Health Tips: ಹಸುವಿನ ಹಾಲು vs ಎಮ್ಮೆಯ ಹಾಲು, ಮಕ್ಕಳಿಗೆ ಯಾವುದು ಬೆಸ್ಟ್?

| Updated By: Rakesh Nayak Manchi

Updated on: Jun 11, 2022 | 7:00 AM

ಹಸುವಿನ ಹಾಲು ಎಮ್ಮೆಯ ಹಾಲಿಗಿಂತ ಕಡಿಮೆ ಕೊಬ್ಬ ಇರುವುದರಿಂದ ಹಾಗೂ ಹಗುರವಾಗಿರುವುದರಿಂದ ಒಂದು ವರ್ಷದೊಳಗಿನ ಶಿಶುಗಳಿಗೆ ಎಮ್ಮೆಯ ಹಾಲಿಗಿಂತ ಹಸುವಿನ ಹಾಲಿಗೆ ಆದ್ಯತೆ ನೀಡಲಾಗುತ್ತದೆ. ಏಕೆಂದರೆ ಈ ಹಾಲು ಸುಲಭವಾಗಿ ಜೀರ್ಣವಾಗುತ್ತದೆ.

Health Tips: ಹಸುವಿನ ಹಾಲು vs ಎಮ್ಮೆಯ ಹಾಲು, ಮಕ್ಕಳಿಗೆ ಯಾವುದು ಬೆಸ್ಟ್?
ಸಾಂಕೇತಿಕ ಚಿತ್ರ
Follow us on

ಹಾಲಿನಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಅಗತ್ಯ ಅಂಶಗಳನ್ನು ಒಳಗೊಂಡಿರುವುದರಿಂದ ಅದನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ವಿಟಮಿನ್‌ಗಳು, ಖನಿಜಗಳು ಮತ್ತು ಕೊಬ್ಬಿನಂಶದಲ್ಲಿ ಅಧಿಕವಾಗಿದೆ. ಇದರ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅಂಶವು ಮಕ್ಕಳ ಒಟ್ಟಾರೆ ದೇಹದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಲು ವಿವಿಧ ರೂಪಗಳಲ್ಲಿ ಬರುತ್ತದೆ. ಈ ಪೈಕಿ ಹಸು (Cow) ಮತ್ತು ಎಮ್ಮೆ (Buffalo) ಹಾಲು ಸಾಮಾನ್ಯವಾಗಿದೆ. ಹೀಗಿದ್ದಾಗ ಮಕ್ಕಳಿಗೆ ಯಾವ ಹಾಲು (Milk) ಉತ್ತಮ ಎಂದು ತಿಳಿಯಲು ಈ ಸುದ್ದಿ ಓದಿ.

ಇದನ್ನೂ ಓದಿ: Nervous System: ನರಮಂಡಲದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಹಸುವಿನ ಹಾಲು ಹೇಗಿದೆ?

ಹಸುವಿನ ಹಾಲು ಎಮ್ಮೆಯ ಹಾಲಿಗಿಂತ ಕಡಿಮೆ ಕೊಬ್ಬನ್ನು ಹೊಂದಿರುತ್ತದೆ. ಇದು ಹಗುರವಾಗಿರುತ್ತದೆ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ. ಹಸುವಿನ ಹಾಲು ಎಮ್ಮೆಯ ಹಾಲಿಗಿಂತ ದಪ್ಪವಾಗಿರುತ್ತದೆ ಮತ್ತು ಕೆನೆಭರಿತವಾಗಿರುತ್ತದೆ. ಪರಿಣಾಮವಾಗಿ, ಅದರೊಂದಿಗೆ ಮೊಸರು, ಪನೀರ್, ಖೀರ್, ಕುಲ್ಫಿ ಮತ್ತು ತುಪ್ಪದಂತಹ ಆಹಾರಗಳನ್ನು ಮತ್ತು ರಸಗುಲ್ಲಾ, ರಸಮಲೈ ಹಸುವಿನ ಹಾಲಿನಿಂದ ಮಾಡಿದ ಸಿಹಿತಿಂಡಿಗಳಾಗಿವೆ.

ಎಮ್ಮೆ ಹಾಲು ಹೇಗಿದೆ?

ಎಮ್ಮೆ ಹಾಲು ಹಸುವಿನ ಹಾಲಿಗಿಂತ ಸುಮಾರು 11 ಪ್ರತಿಶತ ಹೆಚ್ಚು ಪ್ರೋಟೀನ್ ಅನ್ನು ಹೊಂದಿರುತ್ತದೆ. ಲಿಪಿಡ್‌ಗಳಂತಹ ಪ್ರೋಟೀನ್‌ಗಳು ನವಜಾತ ಶಿಶುಗಳಿಗೆ ಜೀರ್ಣಿಸಿಕೊಳ್ಳಲು ಕಷ್ಟ. ನಿಮ್ಮ ಒಂದು ವರ್ಷದ ಮಗುವಿಗೆ ಹಸುವಿನ ಹಾಲು ಯೋಗ್ಯವಾಗಿರಲು ಇದು ಮತ್ತೊಂದು ಕಾರಣವಾಗಿದೆ. ಹಸುವಿನ ಹಾಲಿಗೆ ಹೋಲಿಸಿದರೆ ಎಮ್ಮೆ ಹಾಲಿನಲ್ಲಿ ಕೊಬ್ಬಿನಾಂಶ ಹೆಚ್ಚಿದೆ ಮತ್ತು ದಪ್ಪವಾದ ಸ್ಥಿರತೆಯನ್ನು ಹೊಂದಿರುತ್ತದೆ. ಹಸುವಿನ ಹಾಲಿನಲ್ಲಿ ಶೇ.3-4ರಷ್ಟು ಕೊಬ್ಬಿನ ಅಂಶವಿದ್ದರೆ, ಎಮ್ಮೆಯ ಹಾಲಿನಲ್ಲಿ ಶೇ.7-8ರಷ್ಟು ಕೊಬ್ಬಿನ ಅಂಶವಿದೆ.

ಇದನ್ನೂ ಓದಿ: Health Tips : ಸ್ಟಾರ್ ಹಣ್ಣಿನಿಂದ ಆರೋಗ್ಯ ವೃದ್ಧಿ

ಯಾವ ಹಾಲು ಮಗುವಿಗೆ ಬೆಸ್ಟ್?

ಹಸುವಿನ ಹಾಲು ಎಮ್ಮೆಯ ಹಾಲಿಗಿಂತ ಕಡಿಮೆ ಕೊಬ್ಬ ಇರುವುದರಿಂದ ಹಾಗೂ ಹಗುರವಾಗಿರುವುದರಿಂದ ಒಂದು ವರ್ಷದೊಳಗಿನ ಶಿಶುಗಳಿಗೆ ಎಮ್ಮೆಯ ಹಾಲಿಗಿಂತ ಹಸುವಿನ ಹಾಲಿಗೆ ಆದ್ಯತೆ ನೀಡಲಾಗುತ್ತದೆ. ಏಕೆಂದರೆ ಮಗು ಹಾಲನ್ನು ಹೀರಿಕೊಳ್ಳಲು ಮತ್ತು ಜೀರ್ಣಿಸಿಕೊಳ್ಳಲು ಸುಲಭವಾಗಲಿದೆ.

ಹಸುವಿನ ಹಾಲು ಅಥವಾ ಎಮ್ಮೆ ಹಾಲು ಮಕ್ಕಳಿಗೆ ಉತ್ತಮವೇ ಎಂದು ನಿರ್ಧರಿಸಲು ಬಂದಾಗ, ಹಸುವಿನ ಹಾಲೇ ಉತ್ತಮ. ಏಕೆಂದರೆ ಎಮ್ಮೆಯ ಹಾಲಿನಲ್ಲಿ ಹೆಚ್ಚಿನ ಕೊಬ್ಬು ಇದ್ದು, ಜೀರ್ಣಿಸಿಕೊಳ್ಳಲು ಕಠಿಣವಾಗಿದೆ. ಅದಾಗ್ಯೂ ಎಮ್ಮೆಯ ಹಾಲನ್ನು ಆಯ್ಕೆ ಮಾಡಬಹುದು. ಏಕೆಂದರೆ ಇದು ಹಸುವಿನ ಹಾಲಿಗಿಂತ ಹೆಚ್ಚು ಕೊಬ್ಬು, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕ್ಯಾಲೊರಿಗಳನ್ನು ಹೊಂದಿರುತ್ತದೆ, ಇದು ಹೆಚ್ಚು ಪೌಷ್ಟಿಕವಾಗಿದೆ. ಆದರೆ ಶಿಶುಗಳಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು.

ಇದನ್ನೂ ಓದಿ: Health Care: ನಿದ್ರೆ ಒಳ್ಳೆಯದು, ಆದರೆ ಅತಿ ಹೆಚ್ಚು ನಿದ್ರೆ ಮಾಡುವುದರಿಂದಾಗುವ ಆರೋಗ್ಯ ಸಮಸ್ಯೆಗಳೇನು..?

ಮಗುವಿಗೆ ಎಷ್ಟು ಹಾಲು ನೀಡಬೇಕು?

ಕೆಲವರು ತಮ್ಮ ಮಕ್ಕಳಿಗೆ ಹಸುವಿನ ಹಾಲನ್ನು ಎಷ್ಟು ನೀಡಬೇಕು ಎಂಬೂದರ ಬಗ್ಗೆ ಗೊಂದಲದಲ್ಲಿರುತ್ತಾರೆ. ಆದರೆ ಮಗುವಿಗೆ ಪ್ರತಿದಿನ ಮೂರು ಕಪ್‌ಗಳಿಗಿಂತ ಹೆಚ್ಚು ಹಸುವಿನ ಹಾಲನ್ನು ನೀಡಬೇಡಿ. ದಿನಕ್ಕೆ ಒಂದೆರಡು ಕಪ್ ಹಾಲು ಕೊಟ್ಟರೆ ಉತ್ತಮ.

ಸೂಚನೆ: ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ತಜ್ಞರು ಅಥವಾ ವೈದ್ಯರನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆಯಿರಿ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ