Garlic health benefits: ಬೆಳ್ಳುಳ್ಳಿ – ಭೂಮಿಗೆ ಬಿದ್ದ ಅಮೃತದ ಹನಿಗಳು!

| Updated By: ಸಾಧು ಶ್ರೀನಾಥ್​

Updated on: Aug 09, 2022 | 8:41 PM

Garlic cloves: ದಿನಕ್ಕೆ ಮೂರರಿಂದ ಐದು ಪಕಳೆಗಳನ್ನು ಹಸಿಯಾಗಿ ತಿನ್ನಬಹುದು. ಜೇನು ಬೆರೆಸಿ ತಿನ್ನಬಹುದು ಮಾರುಕಟ್ಟೆಯಲ್ಲಿ ಜೇನು ಬೆರೆಸಿದ ಬೆಳ್ಳುಳ್ಳಿ, ಬೆಳ್ಳುಳ್ಳಿ ಮಾತ್ರೆ, ಲಶುನ್ ಪಾಕ ಇತ್ಯಾದಿ ರೂಪದಲ್ಲಿ ಸಿಗುತ್ತದೆ. ಇನ್ನೂ ಹಲವಾರು ಕಾಯಿಲೆಗಳಿಗೆ ಮನೆಮದ್ದಾಗಿ ಹಾಗೂ ಆಹಾರದ ಭಾಗವಾಗಿ ಬಳಸುವ ಈ ಬೆಳ್ಳುಳ್ಳಿ ಆರೋಗ್ಯಕ್ಕೆ ಅಮೃತ ಸಮಾನ.

Garlic health benefits: ಬೆಳ್ಳುಳ್ಳಿ - ಭೂಮಿಗೆ ಬಿದ್ದ ಅಮೃತದ ಹನಿಗಳು!
ಬೆಳ್ಳುಳ್ಳಿ - ಭೂಮಿಗೆ ಬಿದ್ದ ಅಮೃತದ ಹನಿಗಳು
Follow us on

ಪ್ರಾಚೀನ ಕಾಲದಿಂದಲೂ ಬೆಳ್ಳುಳ್ಳಿಯನ್ನು ಆಹಾರವಾಗಿ, ಔಷಧವಾಗಿ ಬಳಸಲಾಗುತ್ತಿದೆ. ರುಚಿಯಲ್ಲಿ ತೀಕ್ಷ್ಣ ಖಾರ ಹೊಂದಿರುವ ಇದರಲ್ಲಿ ರಂಜಕ, ಸುಣ್ಣದಂಶ, ಸಿ ಜೀವಸತ್ವ ಸಾಕಷ್ಟಿದೆ. ಬೆಳ್ಳುಳ್ಳಿ ಸೇವನೆಯ ಪ್ರಯೋಜನಗಳು ಅನೇಕ. ಆಂಗ್ಲ ಭಾಷೆಯಲ್ಲಿ Garlic ಎಂದೂ ಹಿಂದಿ ಹಾಗೂ ಉರ್ದು ಭಾಷೆಯಲ್ಲಿ लहसुन ಲಹಸುನ್, ಲಶುನ್ ಎಂದು ಕರೆಯುತ್ತಾರೆ. ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನುವುರಿಂದ ಹೆಚ್ಚು ಲಾಭದಾಯಕ. ಕೆಂಡದಲ್ಲಿ ಸುಟ್ಟು, ಹುರಿದು ತಿನ್ನಬಹುದು. ಬೆಲ್ಲದೊಂದಿಗೆ ಹಸಿಯಾಗಿ ತಿನ್ನುವುದರಿಂದ ಕೆಮ್ಮು ಕಡಿಮೆಯಾಗುತ್ತದೆ. ಹಾಲಿನಲ್ಲಿ ಕುದಿಸಿ ರಾತ್ರಿ ಮಲಗುವಾಗ ಕುಡಿದರೆ ಉತ್ತಮ ಪರಿಣಾಮ ಬೀರುತ್ತದೆ.

ದಿನಕ್ಕೆ ಮೂರರಿಂದ ಐದು ಪಕಳೆಗಳನ್ನು (Garlic cloves) ಹಸಿಯಾಗಿ ತಿನ್ನಬಹುದು. ಜೇನು ಬೆರೆಸಿ ತಿನ್ನಬಹುದು ಮಾರುಕಟ್ಟೆಯಲ್ಲಿ ಜೇನು ಬೆರೆಸಿದ ಬೆಳ್ಳುಳ್ಳಿ, ಬೆಳ್ಳುಳ್ಳಿ ಮಾತ್ರೆ, ಲಶುನ್ ಪಾಕ ಇತ್ಯಾದಿ ರೂಪದಲ್ಲಿ ಸಿಗುತ್ತದೆ. ಇನ್ನೂ ಹಲವಾರು ಕಾಯಿಲೆಗಳಿಗೆ ಮನೆಮದ್ದಾಗಿ ಹಾಗೂ ಆಹಾರದ ಭಾಗವಾಗಿ ಬಳಸುವ ಈ ಬೆಳ್ಳುಳ್ಳಿ ಆರೋಗ್ಯಕ್ಕೆ ಅಮೃತ (elixir) ಸಮಾನ (health benefits of Garlic).

ಅಡುಗೆಗೆ ವಿಶೇಷ ರುಚಿ ಕೊಡುವ ಬೆಳ್ಳುಳ್ಳಿ ಯಲ್ಲಿ ಅಪಾರ ಔಷಧೀಯ ಗುಣಗಳು ಇವೆ.

* ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಹೃದಯಾಘಾತದಿಂದ ರಕ್ಷಿಸುತ್ತದೆ.

* ಕೆಮ್ಮು ಅಸ್ತಮಾ ನಿವಾರಕವಾಗಿ ಕೆಲಸ ಮಾಡುತ್ತದೆ.

* ಗಂಟಲು ನೋವು , ಟಾನ್ಸಿಲ್ಸ್​ ಇರುವವರು ಐದು ಗ್ರಾಂ ನಷ್ಟು ಬೆಳ್ಳುಳ್ಳಿ ರಸವನ್ನು ನೀರಿನಲ್ಲಿ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಬಹುದು.

* ಅರ್ಧಾಂಗ ವಾತ, ವಾತ ರೋಗಗಳನ್ನು ಶಮನಗೊಳಿಸುತ್ತದೆ.

* ಮಕ್ಕಳ ಕೆಮ್ಮಿಗೆ… ಎಂಟ್ಹತ್ತು ಬೆಳ್ಳುಳ್ಳಿ ಪಕಳೆಗಳನ್ನು ಸುಲಿದು ದಾರದಲ್ಲಿ ಪೋಣಿಸಿ ಕೊರಳಲ್ಲಿ ಕಟ್ಟುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

* ಸಣ್ಣ ಕೂಸುಗಳ ನೆಗಡಿ, ಕೆಮ್ಮಿಗೆ… ಅರಳೆಯಲ್ಲಿ ಮೂರ್ನಾಲ್ಕು ಬೆಳ್ಳುಳ್ಳಿ ಪಕಳೆ ಜಜ್ಜಿ ಸ್ವಲ್ಪ ಅರಿಶಿನ ಪುಡಿಯೊಂದಿಗೆ ನೆತ್ತಿಯ ಮೇಲೆ ಇಟ್ಟು, ಕುಲಾವಿ ಕಟ್ಟಿದರೆ ಆರಾಮವಾಗುತ್ತದೆ.

* ಕುರು, ಹುಳಕಡ್ಡಿ, ಚರ್ಮರೋಗಗಳಲ್ಲಿ ಬೆಳ್ಳುಳ್ಳಿ ರಸವನ್ನು ಲೇಪನ ಮಾಡಬಹುದು.

* ಚೇಳು ಕಚ್ಚಿದಾಗ ಬೆಳ್ಳುಳ್ಳಿ ಅರೆದು ಕಡಿದ ಜಾಗದಲ್ಲಿ ಹಚ್ಚಬೇಕು.

* ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆಯಲ್ಲಿ ಬೆಳ್ಳುಳ್ಳಿ ಯನ್ನು ಜಜ್ಜಿ ಹಾಕಿ ಚೆನ್ನಾಗಿ ಕುದಿಸಿ , ಸ್ವಲ್ಪ ಆರಿದ ನಂತರ ಕರ್ಪೂರ ಸೇರಿಸಿದರೆ ಉತ್ತಮ ನೋವುನಿವಾರಕ ತೈಲ ತಯಾರಾಗುತ್ತದೆ. ಮಂಡಿ ನೋವಿಗೆ ವಾತ ನೋವಿಗೆ ಬಳಸಬಹುದು.

*ಸೇವಿಸಿದ ಒಂದು ಗಂಟೆಯಲ್ಲಿ ಜೀರ್ಣವಾಗಿ ಪರಿಣಾಮ ಬೀರುವ ಬೆಳ್ಳುಳ್ಳಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.(ಮಾಹಿತಿ ಲೇಖನ: ಎಸ್​ ಹೆಚ್​ ನದಾಫ್)