AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Drumstick: ಮಧುಮೇಹ ಕಡಿಮೆ ಮಾಡಿ, ಕೊಬ್ಬನ್ನು ನಿಯಂತ್ರಿಸಲು ಸಹಾಯ ಮಾಡುತ್ತೆ ನುಗ್ಗೆಕಾಯಿ, ಬಳಸುವ ವಿಧಾನಗಳ ತಿಳಿಯಿರಿ

ನೀವು ನುಗ್ಗೆಕಾಯಿಯನ್ನು ಹಲವು ಬಾರಿ ಸೇವಿಸಿರಬಹುದು ಆದರೆ ಅದರಿಂದಾಗುವ ಪ್ರಯೋಜನಗಳ ಬಗ್ಗೆ ನಿಮಗೆ ಮಾಹಿತಿ ಇಲ್ಲದಿರಬಹುದು.

Drumstick: ಮಧುಮೇಹ ಕಡಿಮೆ ಮಾಡಿ, ಕೊಬ್ಬನ್ನು ನಿಯಂತ್ರಿಸಲು ಸಹಾಯ ಮಾಡುತ್ತೆ ನುಗ್ಗೆಕಾಯಿ, ಬಳಸುವ ವಿಧಾನಗಳ ತಿಳಿಯಿರಿ
Drumstick
Follow us
TV9 Web
| Updated By: ನಯನಾ ರಾಜೀವ್

Updated on: Nov 01, 2022 | 1:00 PM

ನೀವು ನುಗ್ಗೆಕಾಯಿಯನ್ನು ಹಲವು ಬಾರಿ ಸೇವಿಸಿರಬಹುದು ಆದರೆ ಅದರಿಂದಾಗುವ ಪ್ರಯೋಜನಗಳ ಬಗ್ಗೆ ನಿಮಗೆ ಮಾಹಿತಿ ಇಲ್ಲದಿರಬಹುದು.

ಹಸಿರು ಎಲೆಗಳು ಮತ್ತು ಕಾಯಿ ಹೊಂದಿರುವ ನುಗ್ಗೆಕಾಯಿ ಸಸ್ಯವು ಔಷಧೀಯ ಗುಣಗಳಿಂದ ಅಮೃದ್ಧವಾಗಿದೆ. ಇದನ್ನು ಡ್ರಮ್ ಸ್ಟಿಕ್ ಎಂದೂ ಕರೆಯುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

ನುಗ್ಗೆಕಾಯಿ ಎಲೆಗಳಿಂದ ಹಿಡಿದು ಕಾಯಿಯವರೆಗೆವರೆಗೆ ಎಲ್ಲವೂ ಪ್ರಯೋಜನಕಾರಿ. ಮಧುಮೇಹ ಮತ್ತು ಕೊಲೆಸ್ಟ್ರಾಲ್‌ನಂತಹ ಸಮಸ್ಯೆಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾದ ಪೋಷಕಾಂಶಗಳನ್ನು ಮೊರಿಂಗಾ ಹೊಂದಿದೆ.

ಇಷ್ಟೇ ಅಲ್ಲ, ಈ ಸಸ್ಯವು ಅನೇಕ ರೋಗಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದರ ಸೇವನೆಯು ಆರೋಗ್ಯಕ್ಕೆ ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ.

ನುಗ್ಗೆಕಾಯಿಯಲ್ಲಿರುವ ಪೋಷಕಾಂಶಗಳು ನುಗ್ಗೆಕಾಯಿ ಕ್ಯಾನ್ಸರ್ ವಿರೋಧಿ ಮತ್ತು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್, ಉರಿಯೂತ ನಿವಾರಕ ಮತ್ತು ಆ್ಯಂಟಿಬಯೋಟಿಕ್ ಗುಣಗಳು ರೋಗಗಳನ್ನು ಗುಣಪಡಿಸುವ ಕೆಲಸ ಮಾಡುತ್ತದೆ. ನುಗ್ಗೆಕಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಬಿ1, ವಿಟಮಿನ್ ಬಿ2, ವಿಟಮಿನ್ ಬಿ3, ವಿಟಮಿನ್ ಬಿ6 ಮತ್ತು ವಿಟಮಿನ್ ಸಿ ಇದೆ.

ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಸತು ಮತ್ತು ಕ್ಯಾಲ್ಸಿಯಂನಂತಹ ಖನಿಜಗಳು ಡ್ರಮ್ಸ್ಟಿಕ್ನಲ್ಲಿ ಕಂಡುಬರುತ್ತವೆ, ಇದು ಅನೇಕ ರೋಗಗಳನ್ನು ದೂರವಿರಿಸಲು ಕೆಲಸ ಮಾಡುತ್ತದೆ.

ನುಗ್ಗೆಕಾಯಿ ಸೇವನೆ ಹೇಗೆ? ನುಗ್ಗೆಕಾಯಿಯನ್ನು ತರಕಾರಿಯಾಗಿ ತಿನ್ನಲಾಗುತ್ತದೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಕೊಲೆಸ್ಟ್ರಾಲ್ ಮತ್ತು ಮಧುಮೇಹದ ಸಮಸ್ಯೆಯನ್ನು ಹೋಗಲಾಡಿಸಲು ನೀವು ಬಯಸಿದರೆ, ಡ್ರಮ್ ಸ್ಟಿಕ್ ಎಲೆಗಳ ಪುಡಿಯನ್ನು ತಯಾರಿಸಿ ತಿನ್ನುವುದು ಒಳ್ಳೆಯದು. ನಾವು ರೊಟ್ಟಿ, ಪರೋಟಾ, ಸೂಪ್ ಮತ್ತು ಉದ್ದಿನಬೇಳೆಗೆ ಸೇರಿಸಿ ನುಗ್ಗೆಕಾಯಿಯನ್ನು ಸಹ ತಿನ್ನಬಹುದು.

ಈ ರೋಗಗಳನ್ನು ಗುಣಪಡಿಸುತ್ತದೆ ಡಯಾಬಿಟಿಸ್ ರೋಗಿಗಳಿಗೆ ಡ್ರಮ್ ಸ್ಟಿಕ್ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ನುಗ್ಗೆಕಾಯಿಯಲ್ಲಿರುವ ಪೋಷಕಾಂಶಗಳು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ರಕ್ತದೊತ್ತಡವನ್ನೂ ನಿಯಂತ್ರಣದಲ್ಲಿರಿಸಲು ಸಹಾಯವಾಗುತ್ತದೆ.

ನುಗ್ಗೆಕಾಯಿ ತೂಕ ನಷ್ಟಕ್ಕೆ ಸಹಕಾರಿ ನುಗ್ಗೆಕಾಯಿಯು ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ಕೊಬ್ಬನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ. ತೂಕವನ್ನು ಕಳೆದುಕೊಳ್ಳಲು, ನೀವು ಅದರ ಪುಡಿಯನ್ನು ಕುಡಿಯಬಹುದು ಅಥವಾ ಪಾನೀಯವನ್ನು ತಯಾರಿಸಬಹುದು. ಇದು ಯಕೃತ್ತು ಮತ್ತು ಮೂತ್ರಪಿಂಡಗಳನ್ನು ನಿರ್ವಿಷಗೊಳಿಸುವ ಕೆಲಸ ಮಾಡುತ್ತದೆ.

ನುಗ್ಗೆಕಾಯಿ ಸೇವನೆಯು ಯಕೃತ್ತನ್ನು ಶುದ್ಧೀಕರಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಗೂ ಪ್ರಯೋಜನವನ್ನು ನೀಡುತ್ತದೆ. ನುಗ್ಗೆಕಾಯಿಯಲ್ಲಿರುವ ಗುಣಲಕ್ಷಣಗಳು ಒತ್ತಡ ಮತ್ತು ಆತಂಕವನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ