ಹಣ್ಣು ತಿನ್ನುವುದು ಒಳ್ಳೆಯದಾ? ಜ್ಯೂಸ್ ಕುಡಿಯೋದು ಒಳ್ಳೆಯದಾ?

ಹಣ್ಣಿನ ಜ್ಯೂಸ್‌ನ ಮುಖ್ಯ ಸಮಸ್ಯೆಯೆಂದರೆ ಅದು ಹೆಚ್ಚಿನ ಕ್ಯಾಲೋರಿಗಳು, ಆಮ್ಲದ ಅಂಶ ಮತ್ತು ಹೆಚ್ಚು ಸಕ್ಕರೆ, ಕಡಿಮೆ ಫೈಬರ್ ಅನ್ನು ಹೊಂದಿರುತ್ತದೆ. ಅದು ಪ್ರಮುಖ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಹಣ್ಣಿನ ಜ್ಯೂಸ್​ ತಾಜಾ ಹಣ್ಣಿನಷ್ಟು ಆರೋಗ್ಯಕರವಲ್ಲ ಎಂದು ನಿಮಗೆ ತಿಳಿದಿದೆಯೇ?

ಹಣ್ಣು ತಿನ್ನುವುದು ಒಳ್ಳೆಯದಾ? ಜ್ಯೂಸ್ ಕುಡಿಯೋದು ಒಳ್ಳೆಯದಾ?
ಹಣ್ಣಿನ ಜ್ಯೂಸ್Image Credit source: iStock
Follow us
ಸುಷ್ಮಾ ಚಕ್ರೆ
|

Updated on:Nov 07, 2023 | 7:14 PM

ಹಣ್ಣುಗಳು ಮತ್ತು ಹಣ್ಣಿನ ಜ್ಯೂಸ್ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಹಣ್ಣುಗಳನ್ನು ತಿನ್ನುವುದು ಒಳ್ಳೆಯದಾ? ಅಥವಾ ಜ್ಯೂಸ್ ಕುಡಿಯುವುದು ಒಳ್ಳೆಯದಾ? ಎಂಬ ಗೊಂದಲ ಸಾಮಾನ್ಯ. ಎರಡನ್ನೂ ಹಣ್ಣಿನಿಂದ ತಯಾರಿಸುವುದೇ ಆದರೂ ಎರಡರ ಪೌಷ್ಟಿಕಾಂಶಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ನೀವು ಆರೋಗ್ಯಕರ ಆಯ್ಕೆಯನ್ನು ಮಾಡಿಕೊಳ್ಳುವುದಾದರೆ ಜ್ಯೂಸ್​ಗಿಂತಲೂ ಹಣ್ಣುಗಳನ್ನು ತಿನ್ನುವುದೇ ಹೆಚ್ಚು ಪ್ರಯೋಜನಕಾರಿ. ಅದಕ್ಕಾಗಿಯೇ ವೈದ್ಯರು ಜ್ಯೂಸ್ ಬದಲಿಗೆ ತಾಜಾ ಹಣ್ಣುಗಳನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಇದಲ್ಲದೆ, ಪ್ರತಿದಿನ ಒಂದು ಲೋಟ ಹಣ್ಣಿನ ಜ್ಯೂಸ್ ಕುಡಿಯುವುದು ಆ ದಿನವನ್ನು ಪ್ರಾರಂಭಿಸಲು ಆರೋಗ್ಯಕರ ಮಾರ್ಗವೆಂದು ಕೂಡ ಹೇಳುತ್ತಾರೆ. ಆದರೆ ಹಣ್ಣಿನ ಜ್ಯೂಸ್​ ತಾಜಾ ಹಣ್ಣಿನಷ್ಟು ಆರೋಗ್ಯಕರವಲ್ಲ ಎಂದು ನಿಮಗೆ ತಿಳಿದಿದೆಯೇ?

ಇದನ್ನೂ ಓದಿ: ತೂಕ ಇಳಿಸಿಕೊಳ್ಳಲು ನಿಂಬೆ ಜ್ಯೂಸ್ ಕುಡಿಯುತ್ತೀರಾ? ಈ ಅಭ್ಯಾಸ ಬಿಟ್ಟುಬಿಡಿ

ಹಣ್ಣಿನ ಜ್ಯೂಸ್‌ನ ಮುಖ್ಯ ಸಮಸ್ಯೆಯೆಂದರೆ ಅದು ಹೆಚ್ಚಿನ ಕ್ಯಾಲೋರಿಗಳು, ಆಮ್ಲದ ಅಂಶ ಮತ್ತು ಹೆಚ್ಚು ಸಕ್ಕರೆ, ಕಡಿಮೆ ಫೈಬರ್ ಅನ್ನು ಹೊಂದಿರುತ್ತದೆ. ಅದು ಪ್ರಮುಖ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಹಣ್ಣುಗಳನ್ನು ಅವುಗಳ ಜ್ಯೂಸ್​ಗಿಂತ ಹೆಚ್ಚು ಆರೋಗ್ಯಕರ ಮತ್ತು ಪ್ರಯೋಜನಕಾರಿ ಎಂದು ಪರಿಗಣಿಸಲು ಕಾರಣಗಳು ಇಲ್ಲಿವೆ.

1. ಫೈಬರ್ ಕೊರತೆ:

ಫೈಬರ್ ನಮ್ಮ ದೇಹಕ್ಕೆ ಬಹಳ ಮುಖ್ಯವಾದ ಅಂಶವಾಗಿದೆ. ಇದು ಕರುಳಿನ ಆರೋಗ್ಯವನ್ನು ಸರಿಯಾಗಿ ಇಡುವುದು ಮಾತ್ರವಲ್ಲದೆ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿಸುತ್ತದೆ. ಆದರೆ ನಾವು ಹಣ್ಣುಗಳ ಬದಲಿಗೆ ಜ್ಯೂಸ್ ಅನ್ನು ಸೇವಿಸಿದಾಗ, ಹಣ್ಣಿನ ಎಲ್ಲಾ ಫೈಬರ್ ಫಿಲ್ಟರ್ ಆಗುತ್ತದೆ.

2. ಹೆಚ್ಚುವರಿ ಕ್ಯಾಲೋರಿಗಳು:

ಹಣ್ಣು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಆದರೆ ಅದನ್ನು ಜ್ಯೂಸ್ ರೂಪದಲ್ಲಿ ಸೇವಿಸಿದಾಗ ಕ್ಯಾಲೋರಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದಕ್ಕೆ ಕಾರಣ ಒಂದು ಲೋಟ ಜ್ಯೂಸ್ ಕುಡಿದರೆ ಅದರಲ್ಲಿ ಅನೇಕ ಹಣ್ಣುಗಳ ರಸವಿರುತ್ತದೆ. ನೀವು ಪ್ಯಾಕ್ಡ್ ಜ್ಯೂಸ್ ಅನ್ನು ಸೇವಿಸುತ್ತಿದ್ದರೆ ಅದಕ್ಕೆ ಸಕ್ಕರೆಯನ್ನು ಹಾಕುವುದರಿಂದ ಕ್ಯಾಲೊರಿಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಇದನ್ನೂ ಓದಿ: Spinach Juice: ತಂಪಾದ ಪಾಲಕ್ ಜ್ಯೂಸ್​ ಕುಡಿದರೆ ಹಲವು ರೋಗಗಳನ್ನು ದೂರವಿಡಬಹುದು

3. ಸೂಕ್ಷ್ಮ ಪೋಷಕಾಂಶಗಳ ಕೊರತೆ:

ಹಣ್ಣಿನ ಜ್ಯೂಸ್​ ಅನ್ನು ಹಲವಾರು ಪ್ರಕ್ರಿಯೆಗಳ ಮೂಲಕ ಮಾಡಬೇಕಾಗುತ್ತದೆ. ಇದರಿಂದಾಗಿ ಅದರಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಮುಂತಾದ ಅನೇಕ ಸೂಕ್ಷ್ಮ ಪೋಷಕಾಂಶಗಳು ನಷ್ಟವಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:13 pm, Tue, 7 November 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ