ಈ ಹಣ್ಣು, ತರಕಾರಿಗಳನ್ನು ಎಂದಿಗೂ ಹಸಿಯಾಗಿ ಸೇವಿಸಬೇಡಿ ಇದು ಹಾವಿನ ವಿಷಕ್ಕಿಂತ ವಿಷಕಾರಿ!

ಹಸಿಯಾಗಿರುವ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು, ಆದರೆ ಯಾವುದನ್ನು ಹಸಿಯಾಗಿ ತಿನ್ನಬೇಕು ಮತ್ತು ಯಾವುದನ್ನು ತಿನ್ನಬಾರದು ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ. ಏಕೆಂದರೆ ಕೆಲವು ಹಸಿಯಾಗಿ ತಿನ್ನುವ ಹಣ್ಣು ಮತ್ತು ತರಕಾರಿಗಳು ಹಾವು ಕಡಿತಕ್ಕಿಂತ ವೇಗವಾಗಿ ಜೀವವನ್ನು ತೆಗೆದುಕೊಳ್ಳಬಹುದು. ಹೌದು, ಆರೋಗ್ಯ ತಜ್ಞರು ಕೂಡ ಕೆಲವು ಆಹಾರಗಳಲ್ಲಿ ಹಾವಿನ ವಿಷಕ್ಕಿಂತ ಹೆಚ್ಚು ವಿಷವಿರುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ಯಾವ ಹಣ್ಣು ಮತ್ತು ತರಕಾರಿಗಳನ್ನು ಹಸಿಯಾಗಿ ತಿನ್ನಬಾರದು, ಅದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ.

ಈ ಹಣ್ಣು, ತರಕಾರಿಗಳನ್ನು ಎಂದಿಗೂ ಹಸಿಯಾಗಿ ಸೇವಿಸಬೇಡಿ ಇದು ಹಾವಿನ ವಿಷಕ್ಕಿಂತ ವಿಷಕಾರಿ!
Toxic Compounds In Raw Foods

Updated on: Dec 04, 2025 | 2:30 PM

ಸಾಮಾನ್ಯವಾಗಿ ಕೆಲವು ತರಕಾರಿ ಮತ್ತು ಹಣ್ಣುಗಳನ್ನು ಹಸಿಯಾಗಿ ತಿನ್ನುವುದು ಆರೋಗ್ಯಕರ ಎಂದು ಅನೇಕರು ನಂಬುತ್ತಾರೆ. ಆದರೆ ಕೆಲವೊಮ್ಮೆ ಹಸಿ ಹಣ್ಣು ಮತ್ತು ತರಕಾರಿಗಳು ಹಾವು ಕಡಿತಕ್ಕಿಂತ ವೇಗವಾಗಿ ಜೀವವನ್ನು ತೆಗೆದುಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ… ಹೌದು, ಕೆಲವು ಹಣ್ಣು ಮತ್ತು ತರಕಾರಿಗಳು (Fruits, Veggies) ನೈಸರ್ಗಿಕವಾಗಿ ದೇಹಕ್ಕೆ ಹಾನಿಕಾರಕವಾಗಿದ್ದು ಇವುಗಳನ್ನು ಹಸಿಯಾಗಿ ಸೇವನೆ ಸೇವನೆ ಮಾಡುವುದು ಜೀರ್ಣಕಾರಿ ಸಮಸ್ಯೆಗಳು, ಮೂತ್ರಪಿಂಡಕ್ಕೆ ಹಾನಿ ಸೇರಿದಂತೆ ರಕ್ತಹೀನತೆ (Anemia) ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆರೋಗ್ಯ ತಜ್ಞರು ಕೂಡ ಕೆಲವು ಆಹಾರಗಳಲ್ಲಿ ಹಾವಿನ ವಿಷಕ್ಕಿಂತ ಹೆಚ್ಚು ವಿಷವಿರುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ಯಾವ ಹಣ್ಣು ಮತ್ತು ತರಕಾರಿಗಳನ್ನು ಹಸಿಯಾಗಿ ತಿನ್ನಬಾರದು, ಅದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ.

  • ಪ್ರತಿನಿತ್ಯ ಮನೆಯಲ್ಲಿ ಬಳಸುವ ಕೆಲವು ಆಹಾರಗಳು ನೈಸರ್ಗಿಕವಾಗಿ ಸೈನೈಡ್, ಸೋಲನೈನ್ ಮತ್ತು ಲೆಕ್ಟಿನ್ ನಂತಹ ಮಾರಕ ವಿಷಗಳನ್ನು ಹೊಂದಿರುತ್ತದೆ. ಅವುಗಳಲ್ಲಿ ಬಲಿಯದ ಬಾಳೆಹಣ್ಣು ಅಂದರೆ ಬಾಳೆಕಾಯಿಗಳನ್ನು ಹಸಿಯಾಗಿ ತಿನ್ನಬಾರದು. ಇವುಗಳನ್ನು ಅತಿಯಾಗಿ ತಿಂದರೆ ಬಾಯಿ ಹುಣ್ಣು, ಗಂಟಲು ಕಿರಿಕಿರಿ, ಅಜೀರ್ಣ ಮತ್ತು ವಾಂತಿ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು.
  • ಮಾರುಕಟ್ಟೆಯಲ್ಲಿ ಮಾರಾಟವಾಗುವ ಹಸಿ ಗೋಡಂಬಿಗಳು ನಿಜವಾಗಿಯೂ ಹಸಿಯಾಗಿರುವುದಿಲ್ಲ. ಬದಲಾಗಿ ಮಾರಾಟ ಮಾಡುವ ಮೊದಲು ವಿಷ ತೆಗೆಯಲು ಅವುಗಳನ್ನು ಆವಿಯಲ್ಲಿ ಬೇಯಿಸಲಾಗುತ್ತದೆ ಅಥವಾ ಹುರಿಯಲಾಗುತ್ತದೆ. ಆದರೆ ಹಸಿ ಗೋಡಂಬಿಯನ್ನು ಸೇವಿಸಿದರೆ, ಅವುಗಳಲ್ಲಿರುವ ಉರುಶಿಯೋಲ್ ರಾಸಾಯನಿಕ ಬಹಳ ಅಪಾಯಕಾರಿ. ಇದು ಚರ್ಮದ ಮೇಲೆ ಗುಳ್ಳೆಗಳು, ಗಂಟಲು ಊತ ಮತ್ತು ತೀವ್ರ ಉಸಿರಾಟದ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು.
  • ಹಸಿ ಆಲೂಗಡ್ಡೆಯಲ್ಲಿ ಸೋಲನೈನ್ ಎಂಬ ಗ್ಲೈಕೋಲ್ಕಲಾಯ್ಡ್ ಟಾಕ್ಸಿನ್ ಇರುತ್ತದೆ. ವಿಶೇಷವಾಗಿ ಇದು ಮೊಳಕೆಯೊಡೆದ ಆಲೂಗಡ್ಡೆಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದನ್ನು ಹಸಿಯಾಗಿ ತಿಂದರೆ ತಲೆನೋವು, ವಾಕರಿಕೆ, ಅತಿಸಾರ, ನರ ಹಾನಿ ಮತ್ತು ತೀವ್ರತರವಾದ ಸಂದರ್ಭಗಳಲ್ಲಿ ಸಾವು ಕೂಡ ಕಂಡುಬರಬಹುದು.
  • ಅಕೀ ಹಣ್ಣು ಕೂಡ ವಿಷಕಾರಿ. ಹಾಗಾಗಿ ಸಂಪೂರ್ಣವಾಗಿ ಮಾಗಿದ ಮತ್ತು ಸರಿಯಾಗಿ ಸಂಸ್ಕರಿಸಿದ ಹಣ್ಣನ್ನು ಮಾತ್ರ ಸೇವಿಸಬೇಕು, ಏಕೆಂದರೆ ಬಲಿಯದ ಹಣ್ಣುಗಳು, ಬೀಜ ಮತ್ತು ಸಿಪ್ಪೆಗಳು ವಿಷಕಾರಿ. ಇದರಲ್ಲಿ ಹೈಪೊಗ್ಲಿಸಿನ್ ಎ & ಬಿ ಎಂಬ ವಿಷಕಾರಿ ಅಂಶವಿದ್ದು ಅತಿಯಾದ ಸೇವನೆ ಕೋಮಾಗೆ, ಕೆಲವೊಮ್ಮೆ ಸಾವಿಗೂ ಕಾರಣವಾಗಬಹುದು.
  • ಹಸಿ ಬೀನ್ಸ್, ಕ್ಲಸ್ಟರ್ ಬೀನ್ಸ್ ಹೀಗೆ ಈ ರೀತಿಯ ತರಕಾರಿಗಳು ಹೆಚ್ಚಿನ ಪ್ರಮಾಣದ ಲೆಕ್ಟಿನ್‌ಗಳನ್ನು ಹೊಂದಿರುತ್ತವೆ. ಇವುಗಳನ್ನು ಹಸಿಯಾಗಿ ತಿನ್ನುವುದರಿಂದ ಜೀರ್ಣಕಾರಿ ಸಮಸ್ಯೆಗಳು, ಅನಿಲ ಮತ್ತು ವಿಷಕಾರಿ ಅಂಶಗಳು ದೇಹ ಸೇರುವ ಅಪಾಯವಿರುತ್ತದೆ.
  • ಮೂತ್ರಪಿಂಡದ ಸಮಸ್ಯೆ ಇರುವವರು ಸ್ಟಾರ್ ಫ್ರೂಟ್‌ಗಳನ್ನು ಹಸಿಯಾಗಿ ತಿನ್ನುವುದನ್ನು ತಪ್ಪಿಸಬೇಕು, ಏಕೆಂದರೆ ಇವುಗಳಲ್ಲಿ ಕ್ಯಾರಂಬಾಕ್ಸಿನ್ ಎಂಬ ಸಂಯುಕ್ತವಿದ್ದು ಮೆದುಳಿಗೆ ಹಾನಿ ಮಾಡುತ್ತದೆ.

ಹಾಗಾಗಿ ಈ ರೀತಿಯ ಆಹಾರಗಳನ್ನು ಬೇಯಿಸಿದ ನಂತರವೇ ಸೇವನೆಮಾಡಿ. ಹಸಿಯಾಗಿರುವ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು, ಆದರೆ ಯಾವುದನ್ನು ಹಸಿಯಾಗಿ ತಿನ್ನಬಹುದು ಮತ್ತು ಯಾವುದನ್ನು ತಿನ್ನಬಾರದು ಎಂದು ತಿಳಿದುಕೊಳ್ಳುವುದು ಬಹಳ ಅವಶ್ಯಕ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಎಚ್ಚರದಿಂದಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ