Health Tips: ನೀವು ಮಧುಮೇಹಿಗಳಾಗಿದ್ದು , ಚಾಕೊಲೇಟ್‌ಗಳನ್ನು ತಿನ್ನಲು ಇಷ್ಟಪಡುತ್ತೀರಾ? ಮನೆಯಲ್ಲೇ ಆರೋಗ್ಯಕರ ಚಾಕೋಲೇಟ್ ತಯಾರಿಸಿ
ಈ ಖರ್ಜೂರ ಚಾಕೊಲೇಟ್ ಟೇಸ್ಟಿ ಮಾತ್ರವಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಖರ್ಜೂರದಲ್ಲಿ ಅಪಾರ ವಿಟಮಿನ್ ಅಂಶಗಳನ್ನು ಹೊಂದಿದ್ದು, ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ನೀವು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದು, ಸಾಕಷ್ಟು ವರ್ಷಗಳಿಂದ ಸಿಹಿ ತಿಂಡಿಗಳಿಂದ ದೂರವಿದ್ದೀರಾ? ಸಿಹಿ ತಿಂಡಿಗಳನ್ನು ತಿನ್ನಲು ಬಯಸಿದರೆ, ಮನೆಯಲ್ಲಿಯೇ ಈ ರೆಸಿಪಿಯನ್ನೊಮ್ಮೆ ಪ್ರಯತ್ನಿಸಿ. ಇದು ಆರೋಗ್ಯಕ್ಕೂ ತುಂಬಾ ಉತ್ತಮ. ಮನೆಯ ಅಡುಗೆ ಮನೆಯಲ್ಲಿ ಸಿಗುವ 3 ಸರಳ ಅಡುಗೆ ಪದಾರ್ಥಗಳೊಂದಿಗೆ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದ ಆರೋಗ್ಯಕರ ಖರ್ಜೂರ ಚಾಕೊಲೇಟ್ ಟ್ರೀಟ್ ಇಲ್ಲಿದೆ.
ಈ ಖರ್ಜೂರ ಚಾಕೊಲೇಟ್ ಟೇಸ್ಟಿ ಮಾತ್ರವಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಖರ್ಜೂರದಲ್ಲಿ ಅಪಾರ ವಿಟಮಿನ್ ಅಂಶಗಳನ್ನು ಹೊಂದಿದ್ದು, ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಸರಳ ಚಾಕೊಲೇಟ್ ಅತ್ಯಂತ ರುಚಿಕರ ಹಾಗೂ ಮಧುಮೇಹಿಗಳಿಗೂ ಯಾವುದೇ ಭಯವಿಲ್ಲದೆ ಸೇವಿಸಬಹುದಾಗಿದೆ. ಆದ್ದರಿಂದ, ಈ ಸರಳ ರೆಸಿಪಿಯನ್ನು ನಿಮ್ಮ ಮನೆಯಲ್ಲಿ ಪ್ರಯತ್ನಿಸಿ, ರಚಿಯನ್ನು ಆನಂದಿಸಿ.
ಬೇಕಾಗುವ ಸಾಮಾಗ್ರಿಗಳು:
ಖರ್ಜೂರ– 1ಕಪ್
ಜೇನು ತುಪ್ಪ– 2 ಚಮಚ
ಡಾರ್ಕ್ ಚಾಕೊಲೇಟ್– 200 ಕಿಲೋ ಗ್ರಾಂ
ಮಾಡುವ ವಿಧಾನ :
- ಒಂದು ಕಪ್ ಖರ್ಜೂರ ತೆಗೆದು ಕೊಂಡು, ಅದರ ಬೀಜಗಳನ್ನು ಬೇರ್ಪಡಿಸಿ .
ಚಾಕೊಲೇಟ್ ಕರಗಿಸಲು:
- ಮಧ್ಯಮ ಉರಿಯಲ್ಲಿ ಪ್ಯಾನ್ ಅನ್ನು ಬಿಸಿ ಮಾಡಿ ಮತ್ತು ಅದರ ಮೇಲೆ ನೀರು ತುಂಬಿದ ಪಾತ್ರೆಯನ್ನು ಇಡಿ. ನಂತರ ಅದರ ಮೇಲೆ ಗಾಜಿನ ಬಟ್ಟಲನ್ನು ಇರಿಸಿ.
- ನಂತರ ಚಾಕೊಲೇಟ್ ತುಂಡುಗಳನ್ನು ಸೇರಿಸಿ ಮತ್ತು ಅದನ್ನು ಕರಗಲು ಬಿಡಿ.
- ಚಾಕೊಲೇಟ್ ಕರಗಿದ ನಂತರ, ಬೆಂಕಿಯನ್ನು ಆಫ್ ಮಾಡಿ ಮತ್ತು ತಣ್ಣಗಾಗಲು ಬಿಡಿ.
- ಮುಂದೆ, ಕರಗಿದ ಚಾಕೊಲೇಟ್ ಗೆ ಜೇನುತುಪ್ಪವನ್ನು ಸೇರಿಸಿ.
- ನಂತರ ಖರ್ಜೂರವನ್ನು ಸೇರಿಸಿ ಮತ್ತು ಖರ್ಜೂರ ಮೇಲೆ ಕರಗಿದ ಚಾಕೊಲೇಟ್ ಅನ್ನು ಚೆನ್ನಾಗಿ ಹಚ್ಚಿ
- ನಂತರ ದೊಡ್ಡ ಟ್ರೇ ಅನ್ನು ತೆಗೆದುಕೊಂಡು ಅದರ ಮೇಲೆ ಈ ಖರ್ಜೂರವನ್ನು ಜೋಡಿಸಿ.
- ಈ ಜೋಡಿಸಿದ ಖರ್ಜೂರವನ್ನು 2 ಗಂಟೆಗಳ ಕಾಲ ಫ್ರೀಜರ್‌ನಲ್ಲಿ ಇರಿಸಿ.
- ಮನೆಯಲ್ಲಿ ತಯಾರಿಸಿದ ಆರೋಗ್ಯಕರ ಚಾಕೊಲೇಟ್ ಸವಿಯಲು ಸಿದ್ದ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: