ಫ್ರಿಡ್ಜ್​ನಲ್ಲಿ ಸಂಗ್ರಹಿಸಿಟ್ಟ ಆಹಾರ ಆರೋಗ್ಯಕ್ಕೆ ಒಳ್ಳೆಯದೇ? ತಜ್ಞರ ಸಲಹೆಗಳು ಇಲ್ಲಿವೆ

| Updated By: shruti hegde

Updated on: Oct 07, 2021 | 7:09 AM

Health Tips: 24 ಗಂಟೆಗಳಿಗಿಂತ ಹಳೆಯದಾದ ಆಹಾರವನ್ನು ಸೇವಿಸುವುದರಿಂದ ಜೀರ್ಣಕಾರಿ ತೊಂದರೆಗಳು ಉಂಟಾಗುತ್ತವೆ ಎಂದು ತಜ್ಞರು ಹೇಳಿದ್ದಾರೆ.

ಫ್ರಿಡ್ಜ್​ನಲ್ಲಿ ಸಂಗ್ರಹಿಸಿಟ್ಟ ಆಹಾರ ಆರೋಗ್ಯಕ್ಕೆ ಒಳ್ಳೆಯದೇ? ತಜ್ಞರ ಸಲಹೆಗಳು ಇಲ್ಲಿವೆ
ಸಂಗ್ರಹ ಚಿತ್ರ
Follow us on

ಸಾಮಾನ್ಯವಾಗಿ ಮಿಕ್ಕಿದ ಆಹಾರವನ್ನೆಲ್ಲಾ ಫ್ರಿಡ್ಜ್​ನಲ್ಲಿ ಇಡುವ ಅಭ್ಯಾಸ ಇದ್ದೇ ಇರುತ್ತದೆ. ಹಾಗಿರುವಾಗ ಆಹಾರವನ್ನು ಫ್ರಿಡ್ಜ್​ನಲ್ಲಿ ಎಷ್ಟು ಸಮಯ ಇಡಬಹುದು? ಇದು ಆರೋಗ್ಯಕರವೇ? ಎಂಬ ಪ್ರಶ್ನೆ ಎದುರಾಗುತ್ತದೆ. ಈ ಕುರಿತಂತೆ ಫಿಟ್ನೆಸ್ ತಜ್ಞೆ ಡಾ. ವರಲಕ್ಷ್ಮೀ ಇನ್ಸ್ಟಾಗ್ರಾಂನಲ್ಲಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವರು ಅಹಾರವನ್ನು ಯಾವ ರೀತಿ ಬಳಸಿದರೆ ಒಳ್ಳೆಯದು ಎಂಬುದರ ಕುರಿತಾಗಿ ಒಂದಿಷ್ಟು ಟಿಪ್ಸ್​ಗಳನ್ನು ತಿಳಿಸಿದ್ದಾರೆ.

24 ಗಂಟೆಗಳಿಗಿಂತ ಹಳೆಯದಾದ ಆಹಾರವನ್ನು ಸೇವಿಸುವುದರಿಂದ ಜೀರ್ಣಕಾರಿ ತೊಂದರೆಗಳು ಉಂಟಾಗುತ್ತವೆ ಎಂದು ತಜ್ಞರು ಹೇಳಿದ್ದಾರೆ. ಫ್ರಿಡ್ಜ್​ನಲ್ಲಿ ಆಹಾರವನ್ನು ಸಂಗ್ರಹಿಸಿಟ್ಟ ನಂತರ ಆಹಾರವನ್ನು ಬೇಯಿಸುತ್ತೇವೆ. ಫ್ರಿಡ್ಜ್​ನಲ್ಲಿ ಆಹಾರವು ತೇವಾಂಶವನ್ನು ಹೊಂದಿರುತ್ತದೆ. ಇದು ಬ್ಯಾಕ್ಟೀರಿಯಾ ಮತ್ತು ಇತರ ರೋಗಾಣುಗಳಿಗೆ ಸಂತಾನೋತ್ಪತ್ತಿ ಮಾಡುತ್ತವೆ. ವಿಭಿನ್ನ ಆಹಾರವು ಬೇರೆ ಬೇರೆ ತೆರೆನಾದ ಶೇಖರಣಾ ಮಾರ್ಗ ಸೂಚಿಗಳನ್ನು ಹೊಂದಿವೆ ಎಂದು ಫಿಟ್ನೆಸ್ ತಜ್ಞೆ ವರದಲಕ್ಷ್ಮೀ ತಮ್ಮ ಇನ್​ಸ್ಟಾಗ್ರಾಂ ಪುಟದಲ್ಲಿ ಬರೆದುಕೊಂಡಿದ್ದಾರೆ.

ಫ್ರಿಡ್ಜ್​ನಲ್ಲಿ ಇಟ್ಟ ಆಹಾರವನ್ನು ನಾವು ತಕ್ಷಣ ಬೇಯಿಸಿದಾಕ್ಷಣ ಅದರಲ್ಲಿರುವ ಪೋಷಕಾಂಶಗಳು ನಾಶವಾಗುತ್ತವೆ. ಕೆಲವರಿಗೆ ಫ್ರಿಡ್ಜ್​ ಅನಯಕೂಲವಾಗಿದ್ದರೂ ಸಹ ಹೆಚ್ಚಿನವರಿಗೆ ಇದು ಅನಾನುಕೂಲ. ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದು ಅವರು ವಿವರಿಸಿದ್ದಾರೆ.

ನೆನಪಿಡುವ ಅಂಶಗಳು
*ಆಹಾರವನ್ನು ಒಂದಕ್ಕಿಂತ ಹೆಚ್ಚು ಬಾರಿ ಬಿಸಿ ಮಾಡಬೇಡಿ
*ಪದೇ ಪದೇ ಬಿಸಿಯಾಗುವವರೆಗೆ ಆಹಾರವನ್ನು ಕಾಯಿಸುತ್ತಲೇ ಇರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ
*ಮಾಂಸ, ಡೈರಿ ಉತ್ಪನ್ನಗಳನ್ನು ಫ್ರಿಡ್ಜ್​ನಲ್ಲಿ ಸಂಗ್ರಹಿಸಿ ಬಳಸುವ ಮೊದಲು ಮಾರ್ಗಸೂಚಿಗಳನ್ನು ಅನುಸರಿಸಿ
*ತಣ್ಣಗಾದ ಆಹಾರವನ್ನು ಎರಡು ಮೂರು ದಿನಗಳವರೆಗೆ ಬಳಸಬೇಡಿ

ಇದನ್ನೂ ಓದಿ:

Health Tips: ಡ್ರೈ ಫ್ರೂಟ್ಸ್ ಸೇವಿಸುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ತಿಳಿಯಿರಿ

Health Tips: ಹೃದಯ ಆರೋಗ್ಯ ಸುಧಾರಣೆಗೆ ಈ ಹಣ್ಣುಗಳ ಸೇವನೆ ಪ್ರಯೋಜನಕಾರಿ