Health Tips: 120 ಕಾಯಿಲೆಗಳಿಗೆ ಈ ಎಲೆಯಲ್ಲಿದೆ ಮದ್ದು

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 01, 2024 | 3:15 PM

ಆಮ್ಲಾದಂತೆಯೇ ಅದರ ಎಲೆಗಳು ದೇಹಕ್ಕೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಆಮ್ಲಾ ಎಲೆಗಳು ವಿವಿಧ ರೋಗಗಳನ್ನು ಗುಣಪಡಿಸುವಲ್ಲಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತವೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕರುಳಿನ ಆರೋಗ್ಯವೂ ತುಂಬಾ ಚೆನ್ನಾಗಿರುತ್ತದೆ. ನೆಲ್ಲಿಕಾಯಿ ಎಲೆಗಳು ಒರಟಾಗಿದ್ದರೂ, ಸ್ವಲ್ಪ ಸಿಹಿ ಅಂಶವನ್ನು ಒಳಗೊಂಡಿರುತ್ತದೆ. ಆಯುರ್ವೇದದ ಪ್ರಕಾರ, ನಮ್ಮ ದೇಹದಲ್ಲಿ 3 ರೀತಿಯ ದೋಷಗಳಿವೆ ಅವು ವಾತ, ಪಿತ್ತ, ಕಫ. ಈ ದೋಷಗಳಿಗೆ ಆಮ್ಲಾ ಎಲೆಯೇ ಮದ್ದು ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಹಾಗಾದರೆ ಈ ಎಲೆ ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

Health Tips: 120 ಕಾಯಿಲೆಗಳಿಗೆ ಈ ಎಲೆಯಲ್ಲಿದೆ ಮದ್ದು
ಸಾಂದರ್ಭಿಕ ಚಿತ್ರ
Follow us on

ಆಮ್ಲಾ ಅನೇಕ ರೀತಿಯ ಔಷಧೀಯ ಗುಣಗಳನ್ನು ಹೊಂದಿದ್ದು ದಿನನಿತ್ಯ ಸೇಬು ತಿನ್ನಲು ಸಾಧ್ಯವಾಗದವರು ಆಮ್ಲಾ ಸೇವನೆ ಮಾಡುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಆಮ್ಲಾದಂತೆಯೇ ಅದರ ಎಲೆಗಳು ದೇಹಕ್ಕೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಆಮ್ಲಾ ಎಲೆಗಳು ವಿವಿಧ ರೋಗಗಳನ್ನು ಗುಣಪಡಿಸುವಲ್ಲಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತವೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕರುಳಿನ ಆರೋಗ್ಯವೂ ತುಂಬಾ ಚೆನ್ನಾಗಿರುತ್ತದೆ. ನೆಲ್ಲಿಕಾಯಿ ಎಲೆಗಳು ಒರಟಾಗಿರುತ್ತವೆ, ಸ್ವಲ್ಪ ಸಿಹಿ ಅಂಶವನ್ನು ಒಳಗೊಂಡಿರುತ್ತದೆ. ಆಯುರ್ವೇದದ ಪ್ರಕಾರ, ನಮ್ಮ ದೇಹದಲ್ಲಿ 3 ರೀತಿಯ ದೋಷಗಳಿವೆ ಅವು ವಾತ, ಪಿತ್ತ, ಕಫ. ಈ ದೋಷಗಳಿಗೆ ಆಮ್ಲಾ ಎಲೆಯೇ ಮದ್ದು ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಹಾಗಾದರೆ ಈ ಎಲೆ ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

  • ಸಾಮಾನ್ಯವಾಗಿ ನೆಲ್ಲಿಕಾಯಿ ಎಲೆಗಳನ್ನು ದಾಲ್ ಗಳಲ್ಲಿ ಅಥವಾ ಪಲ್ಯಗಳಲ್ಲಿ ಬಳಸಬಹುದು. ಅದಲ್ಲದೆ ಇವುಗಳನ್ನು ಪುಡಿಯಾಗಿಯೂ ಅನೇಕ ರೀತಿಯಲ್ಲಿ ಬಳಸಿಕೊಳ್ಳಬಹುದು.
  • ಈ ಆಮ್ಲಾ ಎಲೆಗಳು ರಕ್ತದ ಅಸ್ವಸ್ಥತೆಗಳು, ಉರಿಯೂತ, ಮಲೇರಿಯಾ ಮತ್ತು ಮೂತ್ರನಾಳದ ಸೋಂಕಿನಂತಹ 120 ಕಾಯಿಲೆಗಳಿಗೆ ಉಪಯುಕ್ತವೆಂದು ಹೇಳಲಾಗುತ್ತದೆ.
  • ನೆಲ್ಲಿಕಾಯಿ ಎಲೆಯನ್ನು ಪುಡಿ ಮಾಡಿಟ್ಟುಕೊಂಡು ಅದನ್ನು ಸೇವನೆ ಮಾಡುವುದರಿಂದ ಹೊಟ್ಟೆ ಹುಣ್ಣುಗಳನ್ನು ಗುಣಪಡಿಸಬಹುದು.
  • ನೆಲ್ಲಿಕಾಯಿ ಎಲೆಗಳ ಆ್ಯಂಟಿ- ಆಕ್ಸಿಡೆಂಟ್ ಮತ್ತು ಆ್ಯಂಟಿ- ವೈರಲ್ ಗುಣಲಕ್ಷಣಗಳು ಯಕೃತ್ತಿನ ಹಾನಿಯಾಗದಂತೆ ತಡೆಯುತ್ತದೆ.
  • ಪಿತ್ತಜನಕಾಂಗದ ಕಾರ್ಯ ನಿರ್ವಹಣೆಯನ್ನು ಸುಧಾರಿಸುತ್ತದೆ. ಅವು ಯಕೃತ್ತಿನ ಕೋಶಗಳನ್ನು ಫ್ರೀ ರಾಡಿಕಲ್ಗಳಿಂದ ರಕ್ಷಿಸುತ್ತವೆ.
  • ನೆಲ್ಲಿಕಾಯಿ ಎಲೆಯ ಪುಡಿಯನ್ನು ಸೇವಿಸುವುದರಿಂದ ಕೆಮ್ಮು, ಕಫ, ಜ್ವರ ಮುಂತಾದ ರೋಗಲಕ್ಷಣಗಳಿಂದ ಪರಿಹಾರ ಸಿಗುತ್ತದೆ. ಆಮ್ಲಾ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
  • ಮೂತ್ರಪಿಂಡದಲ್ಲಿನ ಕಲ್ಲುಗಳ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಎಲೆ ರಾಮಬಾಣವಾಗಿದೆ. ಅಂತಹ ಜನರು ಆಮ್ಲಾ ಎಲೆಯ ಪುಡಿಯನ್ನು ವಿವಿಧ ರೀತಿಯಲ್ಲಿ ಸೇವನೆ ಮಾಡಬಹುದು. ಅದಲ್ಲದೆ ಈ ಎಲೆಗಳು ಪಿತ್ತಕೋಶದ ಕಲ್ಲುಗಳನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ.

ಸೂಚನೆ: ಇಲ್ಲಿ ನೀಡಿರುವ ಅಂಶಗಳು ಕೇವಲ ಮಾಹಿತಿಗಾಗಿ ಮಾತ್ರ. ಈ ಬಗ್ಗೆ ಸಂದೇಹಗಳಿದ್ದರೆ ನೀವು ವೈದ್ಯರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ