Fried Rice Syndrome: ಉಳಿದಿರುವ ಆಹಾರವನ್ನು ಮತ್ತೆ ಬಿಸಿ ಮಾಡಿ ತಿನ್ನುವ ಅಭ್ಯಾಸ ನಿಮಗಿದೆಯಾ? ಹಾಗಿದ್ದರೆ ಮಾರಣಾಂತಿಕ ‘ಫ್ರೈಡ್ ರೈಸ್ ಸಿಂಡ್ರೋಮ್’ ಬಗ್ಗೆ ತಿಳಿದುಕೊಳ್ಳಿ

ಉಳಿದಿದ್ದ ಆಹಾರವನ್ನು ಮತ್ತೆ ಬಿಸಿ ಮಾಡಿ ತಿಂದಿದ್ದ ವ್ಯಕ್ತಿ ಸಾವನ್ನಪ್ಪಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ವ್ಯಕ್ತಿಯ ಸಾವಿಗೆ 'ಫ್ರೈಡ್ ರೈಸ್ ಸಿಂಡ್ರೋಮ್' ಕಾರಣ ಎಂದು ತಿಳಿದುಬಂದಿದೆ. ಫ್ರೈಡ್ ರೈಸ್ ಸಿಂಡ್ರೋಮ್ ಮೊದಲ ಬಾರಿಗೆ 2008 ರಲ್ಲಿ ಪತ್ತೆ ಹಚ್ಚಲಾಯಿತು. ಫ್ರೈಡ್ ರೈಸ್ ಸಿಂಡ್ರೋಮ್ ಎಂದರೇನು? ಹೇಗೆ ಸಾವಿಗೆ ಕಾರಣವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

Fried Rice Syndrome: ಉಳಿದಿರುವ ಆಹಾರವನ್ನು ಮತ್ತೆ ಬಿಸಿ ಮಾಡಿ ತಿನ್ನುವ ಅಭ್ಯಾಸ ನಿಮಗಿದೆಯಾ? ಹಾಗಿದ್ದರೆ ಮಾರಣಾಂತಿಕ  'ಫ್ರೈಡ್ ರೈಸ್ ಸಿಂಡ್ರೋಮ್' ಬಗ್ಗೆ ತಿಳಿದುಕೊಳ್ಳಿ
Fried Rice Syndrome
Follow us
ಅಕ್ಷತಾ ವರ್ಕಾಡಿ
|

Updated on:Nov 08, 2023 | 1:07 PM

ಸಾಮಾನ್ಯವಾಗಿ ಒಮ್ಮೆ ಬೇಯಿಸಿದ ಆಹಾರ ಉಳಿದರೆ, ಅದನ್ನು ಹಾಗೆಯೇ ಇಟ್ಟು ರಾತ್ರಿ ಅಥವಾ ಮರುದಿನ ಮತ್ತೆ ಬಿಸಿ ಮಾಡಿ ತಿನ್ನುವ ಅಭ್ಯಾಸವನ್ನು ಸಾಕಷ್ಟು ಜನರು ಹೊಂದಿರುತ್ತಾರೆ. ಆದರೆ ಹೀಗೆ ಮಾಡುವುದರಿಂದ ಆಹಾರ ಕಲುಷಿತಗೊಂಡು ಆರೋಗ್ಯಕ್ಕೆ ಹಾನಿಯಾಗಬಹುದು. ಇಂತಹ ಆಹಾರವನ್ನು ಸೇವಿಸಿದರೆ ವಾಸಿಯಾಗದ ರೋಗಗಳನ್ನು ನಾವೇ ಬರಮಾಡಿಕೊಂಡಂತೆ ಎಂದು ತಜ್ಞರು ಎಚ್ಚರಿಸುತ್ತಾರೆ. ಇದಕ್ಕೆ ಪೂರಕ ಎಂಬಂತೆ ಉಳಿದಿದ್ದ ಆಹಾರ ಮತ್ತೆ ಬಿಸಿ ಮಾಡಿ ತಿಂದಿದ್ದ ವ್ಯಕ್ತಿ ಸಾವನ್ನಪ್ಪಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ವ್ಯಕ್ತಿಯ ಸಾವಿಗೆ ‘ಫ್ರೈಡ್ ರೈಸ್ ಸಿಂಡ್ರೋಮ್’ ಕಾರಣ ಎಂದು ತಿಳಿದುಬಂದಿದೆ. ವ್ಯಕ್ತಿಯ ಸಾವಿಗೆ ‘ಫ್ರೈಡ್ ರೈಸ್ ಸಿಂಡ್ರೋಮ್’ ಕಾರಣ ಎಂಬುದು ಬಹಿರಂಗವಾದ ನಂತರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆದ್ದರಿಂದ ಫ್ರೈಡ್ ರೈಸ್ ಸಿಂಡ್ರೋಮ್ ಎಂದರೇನು? ಹೇಗೆ ಸಾವಿಗೆ ಕಾರಣವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಫ್ರೈಡ್ ರೈಸ್ ಸಿಂಡ್ರೋಮ್ ಮೊದಲ ಬಾರಿಗೆ 2008 ರಲ್ಲಿ ಪತ್ತೆ ಹಚ್ಚಲಾಯಿತು. 20 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬ ನೂಡಲ್ಸ್ ತಯಾರಿಸಿ ತಿಂದಿದ್ದಾನೆ. ಉಳಿದದ್ದನ್ನು ಫ್ರಿಜ್ ನಲ್ಲಿಟ್ಟು 5 ದಿನಗಳ ನಂತರ ಮತ್ತೆ ಬಿಸಿ ಮಾಡಿ ತಿಂದಿದ್ದರ ಪರಿಣಾಮ ವಿಷವಾಗಿ ಮಾರ್ಪಟ್ಟು ಆತನ ಸಾವಿಗೆ ಕಾರಣವಾಗಿದೆ.

ಫ್ರೈಡ್ ರೈಸ್ ಸಿಂಡ್ರೋಮ್ ಎಂದರೇನು?

ಅಮೇರಿಕನ್ ಜರ್ನಲ್ ಆಫ್ ಬಯೋಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಪ್ರಕಾರ ‘ಫ್ರೈಡ್ ರೈಸ್ ಸಿಂಡ್ರೋಮ್’ ಎಂಬುದು ಆಹಾರದಿಂದ ಹರಡುವ ಕಾಯಿಲೆಯಾಗಿದೆ. ಆಹಾರ ವಿಷವು ಬ್ಯಾಸಿಲಸ್ ಸೆರಿಯಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಈ ಬ್ಯಾಕ್ಟೀರಿಯಾಗಳು ವಿಷವನ್ನು ಉತ್ಪತ್ತಿ ಮಾಡುತ್ತವೆ. ಇಂತಹ ಕಲುಷಿತ ಪದಾರ್ಥಗಳನ್ನು ತಿನ್ನುವುದು ವಾಂತಿ ಮತ್ತು ಭೇದಿಯಂತಹ ಜಠರಗರುಳಿನ ಕಾಯಿಲೆಗಳಿಗೆ ಕಾರಣವಾಗಬಹುದು. ಆದಾಗ್ಯೂ, ಸಾವು ಸಂಭವಿಸಬಹುದು.

ಇದನ್ನೂ ಓದಿ: ಮೆದುಳು ಜ್ವರ ಎಂದರೇನು? ಹೇಗೆ ಬರುತ್ತದೆ? ಲಕ್ಷಣ ಮತ್ತು ಚಿಕಿತ್ಸೆ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ

ಈ ಬ್ಯಾಕ್ಟೀರಿಯಾಗಳು ಪ್ರತಿಯೊಂದು ಆಹಾರದಲ್ಲೂ ಉತ್ಪತ್ತಿಯಾಗುತ್ತವೆ. ಬೇಯಿಸಿದ ಆಹಾರ ಮತ್ತು ಸರಿಯಾಗಿ ಸಂಗ್ರಹಿಸದ ಕೆಲವು ಆಹಾರಗಳಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ. ಅಕ್ಕಿ ಮತ್ತು ಪಾಸ್ಟಾದಂತಹ ಕಾರ್ಬೋಹೈಡ್ರೇಟ್‌ಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಿದರೆ ಹಾಳಾಗುವ ಸಾಧ್ಯತೆಯಿದೆ. ಇದು ಬೇಯಿಸಿದ ತರಕಾರಿಗಳು ಮತ್ತು ಮಾಂಸ ಭಕ್ಷ್ಯಗಳಂತಹ ಇತರ ಆಹಾರಗಳ ಮೇಲೂ ಪರಿಣಾಮ ಬೀರುತ್ತದೆ. ಈ ಬ್ಯಾಕ್ಟೀರಿಯಾಗಳು ಎರಡು ರೀತಿಯ ವಿಷವನ್ನು ಉತ್ಪತ್ತಿ ಮಾಡುತ್ತವೆ. ಶಾಖವು ಆಮ್ಲ-ಲೇಬಲ್ ಎಂಟರೊಟಾಕ್ಸಿನ್‌ಗಳು, ಶಾಖ-ನಿರೋಧಕ ಎಮೆಟಿಕ್ ಟಾಕ್ಸಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಆಹಾರವನ್ನು ಬಿಸಿ ಮಾಡುವುದರಿಂದ ವಿಷಕಾರಿ ರಾಸಾಯನಿಕಗಳು ಬಿಡುಗಡೆಯಾಗುತ್ತವೆ.

ಫ್ರೈಡ್ ರೈಸ್ ಸಿಂಡ್ರೋಮ್‌ನ ಲಕ್ಷಣಗಳು:

ಬ್ಯಾಸಿಲಸ್ ಸೆರಿಯಸ್ ಬ್ಯಾಕ್ಟೀರಿಯಾದ ಲಕ್ಷಣಗಳು ವಾಂತಿ, ವಾಕರಿಕೆ, ಹೊಟ್ಟೆ ನೋವು ಮತ್ತು ಅತಿಸಾರವನ್ನು ಒಳಗೊಂಡಿವೆ. ಈ ರೋಗಲಕ್ಷಣಗಳು ಸಾಮಾನ್ಯವಾಗಿ 24 ಗಂಟೆಗಳ ನಂತರ ಕಡಿಮೆಯಾಗುತ್ತವೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 1:05 pm, Wed, 8 November 23