
ನಿಮಗೆ ತಿಳಿದಿರಬಹುದು, ಕಡಲೆಕಾಯಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತಿದೆ. ಆದರೆ ಇದರಲ್ಲಿ ಆರೋಗ್ಯ ಪ್ರಯೋಜನಗಳು ಸಾಕಷ್ಟಿದೆ. ಅದರಲ್ಲಿಯೂ ಕಡಲೆಕಾಯಿಗಳನ್ನು ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ. ನೆನಿಸಿದ ಕಡಲೆ ಕಾಳುಗಳಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿವೆ. ಅವು ದೇಹವನ್ನು ಶಕ್ತಿಯುತವಾಗಿ ಮತ್ತು ಆರೋಗ್ಯಕರವಾಗಿರಿಸುತ್ತವೆ. ನೆನೆಸಿದ ಕಡಲೆ ಕಾಳುಗಳನ್ನು ತಿನ್ನುವುದು ದೇಹಕ್ಕೆ ಸಂಪೂರ್ಣ ಪೋಷಣೆ ನೀಡುತ್ತದೆ. ಅದಕ್ಕಾಗಿಯೇ ಅವುಗಳನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ.
ಆದರೆ ನೆನೆಸಿದ ಕಡಲೆಕಾಯಿ ಸೇವನೆ ಅಲರ್ಜಿ, ಹೊಟ್ಟೆನೋವಿಗೆ ಕಾರಣವಾಗಬಹುದು. ಹಾಗಾಗಿ ಅತಿಯಾಗಿ ಸೇವನೆ ಮಾಡಬೇಡಿ. ಇತಿ ಮಿತಿಯಲ್ಲಿದ್ದರೆ ಎಲ್ಲಾ ಆಹಾರವೂ ಅಮೃತಕ್ಕೆ ಸಮ ಎಂಬ ಮಾತಿದೆ. ಹಾಗಾಗಿ ಸೇವನೆ ಮಾಡುವ ಮೊದಲು ಎಚ್ಚರವಿರಲಿ. ಜೊತೆಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಡಲೆಕಾಯಿ ಸೇವನೆ ಮಾಡುವುದು ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗಬಹುದು. ಹೀಗಾಗಿ ಸೇವನೆ ಮಾಡುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:59 pm, Sat, 8 February 25