Food allergy: ಆಹಾರದ ಅಲರ್ಜಿ ಮಕ್ಕಳಲ್ಲಿ ಈ ಸಮಸ್ಯೆಗೆ ಕಾರಣವಾಗಬಹುದು

|

Updated on: Jan 28, 2024 | 5:21 PM

ಕೆಲವರಿಗೆ ಡ್ರೈ ಫ್ರೂಟ್ಸ್ ಮತ್ತು ಕೆಲವರಿಗೆ ಡೈರಿ ಉತ್ಪನ್ನಗಳನ್ನು ಸೇವಿಸುವುದರಿಂದ ಆಹಾರದ ಅಲರ್ಜಿಯ ಸಮಸ್ಯೆ ಉಂಟಾಗುತ್ತದೆ. ಇದು ಕೆಲವೊಮ್ಮೆ ಪ್ರಾಣಕ್ಕೂ ಕಂಟಕವಾಗುವ ಸಾಧ್ಯತೆಯೂ ಹೆಚ್ಚಿದೆ.

Food allergy: ಆಹಾರದ ಅಲರ್ಜಿ ಮಕ್ಕಳಲ್ಲಿ ಈ ಸಮಸ್ಯೆಗೆ ಕಾರಣವಾಗಬಹುದು
Food allergy
Follow us on

ಆಹಾರ ಅಲರ್ಜಿ(Food allergy) ಏಕೆ ಸಂಭವಿಸುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇತ್ತೀಚಿನ ಹೊಸ ಸಂಶೋಧನೆಯೊಂದರ ಪ್ರಕಾರ ಬಾಲ್ಯದಲ್ಲಿ ಆಹಾರ ಅಲರ್ಜಿಯು ಅಸ್ತಮಾವನ್ನು ಉಂಟುಮಾಡುವುದು ಮಾತ್ರವಲ್ಲದೆ ಶ್ವಾಸಕೋಶದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಬಹಿರಂಗಪಡಿಸಿದೆ. ಮುರ್ಡೋಕ್ ಚಿಲ್ಡ್ರನ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ಚಿಕ್ಕ ವಯಸ್ಸಿನಲ್ಲೇ ಆಹಾರ ಅಲರ್ಜಿಯನ್ನು ಹೊಂದಿರುವವರಲ್ಲಿ ಆಸ್ತಮಾದ ಅಪಾಯ ಹೆಚ್ಚು ಎಂದು ಕಂಡುಹಿಡಿದ್ದಿದ್ದಾರೆ.

ಕೆಲವರಿಗೆ ಡ್ರೈ ಫ್ರೂಟ್ಸ್ ಮತ್ತು ಕೆಲವರಿಗೆ ಡೈರಿ ಉತ್ಪನ್ನಗಳನ್ನು ಸೇವಿಸುವುದರಿಂದ ಆಹಾರದ ಅಲರ್ಜಿಯ ಸಮಸ್ಯೆ ಉಂಟಾಗುತ್ತದೆ. ಇದು ಕೆಲವೊಮ್ಮೆ ಪ್ರಾಣಕ್ಕೂ ಕಂಟಕವಾಗುವ ಸಾಧ್ಯತೆಯೂ ಹೆಚ್ಚಿದೆ. ಆಹಾರದ ಅಲರ್ಜಿಯಿಂದ ಅನೇಕ ಜನರು ಮೊಡವೆ ಸಮಸ್ಯೆಗಳನ್ನು ಎದುರಿಸುತ್ತಾರೆ. ಮೊಡವೆಗಳ ಸಮಸ್ಯೆಯಷ್ಟೇ ಅಲ್ಲ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳೂ ಶುರುವಾಗುತ್ತವೆ.

ಆಹಾರ ಅಲರ್ಜಿ ಎಂದರೇನು?

ಆರೋಗ್ಯ ತಜ್ಞರ ಪ್ರಕಾರ, ಆಹಾರ ಅಲರ್ಜಿಯು ಪ್ರತಿರಕ್ಷಣಾ ವ್ಯವಸ್ಥೆಯ ಪ್ರತಿಕ್ರಿಯೆಯಾಗಿದ್ದು, ಇದು ನಿರ್ದಿಷ್ಟ ರೀತಿಯ ಆಹಾರವನ್ನು ಸೇವಿಸಿದ ನಂತರ ಉದ್ಭವಿಸುತ್ತದೆ. ಅಲ್ಪ ಪ್ರಮಾಣದ ಅಲರ್ಜಿಯನ್ನು ಉಂಟುಮಾಡುವ ಆಹಾರವನ್ನು ಸೇವಿಸಿದರೂ ಸಹ, ರೋಗಲಕ್ಷಣಗಳು ತಕ್ಷಣವೇ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.

ಇದನ್ನೂ ಓದಿ: ಕುಕ್ಕೀಸ್​​​​ ಸೇವಿಸಿ ಸಾವನ್ನಪ್ಪಿದ ನ್ಯೂಯಾರ್ಕ್‌ನ ಜನಪ್ರಿಯ ನೃತ್ಯಗಾರ್ತಿ

ಸಂಶೋಧನೆ ಏನು ಹೇಳುತ್ತದೆ?

ಈ ಸಂಶೋಧನೆಯಲ್ಲಿ, 6 ವರ್ಷ ವಯಸ್ಸಿನ 13.7 ಪ್ರತಿಶತ ಮಕ್ಕಳಲ್ಲಿ ಅಸ್ತಮಾ ಕಂಡುಬಂದಿದೆ. ಸಂಶೋಧನೆಯ ಪ್ರಕಾರ, ಆಹಾರ ಅಲರ್ಜಿಯನ್ನು ಹೊಂದಿರದ ಮಕ್ಕಳಿಗೆ ಹೋಲಿಸಿದರೆ ಸಂಶೋಧನೆಯಲ್ಲಿ ಸೇರಿಸಲಾದ ಮಕ್ಕಳಲ್ಲಿ ಆಸ್ತಮಾವನ್ನು ಅಭಿವೃದ್ಧಿಪಡಿಸುವ ಅಪಾಯವು ಸುಮಾರು 4 ಪಟ್ಟು ಹೆಚ್ಚಾಗಿದೆ. ಇದರೊಂದಿಗೆ, ಬಾಲ್ಯದಲ್ಲಿ ಆಹಾರ ಅಲರ್ಜಿಯಿಂದ ಮಕ್ಕಳಲ್ಲಿ ಉಸಿರಾಟದ ತೊಂದರೆಗಳು ಹೆಚ್ಚಾಗಬಹುದು. ಬಾಲ್ಯದಲ್ಲಿ ಶ್ವಾಸಕೋಶದ ಬೆಳವಣಿಗೆಯಲ್ಲಿ ಅಡಚಣೆಯಿಂದಾಗಿ, ಹೃದಯ, ಉಸಿರಾಟದ ಪ್ರದೇಶ ಮತ್ತು ದೇಹದ ಇತರ ಭಾಗಗಳಲ್ಲಿ ಸಮಸ್ಯೆಗಳನ್ನು ಕಾಣಬಹುದು. ಆದ್ದರಿಂದ ಆಹಾರ ಅಲರ್ಜಿಯಂತಹ ಸಮಸ್ಯೆಗಳಿರುವ ಮಕ್ಕಳ ಪೋಷಕರು ತಮ್ಮ ಮಗುವಿನ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅವರಿಗೆ ಸಮಸ್ಯೆಗಳನ್ನು ಉಂಟುಮಾಡುವ ಆಹಾರವನ್ನು ನೀಡುವುದನ್ನು ತಪ್ಪಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ