Health Benefits of Ginger: ಚಳಿಗಾಲದಲ್ಲಿ ಶುಂಠಿ ನಿಮಗೆ ಉತ್ತಮ ಮನೆಮದ್ದು, ಶುಂಠಿಯ ಆರೋಗ್ಯ ಪ್ರಯೋಜನ ಇಲ್ಲಿದೆ

| Updated By: Digi Tech Desk

Updated on: Dec 27, 2022 | 6:14 PM

ಶುಂಠಿಯು ಚಲಿಗಾಲದ ಅತ್ಯಗತ್ಯ ಆಹಾರವಾಗಿದೆ. ಏಕೆಂದರೆ ಇದು ನಿಮ್ಮನ್ನು ನೈಸರ್ಗಿಕವಾಗಿ ಬೆಚ್ಚಗಿಡುತ್ತದೆ. ಚಲಿಗಾಲದ ಆಹಾರದಲ್ಲಿ ಶುಂಠಿಯನ್ನು ಸೇರಿಸಲೆಬೇಕು ಎಂಬುವುದಕ್ಕೆ ಕೆಲವು ಕಾರಣಗಳು ಇಲ್ಲಿವೆ.

Health Benefits of Ginger: ಚಳಿಗಾಲದಲ್ಲಿ ಶುಂಠಿ ನಿಮಗೆ ಉತ್ತಮ ಮನೆಮದ್ದು, ಶುಂಠಿಯ ಆರೋಗ್ಯ ಪ್ರಯೋಜನ ಇಲ್ಲಿದೆ
ಸಾಂದರ್ಭಿಕ ಚಿತ್ರ
Image Credit source: google image
Follow us on

ಶುಂಠಿಯು (ginger) ತಾನು ನೀಡುವ ಎಲ್ಲಾ ಆರೋಗ್ಯ ಪ್ರಯೋಜನಗಳಿಂದಾಗಿ ಇದನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಶುಂಠಿಯು ಚಲಿಗಾಲದ ಅತ್ಯಗತ್ಯ ಆಹಾರವಾಗಿದೆ. ಏಕೆಂದರೆ ಇದು ನಿಮ್ಮನ್ನು ನೈಸರ್ಗಿಕವಾಗಿ ಬೆಚ್ಚಗಿಡುತ್ತದೆ. ಚಲಿಗಾಲದ ಆಹಾರದಲ್ಲಿ ಶುಂಠಿಯನ್ನು ಸೇರಿಸಲೆಬೇಕು ಎಂಬುವುದಕ್ಕೆ ಕೆಲವು ಕಾರಣಗಳು ಇಲ್ಲಿವೆ. ಪ್ರತಿ ಭಾರತೀಯ ಅಡುಗೆ ಮನೆಗಳಲ್ಲಿ ಶುಂಠಿಯು ಇದ್ದೇ ಇರುತ್ತದೆ. ವಿಶೇಷವಾಗಿ ಚಹಾಕ್ಕೆ ಬಲವಾದ ಪರಿಮಳವನ್ನು ನೀಡಲು ಇದನ್ನು ಸೇರಿಸಲಾಗುತ್ತದೆ. ಶುಂಠಿಯಲ್ಲಿ ವಿವಿಧ ಆರೋಗ್ಯ ಪ್ರಯೋಜನಗಳಿವೆ. ಇದು ಪ್ರಬಲವಾದ ಚಿಕಿತ್ಸಕಾ ಗುಣಗಳನ್ನು ಹೊಂದಿರುವುದರಿಂದ ಶುಂಠಿಯನ್ನು ಸಾಮಾನ್ಯವಾಗಿ ಚಳಿಗಾಲದ ಆಹಾರವೆಂದು ಪರಿಗಣಿಸಲಾಗುತ್ತದೆ.

ಚಳಿಗಾಲದ ಆಹಾರದಲ್ಲಿ ಶುಂಠಿಯನ್ನು ಸೇರಿಸಲು 5 ಕಾರಣಗಳು ಇಲ್ಲಿವೆ :

1. ಕೀಲು ನೋವುಗಳನ್ನು ನಿವಾರಿಸುತ್ತದೆ:

ಶುಂಠಿಯು ಉರಿಯೂತ ಶಮನ ಮಾಡುವ ಗುಣಲಕ್ಷಣಗಳನ್ನು ಹೊಂದಿರುವುದರಿಂದ, ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಂಧೀವಾತ ರೋಗಲಕ್ಷಣಗಳನ್ನು ನಿರ್ವಹಿಸಲು ಇದು ಉಪಯುಕ್ತವಾಗಬಹುದು. ಶುಂಠಿಯನ್ನು ನಿಯಮಿತವಾಗಿ ಸೇವಿಸುವುದರಿಂದ ನೋವು ಮತ್ತು ಊತವನ್ನು ಕಡಿಮೆ ಮಾಡಲು ಅದು ಸಹಾಯ ಮಾಡುತ್ತದೆ. ಆದರೆ ನಿಮ್ಮ ನೋವು ಇದರಿಂದ ಬೇಗನೆ ಕಮ್ಮಿಯಾಗುವುದಿಲ್ಲ ಆದರೆ ನೀವು ಅದನ್ನು ಚರ್ಮಕ್ಕೆ ನೇರವಾಗಿ ಅನ್ವಯಿಸಿದರೆ, ಅದು ಕ್ರಮೇಣ ನಿಮ್ಮ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.

2. ಶೀತ ಮತ್ತು ಜ್ವರದಂತಹ ರೋಗಲಕ್ಷಣಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ:

ತಾಪಮಾನ ಕಡಿಮೆಯಾದ ತಕ್ಷಣ, ಸೀನುವುದು ಮತ್ತು ಕೆಮ್ಮ ಬರುವಂತಹದ್ದು ಸಾಮಾನ್ಯವಾಗಿದೆ. ಏಕೆಂದರೆ ಚಳಿಗಾಲದ ತಿಂಗಳುಗಳು ಜ್ವರ ಮತ್ತು ನೆಗಡಿಯೊಂದಿಗೆ ಬರುವ ಸಾಧ್ಯತೆ ಹೆಚ್ಚು. ನೆಗಡಿ ಮತ್ತು ಜ್ವರಕ್ಕೆ ಶುಂಠಿಯನ್ನು ಬಹಳ ಹಿಂದಿನಿಂದಲೂ ಮನೆಮದ್ದಾಗಿ ಬಳಸಲಾಗುತ್ತಿದೆ. ತಾಜಾ ಶುಂಠಿ ರಸ ಅಥವಾ ತುರಿದ ತಾಜಾ ಶುಂಠಿಯನ್ನು ವಿವಿಧ ಭಕ್ಷ್ಯ ಮತ್ತು ಪಾನೀಯಗಳಲ್ಲಿ ಸೇರಿಸುವುದರಿಂದ ವಿವಿಧ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

3. ಜೀರ್ಣಕ್ರಿಯೆಗೆ ಸಹಯ ಮಾಡುತ್ತದೆ:

ಜಿಂಜರಾಲ್ ನೈಸರ್ಗಿಕವಾಗಿ ಶುಂಠಿಯಲ್ಲಿ ಕಂಡುಬರುವ ಒಂದು ಅಂಶವಾಗಿದೆ. ಹೆಚ್ಚಿನ ಜನರು ಇದನ್ನು ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಸಲುವಾಗಿ ಬಳಸುತ್ತಾರೆ.

ಇದನ್ನು ಓದಿ: ಭೂಮಿಗೆ ಬಿದ್ದ ಅಮೃತದ ಹನಿಗಳು!

4. ರಕ್ತನಿಬಿಡತೆಯನ್ನು ನಿವಾರಿಸುತ್ತದೆ:

ಚಳಿಗಾಲದಲ್ಲಿ ಅನೇಕ ಜನರು ರಕ್ತನಿಬಿಡತೆ (ಕಂಜೆಸ್ಶನ್) ಸಮಸ್ಯೆಯಿಂದ ಬಳಲುತ್ತಾರೆ. ಉರಿಯೂತ ಮತ್ತು ರಕ್ತನಿಬಿಡತೆ ಎರಡನ್ನೂ ಶುಂಠಿಯಿಂದ ನಿವಾರಿಸಬಹುದು. ನಿಮಗೆ ಶೀತ ಅಥವಾ ಕೆಮ್ಮು ಇದ್ದರೆ ಅರ್ಧ ಚಮಚ ಜೇನು ತುಪ್ಪಕ್ಕೆ ಕೆಲವು ಹನಿ ಸೇರಿಸಿ ಮಲಗುವ ಮುನ್ನ ಇದನ್ನು ತೆಗೆದುಕೊಳ್ಳಿ. ಇದನ್ನು ಸೇವನೆ ಮಾಡುವುದರಿಂದ ಕೇವಲ ಒಂದು ದಿನದಲ್ಲೇ ಕೆಮ್ಮು ಶಮನವಾಗುತ್ತದೆ.

5. ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ

ನಿಮ್ಮ ಕೆಟ್ಟ ಅಥವಾ ಐಆಐ ಕೊಲೆಸ್ಟಾಲ್ ಮಟ್ಟವನ್ನು ಶುಂಠಿಯ ದೈನಂದಿನ ಸೇವನೆಯಿಂದ ನಿಯಂತ್ರಿಸಬಹುದು.

ನಿಮ್ಮ ಚಳಿಗಾಲದ ಆಹಾರ ಕ್ರಮದಲ್ಲಿ ಶುಂಠಿಯನ್ನು ಸೇರಿಸಲು ಸಲಹೆಗಳು:

1. ನೀವು ದೈನಂದಿನ ಕುಡಿಯುವ ಚಹಾಕ್ಕೆ ನುಣ್ಣಗೆ ತುರಿದ ಅಥವಾ ಕತ್ತರಿಸಿದ ಶುಂಠಿಯನ್ನು ಸೇರಿಸಿ.

2. ಒಗ್ಗರಣೆಗಳಲ್ಲಿ ಮತ್ತು ಮನೆಯಲ್ಲಿ ಬೇಯಿಸಿದ ಇತರ ಪದಾರ್ಥಗಳಲ್ಲಿ ಶುಂಠಿಯನ್ನು ಸೇರಿಸಿ

3. ಶುಂಠಿಯಿಂದ ಉಪ್ಪಿನಕಾಯಿ ತಯಾರಿಸಿ

4 .ಪಾನೀಯಗಳಲ್ಲಿ ಶುಂಠಿಯ ಬಳಕೆ

ಶುಂಠಿಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಮತ್ತು ಇದು ರಕ್ತವನ್ನು ತೆಳುಗೊಳಿಸುತ್ತದೆ. ಹಾಗಾಗಿ ಉರಿಯೂತದ ಔಷಧಿಗಳು ಅಥವಾ ರಕ್ತ ತೆಳುಗೊಳಿಸುವಿಕೆಯನ್ನು ಈಗಾಗಲೇ ಬಳಸುತ್ತಿದ್ದರೆ, ಶುಂಠಿಯನ್ನು ಸೇವಿಸುವ ಮೊದಲು ವೈದ್ಯರ ಸಲಹೆಯನ್ನು ಪಡೆಯಲು ಸೂಚಿಸಲಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:09 pm, Tue, 27 December 22