ಇನ್ನುಮುಂದೆ ಚಾಕೋಲೇಟ್ ತಿನ್ನಲು ಹಿಂಜರಿಯಬೇಡಿ; ಯಾಕೆ ಅಂತೀರಾ?

|

Updated on: Oct 05, 2023 | 8:48 PM

2005ರ ಅಧ್ಯಯನವು ಡಾರ್ಕ್ ಚಾಕೊಲೇಟ್ ಅನ್ನು ತಿನ್ನುವುದರಿಂದ ವಿವಿಧ ರೀತಿಯ ಕ್ಯಾನ್ಸರ್‌ನಿಂದ ದೇಹವನ್ನು ರಕ್ಷಿಸಬಹುದು ಎಂದಿದೆ. ಡಾರ್ಕ್ ಚಾಕೊಲೇಟ್ ಅಧಿಕ ರಕ್ತದೊತ್ತಡ, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಡಾರ್ಕ್ ಚಾಕೊಲೇಟ್ ಹೃದ್ರೋಗವನ್ನು ಕಡಿಮೆ ಮಾಡುತ್ತದೆ.

ಇನ್ನುಮುಂದೆ ಚಾಕೋಲೇಟ್ ತಿನ್ನಲು ಹಿಂಜರಿಯಬೇಡಿ; ಯಾಕೆ ಅಂತೀರಾ?
ಡಾರ್ಕ್ ಚಾಕೊಲೇಟ್‌
Image Credit source: iStock
Follow us on

ಚಾಕೊಲೇಟ್‌ಗಳು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟದ ಆಹಾರ. ಪ್ರತಿಯೊಬ್ಬರೂ ಚಾಕೋಲೇಟ್ ತಿನ್ನಲು ಇಷ್ಟಪಡುತ್ತಾರೆ. ಚಾಕೋಲೇಟ್ ತಿನ್ನುವುದರಿಂದ ಆರೋಗ್ಯಕ್ಕೆ ಸಮಸ್ಯೆಗಳು ಉಂಟಾಗುತ್ತವೆ ಎಂದು ಕೆಲವರು ಹೆದರುತ್ತಾರೆ. ಅಂಥವರು ಡಾರ್ಕ್ ಚಾಕೊಲೇಟ್‌ಗಳನ್ನು ಸೇವಿಸಬಹುದು. ಈ ಡಾರ್ಕ್ ಚಾಕೋಲೇಟ್​ ಅರೆ ಸಿಹಿಯಾಗಿರುತ್ತವೆ. ಸಿಹಿ ಮತ್ತು ಕಹಿ ರುಚಿಯನ್ನು ಹೊಂದಿರುವ ಈ ಚಾಕೋಲೇಟ್​ಗಳನ್ನು ಕೋಕೋ ಬೀಜಗಳಿಂದ ತಯಾರಿಸಲಾಗುತ್ತದೆ. ಕಡಿಮೆ ಹಾಲಿನೊಂದಿಗೆ ಹುರಿದ ಮತ್ತು ರುಬ್ಬಿದ ಕೋಕೋಗೆ ಸ್ವಲ್ಪ ಸಕ್ಕರೆಯನ್ನು ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಇದರಲ್ಲಿ ಅತಿ ಹೆಚ್ಚು ಪರ್ಸೆಂಟ್ ಕೋಕೋ ಇರುತ್ತದೆ.

ಚಾಕೋಲೇಟ್ ಅನ್ನು ಮೆಕ್ಸಿಕೋದಲ್ಲಿ ಕಂಡುಹಿಡಿಯಲಾಯಿತು. ಅಲ್ಲಿ ಮಾಯನ್ನರು ಮತ್ತು ಅಜ್ಟೆಕ್‌ಗಳು ಕೋಕೋ ಮರವನ್ನು ಬೆಳೆಸಿದರು. ಡಾರ್ಕ್ ಚಾಕೋಲೇಟ್ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ: Health Tips: ನೀವು ಮಧುಮೇಹಿಗಳಾಗಿದ್ದು , ಚಾಕೊಲೇಟ್‌ಗಳನ್ನು ತಿನ್ನಲು ಇಷ್ಟಪಡುತ್ತೀರಾ? ಮನೆಯಲ್ಲೇ ಆರೋಗ್ಯಕರ ಚಾಕೋಲೇಟ್ ತಯಾರಿಸಿ

ಡಾರ್ಕ್ ಚಾಕೊಲೇಟ್ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತದೆ. ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಡಾರ್ಕ್ ಚಾಕೊಲೇಟ್ ಹೃದ್ರೋಗವನ್ನು ಕಡಿಮೆ ಮಾಡುತ್ತದೆ. ಹಾಗೇ, ಮೆದುಳಿನ ಕಾರ್ಯಗಳನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್ ವಿರೋಧಿ ಏಜೆಂಟ್ ಆಗಿಯೂ ಡಾರ್ಕ್ ಚಾಕೊಲೇಟ್ ಕಾರ್ಯನಿರ್ವಹಿಸುತ್ತದೆ.

ಡಾರ್ಕ್ ಚಾಕೊಲೇಟ್ ಫ್ಲೇವನಾಯ್ಡ್‌ಗಳು ಮತ್ತು ಕೋಕೋ ಮೂಲದ ಪೆಂಟಾಮೆರಿಕ್ ಪ್ರೊಸೈನಿಡಿನ್‌ನಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಕಾರ್ಯನಿರ್ವಹಿಸುತ್ತದೆ. ಈ ಸ್ವತಂತ್ರ ರಾಡಿಕಲ್​ಗಳು ಆಕ್ಸಿಡೇಟಿವ್ ಸೆಲ್ ಹಾನಿಯನ್ನು ಉಂಟುಮಾಡುತ್ತವೆ. ಇದು ಕ್ಯಾನ್ಸರ್​ಗೆ ಕಾರಣವಾಗಬಹುದು. 2005ರ ಅಧ್ಯಯನವು ಡಾರ್ಕ್ ಚಾಕೊಲೇಟ್ ಅನ್ನು ತಿನ್ನುವುದರಿಂದ ವಿವಿಧ ರೀತಿಯ ಕ್ಯಾನ್ಸರ್‌ನಿಂದ ದೇಹವನ್ನು ರಕ್ಷಿಸಬಹುದು ಎಂದಿದೆ.

ಇದನ್ನೂ ಓದಿ: ದೇಹದ ಕೆಟ್ಟ ಕೊಬ್ಬು ಕರಗಿಸಲು ಬೆಂಡೆಕಾಯಿ ತಿಂದು ನೋಡಿ…

ಡಾರ್ಕ್ ಚಾಕೊಲೇಟ್ ಥಿಯೋಬ್ರೊಮಿನ್ ಸಂಯುಕ್ತವನ್ನು ಹೊಂದಿದೆ. ಇದು ಹಲ್ಲಿನ ದವಡೆಯನ್ನು ಗಟ್ಟಿಯಾಗಿಸಲು ಸಹಾಯ ಮಾಡುತ್ತದೆ. ಇದು ಸರಿಯಾದ ಹಲ್ಲಿನ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಮತ್ತು ಹಲ್ಲಿನ ಹುಳುಕುಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಡಾರ್ಕ್ ಚಾಕೊಲೇಟ್ ಮೆಗ್ನೀಸಿಯಮ್ ಮತ್ತು ಫ್ಲೇವನಾಯ್ಡ್‌ಗಳನ್ನು ಹೊಂದಿದ್ದು, ಅದು ಟೈಪ್-2 ಮಧುಮೇಹದ ವಿರುದ್ಧ ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ.

ಗರ್ಭಿಣಿಯರಿಗೆ ಡಾರ್ಕ್ ಚಾಕೊಲೇಟ್ ಸೇವಿಸಲು ಸೂಚಿಸಲಾಗುತ್ತದೆ. ಗರ್ಭಿಣಿಯ ಆರೋಗ್ಯ ಮತ್ತು ಭ್ರೂಣದ ಬೆಳವಣಿಗೆಗೆ ಪೂರಕವಾದ ಅಂಶಗಳು ಕೂಡ ಡಾರ್ಕ್ ಚಾಕೊಲೇಟ್​ಗಳಲ್ಲಿ ಇವೆ. ಹಾಗೇ, ಸೂರ್ಯನ ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಡಾರ್ಕ್ ಚಾಕೊಲೇಟ್ ನೆರವಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ