ತುಂಬಾ ತೆಳ್ಳಗಿದ್ದೀರಿ ಎಂಬ ಚಿಂತೆಯೇ? ಈ ಆಹಾರ ಪದಾರ್ಥಗಳಿಂದ ತೂಕ ಹೆಚ್ಚಿಸಿಕೊಳ್ಳಬಹುದು
ಕೆಲವು ಜನರು ನೋಡಲು ತೆಳ್ಳಗಾಗಿದ್ದರೂ ಹೆಚ್ಚಿನ ಶಕ್ತಿ ಹೊಂದಿರುತ್ತಾರೆ. ಎಲ್ಲವೂ ನಮ್ಮ ಆಹಾರ ಕ್ರಮದಲ್ಲಿಯೇ ಇದೆ. ಪೌಷ್ಟಿಕ ಆಹಾರ ನಮ್ಮದಾಗಿದ್ದರೆ ಹೆಚ್ಚಿನ ಶಕ್ತಿ ಸಿಗುತ್ತದೆ. ಈ ಮೂಲಕ ಆರೋಗ್ಯವಾಗಿಯೂ ಇರಬಹುದು ಜತೆಗೆ ಸದೃಢ ದೇಹವನ್ನೂ ಹೊಂದಬಹುದು.
ಕೆಲವರು ತುಂಬಾ ತೆಳ್ಳಗಾಗಿರುತ್ತಾರೆ. ಆಹಾರ ಕ್ರಮದಲ್ಲಿ ಎಷ್ಟು ಬದಲಾವಣೆಗಳನ್ನು ಮಾಡಿದರೂ ಕೂಡಾ ದಪ್ಪಗಾಗಲು ಸಾಧ್ಯವೇ ಆಗುತ್ತಿಲ್ಲ ಎಂಬುದು ಕೆಲವರ ಚಿಂತೆ. ಹೀಗಿರುವಾಗ ತೂಕ ಹೆಚ್ಚಿಸಿಕೊಳ್ಳುವ ಕೆಲವು ಆಹಾರಪದಾರ್ಥಗಳು ಇಲ್ಲಿವೆ. ಇವುಗಳು ನಿಮ್ಮ ಆಹಾರ ಕ್ರಮವಾಗಿದ್ದರೆ ನಿಮ್ಮ ದೇಹದ ತೂಕ ಹೆಚ್ಚಿಸಿಕೊಳ್ಳಲು ಸಹಾಯಕವಾಗುತ್ತದೆ. ಯಾವುದೇ ಆಹಾರವನ್ನೇ ಆಗಲಿ ಅತಿಯಾಗಿ ತಿಂದರೆ ದೇಹಕ್ಕೆ ಹಾನಿಯುಂಟು ಮಾಡುತ್ತದೆ. ಹಾಗಾಗಿ ನಿಯಮಿತ ಆಹಾರ ಸೇವಿಸುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಪೌಷ್ಟಿಕ ಆಹಾರ ನಿಮ್ಮನ್ನು ಸದೃಢರಾಗಿರುವಂತೆ ಮಡುತ್ತದೆ.
ಕೆಲವು ಜನರು ನೋಡಲು ತೆಳ್ಳಗಾಗಿದ್ದರೂ ಹೆಚ್ಚಿನ ಶಕ್ತಿ ಹೊಂದಿರುತ್ತಾರೆ. ಎಲ್ಲವೂ ನಮ್ಮ ಆಹಾರ ಕ್ರಮದಲ್ಲಿಯೇ ಇದೆ. ಪೌಷ್ಟಿಕ ಆಹಾರ ನಮ್ಮದಾಗಿದ್ದರೆ ಹೆಚ್ಚಿನ ಶಕ್ತಿ ಸಿಗುತ್ತದೆ. ಈ ಮೂಲಕ ಆರೋಗ್ಯವಾಗಿಯೂ ಇರಬಹುದು ಜತೆಗೆ ಸದೃಢ ದೇಹವನ್ನೂ ಹೊಂದಬಹುದು. ಹಾಗಿರುವಾಗ ಯಾವ ಪದಾರ್ಥಗಳನ್ನು ಸೇವಿಸಬೇಕು ಎಂಬುದರ ಕುರಿತಾಗಿ ತಿಳಿಯಿರಿ.
ಪ್ಯಾಕೇಜ್ ಮಾಡಿದ ಆಹಾರ ಸಂಸ್ಕರಿಸಿದ ಮತ್ತು ಪ್ಯಾಕೇಜ್ ಮಾಡಿದ ಆಹಾರಗಳಲ್ಲಿ ಉಪ್ಪು ಮತ್ತು ಸಕ್ಕರೆಯಂತಹ ಅಂಶ ನಿಯಂತ್ರಣದಲ್ಲಿರುತ್ತದೆ. ಇದರಿಂದ ತಿಂದ ಆಹಾರ ನಮ್ಮ ದೇಹಕ್ಕೆ ಒಗ್ಗುತ್ತದೆ. ಆದ್ದರಿಂದ ಇಂತಹ ಆಹಾರಗಳನ್ನು ಸೇವಿಸುವುದರಿಂದ ದೇಹದ ಸದೃಢತೆ ಕಾಪಾಡಿಕೊಳ್ಳುವುದರ ಜತೆಗೆ ತೂಕ ಹೆಚ್ಚಿಸಿಕೊಳ್ಳಬಹುದಾಗಿದೆ.
ಡಯಟ್ ಸೋಡಾ ಸಕ್ಕರೆ ಸೇವನೆಯಿಂದಾಗಿ ತೂಕ ಹೆಚ್ಚಳವಾಗಬಹುದು. ಇದನ್ನು ನಿಯಂತ್ರಣದಲ್ಲಿಡಲು ಡಯಟ್ ಸೋಡಾ ಸಹಕರಿಸುತ್ತದೆ. ಇದನ್ನು ಗ್ರೀನ್ ಟೀಯೊಂದಿಗೆ ಬೆರೆಸಿ ಕುಡಿಯುವುದರ ಮೂಲಕ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯಕವಾಗುತ್ತದೆ. ಜತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ಹಣ್ಣಿನ ರಸ ಅಥವಾ ಸಲಾಡ್ ಜ್ಯೂಸ್ ಮತ್ತು ಸಲಾಡ್ ಆರೊಗ್ಯಕ್ಕೆ ಒಳ್ಳೆಯದು. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಒಳ್ಳೆಯ ಆಹಾರ ಪದ್ಧತಿ ನಮ್ಮದಾಗಿರಬೇಕಾದರೆ ಪೌಷ್ಟಿಕಾಂಶಯುಕ್ತ ಹಣ್ಣುಗಳು ಮತ್ತು ತರಕಾರಿಗಳು ನಮ್ಮದಾಗಿರಬೇಕು. ಹಣ್ಣುಗಳ ರಸ ಸೇವಿಸುವುದರಿಂದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.
ಇದನ್ನೂ ಓದಿ:
Health Tips: ಬಾಳೆಹಣ್ಣು ಸೇವಿಸುವ ಅಭ್ಯಾಸ ಇದೆಯೇ? ಖಾಯಿಲೆಗಳಿಂದ ದೂರವಿರಲು ಹಣ್ಣುಗಳ ಸೇವನೆ ಉತ್ತಮ