Heal your burns: ಸುಟ್ಟಗಾಯಗಳನ್ನು ಮನೆಯಲ್ಲಿ ನೈಸರ್ಗಿಕವಾಗಿ ಗುಣಪಡಿಸಲು ಇಲ್ಲಿವೆ 6 ಸರಳ ಮಾರ್ಗಗಳು!

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 02, 2023 | 6:13 PM

ಸುಟ್ಟಗಾಯವಾಗಿದೆಯೇ? ಸುಟ್ಟಗಾಯಗಳು ಪ್ರತಿ ಮನೆಯಲ್ಲೂ ಸಾಮಾನ್ಯವಾಗಿದೆ. ಹಾಗಾಗಿ ಸಣ್ಣ ಗಾಯಕ್ಕೆ ಆಸ್ಪತ್ರೆಗೆ ಹೋಗುವ ಮೊದಲು ಪ್ರಥಮ ಮದ್ದಾಗಿ ನೀವು ಮನೆಯಲ್ಲಿಯೇ ಸುಟ್ಟಗಾಯವನ್ನು ಗುಣಪಡಿಸಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ಸುಟ್ಟ ಗಾಯದ ತೀವ್ರತೆಯನ್ನು ಅವಲಂಬಿಸಿ ಇದು ಸಾಧ್ಯ. ನೀವೂ ಈ ಮನೆಮದ್ದುಗಳನ್ನು ಪ್ರಯತ್ನಿಸಬಹುದು.

Heal your burns: ಸುಟ್ಟಗಾಯಗಳನ್ನು ಮನೆಯಲ್ಲಿ ನೈಸರ್ಗಿಕವಾಗಿ ಗುಣಪಡಿಸಲು ಇಲ್ಲಿವೆ 6 ಸರಳ ಮಾರ್ಗಗಳು!
ಸಾಂದರ್ಭಿಕ ಚಿತ್ರ
Follow us on

ಅಡುಗೆ ಮಾಡುವವರು ಹೆಚ್ಚಾಗಿ ಸುಟ್ಟ ಗಾಯಗಳನ್ನು ಅನುಭವಿಸಿರುತ್ತಾರೆ. ಅಲ್ಲದೆ ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಇದರ ಉರಿಯನ್ನು ಸಹಿಸಿರುತ್ತಾರೆ. ಸುಟ್ಟಗಾಯಗಳು ಮೊದಲ ಹಂತದಲ್ಲಿ ಚರ್ಮದ ಮೇಲಿನ ಪದರದ ಮೇಲೆ ಮಾತ್ರ ಪರಿಣಾಮ ಬೀರುವ ಮತ್ತು ಕೆಂಪು ಅಥವಾ ಸೌಮ್ಯ ನೋವನ್ನು ಉಂಟುಮಾಡುತ್ತವೆ. ಇವುಗಳಿಗೆ ಸುಲಭವಾಗಿ ಚಿಕಿತ್ಸೆ ನೀಡಬಹುದಾದರೂ, ಹೆಚ್ಚು ಗಂಭೀರವಾದ ಗಾಯಗಳಿಗೆ ಸಮಯ ತೆಗೆದುಕೊಳ್ಳುತ್ತದೆ. ನೀವು ಮನೆಯಲ್ಲಿಯೂ ಸುಟ್ಟಗಾಯವನ್ನು ಗುಣಪಡಿಸಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ಸುಟ್ಟ ಗಾಯದ ತೀವ್ರತೆಯನ್ನು ಅವಲಂಬಿಸಿ ಇದು ಸಾಧ್ಯವಾಗುತ್ತದೆ.

ನೀವು ಮನೆಯಲ್ಲಿ ಸುಟ್ಟಗಾಯವನ್ನು ಹೇಗೆ ಗುಣಪಡಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವ ಮೊದಲು, ಆಯುರ್ವೇದ ತಜ್ಞ ಮತ್ತು ಆಶಾ ಆಯುರ್ವೇದದ ನಿರ್ದೇಶಕ ಡಾ. ಚಂಚಲ್ ಶರ್ಮಾ ವಿವರಿಸಿದಂತೆ ಸುಟ್ಟಗಾಯಗಳ ವಿಧಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು.

1. ಪ್ರಥಮ ಹಂತದ ಸುಟ್ಟಗಾಯಗಳು: ಇವು ಚರ್ಮದ ಮೇಲಿನ ಪದರದ ಮೇಲೆ ಪರಿಣಾಮ ಬೀರುತ್ತವೆ ಮತ್ತು ಕೆಂಪು ಮತ್ತು ಸೌಮ್ಯ ನೋವನ್ನು ಹೊಂದಿರುತ್ತದೆ.

2. ಸೆಕೆಂಡ್ ಡಿಗ್ರಿ ಸುಟ್ಟಗಾಯಗಳು: ಇವು ಚರ್ಮದ ಆಳಕ್ಕೆ ನುಸುಳುತ್ತವೆ, ಗುಳ್ಳೆಗಳು, ಊತ ಮತ್ತು ಹೆಚ್ಚು ತೀವ್ರವಾದ ನೋವನ್ನು ಉಂಟು ಮಾಡುತ್ತವೆ.

3. ಥರ್ಡ್ ಡಿಗ್ರಿ ಸುಟ್ಟಗಾಯಗಳು: ಇವು ತೀವ್ರವಾಗಿರುತ್ತವೆ ಮತ್ತು ಚರ್ಮದ ಎಲ್ಲಾ ಪದರಗಳನ್ನು ಹಾನಿಗೊಳಿಸುತ್ತವೆ, ತಕ್ಷಣ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ.

ಮನೆಯಲ್ಲಿ ಸುಟ್ಟಗಾಯವನ್ನು ಗುಣಪಡಿಸಲು ಆಯುರ್ವೇದ ಪರಿಹಾರಗಳು;

ಸುಟ್ಟಗಾಯಗಳನ್ನು ತೊಡೆದು ಹಾಕಲು ಅತ್ಯಂತ ಪರಿಣಾಮಕಾರಿ ಮತ್ತು ನೈಸರ್ಗಿಕ ಮಾರ್ಗವೆಂದರೆ ಆಯುರ್ವೇದ ಪರಿಹಾರಗಳು. ಈ ಪ್ರಾಚೀನ ಅಭ್ಯಾಸವು ಚರ್ಮದ ಚೇತರಿಕೆ ಪ್ರಕ್ರಿಯೆಯನ್ನು ಉತ್ತೇಜಿಸುವ ಮೂಲಕ ಸುಟ್ಟಗಾಯಗಳಿಗೆ ಅನೇಕ ಪರಿಹಾರಗಳನ್ನು ನೀಡುತ್ತದೆ. ಆಯುರ್ವೇದವು ದೇಹದ ಶಕ್ತಿಯನ್ನು ಸಮತೋಲನಗೊಳಿಸುವತ್ತ ಗಮನ ಹರಿಸುತ್ತದೆ ಮತ್ತು ಗುಣಪಡಿಸುವಿಕೆಯನ್ನು ಉತ್ತೇಜಿಸಲು ಗಿಡಮೂಲಿಕೆಗಳು, ಎಣ್ಣೆಗಳು ಮತ್ತು ಇತರ ನೈಸರ್ಗಿಕ ಪದಾರ್ಥಗಳನ್ನು ಬಳಸುತ್ತದೆ. ಸಣ್ಣ ಸುಟ್ಟಗಾಯಗಳನ್ನು ನೈಸರ್ಗಿಕ ಪರಿಹಾರಗಳಿಂದ ಮುಚ್ಚಬಹುದಾದರೂ, ದೊಡ್ಡ ಪ್ರದೇಶವನ್ನು ಆವರಿಸುವ ಸುಟ್ಟಗಾಯಗಳನ್ನು ಗುಣಪಡಿಸಲು ನೀವು ವೈದ್ಯಕೀಯ ಸಹಾಯವನ್ನು ಪಡೆಯಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಇದನ್ನೂ ಓದಿ: ಗೋಡಂಬಿ ತಿನ್ನಿ, ಹೃದಯಾಘಾತದಿಂದ ದೂರವಿರಿ!

ಮನೆಯಲ್ಲಿ ಸುಟ್ಟಗಾಯವನ್ನು ವೇಗವಾಗಿ ಗುಣಪಡಿಸುವುದು ಹೇಗೆ?

ಸುಟ್ಟಗಾಯದಿಂದ ವೇಗವಾಗಿ ಗುಣಮುಖರಾಗಲು ಆಯುರ್ವೇದವು ದೇಹದಲ್ಲಿನ ಪಿತ್ತ ದೋಷವನ್ನು ಗುರಿಯಾಗಿಸುತ್ತದೆ. ಪಿತ್ತ ದೋಷವು ಮುಖ್ಯವಾಗಿ ದೇಹದಲ್ಲಿನ ಶಾಖ ಮತ್ತು ಉರಿಯೂತವನ್ನು ನಿಯಂತ್ರಿಸುತ್ತದೆ. ಹಾಗಾಗಿ ಮನೆಯಲ್ಲಿ ಸುಟ್ಟಗಾಯವನ್ನು ವೇಗವಾಗಿ ಗುಣಪಡಿಸಲು ಕೆಲವು ಮನೆಮದ್ದುಗಳು ಇಲ್ಲಿವೆ:

1. ಅಲೋವೆರಾ ಜೆಲ್: ಅಲೋವೆರಾವನ್ನು ತಂಪಾಗಿಸುವ ಕಂಪ್ರೆಸ್ ಆಗಿ ಬಳಸುವುದರಿಂದ ಸುಟ್ಟಗಾಯವನ್ನು ಎದುರಿಸಲು ನಿಮಗೆ ಸಹಾಯ ಮಾಡುತ್ತದೆ. ಇದು ತಂಪಾಗಿಸುವ ಮತ್ತು ಗಾಯಗಳನ್ನು ಗುಣಪಡಿಸುವ ಹೆಸರುವಾಸಿ ಮದ್ದಾಗಿದೆ. ತಜ್ಞರು ತಾಜಾ ಅಲೋವೆರಾ ಜೆಲ್ ಅನ್ನು ಪೀಡಿತ ಪ್ರದೇಶಕ್ಕೆ ಅನ್ವಯಿಸಲು ಸಲಹೆ ನೀಡುತ್ತಾರೆ ಬಳಿಕ ಇದನ್ನು ಸುಮಾರು 30 ನಿಮಿಷಗಳ ಕಾಲ ಹಾಗೆ ಬಿಡಿ. ಸುಟ್ಟಗಾಯವನ್ನು ಶಮನಗೊಳಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಈ ಪ್ರಕ್ರಿಯೆಯನ್ನು ದಿನಕ್ಕೆ ಹಲವಾರು ಬಾರಿ ಪುನರಾವರ್ತಿಸಿ.

2. ತೆಂಗಿನ ಎಣ್ಣೆ: ತೆಂಗಿನ ಎಣ್ಣೆ ಮಾಯಿಶ್ಚರೈಸಿಂಗ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವ ಅತ್ಯುತ್ತಮ ಮದ್ದೆಂದು ನಂಬಲಾಗಿದೆ. “ಇದು ಚರ್ಮವನ್ನು ತಂಪಾಗಿಸುವ ಗುಣಗಳನ್ನು ಹೊಂದಿದೆ, ಅಲ್ಲದೆ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ” ಎಂದು ತಜ್ಞರು ವಿವರಿಸಿದ್ದಾರೆ. ನೀವು ಮಾಡಬೇಕಾಗಿರುವುದೆನೆಂದರೆ ತೆಂಗಿನ ಎಣ್ಣೆಯನ್ನು ಬಾಧಿತ ಪ್ರದೇಶಕ್ಕೆ ಹಚ್ಚಿ ಮತ್ತು ಅದರ ಕೆಲಸವನ್ನು ಮಾಡಲು ಸ್ವಲ್ಪ ಸಮಯ ಬಿಡಿ. ಆಗ ಇದರ ಶಕ್ತಿ ನಿಮಗೇ ತಿಳಿಯುತ್ತದೆ.

3. ಅರಿಶಿನ ಪೇಸ್ಟ್; ಪ್ರತಿಜೀವಕ ಗುಣಲಕ್ಷಣಗಳಿಂದ ತುಂಬಿರುವ ಅರಿಶಿನವು ನೈಸರ್ಗಿಕ ಪರಿಹಾರವಾಗಿದ್ದು, ಇದು ಸುಟ್ಟಗಾಯಗಳನ್ನು ಪರಿಣಾಮಕಾರಿಯಾಗಿ ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಉರಿಯೂತ ನಿವಾರಕ ಮತ್ತು ನಂಜುನಿರೋಧಕ ಗುಣಲಕ್ಷಣಗಳನ್ನು ಸಹ ಹೊಂದಿರುತ್ತದೆ. ಅರಿಶಿನ ಪುಡಿಯನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಸುಟ್ಟ ಗಾಯಕ್ಕೆ ಹಚ್ಚಿ ಮತ್ತು ನಿಧಾನವಾಗಿ ಒಣಗಲು ಬಿಡಿ, ಬಳಿಕ ಅದನ್ನು ತೊಳೆಯಿರಿ.

4. ಶ್ರೀಗಂಧ; ಶ್ರೀಗಂಧವು ತಂಪಾಗಿಸುವ ಮತ್ತು ಹಿತವಾದ ಗುಣಗಳನ್ನು ಹೊಂದಿದೆ. ಜರ್ನಲ್ ಆಫ್ ಕ್ಲಿನಿಕಲ್ ಅಂಡ್ ಡಯಾಗ್ನೋಸ್ಟಿಕ್ ರಿಸರ್ಚ್ ನಲ್ಲಿನ ಅಧ್ಯಯನವು ಸುಟ್ಟಗಾಯಗಳಿಗೆ ಶ್ರೀಗಂಧವನ್ನು ಬಳಸುವುದು ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ ಎಂಬುದನ್ನು ತಜ್ಞರು ಕಂಡು ಹಿಡಿದಿದ್ದಾರೆ. ಶ್ರೀಗಂಧದ ಪುಡಿಯನ್ನು ನೀರಿನೊಂದಿಗೆ ಬೆರೆಸಿ ನೀವು ಶ್ರೀಗಂಧದ ಪೇಸ್ಟ್ ತಯಾರಿಸಬಹುದು. ಮಿಶ್ರಣವನ್ನು ನೇರವಾಗಿ ಸುಟ್ಟ ಗಾಯಕ್ಕೆ ಹಚ್ಚಿ ಮತ್ತು ತೊಳೆಯುವ ಮೊದಲು ಚೆನ್ನಾಗಿ ಒಣಗಲು ಬಿಡಿ.

5. ಬೇವಿನ ಎಣ್ಣೆ: ಬೇವಿನ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ, ಇದು ಗಾಯವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಸುಟ್ಟ ಗಾಯಗಳಿಂದ ಸೋಂಕನ್ನು ತಡೆಗಟ್ಟಲು ಇದು ಸಹಾಯ ಮಾಡುತ್ತದೆ. ಬಾಧಿತ ಪ್ರದೇಶಕ್ಕೆ ಕೆಲವು ಹನಿ ಬೇವಿನ ಎಣ್ಣೆಯನ್ನು ಹಚ್ಚಿ ಮತ್ತು ಸುಟ್ಟಗಾಯಗಳನ್ನು ಗುಣಪಡಿಸಲು ಸ್ವಲ್ಪ ಸಮಯ ಹಾಗೇ ಬಿಡಿ.

6. ಹಾಲು ಮತ್ತು ತುಪ್ಪ: ಸುಟ್ಟ ಗಾಯಕ್ಕೆ ತಣ್ಣನೆಯ ಹಾಲು ಮತ್ತು ತುಪ್ಪದ ಮಿಶ್ರಣವನ್ನು (ಸ್ಪಷ್ಟೀಕರಿಸಿದ ಬೆಣ್ಣೆ) ಅನ್ವಯಿಸಲು ತಜ್ಞರು ಶಿಫಾರಸು ಮಾಡುತ್ತಾರೆ. ಇದು ಗಾಯ ಮತ್ತು ಉರಿಯನ್ನು ಶಮನಗೊಳಿಸಲು ಮತ್ತು ನೋವಿನಿಂದ ಪರಿಹಾರ ನೀಡಲು ಸಹಾಯ ಮಾಡುತ್ತದೆ.

ಸುಟ್ಟಗಾಯಗಳಿಗೆ ಈ ಮನೆಮದ್ದುಗಳು ಕೆಲಸ ಮಾಡಬಹುದಾದರೂ, ತೊಡಕುಗಳನ್ನು ತಪ್ಪಿಸಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ