ಮೊದಲೆಲ್ಲ ಬಿಪಿ, ಡಯಾಬಿಟಿಸ್ ಶ್ರೀಮಂತರ ಕಾಯಿಲೆ ಎನಿಸಿಕೊಂಡಿತ್ತು. ಆದರೀಗ ಈ ಎರಡೂ ರೋಗಗಳು ಎಲ್ಲ ವರ್ಗ, ವಯಸ್ಸಿನವರಲ್ಲೂ ಸಾಮಾನ್ಯವಾಗಿಬಿಟ್ಟಿದೆ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಮಧುಮೇಹದಿಂದ ಬಳಲುತ್ತಿರುವ ಜನರ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. ವ್ಯಾಯಾಮವು ಮಾನವರ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಎಂಬುದರ ಮಾಹಿತಿ ಇಲ್ಲಿದೆ. ವ್ಯಾಯಾಮದ ಮೂಲಕ ಪ್ರಚೋದಿಸಲ್ಪಡುವ ಸಂಕೀರ್ಣ ಪ್ರಕ್ರಿಯೆಯ ಮೂಲಕ ಸ್ನಾಯುಗಳಿಂದ ಸಕ್ಕರೆಯನ್ನು ಹೀರಿಕೊಳ್ಳಲು ಸಹಾಯ ಮಾಡುವ ಶಕ್ತಿಯಾಗಿ ಪ್ರೋಟೀನ್‌ಗಳು ಕಾರ್ಯ ನಿರ್ವಹಿಸುತ್ತವೆ. ಈ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ಆ ಅಧ್ಯಯನದ ಕೆಲವು ಮುಖ್ಯಾಂಶಗಳು ಇಲ್ಲಿವೆ:
ಸ್ನಾಯುಗಳಲ್ಲಿನ ಪ್ರೋಟೀನ್ ಮಾಪನಕ್ಕೆ ಸಹಾಯ ಮಾಡುವ ಮಾಸ್ ಸ್ಪೆಕ್ಟ್ರೋಮೆಟ್ರಿಯ ಬಳಕೆಯನ್ನು ಅಧ್ಯಯನವು ಒಳಗೊಂಡಿತ್ತು. ಪ್ರೋಟೀನ್ ಚಟುವಟಿಕೆಯು ವಿಶಿಷ್ಟವಾಗಿದೆ ಮತ್ತು ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ. ಪ್ರೋಟೀನ್ ಚಟುವಟಿಕೆಯಲ್ಲಿನ ವ್ಯತ್ಯಾಸವು ಸಕ್ಕರೆ ಹೀರಿಕೊಳ್ಳುವಿಕೆಯ ಮಟ್ಟದಲ್ಲಿನ ವ್ಯತ್ಯಾಸವನ್ನು ಸಹ ಸೂಚಿಸುತ್ತದೆ.
ಸಿಡ್ನಿ ವಿಶ್ವವಿದ್ಯಾನಿಲಯದ ಪ್ರೆಸ್ ಪ್ರಕಾರ, ಅಧ್ಯಯನದ ಹಿರಿಯ ಸಹ-ಲೇಖಕ ಪ್ರೊಫೆಸರ್ ಡೇವಿಡ್ ಜೇಮ್ಸ್ ಈ ರೀತಿ ಹೇಳಿದ್ದಾರೆ. ವ್ಯಾಯಾಮವು ನಮಗೆ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇದು ನಿರ್ದಿಷ್ಟ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. ಉದಾಹರಣೆಗೆ, ಊಟದ ನಂತರ ರಕ್ತದಿಂದ ಸಕ್ಕರೆಯನ್ನು ಹೀರಿಕೊಳ್ಳುವ ನಮ್ಮ ಸ್ನಾಯುಗಳ ಸಾಮರ್ಥ್ಯವನ್ನು ಇದು ಸುಧಾರಿಸುತ್ತದೆ.
ಈ ಪ್ರಕ್ರಿಯೆಯು ವಿಫಲವಾದಾಗ ಇದನ್ನು ‘ಪ್ರಿಡಯಾಬಿಟಿಸ್’ ಎಂದು ಕರೆಯಲಾಗುತ್ತದೆ. 2ನೇ ಟೈಪ್ನ 2 ಡಯಾಬಿಟಿಸ್ ಮತ್ತು ಕೆಲವು ರೀತಿಯ ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳಿಗೆ ಇದು ಅಪಾಯಕಾರಿ ಅಂಶವಾಗಿದೆ. ಪ್ರಿಡಿಯಾಬಿಟಿಸ್‌ಗೆ ಕಾರಣವೇನು ಎಂದು ಸಂಶೋಧಕರಿಗೆ ತಿಳಿದಿಲ್ಲ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಯಾಬಿಟಿಸ್ ಆ್ಯಂಡ್ ಡೈಜೆಸ್ಟಿವ್ ಕ್ಲಿನಿಕಲ್ ನಡೆಸಿದ ಅಧ್ಯಯನವು ಮೂರು ವರ್ಷಗಳವರೆಗೆ ಮಧುಮೇಹ ಅಪಾಯದಲ್ಲಿರುವ ಜನರೊಂದಿಗೆ ಅಧ್ಯಯನ ನಡೆಸಿದೆ. ನಿಯಮಿತ ವ್ಯಾಯಾಮವು ಟೈಪ್ 2 ಡಯಾಬಿಟಿಸ್ ಸಮಸ್ಯೆಯ ಅಪಾಯವನ್ನು ಶೇ. 58ರಷ್ಟು ಕಡಿಮೆ ಮಾಡುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಹಾಗಿರುವಾಗ ವ್ಯಾಯಾಮದ ಮೂಲಕ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಎಂಬುದು ಈ ಕೆಳಗಿನಂತಿದೆ.
ವ್ಯಾಯಾಮದಿಂದ ಪ್ರಯೋಜನಗಳು:
*ತೂಕದ ನಿಯಂತ್ರಣ
*ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ
*ಬಲವಾದ ಸ್ನಾಯುಗಳು
*ಬಲವಾದ ಮೂಳೆಗಳು
*ಮನಸ್ಥಿತಿ ಸುಧಾರಣೆ
*ಶಕ್ತಿ
*ಉತ್ತಮ ನಿದ್ರೆ
*ಒತ್ತಡ ನಿರ್ವಹಣೆ
ಮಧುಮೇಹ ಸಮಸ್ಯೆ ಹೊಂದಿರುವವರಿಗೆ ಹೃದಯ ಸಂಬಂಧಿ ಖಾಯಿಲೆಗಳು ಕಾಣಿಸಿಕೊಳ್ಳುವುದು ಹೆಚ್ಚು. ಹಾಗಿರುವಾಗ ಹೃದಯವನ್ನು ಆರೋಗ್ಯವಾಗಿರಿಸಲು ಮತ್ತು ಸದೃಢವಾಗಿರಿಸಲು ವ್ಯಾಯಾಮ ಅತ್ಯವಶ್ಯಕ. ಜತೆಗೆ ವ್ಯಾಯಾಮ ಮಾಡುವ ಮೂಲಕ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಹಾಗಾಗಿ ಪ್ರತಿನಿತ್ಯ ವ್ಯಾಯಾಮ ಅಭ್ಯಾಸ ಆರೋಗ್ಯಕ್ಕೆ ಪ್ರಯೋಜನಗಳನ್ನು ನೀಡುತ್ತದೆ ಎಂದು ಅಧ್ಯಯನ ತಿಳಿಸಿದೆ.
ಇದನ್ನೂ ಓದಿ: Health Tips: ಮೊಟ್ಟೆಗಿಂತಲೂ ಹೆಚ್ಚು ಪ್ರೋಟೀನ್ ಇರುವ 5 ಸಸ್ಯಾಹಾರಿ ಆಹಾರಗಳಿವು
Diabetes: ಟೈಪ್ 2 ಮಧುಮೇಹದ ಈ ಮುಖ್ಯ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!