Necrotizing Fasciitis: ಏನಿದು ಮಾಂಸ ತಿನ್ನುವ ಬ್ಯಾಕ್ಟೀರಿಯಾ? ಇದೆಷ್ಟು ಅಪಾಯಕಾರಿ?
ಮಾಂಸ ತಿನ್ನುವ ನೆಕ್ರೊ ಟೈಸಿಂಗ್ ಫ್ಯಾಸಿಟಿಸ್ ಬ್ಯಾಕ್ಟೀರಿಯಾವು ವ್ಯಕ್ತಿಯೊಬ್ಬನ ಬಲಿ ಪಡೆದಿದೆ. ಮಾಂಸ ತಿನ್ನುವ ಬ್ಯಾಕ್ಟೀರಿಯಾದಿಂದ ಉಂಟಾದ ಸೋಂಕಿನಿಂದಾಗಿ ಕೋಲ್ಕತ್ತಾದ 44 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.
ಮಾಂಸ ತಿನ್ನುವ ನೆಕ್ರೊ ಟೈಸಿಂಗ್ ಫ್ಯಾಸಿಟಿಸ್ ಬ್ಯಾಕ್ಟೀರಿಯಾವು ವ್ಯಕ್ತಿಯೊಬ್ಬನ ಬಲಿ ಪಡೆದಿದೆ. ಮಾಂಸ ತಿನ್ನುವ ಬ್ಯಾಕ್ಟೀರಿಯಾದಿಂದ ಉಂಟಾದ ಸೋಂಕಿನಿಂದಾಗಿ ಕೋಲ್ಕತ್ತಾದ 44 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.
ಈ ಮಾಂಸ ತಿನ್ನುವ ಬ್ಯಾಕ್ಟೀರಿಯಾವನ್ನು ವೈದ್ಯಕೀಯ ಪರಿಭಾಷೆಯಲ್ಲಿ ನೈಕ್ರೊಟೈಸಿಂಗ್ ಫ್ಯಾಸಿಟಿಸ್ ಎಂದು ಕರೆಯುತ್ತಾರೆ. ಈ ಬ್ಯಾಕ್ಟೀರಿಯಾವು ನಮ್ಮ ಚರ್ಮ ಮತ್ತು ಅದರ ಕೆಳಗಿನ ಅಂಗಾಂಶಗಳ ಅಪರೂಪದ ಸೋಂಕಿಗೆ ಕಾರಣವಾಗುತ್ತದೆ.
ಕೂಡಲೇ ರೋಗ ನಿರ್ಣಯ ಮಾಡಿ ಚಿಕಿತ್ಸೆ ನೀಡದಿದ್ದರೆ ವ್ಯಕ್ತಿ ಜೀವಂತವಾಗಿ ಉಳಿಯಲು ಸಾಧ್ಯವಿಲ್ಲ. ಮೃತ ವ್ಯಕ್ತಿಯು ಕೆಲವು ದಿನಗಳ ಹಿಂದೆ ರೈಲಿನಿಂದ ಬಿದ್ದಿದ್ದರು, ಕಬ್ಬಿಣದ ರಾಡ್ ಸೊಂಟದ ಕೆಳಭಾಗಕ್ಕೆ ಬಡಿದು ಗಾಯಗೊಂಡಿದ್ದರು. ಅವರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿತ್ತು. ಒಂದು ವಾರ ಅವರಿಗೆ ಸ್ಥಳೀಯ ನರ್ಸಿಂಗ್ಹೋಮ್ನಲ್ಲಿ ಚಿಕಿತ್ಸೆ ನೀಡಲಾಯಿತು.
ನಂತರ ಅವರನ್ನು ಅಕ್ಟೋಬರ್ 23 ರಂದು RGKMCHಟ್ರಾಮಾ ಸೆಂಟರ್ಗೆ ದಾಖಲಿಸಲಾಯಿತು. ರೋಗಿಯು ಉಸಿರಾಟ ತೊಂದರೆ ಅನುಭವಿಸುತ್ತಿದ್ದರು, ತಕ್ಷಣ ಅವರನ್ನು ಶಸ್ತ್ರಚಿಕಿತ್ಸೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು.
ವೆಂಟಿಲೇಷನ್ನಲ್ಲಿಟ್ಟು ತಡಮಾಡದೇ ಚಿಕಿತ್ಸೆಯನ್ನೂ ಪ್ರಾರಂಭಿಸಲಾಗಿತ್ತು. ಈ ವೇಳೆ ಅವರ ದೇಹದಲ್ಲಿ ನೈಕ್ರೊಟೈಸಿಂಗ್ ಫ್ಯಾಸಿಟಿಸ್ ಇರುವಿಕೆ ದೃಢಪಟ್ಟಿತ್ತು. ಸೋಂಕು ರೋಗಿಯ ಕೆಳಭಾಗದ ಅಂಗ ಮತ್ತು ಜನನಾಂಗದ ಪ್ರದೇಶವನ್ನು ತಿಂದು ಹಾಕಿತ್ತು.
ಮಾಂಸ ತಿನ್ನುವ ಬ್ಯಾಕ್ಟೀರಿಯಾ ಮೊದಲು ರಕ್ತನಾಳಗಳ ಮೇಲೆ ದಾಳಿ ಮಾಡುವುದರಿಂದ ಥ್ರಂಬೋಸಿಸ್ ಉಂಟಾಗುತ್ತದೆ, ಇದು ಅಂಗಾಂಶಗಳು, ಮತ್ತು ಸ್ನಾಯುಗಳಿಗೆ ರಕ್ತ ಪೂರೈಕೆಯಲ್ಲಿ ಅಡಚಣೆಯುಂಟು ಮಾಡುತ್ತದೆ. ಅಂತಿಮವಾಗಿ ರಕ್ತ ಪೂರೈಕೆಯನ್ನು ಕಡಿತಗೊಳಿಸುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಬ್ಯಾಕ್ಟೀರಿಯಾದ ಸೋಂಕು ಉರಿಯೂತವನ್ನು ಪ್ರಚೋದಿಸುತ್ತದೆ. ಜತೆಗೆ ಅಂಗಾಂಶಗಳಿಗೆ ಆಮ್ಲಜನಕವನ್ನು ಸಾಗಿಸುವ ರಕ್ತವನ್ನು ಪೂರೈಸುವ ಕ್ಯಾಪಿಲ್ಲರಿಗಳನ್ನು ಸಂಕುಚಿತಗೊಳಿಸುತ್ತದೆ. ಇದರಿಂದ ಜೀವಕೋಶದ ಸಾವು, ಅಂಗಾಂಶ ಹಾನಿ ಅಥವಾ ನೈಕ್ರೋಸಿಸ್ಗೆ ಕಾರಣವಾಗುತ್ತದೆ. ಇದು ಸ್ನಾಯುಗಳನ್ನೂ ಒಳಗೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಅಪರೂಪದ ಸೋಂಕು ನೆಕ್ರೋಟೈಸಿಂಗ್ ಫ್ಯಾಸಿಟಿಸ್ ಆಗಿದೆ.
ಗಮನಾರ್ಹವಾಗಿ, ನೆಕ್ರೋಟೈಸಿಂಗ್ ಫ್ಯಾಸಿಟಿಸ್ ದೇಹದಲ್ಲಿ ವೇಗವಾಗಿ ಹರಡುವ ಅಪರೂಪದ ಸೋಂಕು. ಸರಿಯಾದ ಮತ್ತು ಆರಂಭಿಕ ಚಿಕಿತ್ಸೆ ಪಡೆಯದಿದ್ದರೆ ಇದು ಸಾವಿಗೆ ಕಾರಣವಾಗಬಹುದು. ನೆಕ್ರೋಟೈಸಿಂಗ್ ಫ್ಯಾಸಿಟಿಸ್ ರಕ್ತನಾಳಗಳ ಮೇಲೆ ದಾಳಿ ಮಾಡುತ್ತದೆ. ಮಾಂಸ ತಿನ್ನುವ ಬ್ಯಾಕ್ಟೀರಿಯಾಗಳು ತುಂಬಾ ತೀವ್ರವಾಗಿದ್ದು ಅವು ದೇಹಕ್ಕೆ ರಕ್ತ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತವೆ.
ವರದಿಗಳ ಪ್ರಕಾರ, US ನಲ್ಲಿ ಪ್ರತಿ ವರ್ಷ ಮತ್ತು ವಾರ್ಷಿಕವಾಗಿ 600 ರಿಂದ 700 ನೆಕ್ರೋಟೈಸಿಂಗ್ ಫ್ಯಾಸಿಟಿಸ್ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತದೆ . ಈ ಪೈಕಿ ಶೇ.25ರಿಂದ 30ರಷ್ಟು ಪ್ರಕರಣಗಳಲ್ಲಿ ರೋಗಿಯು ಸಾಯುತ್ತಾನೆ. ಅದೇ ಸಮಯದಲ್ಲಿ, ಈ ಸೋಂಕು ಮಕ್ಕಳಲ್ಲಿ ಅಪರೂಪವಾಗಿ ಸಂಭವಿಸುತ್ತದೆ ಎಂದು ಸಹ ಬಹಿರಂಗಪಡಿಸಲಾಗಿದೆ.
ಅದೇ ಸಮಯದಲ್ಲಿ, ಮಾದಕವಸ್ತು ಬಳಕೆದಾರರು ಅಥವಾ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಜನರು ತ್ವರಿತವಾಗಿ ಸೋಂಕಿಗೆ ಒಳಗಾಗಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:10 am, Tue, 1 November 22