Health Care Tips: ಫ್ರುಟ್ ಜ್ಯೂಸ್ ಕುಡಿಯುವುದರಿಂದಲೂ ಆರೋಗ್ಯಕ್ಕೆ ಹಾನಿಯಾಗುತ್ತಂತೆ!
ಹಣ್ಣಿನ ಜ್ಯೂಸ್ ತಯಾರಿಸುವಾಗ ಹಣ್ಣಿನಲ್ಲಿರುವ ಅಥವಾ ಸಿಪ್ಪೆತೆಗೆಯುವುದರಿಂದ ಸಾಕಷ್ಟು ಫೈಬರ್ ಅಂಶ ಕಳೆದುಹೋಗುತ್ತದೆ. ಫೈಬರ್ ಇಲ್ಲದೆ ಇರುವ ಹಣ್ಣಿನ ರಸ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ವೇಗವಾಗಿ ಏರಿಕೆಗೆ ಕಾರಣವಾಗಬಹುದು.
ಆರೋಗ್ಯವಾಗಿರಲು ಹಣ್ಣಿನ ಜ್ಯೂಸ್ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತೇವೆ. ಆದರೆ “ತಾಜಾ ಹಣ್ಣಿನ ರಸವನ್ನು ಕುಡಿಯುವುದು ಮತ್ತು ಸಂಪೂರ್ಣ ಹಣ್ಣುಗಳನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಭಿನ್ನವಾಗಿದೆ” ಎಂದು ಗುರುಗ್ರಾಮ್‌ನ ಆರ್ಟೆಮಿಸ್ ಆಸ್ಪತ್ರೆಯ ಕ್ಲಿನಿಕಲ್ ಪೌಷ್ಟಿಕತಜ್ಞ ಡಾ ಸಂಗೀತಾ ತಿವಾರಿ ಹೇಳುತ್ತಾರೆ. ಯಾಕೆಂದರೆ ಹಣ್ಣಿನ ಜ್ಯೂಸ್ ತಯಾರಿಸುವಾಗ ಹಣ್ಣಿನಲ್ಲಿರುವ ಅಥವಾ ಸಿಪ್ಪೆತೆಗೆಯುವುದರಿಂದ ಸಾಕಷ್ಟು ಫೈಬರ್ ಅಂಶ ಕಳೆದುಹೋಗುತ್ತದೆ. ಫೈಬರ್ ಇಲ್ಲದೆ ಇರುವ ಹಣ್ಣಿನ ರಸ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ವೇಗವಾಗಿ ಏರಿಕೆಗೆ ಕಾರಣವಾಗಬಹುದು.
ಇತ್ತೀಚೆಗೆ ನಡೆಸಲಾದ ಸಂಶೋಧನೆಯೊಂದರ ಪ್ರಕಾರ ಪ್ರತಿದಿನ ಒಂದು ಲೋಟ ಜ್ಯೂಸ್ ಕುಡಿಯುವುದರಿಂದ ಮಕ್ಕಳಲ್ಲಿ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) 0.03 ಹೆಚ್ಚಾಗುತ್ತದೆ. ಇದನ್ನು ನೀವು ಚಿಕ್ಕ ಸಮಸ್ಯೆಯಿಂದ ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ಯಾಕೆಂದರೆ ಕಾಲಕ್ರಮೇಣ ಮಕ್ಕಳಲ್ಲಿ ಸ್ಥೂಲಕಾಯತೆಗೆ ಕಾರಣವಾಗಬಹುದು ಎಂದು ತಿಳಿದುಬಂದಿದೆ.
ಹಲ್ಲಿನ ಸಮಸ್ಯೆಗಳು :
ಸಕ್ಕರೆಯ ಹಣ್ಣಿನ ರಸವನ್ನು ಆಗಾಗ್ಗೆ ಕುಡಿಯುವುದರಿಂದ ಹಲ್ಲಿನ ಕುಳಿಗಳು, ದಂತಕ್ಷಯ ಮತ್ತು ದಂತಕವಚದ ಸವೆತದ ಅಪಾಯವನ್ನು ಹೆಚ್ಚಿಸಬಹುದು. ಹಣ್ಣಿನ ರಸದಲ್ಲಿರುವ ನೈಸರ್ಗಿಕ ಸಕ್ಕರೆಗಳು ಮತ್ತು ಆಮ್ಲಗಳು ಬಾಯಿಯಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಇದು ಕಾಲಾನಂತರದಲ್ಲಿ ಬಾಯಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
- ಈ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡಲು, ಹಣ್ಣಿನ ರಸವನ್ನು ಮಿತವಾಗಿ ಸೇವಿಸುವುದು ಮುಖ್ಯ , ಸಕ್ಕರೆ ಸೇರಿಸದೆಯೇ ಜ್ಯೂಸ್ ಕುಡಿಯಿರಿ.
- ಮನೆಯಲ್ಲಿ ತಯಾರಿಸಿದ ಜ್ಯೂಸ್ ಕುಡಿಯಲು ಆದ್ಯತೆ ನೀಡಿ, ಮತ್ತು ಪೌಷ್ಟಿಕಾಂಶದ ಸೇವನೆಯನ್ನು ಹೆಚ್ಚಿಸಲು ನೀವು ಅವುಗಳನ್ನು ತರಕಾರಿ ರಸಗಳೊಂದಿಗೆ ಬೆರೆಸಬಹುದು.
- ನೀವು ಮನೆಯಲ್ಲಿ ಜ್ಯೂಸ್ ತಯಾರಿಸುತ್ತಿದ್ದರೆ, ಅಂತಿಮವಾಗಿ ಹಣ್ಣಿನ ಸ್ವಲ್ಪ ತಿರುಳನ್ನು ಸೇರಿಸಿ, ಏಕೆಂದರೆ ಅದರಲ್ಲಿ ಫೈಬರ್ ಮತ್ತು ಇತರ ಪೋಷಕಾಂಶಗಳು ಜ್ಯೂಸ್ ಮಾಡುವಾಗ ಕಳೆದುಹೋಗಿರುತ್ತದೆ.