಕೆಲವು ಚಟುವಟಿಕೆಗಳನ್ನು ಮಾಡಲೇಬಾರದು! ಯಾಕೆ ಗೊತ್ತಾ?

ಊಟದ ನಂತರ ಅಪ್ಪಿ ತಪ್ಪಿಯೂ ಈ ಕೆಲವು ಕೆಲಸಗಳನ್ನು ಮಾಡಬಾರದು ಎಂದು ಆಯುರ್ವೇದ ತಿಳಿಸುತ್ತದೆ. ಈ ಕುರಿತಂತೆ ತಜ್ಞರು ಹಂಚಿಕೊಂಡ ಮಾಹಿತಿ ಈ ಕೆಳಗಿನಂತಿದೆ.

Health Tips: ಆಯುರ್ವೇದದ ಪ್ರಕಾರ ಊಟದ ನಂತರ ಈ ಕೆಲವು ಚಟುವಟಿಕೆಗಳನ್ನು ಮಾಡಲೇಬಾರದು! ಯಾಕೆ ಗೊತ್ತಾ?
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on: Nov 11, 2021 | 12:44 PM

ಆಯುರ್ವೇದದ ಪ್ರಕಾರ ಊಟದ ನಂತರ ಕೆಲವು ಕೆಲಸಗಳನ್ನು ಮಾಡಬಾರದು. ಪುರಾತನ ವೈದ್ಯಕೀಯ ಪದ್ಧತಿಯ ಪ್ರಕಾರ, ಊಟದ ನಂತರ ನೀರು ಕುಡಿಯುವುದು ಅಥವಾ ರಾತ್ರಿಯ ಊಟದ ನಂತರ ಮಲಗುವುದು ಒಳ್ಳೆಯದಲ್ಲ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಹೊರೆಯಾಗಬಹುದು. ಅದೇ ರೀತಿ ಹೊಟ್ಟೆ ತುಂಬ ತಿಂದ ನಂತರ 100 ಹೆಜ್ಜೆ ನಡೆಯುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದರೆ ದೂರದವರೆಗೆ ನಡೆಯುವುದು ಚಯಾಪಚಯ ಕ್ರಿಯೆಗೆ ಅಡ್ಡಿಯುಂಟು ಮಾಡುತ್ತದೆ. ಪೋಷಕಾಂಶಗಳನ್ನು ಹೀರಿಕೊಳ್ಳಲು ತೊಂದರೆ ಉಂಟು ಮಾಡುತ್ತದೆ. ಆಯುರ್ವೇದ ತಜ್ಞೆ ಡಾ. ದೀಕ್ಷಾ ಅವರು ನೀವು ಊಟದ ನಂತರ ಮಲಗುವುದು, ನೀರು ಕುಡಿಯುವುದು ಮತ್ತು ಸ್ನಾನ ಮಾಡುವುದು ಜೊತೆಗೆ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು ಎಂಬುದರ ಕುರಿತಾಗಿ ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಊಟದ ನಂತರ ಮಲಗುವುದು ಊಟವಾದ ತಕ್ಷಣ ಮಲಗುವುದರಿಂದ ದೇಹದಲ್ಲಿ ಕಫಾ (ನೀರಿನಾಂಶ) ಮತ್ತು ಕೊಬ್ಬು ಹೆಚ್ಚಾಗುತ್ತದೆ ಎಂದು ಡಾ. ದೀಕ್ಷಾ ಹೇಳಿದ್ದಾರೆ. ಇದು ದೇಹದ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಿಂದಾಗಿ ನಿಮ್ಮ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ ಎಂದು ಅವರು ಸಲಹೆ ನೀಡಿದ್ದಾರೆ.

ಊಟದ ನಂತರ ನೀರು ಕುಡಿಯುವುದು ಆಯುರ್ವೇದದ ಪ್ರಕಾರ ನೀರನ್ನು ಊಟದ ನಡುವೆ ಸೇವಿಸಬೇಕು. ಆಹಾರ ಸೇವಿಸುವ ಮೊದಲು ಅಥವಾ ನಂತರ ಅಲ್ಲ. ಆಹಾರದ ಮೊದಲು ನೀರು ಕುಡಿಯುವುದು ಜೀರ್ಣಕ್ರಿಯೆಯನ್ನು ಕಡಿಮೆ ಮಾಡುತ್ತದೆ. ಆಹಾರದ ನಂತರ ತಕ್ಷಣ ನೀರು ಕುಡಿಯುವುದು ಸ್ಥೂಲಕಾಯರನ್ನಾಗಿ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಊಟದ ನಂತರ ಸೂರ್ಯನ ಬಿಸಿಲಿಗೆ ಒಡ್ಡುಕೊಳ್ಳುವುದು ಊಟದ ನಂತರ ತಕ್ಷಣವೇ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಹೆಚ್ಚಿನ ರಕ್ತ ಪರಿಚಲನೆ ಮತ್ತು ನರಗಳ ಪ್ರಚೋದನೆಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಇದು ಚಯಾಪಚಯಕ್ಕೆ ಅಡ್ಡಿಪಡಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಊಟದ ನಂತರ ಈಜು, ದೂರದ ನಡಿಗೆ, ಹಾಡುವುದು, ಪ್ರಯಾಣ ಮತ್ತು ವ್ಯಾಯಾಮ ಊಟದ ಬಳಿಕ ಈ ಕೆಲವು ಚಟುವಟಿಕೆಗಳು ವಾತವನ್ನು ಉಲ್ಭಣಗೊಳಿಸುತ್ತವೆ. ಊಟದ ಬಳಿಕ ಅಸ್ವಸ್ಥತೆಗೆ ಕಾರಣವಾಗುತ್ತದೆ. ಜೀರ್ಣಕ್ರಿಯೆಗೆ ತೊಂದರೆಯನ್ನುಂಟು ಮಾಡುತ್ತದೆ.

ಊಟದ ನಂತರ ಸ್ನಾನ ಮಾಡುವುದು ಆಯುರ್ವೇದದ ಪ್ರಕಾರ, ಊಟದ ನಂತರ ಎರಡು ಗಂಟೆಗಳ ನಂತರವೇ ಸ್ನಾನ ಮಾಡಬೇಕು. ದೇಹದಲ್ಲಿರುವ ಬಿಸಿಯು ಆಹಾರದ ಜೀರ್ಣಕ್ರಿಯೆಗೆ ಸಹಾಯಕವಾಗಿರುತ್ತದೆ. ಆದರೆ ನೀವು ಸ್ನಾನ ಮಾಡುವಾಗ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಇದು ನಿಧಾನ ಜೀರ್ಣಕ್ರಿಯೆಗೆ ಕಾರಣವಾಗುತ್ತದೆ ಎಂದು ಡಾ. ದೀಕ್ಷಾ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Health Tips: ಪಾರ್ಶ್ವವಾಯುವಿನ ಲಕ್ಷಣ, ಅಪಾಯ, ಮುನ್ನೆಚ್ಚರಿಕೆ ಕ್ರಮಗಳೇನು?

Health Tips: ಈ ಕೆಲವು ಪೌಷ್ಟಿಕಾಂಶಯುಕ್ತ ಪಾನೀಯಗಳು ನಿಮ್ಮ ಆರೋಗ್ಯಕ್ಕೆ ಉತ್ತಮ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್