
ಪ್ರತಿದಿನ ಮನುಷ್ಯನ ದೇಹದ ಚಟುವಟಿಕೆಯಲ್ಲಿ ವ್ಯಾಯಾಮ (exercise) ಎನ್ನುವುದು ಬಹಳ ಮುಖ್ಯವಾದ ಕ್ರಮವಾಗಿರುತ್ತದೆ. ಇದರಿಂದ ದೇಹದಲ್ಲಿ ಹಲವು ಬದಲಾವಣೆ ಆಗುವುದು ಖಂಡಿತ, ಆದರೆ ಇದಕ್ಕೆ ಒಂದು ನಿಯಮವಿದೆ. ಸಮಯ ಸಿಕ್ಕಾಗ ಅಥವಾ ಅನುಕೂಲಕ್ಕೆ ತಕ್ಕಂತೆ ಮಾಡುವುದಲ್ಲ. ಹಾಗೆ ಮಾಡಿದ್ರೆ ಅದು ವ್ಯರ್ಥ. ದೇಹದ ಭಾಗಗಳನ್ನು ಸಕ್ರಿಯವಾಗಿ ಇಟ್ಟುಕೊಳ್ಳಲು ಈ ವ್ಯಾಯಾಮ ಬೇಕು (moderate activity). ಅದರಲ್ಲೂ ಈ ಬೆಂಗಳೂರಿನ ಜನರಿಗೆ ಇನ್ನು ಮುಖ್ಯವಾಗಿರುತ್ತದೆ. ಆಫೀಸ್ನಿಂದ ಮನೆ, ಮನೆಯಿಂದ ಆಫೀಸ್ ಇಷ್ಟೇ ಜೀವನ. ಅದರ ಜತೆಗೆ ಟ್ರಾಫಿಕ್, ಕೆಲಸ ಒತ್ತಡ, ಇದನ್ನೆಲ್ಲ ದೇಹಕ್ಕೆ ಹಾಗೂ ಮನಸ್ಸಿಗೂ ತುಂಬಾ ಭಾರದ ಭಾವನೆಯನ್ನು ನೀಡುತ್ತದೆ. ಅದಕ್ಕಾಗಿ ವ್ಯಾಯಮ ಎನ್ನುವುದು ಪರಿಹಾರ ಆಗಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಒಂದು ಸಲಹೆಯನ್ನು ನೀಡಿದೆ. ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಪ್ರಕಾರ ಆರೋಗ್ಯವಂತ ವ್ಯಕ್ತಿಗೆ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವಾರಕ್ಕೆ ಕನಿಷ್ಠ 150 ನಿಮಿಷಗಳ ಕಾಲ ದೈಹಿಕ ಚಟುವಟಿಕೆಯನ್ನು ಮಾಡಬೇಕು ಎಂದು ಹೇಳಿದೆ.
ದಿನಕ್ಕೆ ಸುಮಾರು 25 ರಿಂದ 30 ನಿಮಿಷಗಳ ಕಾಲ ಸರಳವಾದ ವ್ಯಾಯಾಮಗಳನ್ನು ಮಾಡುವುದರಿಂದ ಆರೋಗ್ಯದಲ್ಲಿ ನಿಧಾನವಾಗಿ ಸುಧಾರಣೆ ಆಗುತ್ತದೆ. 25, 45, ಅಥವಾ 60 ನಿಮಿಷಗಳು ಎಂಬ ನಿಮಯಗಳನ್ನು ಮಾಡಿಕೊಂಡು ವ್ಯಾಯಾಮ ಮಾಡಿದ್ರೆ ಆರೋಗ್ಯದಲ್ಲಿ ಅನೇಕ ಲಾಭಗಳು ಆಗುತ್ತದೆ. ಸದೃಢವಾಗಿರಲು ಮತ್ತು ಹೃದಯದ ಆರೋಗ್ಯ ಉತ್ತಮವಾಗಿರಲು ದಿನಕ್ಕೆ 30 ರಿಂದ 45 ನಿಮಿಷಗಳ ಮಧ್ಯಮ ದೈಹಿಕ ಚಟುವಟಿಕೆ ಮಾಡಿ ಎಂದು ಮುಂಬೈನ ಪರೇಲ್‌ನಲ್ಲಿರುವ ಗ್ಲೆನೀಗಲ್ಸ್ ಆಸ್ಪತ್ರೆಯ ಮೂಳೆಚಿಕಿತ್ಸೆ ವಿಭಾಗದ ಹಿರಿಯ ಸಲಹೆಗಾರ ಡಾ. ಅನುಪ್ ಖತ್ರಿ ಹೇಳಿದ್ದಾರೆ. ಒಂದು ವೇಳೆ ತೂಕ ಇಳಿಕೆ ಅಥವಾ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕೆಂದರೆ, ಕನಿಷ್ಠ ಒಂದು ಗಂಟೆಯವರೆಗೆ ಅವರಿಗೆ ಈ ವ್ಯಾಯಾಮಗಳನ್ನು ಮಾಡಬೇಕು. ಇದರ ಜತೆಗೆ 25 ನಿಮಿಷಗಳ ಹೆಚ್ಚಿನ ವ್ಯಾಯಾಮ ಮಾಡಿದ್ರೆ ಒತ್ತಡವನ್ನು ನಿವಾರಿಸಲು ಮತ್ತು ಮನಸ್ಸು ಶಾಂತವಾಗಿರಲು ಸಹಾಯ ಮಾಡುತ್ತದೆ.
ನಡಿಗೆ, ಸೈಕ್ಲಿಂಗ್, ಯೋಗ ಅಥವಾ ಯೋಗ ತರಬೇತಿಗಳಿಗೆ ಹೋಗಿ ಇವುಗಳನ್ನು ಮಾಡಬಹುದು. ಇದು ತುಂಬಾ ಸರಳವಾಗಿರುತ್ತದೆ. ಇದರ ಜತೆಗೆ ಫಿಟ್‌ನೆಸ್‌ಗಾಗಿ ಹಾಗೂ ಏಕಗ್ರತೆಗಾಗಿ ಕಾರ್ಡಿಯೋಗಳನ್ನು ಕೂಡ ವಾರದಲ್ಲಿ ಮಾಡಬಹುದು. 60 ನಿಮಿಗಳ ಕಾಲ ಸರಳ ವ್ಯಾಯಾಮಗಳನ್ನು ಮಾಡಿದ್ರೆ ಕ್ಯಾಲೊರಿಗಳನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಫಿಟ್‌ನೆಸ್ ಅನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವಾರಕ್ಕೆ ಎರಡು ಬಾರಿ ಇಂತಹ ವ್ಯಾಯಾಮಗಳನ್ನು ಮಾಡುವುದು ಸಾಮಾನ್ಯ ಆರೋಗ್ಯವನ್ನು ಕಾಪಾಡುತ್ತದೆ ಎಂದು ದೆಹಲಿಯ ಸಿಕೆ ಬಿರ್ಲಾ ಆಸ್ಪತ್ರೆಯ ಭೌತಚಿಕಿತ್ಸೆಯ ವಿಭಾಗದ ಮುಖ್ಯಸ್ಥ ಡಾ. ಸುರೇಂದರ್ ಪಾಲ್ ಸಿಂಗ್ ಹೇಳಿದರು.
ಇದನ್ನೂ ಓದಿ: ಚೀನಾದಲ್ಲಿ ರಿಮೋಟ್ ಕಂಟ್ರೋಲ್ ಹಾಸಿಗೆ, ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ
ಪ್ರತಿದಿನ ಈ ನಿಮಯಗಳ ಪ್ರಕಾರ ಸರಳ ವ್ಯಾಯಮಗಳನ್ನು ಮಾಡಿದ್ರೆ, ಖಂಡಿತ ದೇಹದ ಹಾಗೂ ಮನಸ್ಸಿನ ಆರೋಗ್ಯ ಉತ್ತಮವಾಗಿರುತ್ತದೆ. ಮನೆಯಿಂದ ಅಥವಾ ಕಚೇರಿಯಲ್ಲಿ ಕೆಲಸದ ಸಮಯದಲ್ಲಿ ಅನುಭವಿಸುವ ಮಾನಸಿಕ ಹಾಗೂ ದೈಹಿಕ ಸಂಕಷ್ಟಕ್ಕೆ ಇದು ಉತ್ತಮ ಪರಿಹಾರವಾಗಿರುತ್ತದೆ. ಈ ಮೂಲಕ ಆರೋಗ್ಯಕರ ಜೀವನದತ್ತ ಗಮನಹರಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ