ಬೆಳ್ಳುಳ್ಳಿ ಸಿಪ್ಪೆ ಎಸೆಯಬೇಡಿ, ಇದನ್ನು ಈ ರೀತಿ ಬಳಸಿದರೆ ನಿಮ್ಮ ಆರೋಗ್ಯ ಕಾಪಾಡುತ್ತೆ

ಬೆಳ್ಳುಳ್ಳಿ ಸಿಪ್ಪೆಯ ಪ್ರಯೋಜನ: ಬೆಳ್ಳುಳ್ಳಿಯನ್ನು ವಿವಿಧ ರೀತಿಯ ಆಹಾರಗಳಲ್ಲಿ ಬಳಕೆ ಮಾಡಲಾಗುತ್ತದೆ. ಆದರೆ ಅದರ ಹೊರಗಿನ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಈ ರೀತಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಮಾಡುತ್ತಾರೆ. ಯಾರೂ ಬೆಳ್ಳುಳ್ಳಿ ಸಿಪ್ಪೆಯನ್ನು ಬಳಕೆ ಮಾಡುವುದಿಲ್ಲ. ಆದರೆ ಇದರಿಂದ ಅನೇಕ ರೀತಿಯ ಲಾಭಗಳಿವೆ. ಆರೋಗ್ಯಕ್ಕೂ ಕೂಡ ಬಹಳ ಪ್ರಯೋಜನಕಾರಿಯಾಗಿದೆ. ಹಾಗಾದರೆ ಹೇಗೆ ಉಪಯೋಗ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಳ್ಳುಳ್ಳಿ ಸಿಪ್ಪೆ ಎಸೆಯಬೇಡಿ, ಇದನ್ನು ಈ ರೀತಿ ಬಳಸಿದರೆ ನಿಮ್ಮ ಆರೋಗ್ಯ ಕಾಪಾಡುತ್ತೆ
ಬೆಳ್ಳುಳ್ಳಿ ಸಿಪ್ಪೆ
Image Credit source: Getty Images

Updated on: Apr 29, 2025 | 3:21 PM

ಬೆಳ್ಳುಳ್ಳಿ (garlic) ಸೇವನೆ ಆರೋಗ್ಯಕ್ಕೆ (health) ಒಳ್ಳೆಯದು ಎಂಬುದು ತಿಳಿದ ವಿಚಾರ. ಆದರೆ ಅದರ ಸಿಪ್ಪೆಯಲ್ಲಿಯೂ ಔಷಧೀಯ ಗುಣಗಳಿವೆ ಎಂದರೆ ನಂಬುತ್ತೀರಾ? ಹೌದು. ದಿನನಿತ್ಯ ಬೆಳ್ಳುಳ್ಳಿಯನ್ನು ಉಪಯೋಗ ಮಾಡಿ ಅದರ ಹೊರಗಿನ ಭಾಗವನ್ನು ಎಸೆಯುವವರೇ ಹೆಚ್ಚು. ಏಕೆಂದರೆ ನಮಗೆ ಅದರ ಉಪಯೋಗದ ಬಗ್ಗೆ ತಿಳಿದಿಲ್ಲ. ಆದರೆ ಇನ್ನು ಮುಂದೆ ಇಂತಹ ತಪ್ಪನ್ನು ಮಾಡಬೇಡಿ. ಇದರ ಬಳಕೆಯಿಂದ ಎಷ್ಟೆಲ್ಲಾ ಆರೋಗ್ಯಕರ ಲಾಭಗಳಿವೆ ಎಂಬುದನ್ನು ತಿಳಿದರೆ ಇನ್ನು ಮುಂದೆ ಬೆಳ್ಳುಳ್ಳಿ ಸಿಪ್ಪೆ (garlic peels) ಯನ್ನು ಎಸೆಯುವುದಿಲ್ಲ. ಹಾಗಾದರೆ ಈ ಬೆಳ್ಳುಳ್ಳಿ ಸಿಪ್ಪೆಯನ್ನು ಯಾವ ರೀತಿ ಬಳಕೆ ಮಾಡಬೇಕು? ಇದರಿಂದ ಸಿಗುವ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳಿ.

ಬೆಳ್ಳುಳ್ಳಿ ಸಿಪ್ಪೆಯಿಂದ ಸಿಗುವ ಪ್ರಯೋಜನಗಳು?

  • ಮನೆಯಲ್ಲಿ ಸೊಳ್ಳೆ ಕಾಟ ತುಂಬಾ ಜಾಸ್ತಿಯಾಗಿದ್ದರೆ ಚಿಂತೆ ಬೇಡ. ಬೆಳ್ಳುಳ್ಳಿ ಸಿಪ್ಪೆಯನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿಕೊಳ್ಳಿ, ಅದು ತಣಿದ ಬಳಿಕ ಅದನ್ನು ಒಂದು ಬಾಟಲಿಗೆ ಹಾಕಿಟ್ಟುಕೊಳ್ಳಿ. ಸಂಜೆ ಸಮಯದಲ್ಲಿ ಇದನ್ನು ಮನೆಯ ಸುತ್ತಮುತ್ತ ಚೆನ್ನಾಗಿ ಸಿಂಪಡಿಸಿ. ಈ ರೀತಿ ಮಾಡುವುದರಿಂದ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಬಹುದು. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಕೂಡ ಇರುವುದಿಲ್ಲ. ಜೊತೆಗೆ ನಿಮ್ಮ ಆರೋಗ್ಯವೂ ಹಾಳಾಗುವುದಿಲ್ಲ.
  • ಮುಖದ ತುಂಬಾ ಮೊಡವೆಗಳಾಗುತ್ತಿದ್ದು ಯಾವುದೇ ರೀತಿಯ ಮನೆ ಮದ್ದು ಮಾಡಿದರೂ ಕಡಿಮೆ ಆಗದಿದ್ದರೆ ಬೆಳ್ಳುಳ್ಳಿ ಸಿಪ್ಪೆಯನ್ನು ನೆನಸಿ ಬಳಿಕ ಅದನ್ನು ಕುದಿಸಿ, ಆ ನೀರಿನಿಂದ ಚೆನ್ನಾಗಿ ಮುಖಕ್ಕೆ ಮಸಾಜ್ ಮಾಡಿಕೊಂಡು ಸ್ವಲ್ಪ ಸಮಯದ ನಂತರ ಅದೇ ನೀರಿನಿಂದ ಮುಖ ತೊಳೆಯಿರಿ. ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ಚೆನ್ನಾಗಿ ತೊಳೆಯಿರಿ. ಈ ರೀತಿ ಮಾಡುವುದರಿಂದ ಮೊಡವೆ ಸಮಸ್ಯೆ ಹತ್ತಿರವೂ ಬರುವುದಿಲ್ಲ.
  • ತಲೆ ಹೊಟ್ಟು ಅಥವಾ ಕೂದಲು ಉದುರುತ್ತಿದ್ದರೆ ಬೆಳ್ಳುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರನ್ನು ತಣಿಯಲು ಬಿಡಿ. ಬಳಿಕ ಆ ನೀರಿನಿಂದ ತಲೆಗೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಈ ರೀತಿ ವಾರದಲ್ಲಿ ಒಂದು ಮೂರು ಬಾರಿಯಾದರೂ ಮಾಡಿ. ಈ ರೀತಿ ಮಾಡುವುದರಿಂದ ಕೂದಲು ಯಾವುದೇ ರೀತಿಯ ಸಮಸ್ಯೆಯಿಲ್ಲದೆ ಸೊಂಪಾಗಿ ಬೆಳೆಯುತ್ತದೆ.
  • ಇನ್ನು ನೀವು ಬೆಳ್ಳುಳ್ಳಿ ಸಿಪ್ಪೆಯನ್ನು ಕಾಂಪೋಸ್ಟ್ ಆಗಿಯೂ ಬಳಸಬಹುದು. ಇದನ್ನು ಗಿಡಗಳಿಗೆ ಹಾಕುವುದರಿಂದ ಗಿಡ ಚೆನ್ನಾಗಿ ಬೆಳೆಯುತ್ತದೆ ಜೊತೆಗೆ ಯಾವುದೇ ರೀತಿಯ ಕೀಟಗಳಿಂದಲೂ ಗಿಡಗಳಿಗೆ ಹಾನಿಯಾಗದಂತೆ ಇದು ತಡೆಯುತ್ತದೆ.

ಪ್ರತಿನಿತ್ಯ ಬೆಳ್ಳುಳ್ಳಿ ಸೇವನೆ ಮಾಡುವುದರ ಜೊತೆಗೆ ಅದರ ತೊಗಟೆ ಅಥವಾ ಸಿಪ್ಪೆಯನ್ನು ಎಸೆಯದೆಯೇ ಅದನ್ನು ಈ ರೀತಿ ಬಳಸಿಕೊಳ್ಳಬಹುದು. ಇದು ಒಂದು ರೀತಿಯ ಸರಳವಾದ ಮನೆಮದ್ದಾಗಿದ್ದು ಇದನ್ನು ಉಪಯೋಗಿಸುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇರುವುದಿಲ್ಲ. ಅದಲ್ಲದೆ ಇದನ್ನು ಯಾರು ಬೇಕಾದರೂ ಕೂಡ ಬಳಸಬಹುದಾಗಿದೆ. ಹಾಗಾಗಿ ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಇದನ್ನೂ ಓದಿ
ಚೀನಾದಲ್ಲಿ ರಿಮೋಟ್ ಕಂಟ್ರೋಲ್ ಹಾಸಿಗೆ! ವಿಶೇಷತೆ ತಿಳಿದರೆ ಆಶ್ಚರ್ಯ ಆಗುತ್ತೆ
ಅತಿಯಾಗಿ ತಿಂದರೆ ಲಿವರ್ ಹಾಳಾಗುತ್ತಾ?
ಹೆಂಡತಿ ಗರ್ಭಿಣಿ ಇರುವಾಗ ಗಂಡ ಈ ವಿಷಯವನ್ನು ತಿಳಿದಿರಬೇಕು
ಬೇರೊಬ್ಬರು ಬಳಸಿದ ಲೋಟದಲ್ಲಿ ನೀರು ಕುಡಿಯುವ ಮುನ್ನ ಎಚ್ಚರ!

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ