Asthma: ಅಸ್ತಮಾ ರೋಗಿಗಳು ಚಳಿಗಾಲದಲ್ಲಿ ವಾಕಿಂಗ್ ಹೋಗುವುದು ಸುರಕ್ಷಿತವೇ?
ಅಪೋಲೋ ಆಸ್ಪತ್ರೆಯ ಹಿರಿಯ ಸಲಹೆಗಾರರಾದ ಡಾ.ನಿಖಿಲ್ ಮೋದಿ, ಅಸ್ತಮಾ ರೋಗಿಗಳಿಗೆ ಬೆಳಗಿನ ನಡಿಗೆ ಸ್ವಲ್ಪ ಅಪಾಯಕಾರಿ ಎಂದು ಎಚ್ಚರಿಸುತ್ತಾರೆ. ಚಳಿಗಾಲದ ಮಂಜಿನ ವಾತಾವರಣ ರೋಗಲಕ್ಷಣ ಉಲ್ಬಣಗೊಳ್ಳಲು ಕಾರಣವಾಗಬಹುದು ಎಂದು ಹೇಳುತ್ತಾರೆ.
ಮುಂಜಾನೆಯ ನಡಿಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹವನ್ನು ಆರೋಗ್ಯವಾಗಿಡಲು ಬೆಳಗಿನ ಹೊತ್ತು ವೇಗದ ನಡಿಗೆ ರೂಡಿಸಿಕೊಳ್ಳಿ ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಬೆಳಗಿನ ವಾಕ್ ಮಾಡಬೇಕು. ಇದರಿಂದ ಸ್ನಾಯುಗಳು ಬಲವಾಗಿರುವುದು ಮಾತ್ರವಲ್ಲದೆ ರೋಗಗಳು ಬರುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ಚಳಿಗಾಲವಾಗಿರುವುದರಿಂದ ಮಂಜು ದಟ್ಟವಾಗಿ ಬೀಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಸ್ತಮಾ ಇರುವವರು ಬೆಳಗಿನ ವಾಕ್ ಮಾಡುವುದು ಎಷ್ಟು ಸುರಕ್ಷಿತ ತಜ್ಞರು ಹೇಳುವುದೇನು?
ಅಪೋಲೋ ಆಸ್ಪತ್ರೆಯ ಹಿರಿಯ ಸಲಹೆಗಾರರಾದ ಡಾ.ನಿಖಿಲ್ ಮೋದಿ, ಅಸ್ತಮಾ ರೋಗಿಗಳಿಗೆ ಬೆಳಗಿನ ನಡಿಗೆ ಸ್ವಲ್ಪ ಅಪಾಯಕಾರಿ ಎಂದು ಎಚ್ಚರಿಸುತ್ತಾರೆ. ಚಳಿಗಾಲದ ಮಂಜಿನ ತಂಪಿನ ವಾತಾವರಣ ರೋಗಲಕ್ಷಣ ಉಲ್ಬಣಗೊಳ್ಳಲು ಕಾರಣವಾಗಬಹುದು ಎಂದು ಹೇಳುತ್ತಾರೆ. ಆದ್ದರಿಂದ ಆಸ್ತಮಾ ರೋಗಿಗಳು ಒಳಾಂಗಣದಲ್ಲಿ ನಡೆಯಲು ಆದ್ಯತೆ ನೀಡಬೇಕು. ಇದಲ್ಲದೆ, ನೀವು ಹೊರಗೆ ಹೋಗುವಾಗ ಮಾಸ್ಕ್ ಧರಿಸಿ, ಹಾಗೆಯೇ ಕಿವಿಗಳನ್ನು ಮುಚ್ಚುವಂತಹ ಟೋಪಿ ಧರಿಸಿ ಎಂದು ಹೇಳುತ್ತಾರೆ.
ಇದನ್ನೂ ಓದಿ: ಹದಿಹರೆಯದವರಲ್ಲಿ ಇತ್ತೀಚೆಗೆ ಮಧುಮೇಹ ಹೆಚ್ಚಾಗುತ್ತಿರುವುದೇಕೆ?
ಅಸ್ತಮಾ ರೋಗಿಗಳು ಈ ವಿಷಯಗಳನ್ನು ನೆನಪಿಡಿ:
- ಆಸ್ತಮಾ ರೋಗಿಗಳು ಮಂಜು ತೆರವಾದ ನಂತರವೇ ವಾಕಿಂಗ್‌ಗೆ ಹೋಗಬೇಕು.
- ಮಾಸ್ಕ್ ಧರಿಸಿ ಹೊರಗೆ ಹೋಗಬೇಕು. ಇದರಿಂದ ಮಾಲಿನ್ಯಕಾರಕಗಳು ದೇಹವನ್ನು ಸೇರುವುದಿಲ್ಲ.
- ಆಸ್ತಮಾ ರೋಗಿಗಳು ಮಂಜಿನ ವಾತಾವರಣದಲ್ಲಿ ನಿಧಾನವಾಗಿ ನಡೆಯಬೇಕು.
- ಅತಿ ವೇಗವಾಗಿ ನಡೆಯುವುದರಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: