ಹೃದಯದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲದು, ಆಗಾಗ ಚೆಕಪ್ ಮಾಡಿಸಿಕೊಳ್ಳುತ್ತಿರಬೇಕು: ಡಾ ರಮಣ ರಾವ್
ಹಾರ್ಟ್ ಅಟ್ಯಾಕ್ ಮತ್ತು, ಕಾರ್ಡಿಯಾಕ್ ಅರೆಸ್ಟ್, ಎಚ್ಚರಿಕೆ ನೀಡದೆ ಸಂಭವಿಸುವಂಥವು, ಹಾಗಾಗಿ ಎಲ್ಲರೂ ಹೃದಯದ ಆರೋಗ್ಯ ಬಗ್ಗೆ ಕಾಳಜಿ ಹೊಂದಿರಬೇಕು, ಆಗಾಗ ಚೆಕಪ್ ಮಾಡಿಸಿಕೊಳ್ಳುತ್ತಿರಬೇಕು ಎಂದು ಡಾ ರಾವ್ ಹೇಳುತ್ತಾರೆ.
ಪುನೀತ್ ರಾಜಕುಮಾರ್ ಅವರಿಗೆ ನಿಜಕ್ಕೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಾಗಲೀ ಸಮಸ್ಯೆಯಾಗಲೀ ಇತ್ತಾ? ಆ ಬಗ್ಗೆ ಅವರು ತಮ್ಮ ಫ್ಯಾಮಿಲಿ ವೈದ್ಯರ ಮುಂದೆ ದೂರಿದ್ದರಾ? ಇಲ್ಲವೆನ್ನುತ್ತಾರೆ ಡಾ ರಮಣ ರಾವ್. ಪುನೀತ್ ಯಾವತ್ತೂ ಆ ಬಗ್ಗೆ ದೂರಿರಲಿಲ್ಲ, ಮತ್ತು ಕಳೆದ ಶುಕ್ರವಾರ ತಮ್ಮ ಕ್ಲಿನಿಕ್ ಗೆ ಯಾಕೆ ಬರುತ್ತಿದ್ದಾರೆ ಎಂಬ ಅಂಶವೂ ಗೊತ್ತಿರಲಿಲ್ಲ ಎಂದು ಹೇಳಿದ ರಾವ್, ತಮ್ಮಲ್ಲಿಗೆ ಬರಲು ಅವರಿಗೆ ಅಪಾಯಿಂಟ್ಮೆಂಟ್ ಬೇಕಿರಲಿಲ್ಲ, ಯಾವಾಗ ಬೇಕಾದರೂ ಅವರು ಬರಬಹುದಿತ್ತು. ಆದರೆ ಅವತ್ತು ಬಂದ ಮೇಲೆ ಏನೆಲ್ಲ ಆಯಿತು ಅನ್ನೋದು ಎಲ್ಲರಿಗೂ ಗೊತ್ತಿದೆ ಅಂತ ಡಾ ರಾವ್ ಹೇಳಿದರು. ಇಸಿಜಿ ಮಾಡಿದ ನಂತರವೇ ಅವರಿಗೆ ಸಮಸ್ಯೆ ಇರೋದು ಗೊತ್ತಾಯಿತು ಮತ್ತು ತಮ್ಮ ಅತ್ಯುತ್ತಮ ಪ್ರಯತ್ನದ ಹೊರತಾಗಿಯ ಅವರು ಉಳಿಯಲಿಲ್ಲ ಎಂದು ಡಾ ರಾವ್ ವಿಷಾದ ವ್ಯಕ್ತಪಡಿಸಿದರು. ಸಾಧ್ಯವಿರುವ ಎಲ್ಲ ಮಾನವ ಪ್ರಯತ್ನಗಳನ್ನು ಮಾಡಿದ್ದು ವ್ಯರ್ಥವಾಯಿತು ಎಂದು ಅವರು ಹೇಳಿದರು.
ಪುನೀತ್ ಅವರಿಗೆ ಚಿಕಿತ್ಸೆ ನೀಡುವ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯವಾಗಲೀ, ವಿಳಂಬವಾಗಲೀ ಆಗಿಲ್ಲ ಎಂದು ಡಾ ರಾವ್ ಹೇಳಿದರು.
ಹಾರ್ಟ್ ಅಟ್ಯಾಕ್ ಮತ್ತು, ಕಾರ್ಡಿಯಾಕ್ ಅರೆಸ್ಟ್, ಎಚ್ಚರಿಕೆ ನೀಡದೆ ಸಂಭವಿಸುವಂಥವು, ಹಾಗಾಗಿ ಎಲ್ಲರೂ ಹೃದಯದ ಆರೋಗ್ಯ ಬಗ್ಗೆ ಕಾಳಜಿ ಹೊಂದಿರಬೇಕು, ಆಗಾಗ ಚೆಕಪ್ ಮಾಡಿಸಿಕೊಳ್ಳುತ್ತಿರಬೇಕು ಎಂದು ಅವರು ಹೇಳುತ್ತಾರೆ. ಹೃದಯದ ಆರೋಗ್ಯ ವಿಷಯ ಬಂದಾಗ ಯಾವ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು, ಜನರಲ್ಲಿ ಅಂಥ ಟೆಂಡೆನ್ಸಿ ಇದೆ. ಅದನ್ನು ದೂರ ಮಾಡಿಕೊಳ್ಳಬೇಕು, ಬದುಕನ್ನು ಯಾವತ್ತೂ ಹಗುರವಾಗಿ ಪರಿಗಣಿಸಬಾರದು ಎಂದು ಡಾ ರಾವ್ ಹೇಳುತ್ತಾರೆ.
ಇದನ್ನೂ ಓದಿ: Viral Video: ಅಮೆಜಾನ್ ವ್ಯಾನ್ನಿಂದ ರಹಸ್ಯವಾಗಿ ಹೊರಬಂದ ಯುವತಿಯ ವಿಡಿಯೊ ವೈರಲ್; ಚಾಲಕನನ್ನು ಕೆಲಸದಿಂದ ವಜಾಗೊಳಿಸಿದ ಕಂಪನಿ