
ಮಳೆಗಾಲದಲ್ಲಿ (rainy season) ಜನರು ವಿವಿಧ ರೀತಿಯ ಕಾಲೋಚಿತ ಕಾಯಿಲೆಗಳಿಂದ ಬಳಲುತ್ತಾರೆ. ಆದರೆ ಈ ರೀತಿ ಬರುವ ಆರೋಗ್ಯ (Health) ಸಮಸ್ಯೆಗಳನ್ನು ತಡೆಯಲು ನಾವು ಮೊದಲೇ ಸಿದ್ಧರಿರಬೇಕಾಗುತ್ತದೆ. ಆದರೆ ಇಂತಹ ಸಮಯದಲ್ಲಿ ಮಾತ್ರೆಗಳ ಮೊರೆ ಹೋಗುವ ಬದಲು ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿಕೊಳ್ಳುವ ಮೂಲಕ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬಹುದು. ಇಂತಹ ಆಹಾರಗಳ ಪಟ್ಟಿಯಲ್ಲಿ ಬೆಳ್ಳುಳ್ಳಿ ಅಗ್ರಸ್ಥಾನದಲ್ಲಿದ್ದು ಈ ಋತುಮಾನದಲ್ಲಿ ಇದನ್ನು ತಪ್ಪದೆ ಸೇವನೆ ಮಾಡುವುದು ನಮ್ಮ ದೇಹಕ್ಕೆ ಬಹಳ ಒಳ್ಳೆಯದು. ಇದರಲ್ಲಿರುವ ಔಷಧೀಯ ಗುಣಗಳು ಅನೇಕ ರೀತಿಯ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ, ಪ್ರತಿದಿನ ರಾತ್ರಿ ಕೇವಲ ಎರಡು ಎಸಳು ಬೆಳ್ಳುಳ್ಳಿ (Garlic) ಸೇವಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಜೊತೆಗೆ ಕಾಯಿಲೆಗಳು ಹತ್ತಿರವೂ ಸುಳಿಯುವುದಿಲ್ಲ. ಹಾಗಾದರೆ ಇದನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವ ರೀತಿಯ ಲಾಭಗಳಿವೆ ಎಂಬುದನ್ನು ತಿಳಿದುಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ