ನೆಲ್ಲಿಕಾಯಿಯಿಂದ ಮಜ್ಜಿಗೆಯವರೆಗೆ; ಕೊಲೆಸ್ಟ್ರಾಲ್ ಕಡಿಮೆ ಮಾಡುವ 5 ಪಾನೀಯಗಳಿವು

|

Updated on: Oct 27, 2023 | 4:02 PM

ನಿಯಮಿತ ವ್ಯಾಯಾಮದ ಹೊರತಾಗಿಯೂ ಕೊಲೆಸ್ಟ್ರಾಲ್ ಸಮಸ್ಯೆಯನ್ನು ನಿಭಾಯಿಸಲು ಆಹಾರಕ್ರಮದಲ್ಲಿ ಮಾರ್ಪಾಡು ಮಾಡಿಕೊಳ್ಳುವ ಅಗತ್ಯವಿದೆ. ಫೈಬರ್, ಹಣ್ಣುಗಳು, ತರಕಾರಿಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಕೆಲವು ಗಿಡಮೂಲಿಕೆಗಳನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.

ನೆಲ್ಲಿಕಾಯಿಯಿಂದ ಮಜ್ಜಿಗೆಯವರೆಗೆ; ಕೊಲೆಸ್ಟ್ರಾಲ್ ಕಡಿಮೆ ಮಾಡುವ 5 ಪಾನೀಯಗಳಿವು
ಮಜ್ಜಿಗೆ
Image Credit source: iStock
Follow us on

ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳು ಹೃದಯಾಘಾತ ಅಥವಾ ಪಾರ್ಶ್ವವಾಯುಗಳಂತಹ ಭಯಾನಕ ಆರೋಗ್ಯ ಸಮಸ್ಯೆಯ ಆರಂಭಿಕ ಲಕ್ಷಣಗಳಾಗಿರಬಹುದು. ಕೆಲವು ಜೀವನಶೈಲಿಯ ಅಂಶಗಳು ನಿಮ್ಮ ರಕ್ತಪ್ರವಾಹದಲ್ಲಿ ಈ ಅನಿಯಂತ್ರಿತ ಮಟ್ಟದ ಕೆಟ್ಟ ಕೊಲೆಸ್ಟ್ರಾಲ್‌ಗೆ ಕಾರಣವಾಗಿರಬಹುದು. ನೀವು ನಿಷ್ಕ್ರಿಯ ಜೀವನಶೈಲಿಯನ್ನು ಹೊಂದಿದ್ದರೆ, ಕೊಲೆಸ್ಟ್ರಾಲ್ ಸಮಸ್ಯೆಗಳು ಮತ್ತು ನಂತರದ ದೀರ್ಘಕಾಲದ ಕಾಯಿಲೆಗಳು ಉಂಟಾಗುವ ಸಾಧ್ಯತೆಗಳು ಹೆಚ್ಚು. ನಿಯಮಿತ ವ್ಯಾಯಾಮದ ಹೊರತಾಗಿಯೂ ಕೊಲೆಸ್ಟ್ರಾಲ್ ಸಮಸ್ಯೆಯನ್ನು ನಿಭಾಯಿಸಲು ಆಹಾರಕ್ರಮದಲ್ಲಿ ಮಾರ್ಪಡು ಮಾಡಿಕೊಳ್ಳುವ ಅಗತ್ಯವಿದೆ. ಫೈಬರ್, ಹಣ್ಣುಗಳು, ತರಕಾರಿಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಕೆಲವು ಗಿಡಮೂಲಿಕೆಗಳನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.

ದೇಹದಿಂದ ಉತ್ಪತ್ತಿಯಾಗುವ ಮೇಣದಂತಹ ವಸ್ತುವಾದ ಕೊಲೆಸ್ಟ್ರಾಲ್ ಅನೇಕ ಪ್ರಮುಖ ಕಾರ್ಯಗಳನ್ನು ಹೊಂದಿದೆ. ಇದು ಹೀಗಾಗಿ ನಮ್ಮ ಆರೋಗ್ಯಕ್ಕೆ ಮುಖ್ಯವಾಗಿದೆ. ಆದರೆ, ಇದನ್ನು ಆಹಾರದ ಮೂಲಕ ಹೆಚ್ಚು ಸೇವಿಸಿದಾಗ ಅದು ದೇಹದ ಕಾರ್ಯಗಳನ್ನು ಹಾನಿ ಮಾಡಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ: Rambutan Benefits: ಫೈಬರ್​ಭರಿತವಾಗಿರುವ ರಾಂಬುಟಾನ್ ಹಣ್ಣಿನ ಅಚ್ಚರಿಯ ಪ್ರಯೋಜನಗಳಿವು

ಪೌಷ್ಟಿಕತಜ್ಞರಾದ ಮುನ್ಮುನ್ ಗನೇರಿವಾಲ್ ತನ್ನ ಇನ್​ಸ್ಟಾಗ್ರಾಂ ಪೋಸ್ಟ್‌ನಲ್ಲಿ ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಸೂಪರ್‌ಫುಡ್‌ಗಳ ಬಗ್ಗೆ ಚರ್ಚಿಸಿದ್ದಾರೆ.

1. ಬೆಳ್ಳುಳ್ಳಿ: ಸತತವಾಗಿ 12 ವಾರಗಳವರೆಗೆ ಮಲಗುವ ವೇಳೆಯಲ್ಲಿ ಬೆಳ್ಳುಳ್ಳಿ ಹಾಲನ್ನು ಸೇವಿಸಿ. ಇದರಿಂದ ರಕ್ತದ ಕೆಲಸವು ಯಾವ ರೀತಿ ಸುಧಾರಿಸುತ್ತದೆ ಎಂಬುದನ್ನು ನೋಡಿ.

2. ಬಾರ್ಲಿ: ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವ ಪ್ರಿಬಯಾಟಿಕ್ ಬೀಟಾ-ಗ್ಲುಕನ್ ಅನ್ನು ಹೊಂದಿದೆ. ಬಾರ್ಲಿ ಖಿಚಡಿ, ಬಾರ್ಲಿ ಗಂಜಿ, ಬಾರ್ಲಿ ಸೂಪ್ ಮತ್ತು ಬಾರ್ಲಿ ರೋಟಿಯಂತಹ ಹಲವು ರೂಪಗಳಲ್ಲಿ ಇದನ್ನು ಸೇವಿಸಬಹುದು.

ಇದನ್ನೂ ಓದಿ: ಅತಿಯಾದ ಸಕ್ಕರೆ ಸೇವನೆಯಿಂದ ನಿಮ್ಮ ಚರ್ಮದ ಸೌಂದರ್ಯಕ್ಕೂ ಆಪತ್ತು

3. ತ್ರಿಫಲ: ಇದು ಉರಿಯೂತವನ್ನು ನಿವಾರಿಸುತ್ತದೆ. ಅನೇಕ ಅಂಗಗಳ ಕೆಲಸಕ್ಕೆ ತ್ರಿಫಲ ಉಪಯುಕ್ತವಾಗಿದೆ.

4. ಮಜ್ಜಿಗೆ: ಸಾಂಪ್ರದಾಯಿಕ ರೀತಿಯಲ್ಲಿ ಮಜ್ಜಿಗೆಯನ್ನು ಮಾಡಿ ನಂತರ ಅದಕ್ಕೆ ಅರಿಶಿನ ಪುಡಿ, ಕಲ್ಲು ಉಪ್ಪು, ಕರಿಬೇವಿನ ಸೊಪ್ಪು ಮತ್ತು ತುರಿದ ಶುಂಠಿ ಸೇರಿಸಿ. ಪ್ರತಿದಿನ ಇದನ್ನು ಒಮ್ಮೆ ಸೇವಿಸಿ. 3 ತಿಂಗಳಲ್ಲಿ ನಿಮ್ಮ ಕೊಲೆಸ್ಟ್ರಾಲ್ ಮಟ್ಟವು ಸುಧಾರಿಸುತ್ತದೆ.

5. ನೆಲ್ಲಿಕಾಯಿ: ಕೊಲೆಸ್ಟ್ರಾಲ್‌ಗೆ ಉತ್ತಮ ಮನೆಮದ್ದುಗಳಲ್ಲಿ ನೆಲ್ಲಿಕಾಯಿ ಕೂಡ ಒಂದಾಗಿದೆ. 12 ವಾರ ನೆಲ್ಲಿಕಾಯಿ ಸೇವಿಸುವುದರಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಸೀರಮ್ ಲಿಪಿಡ್ ಪ್ರೊಫೈಲ್ ಅನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ