AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gastric Problem: ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆಯುಂಟಾ? ಇವುಗಳನ್ನು ಸೇವಿಸಲೇಬೇಡಿ

ಪದೇ ಪದೇ ತೇಗು ಬರುತ್ತದೆ, ಕೆಳ ಹೊಟ್ಟೆ ನೋವಾಗುತ್ತದೆ. ಹೀಗಾಗಿ ಈ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರವಾಗಿಸಲು ಕೆಲವು ಆಹಾರವನ್ನು ಸೇವಿಸಬಾರದು. ಗ್ಯಾಸ್ಟ್ರಿಕ್​ನಿಂದ ಬಳಲುವವರು ಯಾವ ಯಾವ ಆಹಾರದಿಂದ ದೂರವಿರಬೇಕೆಂದು ಗಮನಿಸಿ.

Gastric Problem: ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆಯುಂಟಾ? ಇವುಗಳನ್ನು ಸೇವಿಸಲೇಬೇಡಿ
ಎದೆಯುರಿ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: ಆಯೇಷಾ ಬಾನು

Updated on: Jul 23, 2021 | 8:55 AM

ಕೆಟ್ಟ ಆಹಾರ ಪದ್ಧತಿಯಿಂದ ಅನೇಕ ಜನರು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಾರೆ. ಗ್ಯಾಸ್ಟ್ರಿಕ್ ಆದಾಗ ಹೊಟ್ಟೆ ಉಬ್ಬಿಕೊಳ್ಳುತ್ತದೆ. ಇದಕ್ಕೆ ಚೆನ್ನಾಗಿ ನೀರು ಕುಡಿಯಬೇಕು. ಹೆಚ್ಚು ನೀರು ಕುಡಿಯದೆ ಇದ್ದವರಿಗೆ ಈ ಗ್ಯಾಸ್ಟ್ರಿಕ್ ಸಮಸ್ಯೆ ಶುರುವಾಗುತ್ತದೆ. ಗ್ಯಾಸ್ಟ್ರಿಕ್ ಆದಾಗ ಹಸಿವಾಗಲ್ಲ. ಪದೇ ಪದೇ ತೇಗು ಬರುತ್ತದೆ, ಕೆಳ ಹೊಟ್ಟೆ ಮತ್ತು ಎದೆ ನೋವಾಗುತ್ತದೆ. ಹೀಗಾಗಿ ಈ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರವಾಗಿಸಲು ಕೆಲವು ಆಹಾರವನ್ನು ಸೇವಿಸಬಾರದು. ಗ್ಯಾಸ್ಟ್ರಿಕ್​ನಿಂದ ಬಳಲುವವರು ಯಾವ ಯಾವ ಆಹಾರದಿಂದ ದೂರವಿರಬೇಕೆಂದು ಗಮನಿಸಿ.

1. ಕೊಬ್ಬಿನ ಆಹಾರ ಕೊಬ್ಬಿನ ಆಹಾರವನ್ನು ಸೇವಿಸುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ. ಎಣ್ಣೆಯಲ್ಲಿ ಕರಿದ ಅಥವಾ ಹುರಿದ ಆಹಾರವನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗುತ್ತದೆ. ಹೆಚ್ಚು ಕೊಬ್ಬಿನ ಆಹಾರವನ್ನು ತಿನ್ನುವುದರಿಂದ ಹೊಟ್ಟೆ ನೋವು ಮತ್ತು ಅಜೀರ್ಣವಾಗುತ್ತದೆ. ಅಲ್ಲದೇ ಎದೆಯುರಿ ಶುರುವಾಗುತ್ತದೆ. ಹೀಗಾಗಿ ಕೊಬ್ಬಿನ ಆಹಾರ ತಿನ್ನುವುದು ಕಡಿಮೆ ಮಾಡಬೇಕು.

2. ಬೀನ್ಸ್ ಬೀನ್ಸ್ ಒಂದು ಬಗೆಯ ತರಕಾರಿ. ಇದರ ಪಲ್ಯ ಮತ್ತು ಸಾಂಬಾರ್ ತುಂಬಾ ರುಚಿ. ಆರೋಗ್ಯಕ್ಕೂ ಇದು ಒಳ್ಳೆಯದು. ಆದರೆ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗುತ್ತದೆ. ಬೀನ್ಸ್​ನಲ್ಲಿ ಸಕ್ಕರೆ ಮತ್ತು ಆಲಿಗೋಸ್ಯಾಕರೈಡ್ ಹೆಚ್ಚಿರುತ್ತದೆ. ಇವು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ ಬೀನ್ಸ್ ತಿನ್ನುವುದನ್ನು ಬಿಡಬೇಕು.

3. ಉಪ್ಪು ಹೆಚ್ಚಾಗಿರುವ ಆಹಾರವನ್ನು ಸೇವಿಸಬೇಡಿ ಗ್ಯಾಸ್ಟ್ರಿಕ್ ಇದ್ದವರು ಉಪ್ಪು ಅಧಿಕವಿರುವ ಆಹಾರವನ್ನು ಸೇವಿಸಬಾರದು. ಉಪ್ಪು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಕೆಲವರು ಬೆಳಿಗ್ಗೆ ತಿಂಡಿಯ ಜೊತೆ ಜಂಕ್​ ಫುಡ್ ತಿನ್ನುತ್ತಾರೆ. ಇದರ ಬದಲಿಗೆ ಹಣ್ಣನ್ನು ಸೇವಿಸಿದರೆ ಒಳ್ಳೆಯದು. ಹಣ್ಣು ಸುಲಭವಾಗಿ ಜೀರ್ಣವಾಗುವ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರವಾಗಿಸುತ್ತದೆ.

4. ಕಾರ್ಬೊನೇಟೆಡ್ ಪಾನೀಯ ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತವಾಗಬಹುದೆಂದು ಹಲವರು ಭಾವಿಸುತ್ತಾರೆ. ಆದರೆ ಅದು ತಪ್ಪು. ಕಾರ್ಬೊನೇಟೆಡ್ ಪಾನೀಯಗಳು ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಡೈಆಕ್ಸೈಡ್ ಹೊಂದಿರುತ್ತವೆ. ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವಾಗ ಜೀರ್ಣಾಂಗ ವ್ಯವಸ್ಥೆಗೆ ಹಾನಿಕಾರಕವಾದ ಹೆಚ್ಚಿನ ಅನಿಲ ಹೊಟ್ಟೆಗೆ ಹೋಗುತ್ತದೆ. ಇದು ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತದೆ.

ಇದನ್ನೂ ಓದಿ

Investment Tips: 20 ವರ್ಷದೊಳಗಿನ ಹೂಡಿಕೆ ಮಾಡುವವರಿಗೆ 5 ಟಿಪ್ಸ್​

Hair Care Tips: ಉದ್ದ, ದಪ್ಪ ಕೂದಲು ನಿಮಗಿಷ್ಟನಾ? ಆರೈಕೆ ಹೀಗಿರಬೇಕು

(People with gastric problems should not eat certain foods)