ಕೋಲ್ಡ್ ಡ್ರಿಂಕ್ಸ್ (Cold Drinks) ಕುಡಿಯದಿರುವವರು ಯಾರಿದ್ದಾರೆ? ಅಂಗಡಿಗಳಲ್ಲಿ, ಬೇಕರಿಗಳಲ್ಲಿ ನಾನಾ ಬ್ರಾಂಡ್ಗಳ, ಹಲವು ಬಣ್ಣಗಳ, ವಿವಿಧ ರೀತಿಯ ಫ್ಲೇವರ್ನ ಸಾಫ್ಟ್ ಡ್ರಿಂಕ್ಗಳು (Soft Drinks) ಸಿಗುತ್ತವೆ. ಆದರೆ, ಈ ತಂಪು ಪಾನೀಯಗಳು ಅಧಿಕ ಸಕ್ಕರೆ ಅಂಶ, ಸೋಡಾ, ಸಂರಕ್ಷಕಗಳನ್ನು ಹೊಂದಿರುತ್ತದೆ. ಇವು ಮಧುಮೇಹ, ರಕ್ತದೊತ್ತಡ, ಹೃದ್ರೋಗ (Heart Problems) ಮುಂತಾದ ಗಂಭೀರ ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು. ಹಾಗಾಗಿ, ನೀವು ತಂಪು ಪಾನೀಯಗಳ ಬದಲು ನಿಮ್ಮ ದಿನನಿತ್ಯದ ಆಹಾರದಲ್ಲಿ ಈ ಆರೋಗ್ಯಕರ ಪಾನೀಯಗಳನ್ನು ಸೇರಿಸಿಕೊಳ್ಳಬಹುದು.
ದ್ರಾಕ್ಷಿ ಜ್ಯೂಸ್:
ಅಧಿಕ ಸಕ್ಕರೆಯ ಅಂಶವಿರುವ ತಂಪು ಪಾನೀಯಗಳನ್ನು ಸೇವಿಸುವ ಬದಲು ದ್ರಾಕ್ಷಿ ಜ್ಯೂಸ್ ಸೇವಿಸಬಹುದು. ದ್ರಾಕ್ಷಿ ಹಣ್ಣಿನಲ್ಲಿ 2 ಪ್ರಾಥಮಿಕ ಉತ್ಕರ್ಷಣ ನಿರೋಧಕಗಳಾದ ನರಿಂಗಿನ್ ಮತ್ತು ನರಿಂಗೆನಿನ್ ಇದೆ. ಇವು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಮತ್ತು ಲಿವರ್ನ ಕೋಶಗಳನ್ನು ರಕ್ಷಿಸುವ ಮೂಲಕ ನಿಮ್ಮ ಲಿವರ್ ಅನ್ನು ಆರೋಗ್ಯಕರವಾಗಿರಿಸುತ್ತದೆ.
ಇದನ್ನೂ ಓದಿ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನುಗ್ಗೆ ಸೊಪ್ಪಿನ ಜ್ಯೂಸ್ ಯಾಕೆ ಕುಡಿಯಬೇಕು?
ಬೀಟ್ರೂಟ್ ಜ್ಯೂಸ್:
ಬೀಟ್ರೂಟ್ ಜ್ಯೂಸ್ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ನೈಟ್ರೇಟ್ ಮತ್ತು ಉತ್ಕರ್ಷಣ ನಿರೋಧಕಗಳು ಲಿವರ್ನ ಆಕ್ಸಿಡೇಟಿವ್ ಹಾನಿ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಿಂಬೆ ಜ್ಯೂಸ್:
ನಿಂಬೆ ನೀರನ್ನು ಕುಡಿಯುವುದರಿಂದ ನಿಂಬೆಯಲ್ಲಿ ಕಂಡುಬರುವ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಲಿವರ್ಗೆ ಸಂಬಂಧಿಸಿದ ಅನೇಕ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಲಿವರ್ನಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಗ್ರೀನ್ ಟೀ:
ಗ್ರೀನ್ ಟೀಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ (NAFLD)ಯಿಂದ ಬಳಲುತ್ತಿರುವ ರೋಗಿಗಳಲ್ಲಿ ಲಿವರ್ನ ಕಿಣ್ವದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹಣ್ಣಿನ ಜ್ಯೂಸ್:
ಹಣ್ಣಿನ ಜ್ಯೂಸ್ಗಳಲ್ಲಿ ಖನಿಜಗಳು ಮತ್ತು ವಿಟಮಿನ್ ಸಮೃದ್ಧವಾಗಿವೆ. ಇದು ನಿರ್ಜಲೀಕರಣವನ್ನು ತಡೆಯುತ್ತದೆ.
ಇದನ್ನೂ ಓದಿ: ಟೈಫಾಯ್ಡ್ನಿಂದ ಪಾರಾಗಲು ಟೊಮ್ಯಾಟೋ ಜ್ಯೂಸ್ ಸೇವಿಸಿ; ಇಲ್ಲಿದೆ ಅಚ್ಚರಿಯ ಸಂಗತಿ
ಹಾಲು:
ನಿಮಗೆ ಲ್ಯಾಕ್ಟೋಸ್ ಅಸಹಿಷ್ಣುತೆ ಇಲ್ಲದಿದ್ದರೆ ಹಾಲು ನಿಮಗೆ ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ.
ಎಳನೀರು:
ಎಳನೀರಿನಲ್ಲಿ ಕ್ಯಾಲೋರಿ ಕಡಿಮೆಯಾಗಿರುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಅಂಶ ಸಮೃದ್ಧವಾಗಿದೆ. ತೂಕ ಇಳಿಸಿಕೊಳ್ಳಲು ಬಯಸುವ ಮಹಿಳೆಯರಿಗೆ ಎಳನೀರು ಉತ್ತಮವಾಗಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ