ಹಣ್ಣಿನ ರಾಜ ಮಾವು ಎಂದರೆ ಎಲ್ಲರಿಗೂ ಇಷ್ಟ. ಮಾವಿನ ಸೀಸನ್ಗಾಗಿಗೆಯೇ (Mango) ಅದೆಷ್ಟೋ ಜನ ಕಾದುಕುಳಿತಿರುತ್ತಾರೆ. ರಸಭರಿತ ಹಣ್ಣಿನ ಪ್ರಯೋಜನಗಳು ಸಾಕಷ್ಟಿವೆ. ಹಾಗೆಯೇ ಮಾವಿನ ಎಲೆಗಳಿಂದಲೂ(Mango leaves) ಸಹ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ. ಮಾವಿನ ಎಲೆಗಳಲ್ಲಿ ಎಷ್ಟೊಂದು ಅರೋಗ್ಯ ಪ್ರಯೋಜನಗಳಿವೆ (Health Tips) ಮತ್ತು ಔಷಧೀಯ ಗುಣಗಳ ಕುರಿತಾಗಿ ಹೇಳಿದ್ದೇವೆ. ಸಾಮಾನ್ಯವಾಗಿ ಮಾವಿನ ಕಾಯಿಯಿಂದ ಅಡುಗೆ ಪದಾರ್ಥಗಳನ್ನು ಮಾಡಿ ಸವಿಯುತ್ತೇವೆ. ಅದೇ ರೀತಿ ಹಣ್ಣುಗಳಿಂದ ಸಲಾಡ್, ಸ್ವೀಟ್ ಮಾಡಿ ಸವಿಯುತ್ತೇವೆ. ಜತೆಜತೆಗೆ ಮಾವಿನ ಎಲೆಗಳಲ್ಲಿಯೂ ಸಹ ಔಷದೀಯ ಗುಣಗಳಿವೆ. ಮಾವಿನ ಎಲೆಗಳು ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಕಾರಿ ಎಂಬುದನ್ನು ತಿಳಿಯಿರಿ.
ಕ್ಯಾನ್ಸರ್ ಮತ್ತು ಗಡ್ಡೆಗಳು ಬೆಳೆಯದಂತೆ ತಡೆಯುತ್ತದೆ
ಮಾವಿನ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುತ್ತದೆ. ದೇಹದಿಂದ ಸ್ವತಂತ್ರ ರಾಡಿಕಲ್ಗಳನ್ನು ತೆಗೆದುಹಾಕುವ ಮೂಲಕ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಇದು ಕ್ಯಾನ್ಸರ್, ಗಡ್ಡೆಗಳಂತಹ ಮಾರಣಾಂತಿಕ ಖಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದುಹಾಕುವುದರ ಮೂಲಕ ಆರೋಗ್ಯವನ್ನು ಸುಧಾರಿಸುತ್ತದೆ.
ಕೂದಲು ಮತ್ತು ಚರ್ಮಕ್ಕೆ ಪ್ರಯೋಜನಕಾರಿ
ಮಾವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುತ್ತದೆ. ದೇಹದಲ್ಲಿನ ಸೋಂಕು ನಿವಾರಣೆಗೆ ಸಹಾಯಕವಾಗಿದೆ. ಇದು ವಯಸ್ಸಿನನಿಂದ ಉಂಟಾಗುವ ಚರ್ಮದ ಮಡಿಕೆಯನ್ನು ನಿವಾರಿಸಲು ಸಹಾಯಕವಾಗಿದೆ. ಮಾವಿನ ಎಲೆಗಳು ವಿಟಮಿನ್ ಎ ಮತ್ತು ಸಿ ಯಿಂದ ಸಮೃದ್ಧವಾಗಿದೆ ಹಾಗೂ ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಮಾವಿನ ಎಲೆಗಳ ಪೇಸ್ಟ್ ತಯಾರಿಸುವ ಮೂಲಕ ನಿಮ್ಮ ತಲೆ ಕೂದಲು ಬೆಳವಣಿಗೆಗೆ ಬಳಕೆ ಮಾಡಬಹುದು. ಇದರಿಂದ ಕೂದಲು ದಪ್ಪ ಮತ್ತು ಕಪ್ಪಾಗಿ ಬೆಳೆಯಲು ಸಹಾಯ ಮಾಡುತ್ತದೆ.
ತೂಕ ನಷ್ಟಕ್ಕೆ ಸಹಾಯಕ
ಮಾವಿನ ಎಲೆಗಳು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ದೇಹದಲ್ಲಿನ ಹೆಚ್ಚುವರಿ ಕೊಬ್ಬು ನಿವಾರಣೆಗೆ ಸಹಾಯಕವಾಗಿದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ನಿಮ್ಮ ಆಹಾರದಲ್ಲಿ ಮಾವಿನ ಎಲೆಗಳನ್ನು ಬಳಸಿ.
ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ಮಾವಿನ ಎಲೆಗಳ ಬಳಕೆ ಉತ್ತಮ. ಜತೆಗೆ ಮಾವಿನ ಎಲೆಗಳನ್ನು ಬಳಸುವುದರ ಮೂಲಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಮಧುಮೇಹ ನಿಯಂತ್ರಣಕ್ಕೂ ಸಹ ಮಾವಿನ ಎಲೆಗಳು ಸಹಾಯ ಮಾಡುತ್ತವೆ. ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮಾವಿನ ಎಲೆಗಳನ್ನು ಬಳಸುತ್ತಾರೆ.
ಸೂಚನೆ: ಆರೋಗ್ಯದಲ್ಲಿ ಏನೇ ಏರು-ಪೇರು ಉಂಟಾದರೂ ತಕ್ಷಣ ವೈದ್ಯರ ಸಮಹೆಯನ್ನು ಪಡೆದುಕೊಳ್ಳಿ. ನಿಮ್ಮ ಆಹಾರ ಕ್ರಮವೂ ಸಹ ವೈದ್ಯರು ಸೂಚಿಸಿದಂತೆಯೇ ಇರಲಿ. ಆರೋಗ್ಯಕ್ಕೆ ತಕ್ಕಂತೆ ವೈದ್ಯರು ಸಲಹೆ ನೀಡುವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪಾಲಿಸಿ. ಈ ಮೂಲಕ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ:
ವಿಶ್ವದಲ್ಲಿ ಅತಿ ದುಬಾರಿ ಮಾವಿನ ಹಣ್ಣು ಯಾವುದು ಗೊತ್ತೇ? ಹಣ್ಣಿನ ಬೆಲೆ ಕೇಳಿದ್ರೆ ಹುಬ್ಬೇರುವುದು ಗ್ಯಾರೆಂಟಿ!
ಹಾವೇರಿ: ಹೊಟ್ಟೆ ಪಾಡಿಗೆ ಮಾವಿನ ಹಣ್ಣು ವ್ಯಾಪಾರ, ಉದ್ಯೋಗ ಖಾತ್ರಿಯತ್ತ ಮುಖ ಮಾಡಿದ ಅತಿಥಿ ಉಪನ್ಯಾಸಕರು