Health Tips: ಅರಿಶಿನ ಜೊತೆಗೆ ಶುಂಠಿ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?

| Updated By: ಅಕ್ಷತಾ ವರ್ಕಾಡಿ

Updated on: May 30, 2024 | 6:26 PM

ಅರಿಶಿನ ಮತ್ತು ಶುಂಠಿ ಎರಡು ಅತ್ಯಂತ ಹಳೆಯ ನೈಸರ್ಗಿಕ ಚಿಕಿತ್ಸೆಗಳಾಗಿದ್ದು ಇವುಗಳಲ್ಲಿರುವ ಔಷಧೀಯ ಗುಣಗಳು ಆರೋಗ್ಯಕ್ಕೆ ತುಂಬಾ ಉಪಯುಕ್ತಕಾರಿಯಾಗಿದೆ. ಈ ಎರಡು ಮಸಾಲೆಗಳು ವಾಕರಿಕೆಗೆ ಪರಿಹಾರ ನೀಡುವುದರಿಂದ ಹಿಡಿದು ರೋಗನಿರೋಧಕ ಶಕ್ತಿಯ ವರ್ಧನೆಯವರೆಗೆ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

Health Tips: ಅರಿಶಿನ ಜೊತೆಗೆ ಶುಂಠಿ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?
Follow us on

ಶುಂಠಿ ಮತ್ತು ಅರಿಶಿನದ ಆರೋಗ್ಯ ಪ್ರಯೋಜನಗಳ ಬಗ್ಗೆ ನಾವು ಕೇಳಿದ್ದೇವೆ. ಆದರೆ ಇವೆರೆಡರ ಸಂಯೋಜನೆ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಅರಿಶಿನ ಮತ್ತು ಶುಂಠಿ ಎರಡು ಅತ್ಯಂತ ಹಳೆಯ ನೈಸರ್ಗಿಕ ಚಿಕಿತ್ಸೆಗಳಾಗಿದ್ದು ಇವುಗಳಲ್ಲಿರುವ ಔಷಧೀಯ ಗುಣಗಳು ಆರೋಗ್ಯಕ್ಕೆ ತುಂಬಾ ಉಪಯುಕ್ತಕಾರಿಯಾಗಿದೆ. ಈ ಎರಡು ಮಸಾಲೆಗಳು ವಾಕರಿಕೆಗೆ ಪರಿಹಾರ ನೀಡುವುದರಿಂದ ಹಿಡಿದು ರೋಗನಿರೋಧಕ ಶಕ್ತಿಯ ವರ್ಧನೆಯವರೆಗೆ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

1. ಉರಿಯೂತ ನಿವಾರಕವಾಗಿದೆ:

ಅರಿಶಿನ ಮತ್ತು ಶುಂಠಿ ಎರಡೂ ಪ್ರಬಲ ಉರಿಯೂತ ನಿವಾರಣಾ ಗುಣಲಕ್ಷಣಗಳನ್ನು ಹೊಂದಿದ್ದು, ಅರಿಶಿನದಲ್ಲಿರುವ ಕರ್ಕ್ಯುಮಿನ್ ಮತ್ತು ಶುಂಠಿಯಲ್ಲಿ ಕಂಡುಬರುವ ಜಿಂಜರಾಲ್ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಸಂಧಿವಾತ ಮತ್ತು ಕರುಳಿನ ಉರಿಯೂತವನ್ನು ನಿವಾರಿಸುತ್ತದೆ.

2. ನೋವು ನಿವಾರಕ:

ಇವು ನೈಸರ್ಗಿಕ ನೋವು ನಿವಾರಕವಾಗಿದೆ. ಈ ಸಂಯುಕ್ತಗಳು ಆಸ್ಟಿಯೋ ಆರ್ಥ್ರೈಟಿಸ್, ರುಮಟಾಯ್ಡ್ ಸಂಧಿವಾತ ಮತ್ತು ಸ್ನಾಯು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತದೆ.

3. ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ:

ಶುಂಠಿ ಮತ್ತು ಅರಿಶಿನವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅರಿಶಿನವು ಅಜೀರ್ಣ ಮತ್ತು ಉಬ್ಬರದ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

4. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ಅರಿಶಿನ ಮತ್ತು ಶುಂಠಿ ಎರಡೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಲಕ್ಷಣಗಳನ್ನು ಹೊಂದಿದ್ದು ಸೋಂಕುಗಳು ಮತ್ತು ಕಾಯಿಲೆಗಳ ವಿರುದ್ಧ ದೇಹವನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.

5. ಹೃದಯರಕ್ತನಾಳದ ಆರೋಗ್ಯ ಕಾಪಾಡುತ್ತದೆ:

ಅರಿಶಿನ ಮತ್ತು ಶುಂಠಿಯು ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಹೃದಯರಕ್ತನಾಳದ ಆರೋಗ್ಯಕ್ಕೆ ಒಳ್ಳೆಯದು ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಹೃದ್ರೋಗಕ್ಕೆ ಅಪಾಯಕಾರಿ ಅಂಶಗಳಾದ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತವೆ. ಹೆಚ್ಚುವರಿಯಾಗಿ, ಶುಂಠಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದರ ಜೊತೆಗೆ ರಕ್ತ ಪರಿಚಲನೆಯನ್ನು ಸುಧಾರಿತ್ತದೆ.

6. ಮೆದುಳಿನ ಆರೋಗ್ಯ:

ಇವೆರಡು ಮೆದುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ವಯಸ್ಸಿಗೆ ಸಂಬಂಧಿಸಿದ ಅರಿವಿನ ಸಾಮರ್ಥ್ಯ ಕಡಿಮೆಯಾಗದಿರಲು, ಮೆದುಳಿನಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಮನಸ್ಥಿತಿ ಮತ್ತು ಸ್ಮರಣ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

ಇದನ್ನೂ ಓದಿ: ಯುವಜನತೆ ಮೆದುಳಿನ ಪಾರ್ಶ್ವವಾಯುವಿಗೆ ಬಲಿಯಾಗುತ್ತಿರುವುದೇಕೆ? ಇದನ್ನು ತಡೆಯುವುದು ಹೇಗೆ?

7. ಕ್ಯಾನ್ಸರ್ ತಡೆಗಟ್ಟುವಿಕೆ:

ಹೆಚ್ಚಿನ ಸಂಶೋಧನೆಗಳಿಂದ ತಿಳಿದುಬಂದ ಪ್ರಕಾರ ಕರ್ಕ್ಯುಮಿನ್ ಮತ್ತು ಜಿಂಜರಾಲ್ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.

ನಿಮ್ಮ ಆಹಾರದಲ್ಲಿ ಅರಿಶಿನ ಮತ್ತು ಶುಂಠಿಯನ್ನು ಸೇರಿಸಿಕೊಳ್ಳುವುದು ಹೇಗೆ?

  • ಅರಿಶಿನ, ಶುಂಠಿ ಮತ್ತು ಇತರ ಮಸಾಲೆಗಳನ್ನು ಸೇರಿಸಿ ಹಾಲಿನೊಂದಿಗೆ ಕುಡಿಯಿರಿ.
  • ಪಲ್ಯಗಳು, ಸೂಪ್ ಇನ್ನಿತರ ಅಡುಗೆಯಲ್ಲಿ ಅರಿಶಿನ ಮತ್ತು ಶುಂಠಿಯನ್ನು ಬಳಸಿ.
  • ತಾಜಾ ಶುಂಠಿ ಮತ್ತು ಅರಿಶಿನ ಪುಡಿಯನ್ನು ಬಿಸಿ ನೀರಿನಲ್ಲಿ ಬೆರೆಸಿ ಒಳ್ಳೆಯ ಚಹಾವನ್ನು ತಯಾರಿಸಿ.
  • ನಿಮಗೆ ಯಾವುದಾದರೂ ಆರೋಗ್ಯ ಸಮಸ್ಯೆಗಳಿದ್ದರೆ ಮೊದಲು ವೈದ್ಯರನ್ನು ಸಂಪರ್ಕಿಸಿ ಆ ಬಳಿಕ ಇದರ ಸೇವನೆ ಮಾಡಿ.
  • ಗರ್ಭಿಣಿಯರು ಮತ್ತು ಹಾಲುಣಿಸುವವರು ಅರಿಶಿನ ಮತ್ತು ಶುಂಠಿಯನ್ನು ಒಟ್ಟಿಗೆ ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: