ಅಧಿಕ ಕೊಲೆಸ್ಟ್ರಾಲ್​ನಿಂದ ನಿಮ್ಮ ಕಿವಿಗೂ ತೊಂದರೆ; ಈ ಲಕ್ಷಣವನ್ನೆಂದೂ ನಿರ್ಲಕ್ಷ್ಯ ಮಾಡಬೇಡಿ

ನಿಮ್ಮ ದೇಹವು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿದಾಗ ಕಿವುಡುತನದ ಲಕ್ಷಣಗಳು ಗೋಚರಿಸುತ್ತವೆ. ಈ ಬಗ್ಗೆ ಹೆಚ್ಚು ಜನರಿಗೆ ಗೊತ್ತಿಲ್ಲ. ನಿಮಗೆ ಯಾವುದಾದರೂ ಕಿವಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅದರ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ.

ಅಧಿಕ ಕೊಲೆಸ್ಟ್ರಾಲ್​ನಿಂದ ನಿಮ್ಮ ಕಿವಿಗೂ ತೊಂದರೆ; ಈ ಲಕ್ಷಣವನ್ನೆಂದೂ ನಿರ್ಲಕ್ಷ್ಯ ಮಾಡಬೇಡಿ
ಕಿವಿImage Credit source: iStock
Follow us
ಸುಷ್ಮಾ ಚಕ್ರೆ
|

Updated on:Oct 13, 2023 | 5:42 PM

ಕೊಲೆಸ್ಟ್ರಾಲ್ ಎಂಬ ಮೇಣದಂಥ ಅಣು ನಿಮ್ಮ ರಕ್ತದಲ್ಲಿ ಇರುತ್ತದೆ. ಇದು ಆರೋಗ್ಯಕರವೂ ಹೌದು, ಹೆಚ್ಚಾದರೆ ಅನಾರೋಗ್ಯಕರವೂ ಹೌದು. ಆರೋಗ್ಯಕರ ಕೋಶಗಳನ್ನು ರಚಿಸಲು ನಿಮ್ಮ ದೇಹಕ್ಕೆ ಕೊಲೆಸ್ಟ್ರಾಲ್ (Cholesterol) ಅಗತ್ಯವಿದ್ದರೂ, ಅದನ್ನು ಹೆಚ್ಚು ಸೇವಿಸುವುದರಿಂದ ಹೃದ್ರೋಗ (Heart Problem) ಉಂಟಾಗುವ ಸಾಧ್ಯತೆಯಿದೆ. ಅಧಿಕ ಕೊಲೆಸ್ಟ್ರಾಲ್ ಸಾಮಾನ್ಯವಾಗಿ ಆರೋಗ್ಯದ ಅಪಾಯಗಳನ್ನು ಉಂಟುಮಾಡುವ ಮೊದಲು ಯಾವುದೇ ಚಿಹ್ನೆಗಳನ್ನು ತೋರಿಸದ ಕಾರಣ, ಇದನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ.

ಅಧಿಕ ಕೊಲೆಸ್ಟ್ರಾಲ್ ನಿಮ್ಮ ಕಿವಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?:

ನಿಮ್ಮ ದೇಹವು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿದಾಗ ಕಿವುಡುತನದ ಲಕ್ಷಣಗಳು ಗೋಚರಿಸುತ್ತವೆ. ಈ ಬಗ್ಗೆ ಹೆಚ್ಚು ಜನರಿಗೆ ಗೊತ್ತಿಲ್ಲ. ಇದು ಮೊದಲ ಸೂಚನೆಯಾಗದಿದ್ದರೂ ಸಹ ನಿಮಗೆ ಯಾವುದಾದರೂ ಕಿವಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅದರ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಅತಿಯಾದ ಕೊಲೆಸ್ಟ್ರಾಲ್‌ನಿಂದ ಉಂಟಾಗುವ ಕಿವುಡುತನ ಸಾಮಾನ್ಯವಾಗಿ ಕ್ರಮೇಣ ಬೆಳವಣಿಗೆಯಾಗುತ್ತದೆ. ಇದು ಆಗಾಗ ಎರಡೂ ಕಿವಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಇದನ್ನೂ ಓದಿ: ನಿಮ್ಮ ಕಾಲುಗಳಲ್ಲಿನ ಈ 6 ಲಕ್ಷಣಗಳು ಅಧಿಕ ಕೊಲೆಸ್ಟ್ರಾಲ್​ನ ಲಕ್ಷಣಗಳಾಗಿರಬಹುದು, ಎಚ್ಚರ!

ಅಧಿಕ ಕೊಲೆಸ್ಟ್ರಾಲ್‌ನಿಂದ ಉಂಟಾಗುವ ಕಿವುಡುತನ ಕ್ರಮೇಣವಾಗಿ ಮತ್ತು ಸಾಮಾನ್ಯವಾಗಿ ಎರಡೂ ಕಿವಿಗಳ ಮೇಲೆ ಸಮಾನವಾಗಿ ಪರಿಣಾಮ ಬೀರುತ್ತದೆ. ಈ ಎಚ್ಚರಿಕೆಯ ಚಿಹ್ನೆಯು ಸಾಮಾನ್ಯವಾಗಿ ಜೋರಾದ ಶಬ್ದಗಳನ್ನು ಕೇಳಲು ಅಥವಾ ಗದ್ದಲದ ಜಾಗದಲ್ಲಿ ಯಾರಾದರೂ ಮಾತನಾಡಿದ್ದನ್ನು ಅರ್ಥಮಾಡಿಕೊಳ್ಳಲು ತೊಂದರೆಯಾಗುವುದರಿಂದ ಪ್ರಾರಂಭವಾಗುತ್ತದೆ. ಇದಕ್ಕೆ ಚಿಕಿತ್ಸೆ ನೀಡದೆ ಬಿಟ್ಟರೆ ಕಾಲಾನಂತರದಲ್ಲಿ ಇನ್ನಷ್ಟು ಉಲ್ಬಣಗೊಳ್ಳಬಹುದು.

ನಿಮ್ಮ ಅಪಧಮನಿಗಳಲ್ಲಿ ಪ್ಲೇಕ್ ಸಂಗ್ರಹವಾಗುವುದರಿಂದ ಅಧಿಕ ಕೊಲೆಸ್ಟ್ರಾಲ್ ನಿಮ್ಮ ಶ್ರವಣದ ಮೇಲೆ ಪರಿಣಾಮ ಬೀರಬಹುದು. ಇದರಿಂದ ನಿಮ್ಮ ಕಿವಿಗಳು ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ಆರೋಗ್ಯಕರ ರಕ್ತದ ಹರಿವು ನಿಮ್ಮ ಅಪಧಮನಿಗಳಲ್ಲಿ ನಿರ್ಬಂಧಿಸಲ್ಪಡುತ್ತದೆ. ಸೂಕ್ಷ್ಮ ಒಳಕಿವಿಯ ಅಂಗಾಂಶಗಳಿಗೆ ರಕ್ತ ಪೂರೈಕೆಯು ಅಡ್ಡಿಯಾದಾಗ ಕಿವುಡುತನ ಹೆಚ್ಚಾಗಿ ಸಂಭವಿಸುತ್ತದೆ.

ಇದನ್ನೂ ಓದಿ: Weight Loss Tips: ಹೊಟ್ಟೆಯ ಕೊಬ್ಬು ಕರಗಿಸಲು ಮನೆಯಲ್ಲೇ ಸುಲಭವಾಗಿ ಮಾಡುವ ವ್ಯಾಯಾಮಗಳಿವು

ಅಧಿಕ ಕೊಲೆಸ್ಟ್ರಾಲ್ ರೋಗಲಕ್ಷಣಗಳನ್ನು ತಡೆಯುವುದು ಹೇಗೆ?:

ನಿಮ್ಮ ಕಿವುಡುತನದ ಲಕ್ಷಣಗಳನ್ನು ಅನುಭವಿಸಿದರೆ ಚಿಕಿತ್ಸೆಗಾಗಿ ನಿಮ್ಮ ವೈದ್ಯರನ್ನು ಭೇಟಿ ಮಾಡುವುದು ಬಹಳ ಮುಖ್ಯ. ಹೆಚ್ಚಿನ ಕೊಲೆಸ್ಟ್ರಾಲ್ ನಿಮ್ಮ ಶ್ರವಣದ ಮೇಲೆ ಪರಿಣಾಮ ಬೀರಿದರೆ ಜೀವನಶೈಲಿಯ ಬದಲಾವಣೆಗಳು, ಔಷಧಗಳು ಮತ್ತು ಜೀವನಶೈಲಿಯ ಹೊಂದಾಣಿಕೆಗಳ ಕುರಿತು ನಿಮ್ಮ ವೈದ್ಯರು ನೀಡುವ ಸಲಹೆಯನ್ನು ನೀವು ಅನುಸರಿಸಬೇಕು. ಆಹಾರದಲ್ಲಿ ಆರೋಗ್ಯಕರ ಕೊಬ್ಬನ್ನು ಮಿತವಾಗಿ ಬಳಸಿ ಮತ್ತು ಪ್ರಾಣಿಗಳ ಕೊಬ್ಬನ್ನು ಕಡಿಮೆ ಸೇವಿಸಿ. ಯಾವುದೇ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳುವ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:42 pm, Fri, 13 October 23

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ