ದ್ರಾಕ್ಷಿ ಹಣ್ಣಿನ ಬೀಜದ ಆರೋಗ್ಯ ಪ್ರಯೋಜನಗಳು; ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಒಳ್ಳೆಯ ಔಷಧ

ಇದರಲ್ಲಿರುವ ಉತ್ಕರ್ಷಣ ನಿರೋಧಕ ಗುಣಗಳು ಚರ್ಮವನ್ನು ಸುಂದರವಾಗಿಡಲು ಸಹಾಯ ಮಾಡುತ್ತದೆ. ಚರ್ಮದಲ್ಲಿನ ತುರಿಕೆ, ಮೊಡವೆ ಸೇರಿದಂತೆ ಅದೆಷ್ಟೋ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹಾಯಕವಾಗಿದೆ. ದಾಕ್ಷಿ ಬೀಜದ ಎಣ್ಣೆ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳಿ.

ದ್ರಾಕ್ಷಿ ಹಣ್ಣಿನ ಬೀಜದ ಆರೋಗ್ಯ ಪ್ರಯೋಜನಗಳು; ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಒಳ್ಳೆಯ ಔಷಧ
ದ್ರಾಕ್ಷಿ ಬೀಜ
Follow us
TV9 Web
| Updated By: ಆಯೇಷಾ ಬಾನು

Updated on: Jul 22, 2021 | 8:33 AM

ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಯುವತಿಯರು ಒಂದಲ್ಲಾ ಒಂದು ರೀತಿಯ ಔಷಧಗಳನ್ನು ಹುಡುಕುತ್ತಲೇ ಇರುತ್ತಾರೆ. ನಮ್ಮ ಸುತ್ತಮುತ್ತಲೇ ಸಿಗುವ ಅದೆಷ್ಟೋ ಹಣ್ಣುಗಳು ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಹಾಗೆಯೇ ನಾವೆಲ್ಲರೂ ಇಷ್ಟಪಡುವ ದ್ರಾಕ್ಷಿ ಹಣ್ಣಿನ(Grapes) ಬೀಜವೂ ಸಹ ಆರೋಗ್ಯಕ್ಕೆ(Health) ತುಂಬಾ ಪ್ರಯೋಜನಕಾರಿ. ದ್ರಾಕ್ಷಿ ಬೀಜದ(Grapeseed) ಎಣ್ಣೆಯಲ್ಲಿ ಒಮೆಗಾ ಕೊಬ್ಬಿನಾಮ್ಲಗಳು ಮತ್ತು ವಿಟಮಿನ್​ ಇ ಇರುತ್ತದೆ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.

ಇದರಲ್ಲಿರುವ ಉತ್ಕರ್ಷಣ ನಿರೋಧಕ ಗುಣಗಳು ಚರ್ಮವನ್ನು ಸುಂದರವಾಗಿಡಲು ಸಹಾಯ ಮಾಡುತ್ತದೆ. ಚರ್ಮದಲ್ಲಿನ ತುರಿಕೆ, ಮೊಡವೆ ಸೇರಿದಂತೆ ಅದೆಷ್ಟೋ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹಾಯಕವಾಗಿದೆ. ದಾಕ್ಷಿ ಬೀಜದ ಎಣ್ಣೆ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳಿ.

ಮೊಡವೆ ನಿವಾರಣೆ ದ್ರಾಕ್ಷಿ ಬೀಜದ ಎಣ್ಣೆಯಲ್ಲಿ ಲಿನೋಲಿಕ್​ ಆಮ್ಲವಿದೆ. ಒಮೆಗಾ-6 ಕೊಬ್ಬಿನಾಮ್ಲವಿದೆ. ಮುಖದಲ್ಲಿ ಸಣ್ಣ ಸಣ್ಣ ರಂಧ್ರಗಳು ಕಂಡು ಬರುವ ಸಮಸ್ಯೆಗೆ ನಿವಾರಣೆಯಾಗಿ ದ್ರಾಕ್ಷಿ ಹಣ್ಣಿನ ಬೀಜಗಳಿಂದ ತಯಾರಿಸಿದ ಎಣ್ಣೆಯನ್ನು ಬಳಸಬಹುದು.

ಹಾನಿಕಾರಕ ಕಿರಣಗಳಿಂದ ರಕ್ಷಣೆ ದ್ರಾಕ್ಷಿ ಬೀಜದಲ್ಲಿ ಕ್ಯಾರೊಟಿನ್​, ವಿಟಮಿನ್​ ಸಿ, ಡಿ, ಇ ಮತ್ತು ಪಾಲಿಫಿನಾಲ್​ ಅಂಶವಿರುತ್ತದೆ. ಈ ಎಲ್ಲಾ ಸಂಯುಕ್ತಗಳು ಉತ್ಕರ್ಷಣ ನಿರೋಧಕ ಸಾಮರ್ಥ್ಯಗಳನ್ನು ಹೊಂದಿವೆ. ಇದು ನಿಮ್ಮ ಚರ್ಮವನ್ನು ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ. ಸ್ವತಂತ್ರ ರಾಡಿಕಲ್ಸ್​ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ.

ಚರ್ಮವನ್ನು ತೇವಗೊಳಿಸುತ್ತದೆ ದ್ರಾಕ್ಷಿ ಬೀಜದ ಎಣ್ಣೆಯಲ್ಲಿ ವಿಟಮಿನ್​ ಇ ಸಮೃದ್ಧವಾಗಿರುತ್ತದೆ. ಇದರಲ್ಲಿರುವ ಜೀವಸತ್ವಗಳು ಚರ್ಮದ ಹೊರ ಪದರವನ್ನು ಮೃದುಗೊಳಿಸುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಹಾನಿಕಾರಕ ಧೂಳಿನಿಂದ ಚರ್ಮದ ಸುರಕ್ಷತೆ ಮಾಡಿಕೊಳ್ಳಬಹುದು.

ಸುಕ್ಕುಗಳನ್ನು ಕಡಿಮೆ ಮಾಡುತ್ತದೆ ದ್ರಾಕ್ಷಿ ಬೀಜದ ಎಣ್ಣೆಯಲ್ಲಿ ಪಾಲಿಫಿನಾಲ್​ಗಳಿವೆ. ವಯಸ್ಸಾದಂತೆ ಕಾಣಿಸುವ ಚರ್ಮ, ಸುಕ್ಕುಗಳನ್ನು ತಡೆಯಲು ಇದು ಸಹಾಯಕಾರಿಯಾಗಿದೆ. ಕೊಬ್ಬಿನಾಮ್ಲಗಳ ಜತೆಗೆ ಪಾಲಿಫಿನಾಲ್​ಗಳು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಬಾಡಿದ ಮುಖ, ಚರ್ಮದ ಸುಕ್ಕನ್ನು ತೆಗೆದು ಹಾಕಲು ಸಹಾಯಕವಾಗಿದೆ.

ಇದನ್ನೂ ಓದಿ:

ಇಬ್ಬರು ರೈತರ ನಡುವಿನ ಜಗಳದಲ್ಲಿ ದ್ರಾಕ್ಷಿ ಗಿಡ ನಾಶ; ಕಳೆನಾಶಕ ಸಿಂಪಡಿಸಿ ಬೆಳೆಗೆ ಹಾನಿ ಮಾಡಿರುವ ಆರೋಪ

ಲೇಟ್​ ಡೌನಿ ಕಾಯಿಲೆಗೆ ನಲುಗಿದ ರೈತರು; ಬೆಳೆದ ದ್ರಾಕ್ಷಿ ತೋಟವನ್ನು ಕಟಾವು ಮಾಡಿ, ತಿಪ್ಪೆಗೆ ಸುರಿದ ಚಿಕ್ಕಬಳ್ಳಾಪುರ ರೈತರು

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್