
ರಾತ್ರಿ ಪೂರ್ತಿ ನಿದ್ರೆ ಚೆನ್ನಾಗಿ ಆದಾಗ ಮಾತ್ರ ದೇಹ ಮತ್ತು ಮನಸ್ಸು ಎರಡೂ ಉಲ್ಲಾಸದಿಂದ ಕೂಡಿರುತ್ತೆ ಎಂದು ಸಾಮಾನ್ಯವಾಗಿ ಎಲ್ಲರೂ ನಂಬುತ್ತಾರೆ, ಆದರೆ ಕೆಲವೊಮ್ಮೆ ಇದಕ್ಕೆ ವಿರುದ್ಧವಾಗಿ ನಮ್ಮ ದೇಹ ಸ್ಪಂದಿಸುತ್ತದೆ. ಅಂದರೆ ಚೆನ್ನಾಗಿ ನಿದ್ರೆ (Sleep) ಮಾಡಿ ಎದ್ದಾಗಲೂ ಕೂಡ ಆಲಸ್ಯ, ತಲೆ ಭಾರವಾದಂತಹ ಅನುಭವವಾಗುತ್ತದೆ. ಈ ಸ್ಥಿತಿ ಏಕಾಗ್ರತೆಯ ಕೊರತೆ, ಕಿರಿಕಿರಿ ಅಥವಾ ಕೆಲಸದ ಮೇಲೆ ಗಮನಹರಿಸಲು ತೊಂದರೆಯಾಗುವಂತೆ ಮಾಡುತ್ತದೆ. ಅನೇಕರು ಇದನ್ನು ಸಾಮಾನ್ಯ ಆಯಾಸ ಎಂದು ನಿರ್ಲಕ್ಷಿಸುತ್ತಾರೆ, ಆದರೆ ಇದು ನಿಮ್ಮ ದೇಹದೊಳಗೆ ಆಗುತ್ತಿರುವ ಕೆಲವು ಬದಲಾವಣೆಗಳ ಸಂಕೇತವೂ ಆಗಿರಬಹುದು ಎಂಬುದನ್ನು ಮರೆಯಬೇಡಿ. ಹೌದು, ಇದು ದೇಹ ನಿಮಗೆ ನೀಡುತ್ತಿರುವ ಎಚ್ಚರಿಕೆಯ ಸೂಚನೆಯಾಗಿರಬಹುದು. ಹಾಗಾದರೆ ಈ ರೀತಿ ಆಗುವುದಕ್ಕೆ ಕಾರಣವೇನು, ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರಾಧ್ಯಾಪಕ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ನಿದ್ರೆ ಸರಿಯಾಗಿ ಆಗಿದ್ದರೂ ಕೂಡ ತಲೆ ಭಾರ ಎನಿಸುವುದಕ್ಕೆ ಮತ್ತು ಆಲಸ್ಯ ಉಂಟಾಗುವುದಕ್ಕೆ ಪ್ರಮುಖ ಕಾರಣವೆಂದರೆ ನಿದ್ರೆಯ ಗುಣಮಟ್ಟ. ತಡರಾತ್ರಿಯವರೆಗೆ ಮೊಬೈಲ್ ನೋಡುವುದು ಅಥವಾ ಟಿವಿ ನೋಡಿರುತ್ತಾರೆ. ಕೆಲವೊಮ್ಮೆ ಒತ್ತಡ ಮತ್ತು ಆತಂಕ ನಿದ್ರೆಯ ಸಮಯದಲ್ಲಿ ಮೆದುಳನ್ನು ಸಕ್ರಿಯವಾಗಿರಿಸುತ್ತದೆ, ಇದು ಬೆಳಿಗ್ಗೆ ನಿಮಗೆ ದಣಿವುಂಟು ಮಾಡುತ್ತದೆ. ಜೊತೆಗೆ ದೇಹದಲ್ಲಿ ನೀರಿನ ಕೊರತೆಯಿಂದಾಗಿ, ತಲೆ ಭಾರವಾಗಿರುತ್ತದೆ. ಕೆಲವರು ಉಪಯೋಗ ಮಾಡುವ ದಿಂಬು ಅಥವಾ ಮಲಗುವ ಭಂಗಿ ಸರಿಯಾಗಿ ಇರುವುದಿಲ್ಲ. ಇದು ಕುತ್ತಿಗೆ ಮತ್ತು ತಲೆಯ ಸ್ನಾಯುಗಳನ್ನು ಆಯಾಸಗೊಳಿಸಬಹುದು. ಇದರ ಹೊರತಾಗಿ, ಮೂಗಿನ ದಟ್ಟಣೆ, ಸೈನಸ್ ಸಮಸ್ಯೆಗಳು ಅಥವಾ ಆಮ್ಲಜನಕದ ಕೊರತೆಯು ಸಹ ಈ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಕೆಲವು ಸಂದರ್ಭಗಳಲ್ಲಿ, ಹಾರ್ಮೋನುಗಳ ಬದಲಾವಣೆ ಕೂಡ ಈ ರೀತಿಯ ಸಮಸ್ಯೆಗೆ ಕಾರಣವಾಗಬಹುದು.
ಕೆಲವರಿಗೆ ತಲೆ ಭಾರವಾಗುವುದರ ಜೊತೆಗೆ, ಆಲಸ್ಯ, ತಲೆತಿರುಗುವಿಕೆ ಅಥವಾ ಕಣ್ಣುಗಳಲ್ಲಿ ಉರಿಯ ಅನುಭವವಾಗಬಹುದು. ಕೆಲಸದ ಮೇಲೆ ಗಮನ ಕೊಡುವುದಕ್ಕೆ ಕಷ್ಟವಾಗಬಹುದು. ಇನ್ನು ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಕಿರಿಕಿರಿ ಅಥವಾ ಚಡಪಡಿಕೆಯ ಅನುಭವವಾಗಬಹುದು. ಈ ಸಮಸ್ಯೆ ದೀರ್ಘಕಾಲದವರೆಗೆ ಮುಂದುವರಿದರೆ, ತಲೆನೋವು, ಕುತ್ತಿಗೆಯಲ್ಲಿ ಬಿಗಿತ ಮತ್ತು ಆಯಾಸ ಕಂಡುಬರಬಹುದು.
ಇದನ್ನೂ ಓದಿ: ನಿದ್ದೆಯಿಂದ ಪದೇ ಪದೇ ಎಚ್ಚರವಾಗಿ ನಿದ್ರೆ ಹಾಳಾಗುತ್ತಿದ್ದರೆ ತಡಮಾಡದೆಯೇ ಈ ವಿಷಯಗಳನ್ನು ತಿಳಿದುಕೊಳ್ಳಿ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ