ಹಬ್ಬದ ಸಮಯದಲ್ಲಿ ತೂಕ ಹೆಚ್ಚಾಗಿದ್ದರೆ ಭಯ ಬೇಡ, ಸ್ಲಿಮ್ ಆಗಲು ತಜ್ಞರು ನೀಡಿರುವ ಸಲಹೆ ಅನುಸರಿಸಿ

ದೀಪಾವಳಿ ಮುಗಿದ ನಂತರ ಆರೋಗ್ಯಕರ ದಿನಚರಿಗೆ ಮರಳುವುದು ಅತ್ಯಗತ್ಯ, ಆದ್ದರಿಂದ ನಮ್ಮ ದೇಹವನ್ನು ಮತ್ತೆ ಮೊದಲಿನ ಸ್ಥಿತಿಗೆ ತರಲು ಅಥವಾ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಕೆಲವು ಸರಳ ಕ್ರಮ ಅನುಸರಿಸುವುದು ಎಲ್ಲಾ ರೀತಿಯಿಂದಲೂ ಒಳ್ಳೆಯದು. ಅದರಲ್ಲಿಯೂ ಇನ್ನೇನು ಮದುವೆಗಳು ಸಾಲು ಸಾಲಾಗಿ ಬರುವುದರಿಂದ ಅದಕ್ಕಿಂತ ಮುಂಚಿತವಾಗಿ ಕೆಲವು ಸರಳ ಸಲಹೆಗಳನ್ನು ಡಾ. ಅಪರ್ಣಾ ಗೋವಿಲ್ ಭಾಸ್ಕರ್ ಅವರು ಹಂಚಿಕೊಂಡಿದ್ದು ಇದನ್ನು ಕಟ್ಟುನಿಟಾಗಿ ಅನುಸರಿಸಿದರೆ ಆರೋಗ್ಯದ ಜೊತೆಗೆ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಹಬ್ಬದ ಸಮಯದಲ್ಲಿ ತೂಕ ಹೆಚ್ಚಾಗಿದ್ದರೆ ಭಯ ಬೇಡ, ಸ್ಲಿಮ್ ಆಗಲು ತಜ್ಞರು ನೀಡಿರುವ ಸಲಹೆ ಅನುಸರಿಸಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 15, 2024 | 2:34 PM

ದೀಪಾವಳಿ ಆಚರಣೆಯಲ್ಲಿ ಸಹಜವಾಗಿ ಎಲ್ಲರ ಮನೆಯಲ್ಲಿಯೂ ರುಚಿಕರವಾದ ಆಹಾರ ಮಾಡುವ ಮತ್ತು ಸವಿಯುವ ಸಮಯ. ಲಾಡಿನಿಂದ ಹಿಡಿದು ಗುಲಾಬ್ ಜಾಮೂನ್ ಗಳವರೆಗೆ, ಬಾಯಿಗೆ ನೀರೂರಿಸುವ ತಿನಿಸುಗಳಿಗೆ ಕೊರತೆ ಇರುವುದಿಲ್ಲ. ಈ ರೀತಿಯಾಗಿ ನಮ್ಮ ಊಟದ ತಟ್ಟೆ ತುಂಬುವುದಲ್ಲದೆ ಹೃದಯವೂ ಸಂತೋಷದಿಂದ ತುಂಬಿ ತುಳುಕುತ್ತದೆ. ಆಹಾರ ಸೇವನೆ ಮಾಡುವುದರಲ್ಲಿ ಎಷ್ಟೇ ಎಚ್ಚರ ವಹಿಸಿದರೂ ಮಿತಿ ಮೀರಿ ಒಂದೊಂದೇ ಕಜ್ಜಾಯಗಳು ಹೊಟ್ಟೆ ಸೇರಿದ್ದೇ ಗೊತ್ತಾಗುವುದಿಲ್ಲ. ದೀಪಾವಳಿಯ ಈ ಭೋಗ ಅಥವಾ ಮಿತಿಮೀರಿದ ಸೇವನೆ ನಮ್ಮ ಸೊಂಟದ ಮೇಲೆ ಪರಿಣಾಮ ಬೀರಬಹುದು ಅಂದರೆ ಅತಿಯಾದ ಬೊಜ್ಜಿಗೆ ದಾರಿ ಮಾಡಿಕೊಡಬಹುದು. ಬಳಿಕ ಸಾಕಷ್ಟು ಒತ್ತಡಕ್ಕೆ ಕಾರಣವಾಗಬಹುದು. ಹಬ್ಬದ ನಂತರ ತೂಕ ಹೆಚ್ಚಾಗುವುದು ನಮ್ಮಲ್ಲಿ ಅನೇಕರಿಗೆ ಕಾಡುವ ಸಮಸ್ಯೆ. ಹಬ್ಬದ ಋತುವನ್ನು ಆನಂದಿಸುವುದು ಸಾಮಾನ್ಯವಾದರೂ, ಆಚರಣೆಗಳು ಮುಗಿದ ನಂತರ ನಮ್ಮ ದೇಹಕ್ಕೆ ಸರಿಯಾದ ರೀತಿಯಲ್ಲಿ ಆರೈಕೆ ಮಾಡುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ.

ದೀಪಾವಳಿ ಸಿಹಿ ತಿಂಡಿಗಳಲ್ಲಿ ಸಾಮಾನ್ಯವಾಗಿ ಸಕ್ಕರೆ, ಕೊಬ್ಬು ಮತ್ತು ಸೋಡಿಯಂ ಅಂಶಗಳು ಸಮೃದ್ಧವಾಗಿರುತ್ತದೆ. ಇದು ಎಲ್ಲರಿಗೂ ತಿಳಿದಿರುವ ವಿಷಯ. ಸಮೋಸಾ, ಲಡ್ಡು, ವಿವಿಧ ಬಗೆಯ ಪೇಡಾ ಹೀಗೆ ನಾನಾ ರೀತಿಯ ಸಿಹಿ ತಿಂಡಿಗಳನ್ನು ತಿನ್ನುವುದು ಸುಲಭ ಅದರಲ್ಲಿಯೂ ನಮ್ಮ ಅರಿವಿಗೆ ಬರುವ ಮೊದಲೇ, ದೇಹಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಿಹಿ ತಿನಿಸುಗಳನ್ನು ಸೇವನೆ ಮಾಡಿರುತ್ತೇವೆ. ಹಾಗಾಗಿ ಹಬ್ಬದ ಋತುವಿನಲ್ಲಿ ಅತಿಯಾಗಿ ತಿನ್ನುವುದು ತೂಕ ಹೆಚ್ಚಳಕ್ಕೆ ಕಾರಣವಾಗುವುದಲ್ಲದೆ, ಅಧಿಕ ರಕ್ತದೊತ್ತಡ, ಮಧುಮೇಹ ಮುಂತಾದ ಆರೋಗ್ಯ ಸಮಸ್ಯೆಗಳನ್ನು ಇನ್ನಷ್ಟು ಹದಗೆಡಿಸಬಹುದು. ಜೊತೆಗೆ ಜೀರ್ಣಕಾರಿ ಸಮಸ್ಯೆಗಳು, ಆಯಾಸ ಮತ್ತು ಮೊಡವೆಗಳಂತಹ ಚರ್ಮದ ಸಮಸ್ಯೆಗಳನ್ನು ಉಂಟು ಮಾಡಬಹುದು ಹಾಗಾಗಿ ಈ ಬಗ್ಗೆ ಎಚ್ಚರ ವಹಿಸುವುದು ಅತ್ಯವಶ್ಯಕ. ಜೊತೆಗೆ ದೀಪಾವಳಿ ಮುಗಿದ ನಂತರ ಆರೋಗ್ಯಕರ ದಿನಚರಿಗೆ ಮರಳುವುದು ಅತ್ಯಗತ್ಯ, ಆದ್ದರಿಂದ ನಮ್ಮ ದೇಹವನ್ನು ಮತ್ತೆ ಮೊದಲಿನ ಸ್ಥಿತಿಗೆ ತರಲು ಅಥವಾ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಈ ರೀತಿಯ ಕ್ರಮ ಅನುಸರಿಸುವುದು ಎಲ್ಲಾ ರೀತಿಯಿಂದಲೂ ಒಳ್ಳೆಯದು. ಅದರಲ್ಲಿಯೂ ಇನ್ನೇನು ಮದುವೆಗಳು ಸಾಲು ಸಾಲಾಗಿ ಬರುವುದರಿಂದ ಅದಕ್ಕಿಂತ ಮುಂಚಿತವಾಗಿ ಕೆಲವು ಸರಳ ಸಲಹೆಗಳನ್ನು ಡಾ. ಅಪರ್ಣಾ ಗೋವಿಲ್ ಭಾಸ್ಕರ್ ಅವರು ಹಂಚಿಕೊಂಡಿದ್ದು ಇದನ್ನು ಕಟ್ಟುನಿಟಾಗಿ ಅನುಸರಿಸಿದರೆ ಆರೋಗ್ಯದ ಜೊತೆಗೆ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.

ನಿಮ್ಮ ಆರೋಗ್ಯಕರ ದಿನಚರಿಗೆ ಹಿಂತಿರುಗಿ: ಹಬ್ಬಗಳ ನಂತರ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ಸಮತೋಲಿತ, ಮತ್ತು ಆರೋಗ್ಯಕರ ಆಹಾರ ಸೇವನೆ ಮಾಡುವುದಕ್ಕೆ ಮರಳುವುದು. ನಿಮ್ಮ ಊಟ ಅಥವಾ ತಿಂಡಿ ಮಾಡುವ ತಟ್ಟೆಯಲ್ಲಿ ಪೌಷ್ಟಿಕ ಆಹಾರಗಳು ತುಂಬಿರಬೇಕು. ತಾಜಾ ವರ್ಣರಂಜಿತ ತರಕಾರಿಗಳು, ಧಾನ್ಯಗಳು, ತೆಳ್ಳಗಿನ ಪ್ರೋಟೀನ್ಗಳು ಮತ್ತು ಹಣ್ಣುಗಳನ್ನು ಸೇವನೆ ಮಾಡಬೇಕು. ಎಣ್ಣೆಯಲ್ಲಿ ಕರಿದ ಆಹಾರಗಳು ಅಥವಾ ಹೆಚ್ಚು ಸಕ್ಕರೆ, ಉಪ್ಪು ಅಥವಾ ಕೊಬ್ಬುಗಳಿಂದ ತುಂಬಿದ ಯಾವ ಆಹಾರಗಳನ್ನೇ ಆಗಲಿ ತಪ್ಪಿಸುವುದು ತುಂಬಾ ಉತ್ತಮ. ಈ ರೀತಿ ನಿಮ್ಮ ದಿನಚರಿ ರೂಢಿಸಿಕೊಂಡರೆ ಶೀಘ್ರದಲ್ಲೇ ನೀವು ವ್ಯತ್ಯಾಸವನ್ನು ಗಮನಿಸಬಹುದು.

ಹೈಡ್ರೇಟ್ ಆಗಿರಿ: ನಾವು ನಮ್ಮ ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ಕುಡಿಯಲು ಮರೆಯುತ್ತೇವೆ. ಸಿಹಿ ಅಥವಾ ಉಪ್ಪಿನ್ನು ಹೆಚ್ಚಾಗಿ ಸೇರಿಸಿದ ಔತಣಗಳನ್ನು ಸೇವನೆ ಮಾಡಿದ ಮೇಲೆ ಅವುಗಳಿಂದ ಉಂಟಾದ ವಿಷವನ್ನು ಹೊರಹಾಕಲು ಮತ್ತು ನಿಮ್ಮ ದೇಹದ ವ್ಯವಸ್ಥೆಯನ್ನು ಸಮತೋಲನಗೊಳಿಸಲು ನಿಮ್ಮ ದೇಹಕ್ಕೆ ಸರಿಯಾದ ಜಲಸಂಚಯನದ ಅಗತ್ಯವಿದೆ. ದಿನಕ್ಕೆ ಕನಿಷ್ಠ 8 ಲೋಟ ನೀರು ಅಥವಾ ಮೂರರಿಂದ ನಾಲ್ಕು ಲೀ. ಕುಡಿಯುವ ಗುರಿ ಇರಲಿ. ನಿಮಗೆ ನೀರು ಹೆಚ್ಚು ಹೆಚ್ಚು ಕುಡಿಯಲು ಬೇಸರವಾದಾಗ, ಎಳನೀರು, ಗ್ರೀನ್ ಟೀ ಅಥವಾ ಬೆಚ್ಚಗಿನ ಕಪ್ ಕ್ಯಾಮೊಮೈಲ್ ಚಹಾವನ್ನು ಸಹ ಪ್ರಯತ್ನಿಸಬಹುದು. ಹೈಡ್ರೇಟ್ ಆಗಿರುವುದು ಅತಿಯಾಗಿ ತಿನ್ನಬೇಕು ಎಂಬ ಕಡುಬಯಕೆಗಳನ್ನು ಸಹ ಕಡಿಮೆ ಮಾಡುತ್ತದೆ.

ಚಲಿಸುತ್ತಿರಿ: ಹಬ್ಬಗಳ ಸಮಯದಲ್ಲಿ ಕುಟುಂಬ, ಸ್ನೇಹಿತರ ಭೇಟಿ, ತಡರಾತ್ರಿಯ ನಿದ್ದೆ, ವಿಶ್ರಾಂತಿ ಇಲ್ಲದ ರಾತ್ರಿಗಳು, ಮಿತಿ ಇಲ್ಲದ ಸಿಹಿತಿಂಡಿಗಳ ಸೇವನೆ ಇದೆಲ್ಲದರಿಂದ ಹೊರಬಂದು, ನಿಮ್ಮ ದೈಹಿಕ ಚಟುವಟಿಕೆಯ ದಿನಚರಿಗೆ ಮರಳುವ ಸಮಯ ಇದಾಗಿದೆ. ಈ ರೀತಿ ಹೇಳಿದ ಮಾತ್ರಕ್ಕೆ ನೀವು ತಕ್ಷಣ ಜಿಮ್ ಗೆ ಹೋಗಬೇಕು ಎಂಬುದಲ್ಲ. ಬದಲಾಗಿ ಊಟದ ನಂತರ ಚುರುಕಾದ ನಡಿಗೆ ಅಥವಾ ಬೆಳಿಗ್ಗೆ ಸಣ್ಣ ಯೋಗ ಹೀಗೆ ಮೊದಲು ನಿಮಗೆ ಸರಳ ಎನಿಸಿದ ಚಟುವಟಿಕೆಗಳಿಂದ ಪ್ರಾರಂಭಿಸಿ. ನಿಮ್ಮ ನೆಚ್ಚಿನ ಸಂಗೀತಕ್ಕೆ ನೃತ್ಯ ಮಾಡಿ, ಲಿಫ್ಟ್ ಬದಲಿಗೆ ಮೆಟ್ಟಿಲುಗಳನ್ನು ಆಯ್ಕೆ ಮಾಡಿಕೊಳ್ಳಿ. ಇದು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಆ ಹೆಚ್ಚುವರಿ ಕ್ಯಾಲೊರಿಗಳನ್ನು ಕರಗಿಸಲು ಸಹಾಯ ಮಾಡುತ್ತದೆ.

ನಿಯಂತ್ರಣ ಮುಖ್ಯ: ದೀಪಾವಳಿಯ ನಂತರ ತೂಕ ಹೆಚ್ಚಳವಾಗುವುದಕ್ಕೆ ಅತಿಯಾಗಿ ತಿಂದಿರುವುದೇ ಕಾರಣ. ವಿವಿಧ ಬಗೆಯ ಆಹಾರಗಳು ಮುಂದಿರುವಾಗ ಅದರಿಂದ ದೂರ ಓಡುವುದು ಸುಲಭವಲ್ಲ, ಆದರೆ ಸೇವನೆ ಮಾಡುವಾಗ ಜಾಗರೂಕರಾಗಿರಲು ಪ್ರಯತ್ನಿಸಿ. ಸಿಹಿ ತಿಂಡಿಗಳನ್ನು ಅನೇಕ ಬಾರಿ ಸೇವಿಸುವ ಬದಲು, ದಿನವಿಡೀ ಸಮತೋಲಿತ ಆಹಾರ ಸೇವನೆ ಮಾಡುವ ಗುರಿ ಇಟ್ಟುಕೊಳ್ಳಿ. ಅಂದರೆ ಆಹಾರ ಸೇವನೆ ಮಿತವಾಗಿರಲಿ. ಇದು ನಿಮಗೆ ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಸಹಾಯ ಮಾಡುವುದಲ್ಲದೆ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಇದನ್ನೂ ಓದಿ: ವಿಶ್ವ ಮಧುಮೇಹ ದಿನ ಆಚರಿಸುವ ಉದ್ದೇಶವೇನು? ಇಲ್ಲಿದೆ ಮಾಹಿತಿ

ಸಾಕಷ್ಟು ನಿದ್ರೆ ಮಾಡಿ: ದೀಪಾವಳಿ ಎಂದರೆ ಸಾಮಾನ್ಯವಾಗಿ ಕುಟುಂಬ, ಸ್ನೇಹಿತರ ಭೇಟಿ, ಸಿಹಿ ತಿಂಡಿಗಳ ತಯಾರಿ ಹೀಗೆ ನಾನಾ ರೀತಿಯ ಕೆಲಸಗಳು ನಿದ್ರೆಗೆ ಭಂಗ ತರುತ್ತದೆ. ನಿದ್ರೆಯ ಕೊರತೆಯು ನಿಮ್ಮ ಚಯಾಪಚಯ ಕ್ರಿಯೆಯನ್ನು ಅಡ್ಡಿಪಡಿಸುತ್ತದೆ ಜೊತೆಗೆ ಹೆಚ್ಚುವರಿ ತೂಕ ಇಳಿಕೆ ಮಾಡಲು ಕಷ್ಟವಾಗುತ್ತದೆ. ಅದಲ್ಲದೆ ಅತಿಯಾಗಿ ತಿನ್ನಲು ಕಾರಣವಾಗಬಹುದು. ಆದ್ದರಿಂದ, ಎಲ್ಲಾ ಹಬ್ಬಗಳ ನಂತರ, ನಿಯಮಿತ ನಿದ್ರೆಯ ವೇಳಾಪಟ್ಟಿಗೆ ಮರಳಲು ಪ್ರಯತ್ನಿಸಿ. ನಿಮ್ಮ ದೇಹವು ಚೇತರಿಸಿಕೊಳ್ಳಲು, ಹಸಿವಿನ ಹಾರ್ಮೋನುಗಳನ್ನು ನಿಯಂತ್ರಿಸಲು ಮತ್ತು ನಿಮ್ಮ ಶಕ್ತಿಯ ಮಟ್ಟವನ್ನು ಮರುಹೊಂದಿಸಿಕೊಳ್ಳಲು ರಾತ್ರಿ ಸಮಯದಲ್ಲಿ 7 ರಿಂದ 8 ಗಂಟೆಗಳ ನಿದ್ರೆ ಮಾಡುವ ಗುರಿ ಇಟ್ಟುಕೊಳ್ಳಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್