ನೀವು ಎಂದಾದರೂ ಹಸಿರು ಬಾದಾಮಿಯನ್ನು ಸೇವಿಸಿದ್ದೀರಾ? ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ

ಹಸಿರು ಬಾದಾಮಿ: ಹಸಿರು ಬಾದಾಮಿ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುತ್ತದೆ. ದೇಹದಲ್ಲಿರುವ ಕೆಟ್ಟ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಜತೆಗೆ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ನೀವು ಎಂದಾದರೂ ಹಸಿರು ಬಾದಾಮಿಯನ್ನು ಸೇವಿಸಿದ್ದೀರಾ? ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ
ಸಾಂದರ್ಭಿಕ ಚಿತ್ರ
Edited By: ಆಯೇಷಾ ಬಾನು

Updated on: Jul 29, 2021 | 8:07 AM

ಸಾಮಾನ್ಯವಾಗಿ ಹಣ್ಣುಗಳೆಂದರೆ ಎಲ್ಲರಿಗೂ ಇಷ್ಟ. ಅದರಲ್ಲಿಯೂ ಡ್ರೈಫ್ರೂಟ್ಸ್​ಗಳೆಂದರೆ ಕೊಂಚ ಜಾಸ್ತಿಯೇ ಇಷ್ಟವಾಗುತ್ತದೆ. ಬಾದಾಮಿ, ಗೋಡಂವಿ, ದ್ರಾಕ್ಷಿ ಸೇರಿದಂತೆ ಹಲವಾರು ವಿದಧ ಡ್ರೈಫ್ರೂಟ್ಸ್​ಗಳನ್ನು ಸೇವಿಸುತ್ತೇವೆ. ಆದರೆ ಎಂದಾದರೂ ಹಸಿರು ಬಾದಾಮಿಯನ್ನು ಸೇವಿಸಿದ್ದೀರಾ? ಇದರ ರುಚಿ ಸ್ವಲ್ಪ ಕಹಿ ಅನಿಸಿದರೂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಸಿರು ಬಾದಾಮಿ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜಗಳಿವೆ ಎಂಬುದನ್ನು ತಿಳಿದುಕೊಳ್ಳಿ.

ಹಸಿರು ಬಾದಾಮಿ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುತ್ತದೆ. ದೇಹದಲ್ಲಿರುವ ಕೆಟ್ಟ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಜತೆಗೆ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಹಸಿರು ಬಾದಾಮಿ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ. ಎಲ್-ಕಾರ್ನಿಟೈನ್ ಮತ್ತು ರಿಬೋಫ್ಲಾವಿನ್ ಎಂಬ ಎರಡು ಪ್ರಮುಖ ಪೋಷಕಾಂಶಗಳು ಹಸಿರು ಬಾದಾಮಿಯಲ್ಲಿ ಕಂಡು ಬರುತ್ತದೆ. ಇವು ಮೆದುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

ಹಸಿರು ಬಾದಾಮಿ ಸೇವನೆಯು ತೂಕ ನಷ್ಟಕ್ಕೆ ಸಹಾಯಕಾರಿಯಾಗಿದೆ. ಇದರಲ್ಲಿ ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ. ಇದರಿಂದ ದೇಹದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ. ಹಸಿರು ಬಾದಾಮಿ ಸೇವನೆಯಿಂದ ದೇಹದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗೂ ದೇಹದಲ್ಲಿ ಸದೃಢತೆಯನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ.

ಹಸಿರು ಬಾದಾಮಿಯಲ್ಲಿ ಫೈಬರ್ ಅಂಶ ಹೆಚ್ಚಾಗಿರುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಸಹಾಯಕವಾಗಿದೆ. ಜತೆಗೆ ಜೀರ್ಣಾಂಗ ಭಾಗವನ್ನು ಬಲಪಡಿಸುತ್ತದೆ ಜತೆಗೆ ಸಮಸ್ಯೆಗಳನ್ನು ತೊಡೆದುಹಾಕುತ್ತದೆ.

ಇದನ್ನೂ ಓದಿ:

Health Tips: ದಿನಕ್ಕೆ ಎರಡು ಬಾರಿ ಬಾದಾಮಿ ಸೇವಿಸುವುದರಿಂದಾಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ

ದ್ರಾಕ್ಷಿ ಹಣ್ಣಿನ ಬೀಜದ ಆರೋಗ್ಯ ಪ್ರಯೋಜನಗಳು; ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಒಳ್ಳೆಯ ಔಷಧ

Web contact

TV9 Kannada

Read More
Follow Us