Okra for diabetics: ಮಧುಮೇಹಿಗಳು ಏಕೆ ಬೆಂಡೆಕಾಯಿ ಸೇವನೆ ಮಾಡಬೇಕು? ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?
ಮಧುಮೇಹಿಗಳು, ಅದರಲ್ಲಿಯೂ ಟೈಪ್ 2 ಮಧುಮೇಹ ಹೊಂದಿರುವವರು ತಮ್ಮ ಆಹಾರದ ಬಗ್ಗೆ ಜಾಗರೂಕರಾಗಿರಬೇಕು. ಹಾಗಾಗಿ ಬೆಂಡೆಕಾಯಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ ಏಕೆಂದರೆ ಬೆಂಡೆಕಾಯಿ ಮಧುಮೇಹಿಗಳಿಗೆ ಅನೇಕ ರೀತಿಯ ಪ್ರಯೋಜನಗಳನ್ನು ಹೊಂದಿದೆ. ಅಲ್ಲದೆ ಬೆಂಡೆಕಾಯಿ ಪೌಷ್ಠಿಕಾಂಶಗಳಿಂದ ತುಂಬಿದ್ದು, ಹಲವಾರು ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗಾದರೆ ಯಾವ ರೀತಿಯಲ್ಲಿ ಬೆಂಡೆಕಾಯಿ ಆರೋಗ್ಯಕ್ಕೆ ಪೂರಕ ತರಕಾರಿಯಾಗಿದೆ ಎಂಬುದನ್ನು ತಿಳಿದುಕೊಳ್ಳಿ.

ಬೆಂಡೆಕಾಯಿಯನ್ನು ಹೆಚ್ಚಾಗಿ ಭಾರತೀಯ ಮನೆಗಳಲ್ಲಿ ವಿವಿಧ ರೀತಿಯ ಖಾದ್ಯಗಳಿಗೆ ಬಳಸಲಾಗುತ್ತದೆ. ರೊಟ್ಟಿ ಜೊತೆ ಬೆಂಡೆಕಾಯಿ ಪಲ್ಯ, ಎಲ್ಲಾ ಭಾಗದಲ್ಲಿಯೂ ಜನಪ್ರಿಯ ಆಹಾರವಾಗಿ ಗುರುತಿಸಿಕೊಂಡಿದೆ, ಇದನ್ನು ನಾವು ಮಧ್ಯಾಹ್ನ ಅಥವಾ ರಾತ್ರಿ ಊಟಕ್ಕೂ ಸೇರಿಸಿಕೊಂಡು ಆನಂದಿಸುತ್ತೇವೆ. ಬೆಂಡೆಕಾಯಿ ಮಧುಮೇಹಿಗಳಿಗೆ ಪ್ರಯೋಜನಕಾರಿಯಾದ ಸೂಪರ್ಫುಡ್ ಆಗಿದೆ ಎಂಬುದು ನಿಮಗೆ ತಿಳಿದಿರಬಹುದು. ಇದಕ್ಕೆ ಪೂರಕ ವೆಂಬಂತೆ ಯುಎಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹುರಿದ ಬೆಂಡೆಕಾಯಿ ಬೀಜಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಬೆಂಡೆಕಾಯಿಯ ಮಧುಮೇಹಿಗಳಿಗೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ ಎಂದು ಸಾಬೀತು ಪಡಿಸಿದೆ.
ಬೆಂಡೆಕಾಯಿಯ ಪೌಷ್ಠಿಕಾಂಶದ ಮೌಲ್ಯ;
ಬೆಂಡೆಕಾಯಿ ಪೌಷ್ಠಿಕಾಂಶ ಭರಿತ ತರಕಾರಿಯಾಗಿದ್ದು, ಇದು ಹಲವಾರು ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ ಎಂದು ವಾರಣಾಸಿಯ ಸಿಗ್ನಸ್ ಲಕ್ಷ್ಮಿ ಆಸ್ಪತ್ರೆಯ ತುರ್ತು ಔಷಧ ವಿಭಾಗದ ಡಾ. ಮೊಹಮ್ಮದ್ ಸಫೀರ್ ಹೈದರ್ ಹೇಳುತ್ತಾರೆ. ನೂರು ಗ್ರಾಂ ಹಸಿ ಬೆಂಡೆಕಾಯಿ ಒಳಗೊಂಡಿರುವ ಪೌಷ್ಠಿಕಾಂಶಗಳು ಈ ಕೆಳಗಿನಂತಿವೆ.
• ಕ್ಯಾಲೋರಿಗಳು: ಸರಿಸುಮಾರು 33 ಕ್ಯಾಲೊರಿಗಳು
• ಕಾರ್ಬೋಹೈಡ್ರೇಟ್ಗಳು: ಸುಮಾರು 7 ಗ್ರಾಂ
• ಫೈಬರ್: ಸರಿಸುಮಾರು 3 ಗ್ರಾಂ
• ಪ್ರೋಟೀನ್: ಸುಮಾರು 2 ಗ್ರಾಂ
• ಕೊಬ್ಬು: 1 ಗ್ರಾಂ ಗಿಂತ ಕಡಿಮೆ
• ವಿಟಮಿನ್ ಗಳು: ಬೆಂಡೆಕಾಯಿ ವಿಟಮಿನ್ ಸಿ, ಕೆ ಮತ್ತು ಫೋಲೇಟ್ ನ ಉತ್ತಮ ಮೂಲವಾಗಿದೆ.
• ಖನಿಜಗಳು: ಹಸಿರು ಬಣ್ಣದ ತರಕಾರಿಯಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಇರುತ್ತದೆ.
ಮಧುಮೇಹಿಗಳಿಗೆ ಬೆಂಡೆಕಾಯಿ ಸೇವನೆಯು ಯಾವ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ?
1. ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ: ಬೆಂಡೆಕಾಯಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ, ಅಂದರೆ ಇದು ತ್ವರಿತ ಸ್ಪೈಕ್ಗಳನ್ನು ತಡೆಯುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
2. ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದೆ: ಬೆಂಡೆಕಾಯಿಯಲ್ಲಿರುವ ಫೈಬರ್ ಜೀರ್ಣಕ್ರಿಯೆ ಮತ್ತು ಕಾರ್ಬೋಹೈಡ್ರೇಟ್ ಗಳ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಊಟದ ನಂತರ ರಕ್ತದಲ್ಲಿನ ಸಕ್ಕರೆಯ ಸ್ಪೈಕ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
3. ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ: ಬೆಂಡೆಕಾಯಿಯಲ್ಲಿ ಕ್ವೆರ್ಸೆಟಿನ್ ಮತ್ತು ಕ್ಯಾಟೆಚಿನ್ ಗಳಂತಹ ಉತ್ಕರ್ಷಣ ನಿರೋಧಕಗಳಿವೆ, ಇದು ಅಧಿಕ ರಕ್ತದ ಸಕ್ಕರೆ ಮಟ್ಟದಿಂದ ಉಂಟಾಗುವ ಹಾನಿಯಿಂದ ಜೀವಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.
4. ಇನ್ಸುಲಿನ್ ಪರಿಣಾಮಕಾರಿಯಾಗಿ ಬಳಸಲು ಸಹಾಯ ಮಾಡುತ್ತದೆ: ಬೆಂಡೆಕಾಯಿ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ, ದೇಹವು ಇನ್ಸುಲಿನ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಸಹಾಯ ಮಾಡುತ್ತದೆ. ಇನ್ಸುಲಿನ್ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಹಾರ್ಮೋನ್ ಆಗಿರುವುದರಿಂದ ಬೆಂಡೆಕಾಯಿ ಇವೆಲ್ಲದಕ್ಕೂ ಮುಖ್ಯವಾಗಿದೆ.
ಇದನ್ನೂ ಓದಿ:ಬೆಂಡೆಕಾಯಿ ಫೇಸ್ ಪ್ಯಾಕ್ ಬಳಸಿ, ಮುಖದ ಕಾಂತಿ ಹೆಚ್ಚಿಸಿ
ಮಧುಮೇಹಿಗಳು ಬೆಂಡೆಕಾಯಿ ನೀರನ್ನು ಸೇವನೆ ಮಾಡಬಹುದೇ?
ಬೆಂಡೆಕಾಯಿ ನೀರನ್ನು ಬೆಳಿಗ್ಗೆ ಕುಡಿಯುವುದು ಮಧುಮೇಹಕ್ಕೆ ಮನೆಮದ್ದು ಎಂದು ಅನೇಕರು ನಂಬುತ್ತಾರೆ. ಇದು ಕತ್ತರಿಸಿದ ಬೆಂಡೆಕಾಯಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ನಂತರ ಬೆಳಿಗ್ಗೆ ಆ ನೀರನ್ನು ಕುಡಿಯುವುದನ್ನು ಒಳಗೊಂಡಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕೆಲವರು ನಂಬಿದರೂ, ಈ ಅಭ್ಯಾಸವನ್ನು ಬೆಂಬಲಿಸುವ ವೈಜ್ಞಾನಿಕ ಪುರಾವೆಗಳು ಸೀಮಿತವಾಗಿವೆ ಎಂದು ಡಾ. ಮೊಹಮ್ಮದ್ ಸಫೀರ್ ಹೈದರ್ ಹೇಳುತ್ತಾರೆ. ಇನ್ನು ಯುಎಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ನಲ್ಲಿ ಪ್ರಕಟವಾದ 2015 ರ ಅಧ್ಯಯನವು ಬೆಂಡೆಕಾಯಿ ನೀರು, ಗರ್ಭಾವಸ್ಥೆಯಲ್ಲಿ ಮಧುಮೇಹ ಹೊಂದಿರುವ ಗರ್ಭಿಣಿ ಇಲಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸಿದೆ ಎಂದು ತೋರಿಸಿದೆ. ಆದರೆ ಮನುಷ್ಯರು ಬೆಂಡೆಕಾಯಿ ನೀರನ್ನು ಕುಡಿಯುವುದು ಒಳ್ಳೆಯದು ಎಂದು ಹೇಳುವ ಯಾವುದೇ ಅಧ್ಯಯನಗಳಿಲ್ಲ. ಮಧುಮೇಹವನ್ನು ನಿರ್ವಹಿಸಲು ಬೆಂಡೆಕಾಯಿ ನೀರನ್ನು ಮಾತ್ರ ಅವಲಂಬಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಮುಖ್ಯವಾಗಿದೆ.
ಆದರೆ ನೀವು ಯಾವಾಗಲೂ ಮಧುಮೇಹ ಸ್ನೇಹಿ ಆಹಾರದಲ್ಲಿ ಬೆಂಡೆಕಾಯಿಯನ್ನು ಸೇರಿಸಬಹುದು, ಇದಕ್ಕಾಗಿ ನೀವು ತಾಜಾ ಬೆಂಡೆಕಾಯಿಯನ್ನು ತೆಗೆದುಕೊಳ್ಳಬೇಕು. ಈ ಬಗ್ಗೆ ಕೆಲವು ಮಾರ್ಗಗಳನ್ನು ನೀವು ಅನುಸರಿಸಬಹುದು. ಆ ಬಗ್ಗೆ ಇಲ್ಲಿದೆ ಮಾಹಿತಿ:
• ಕಡಿಮೆ ಕ್ಯಾಲೊರಿ ಮತ್ತು ಹೆಚ್ಚಿನ ಫೈಬರ್ ಹೊಂದಿರುವ ಸೈಡ್ ಡಿಶ್ ಆಗಿ ಬೆಂಡೆಕಾಯಿಯನ್ನು ಕಡಿಮೆ ಎಣ್ಣೆ ಮತ್ತು ಮಸಾಲೆಗಳೊಂದಿಗೆ ಹಬೆಯಲ್ಲಿ ಬೇಯಿಸಿ ಅಥವಾ ಹುರಿದು ತಿನ್ನಬಹುದು.
• ಚಿಕನ್ ಅಥವಾ ಟೋಫುನಂತಹ ತೆಳುವಾದ ಪ್ರೋಟೀನ್ ಮೂಲಗಳೊಂದಿಗೆ ಆರೋಗ್ಯಕರ ಬೆಂಡೆಕಾಯಿ ಸೂಪ್ ತಯಾರಿಸಿ, ಮತ್ತು ಸಮತೋಲಿತ ಊಟಕ್ಕಾಗಿ ಇತರ ಪಿಷ್ಟರಹಿತ ತರಕಾರಿಗಳನ್ನು ಸೇರಿಸಿ.
• ಬೆಂಡೆಕಾಯಿಯನ್ನು ತೆಳುವಾದ ಪ್ರೋಟೀನ್ ಮತ್ತು ನಿಮಗಿಷ್ಟವಾದ ತರಕಾರಿಗಳೊಂದಿಗೆ ಹುರಿಯಿರಿ ಇದರಿಂದ ನಿಮಗೆ ಪೌಷ್ಟಿಕ ಆಹಾರ ಸಿಗುತ್ತದೆ.
• ರುಚಿಕರವಾದ ಮತ್ತು ಪೌಷ್ಟಿಕವಾದ ಸೈಡ್ ಡಿಶ್ ಗಾಗಿ ಬೆಂಡೆಕಾಯಿಯನ್ನು ಆಲಿವ್ ಎಣ್ಣೆ ಮತ್ತು ಗಿಡಮೂಲಿಕೆಗಳ ಸ್ಪರ್ಶದೊಂದಿಗೆ ಗ್ರಿಲ್ ಮಾಡಿ.
• ಫೈಬರ್ ಮತ್ತು ಪೋಷಕಾಂಶಗಳ ಹೆಚ್ಚುವರಿ ಉತ್ತೇಜನಕ್ಕಾಗಿ ನಿಮ್ಮ ಬೆಳಗಿನ ಸ್ಮೂಥಿಗೆ ಬೆಂಡೆಕಾಯಿಯನ್ನು ಸೇರಿಸಿ. ಏಕೆಂದರೆ ಬೆಂಡೆಕಾಯಿ ಮಧುಮೇಹ ಆಹಾರಕ್ಕೆ ಮೌಲ್ಯಯುತ ಸೇರ್ಪಡೆಯಾಗಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ