ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಮತ್ತು ಆರೋಗ್ಯವಾಗಿರಲು ನೀರು ತುಂಬಾ ಅವಶ್ಯಕವಾಗಿದೆ. ಆದ್ದರಿಂದಲೇ ದಿನಕ್ಕೆ ಕನಿಷ್ಠ ಮೂರು ಲೀಟರ್ ನೀರು ಕುಡಿಯಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು . ಆದರೆ ರಾತ್ರಿ ಮಲಗುವಾಗ ಹೆಚ್ಚು ನೀರು ಕುಡಿದರೆ ಏನಾಗುತ್ತದೆ? ಈ ಕುರಿತು ಆರೋಗ್ಯ ತಜ್ಞರು ಏನು ಹೇಳುತ್ತಾರೆ? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ನೀರು ಹೆಚ್ಚು ಕುಡಿದಷ್ಟೂ ಉತ್ತಮ. ಆದರೆ ಕುಡಿಯುವ ಸಮಯದಲ್ಲಿ ಕುಡಿಯಿರಿ. ಆಗ ದೇಹವೂ ತುಂಬಾ ಚೆನ್ನಾಗಿರುತ್ತದೆ. ನೀರು ಕುಡಿಯುವುದರಿಂದ ತ್ವಚೆಯು ತೇವಾಂಶದಿಂದ ಕೂಡಿರುತ್ತದೆ. ಬೆಳಗ್ಗೆ ಎದ್ದಾಗ ನೀರು ಕುಡಿಯುವುದು ಉತ್ತಮ. ಆದರೆ ಊಟ ಮಾಡುವಾಗ ನೀರು ಕುಡಿಯಬೇಡಿ.
ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯದ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿ ಮಲಗುವ ಮುನ್ನ ಅತಿಯಾಗಿ ನೀರು ಕುಡಿಯಬೇಡಿ. ಅತಿಯಾಗಿ ನೀರು ಕುಡಿಯುವುದು ಆಗಾಗ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು. ಇದು ನಿದ್ದೆಗೆ ಅಡ್ಡಿಯುಂಟು ಮಾಡುತ್ತದೆ.
ರಾತ್ರಿ ಮಲಗುವ ಮುನ್ನ ಹೆಚ್ಚು ನೀರು ಕುಡಿಯುವುದರಿಂದ ನಿದ್ರೆಗೆ ತೊಂದರೆಯಾಗುತ್ತದೆ. ಆಗಾಗ್ಗೆ ಮೂತ್ರ ವಿಸರ್ಜನೆ. ಹೊಟ್ಟೆಯಲ್ಲಿ ನೀರು ತುಂಬಿಕೊಂಡು ಮಲಗುವುದರಿಂದ ಉಸಿರಾಟದ ತೊಂದರೆಯುಂಟಾಗಬಹುದು. ಅದರ ಹೊರತಾಗಿ ಎದೆಯುರಿ ಮುಂತಾದ ಸಮಸ್ಯೆಗಳು ಉದ್ಭವಿಸುತ್ತವೆ. ಅದಕ್ಕಾಗಿಯೇ ನೀವು ಮಲಗುವ ಅರ್ಧ ಗಂಟೆ ಮೊದಲು ಒಂದು ಲೋಟ ನೀರು ಕುಡಿಯಬೇಕು. ಮಧ್ಯದಲ್ಲಿ ನಿಮಗೆ ತುಂಬಾ ಬಾಯಾರಿಕೆಯೆನಿಸಿದರೆ ನಂತರ ಕುಡಿಯಿರಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:03 pm, Thu, 9 November 23